Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಹಕ್ಕಿಯ ಹಂಬಲ

ಹಂಬಲಿಸುತ್ತಿದೆ ಹಂಬಲಿಸುತ್ತಿದೆ ಈ ಹಕ್ಕಿ
ತಿನ್ನಲು ಬಾಯಿಲ್ಲ ತಿನ್ನಲು ಹಂಬಲಿಸುತ್ತಿದೆ
ಹಾರಲು ರೆಕ್ಕೆಗಳಿಲ್ಲ ಹಾರಲು ಹಂಬಲಿಸುತ್ತಿದೆ
ನೋಡಲು ಕಣ್ಣಿಲ್ಲ ಕಾಣಲು ಹಂಬಲಿಸುತ್ತಿದೆ
ಬಿಟ್ಟರೆ ಭವದಲಿ ಮುಳುಗಲು ಹಂಬಲಿಸುತ್ತಿದೆ
ಓಮ್ಮೆ ಬಿಟ್ಟರೆ ಜಗತ್ತು ಒಗ್ಗೂಡಿಸಲು ಹಂಬಲಿಸುತ್ತಿದೆ ಈ ಹಕ್ಕಿ
ಈ ಹಕ್ಕಿ ಹಂಬಲದಲಿ ನನ್ನ ಹಂಬಲ ಸೋತಿದೆ.....

- ಬಾಲು ಶಿರಗುಂಪಿ

19 Nov 2017, 07:28 pm

ಕಾಡಬೇಡ ಸುಮ್ಮನೆ

ಕಾಡುತ್ತಿವೆ ಮನದ ಮೂಲೆಯಲ್ಲಿ
ನಿನ್ನೊಲವಿನ ಪ್ರೀತಿಯ ಮಾತುಗಳು
ಕೊರಗುತ್ತಿದೆ ಬಡಪಾಯಿ ಹೃದಯವು
ನೀ ದೂರಾದ ಕ್ಷಣಗಳನು ನೆನೆನೆನೆದು
ನೆನಪುಗಳು ಜಾಡಿಸಿ ಒದೆಯುತ್ತಿರಲು
ಸೋತುಹೋಗಿರುವೆನು ನೀ ಸನಿಹವಿರದೆ
ವಿರಾಮ ಬಯಸದ ಕಣ್ಣುಗಳು
ಬಿಕ್ಕಳಿಸಿ ಅಳುತ್ತಲಿವೆ ಮೌನದಿ
ಹೀಗೇಕೆ ಕಾಡುತ್ತಿರುವೆ ಸುಮ್ಮನೆ
ಬಳಿ ಬಂದು ಸೇರಬಾರದೆ ನನ್ನನೊಮ್ಮೆ!

- ಪ್ರಿಯಾಂಕ

19 Nov 2017, 06:35 pm

ಪ್ರೀತಿ

ಸದ್ದೇ ಮಾಡದೆ ನನ್ನೊಳಗೆ ಸೇರಿಕೊಂಡೆ
ಸುದ್ದಿ ಇಲ್ಲದೆ ಹೃದಯವ ಕಸಿದುಕೊಂಡೆ
ಕನಸು ಮನಸಲು ನಿನ್ನೆಸರನೆ ತುಂಬಿಕೊಂಡೆ
ನಿನ್ನ ಪ್ರೀತಿಯಲ್ಲಿ ಸ್ವರ್ಗವ ಕಂಡುಕೊಂಡೆ!

- ಪ್ರಿಯಾಂಕ

19 Nov 2017, 06:31 pm

ಬಡವನ ಅರಮನೆ

ನನ್ನ ಸುತ್ತ ಮುತ್ತಲು ಸುತ್ತುತಿಹುದು
ನಿನ್ನಯ ನೆನಪುಗಳು....,
ನಾನು ಕಡು ಬಡವ ಗೆಳತಿ ....
ನಿನಗೆ ಕೊಡಲು ನನ್ನ ಬಳಿ ಏನು ಇಲ್ಲಾ ....
ಆದರೆ ನಿನಗೊಂದು ಮಾತು ಕೊಡಬಲ್ಲೆ
ನನ್ನ ದೇಹದಲ್ಲಿ ಉಸಿರು ಇರೋವರೆಗೂ
ನಿನ್ನ ನೋಡಿಕೊಳ್ಳುವೆ ಯಾವುದಕ್ಕು ಕೊರತೆ ಬಾರದ
ಹಾಗೆ...
ಇದು ನಿನಗೆ ಸರಿ ಎನಿಸಿದರೆ
ಬಾ ಈ ಬಡವನ ಅರಮನೆಗೆ......!!!!

- Shilpa

19 Nov 2017, 05:21 pm

ಸಾಂತ್ವನ

ಮೌನದಿ ಅದುಮಿಡದೆ
ಮನಸಾರೆ ಒಮ್ಮೆ ಅತ್ತುಬಿಡು ಗೆಳೆಯ!

ಮನದಿ ಹುಗಿದಿಟ್ಟ ಹಳೆ ದುಃಖ ನೋವುಗಳೆಲ್ಲ ಹರಿದುಹೋಗಿ ಬರಿದಾಗಿ ಹಗುರವಾಗಲಿ ಹೃದಯ!

ಬರಿದಾದ ಸುಮನದಲಿ ತುಂಬಲಿ ಹೊಸ ಹರುಷ
ಪ್ರತಿನಿಮಿಷ ಬಾಳಿನೊಳು
ಆಗಿರಲಿ ರಸನಿಮಿಷ!

ಅನುಗಾಲ ಅರಳಿರಲಿ
ಅನುರಾಗದ ಹೂಮಾಲೆ
ಹಾರೈಸಿ ಬಯಸಿಹಳು ಈ ನಿಮ್ಮ ಪ್ರಿಯಬಾಲೆ!

- ನಾಗರಾಜ್

19 Nov 2017, 05:16 pm

ಮೌನದ ಮಾತು.

ಅಂಗಳದೊಳಗೆ ಸುಳಿದ ಬಿರುಗಾಳಿಯ ನಡುವೆ ಎಷ್ಟು ಸಲ ದೀಪ ಹಚ್ಚಿದರೇನು. ಪ್ರವಾಹದೊಳಗೆ ಮುಳುಗುತ್ತಿರುವ ಜೀವ ಬದುಕುಳಿಯುವುದು ಆತ್ಮವಿಶ್ವಾಸವೆಂಬ ಮೂರ್ಖ ಭ್ರಮೆಯಲ್ಲಿ ಮಾತ್ರ.

- Kat

19 Nov 2017, 02:55 pm

ಮನಬಾಡಿಗೆ

ಮದುವೆಯಾಗುವ ಮುನ್ನ
ಮನದ ಖೋಲಿಗಳನೆಲ್ಲ
ನೂರಾರು ಬೆಡಗಿಯರಿಗೆ
ಪ್ರೀತಿಯೆಂಬ ಬಾಡಿಗೆಗೆ ಕೊಟ್ಟೆ!

ಬಾಡಿಗೆ ಕೊಡದೆ ಒಬ್ಬೊಬ್ಬರೇ ಖೋಲಿ
ಖಾಲಿ ಮಾಡಿದಾಗ ನಿರಾಸೆಯಿಂದ ಮನಸಾರೆ
ಅತ್ತುಬಿಟ್ಟೆ!

ದಿನ ತಿಂಗಳ ಬಾಡಿಗೆ ಗಿಟ್ಟದೆಂದು ಇಡೀ ಮನವನ್ನು ಕೊನೆಗೊಬ್ಬಳಿಗೇ ಜೀವಮಾನವಿಡೀ ಭೋಗ್ಯಕ್ಕೆ ನೀಡಿಬಿಟ್ಟೆ!?

- ನಾಗರಾಜ್

19 Nov 2017, 09:32 am

ಪ್ರೇಮ

ಈ ಮನಸಿನ ಮಾತು ನೀ ಆಲಿಸದ ಕ್ಷಣವೇ ,
ನಾ ಮೌನಿಯಾದೆ ......
ನಿನ್ನ ಪ್ರೀತಿಗೆ ಸವಿ ಜೇನಾಗಿರುವ ಆಸೆ ..
ನಿನೊಂದಿಗೆ ಈ ಜೀವನ ಕಳೆಯಲು ಕಾತರದಿ ಕಾಯುತಲಿರುವೆ......

- Acchu love

18 Nov 2017, 09:26 pm

ನನ್ನೆದೆಯ ಅಂಜಿಕೆ........

ಹೆದರಿದೆ ಎಕೊ ಇಂದು ಈ ಮನಸ್ಸು
ಕಾರಣವಾದರು ಏನು.......
ಭಯವಾಗಿದೆ ಗೆಳೆಯ ಹೇಳಲಾಗದ
ಹೇದರೀಕೆ ಏಕೊ ಈ ಮನಕೆ.....
ನೀನು ಅರಿಯ ಬಲ್ಲೆಯ ಗೆಳೆಯ
ನನ್ನೆದೆಯ ಅಂಜಿಕೆಯ......
ಕಲ್ಮಷವೆ ತುಂಬಿರುವ ಈ ಜಗದಲಿ
ನನ್ನ ಅಂಜಿಕೆಯ ದೂರ
ಮಾಡುವುವೆಯ ಗೆಳೆಯ
ಮನದೊಳಗೆ ನಡೆಯುತಿದೆ
ಕೋಲಾಹಲ ಅದಕ್ಕೆ ನಿನ್ನ ಪ್ರೀತಿಯ
ಹಾಲಹಲವ ಬೆರೆಸಿ ಅದನ್ನು ಆರಿಸುವೆಯ ಗೆಳೆಯ
ಭಯವಾಗಿದೆ ನನಗೆ ನಿನ್ನ ಮಡಿಲ ಆಸರೆಯ
ನಿಡುವೆಯ ಗೆಳೆಯ
ಭಯವಾಗಿದೆ ನನಗೆ.......
ನನ್ನೆದೆಯ ಅಂಜಿಕೆ.........

- ರಾಗಸಿರಿ....

18 Nov 2017, 05:54 pm

ಬಾಳನೌಕೆ

ಬಾಳ ಪಯಣದ ಹಾದಿಯಲ್ಲಿ
ನೋವು ನಲಿವುಗಳು ಸಹಜ
ಅರಿತು ಬಾಳಿದರೆ ಬದುಕಿನಲ್ಲಿ
ಸ್ವರ್ಗ ಇಲ್ಲಿಯೇ ಸಿಗುವುದು ಮನುಜ!

ಬಾಳ ನೌಕೆಯ ಪಯಣದಲಿ
ಸೋಲು ಗೆಲುವಿನ ಆಟವಿದು
ಎಲ್ಲಾ ಮರೆತು ಕೂಡಿಬಾಳಿದರೆ
ಜಯವು ನಮಗೆ ದೊರೆಕುವುದು!

ಸಿಹಿ ನೆನಪುಗಳ ಜೊತೆಯಲ್ಲಿರಬೇಕು
ಕಹಿನೆನಪುಗಳ ಗುರುತು
ನಗುನಗುತ್ತ ಬಾಳುತ್ತಿರಬೇಕು
ನಾಳೆಯ ಚಿಂತೆಯ ಮರೆತು!

ಬಾಳಿನಲ್ಲಿ ಗುರಿಯು ಮೊದಲಾಗಲಿ
ಆ ಗುರಿಯತ್ತ ಮನಸ್ಸುನೆಟ್ಟಿರಲಿ
ಬದುಕಿನ ಪ್ರತಿ ಕ್ಷಣಗಳು
ಹರಿಯುವ ನೀರಿನಂತೆ ಸಾಗುತ್ತಿರಬೇಕು!

ಪ್ರಿಯಾಂಕ✍

- ಪ್ರಿಯಾಂಕ

18 Nov 2017, 03:04 pm