Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮುಖವಾಡ ಬೇಕಾಗಿದೆ

ಮುಖವಾಡ ಬೇಕಾಗಿದೆ ನನಗೊಂದು,
ಚೆಂದನೆಯ ಆಕರ್ಷಕ ಮುಖವಾಡ,
ನೋಡಿದವರು ಮತ್ತೊಮ್ಮೆ ಮಗದೊಮ್ಮೆ
ನೋಡುತ್ತಲೇ ಇರಬೇಕು,
ಇವ ನಯ ನಾಜೂಕಿನವನೆಂದು ನಂಬಬೇಕು !
ನಯ ವಂಚನೆಗೆ ಹೇಳಿ ಮಾಡಿಸಿದಂತಿರಬೇಕು,
ರಾತ್ರಿ ಕಂಡ ಬಾವಿಗೆ ಹಗಲು ಬಿಳುವಂತಿರಬೇಕು.

ಬೇಕೇ ಬೇಕು ಮುಖವಾಡ,
ನಮ್ಮ ನೋವ ಮರೆಸಿ
ಹೊರಗೆ ಮುಗುಳ್ನಗೆ ಚೆಲ್ಲಲು
ದುಮ್ಮಿಕಿದ ಎರಡು ಹನಿ ಕಣ್ಣೀರು
ಪನ್ನೀರೆಂದು ಹೇಳಿ ನಂಬಿಸಲು !

ಆತ್ಮ ಬಂಧುಗಳು ಕೊಡುವ
ಕೊಡಲಿ ಏಟನು ತಾಳಿ,
ನೋವು ನಲಿವುಗಳನ್ನು ಮೀರಿ
ತನ್ಮಯತೆಯಲಿ ಬಾಳಿ,
ಜತನದಲಿ ಬಾಳ ಪಯಣವನ್ನು ಬೆಳೆಸಲು..
ಬೇಕೇ ಬೇಕಾಗಿದೆ ನನಗೊಂದು
ಸುಂದರ ಮುಖವಾಡ !
ಸಾಕಾಗಿದೆ ಈ ಬಣ್ಣ ಗೆಟ್ಟು ಸುಕ್ಕು ಬಿದ್ದ
ಆತ್ಮಾಭಿಮಾನದ ಕೆಟ್ಟ ಮುಖ.

- ಶ್ರೀಗೋ.

22 Nov 2017, 12:02 am

ನಂಜಾದಿತೆಂದು

ಚಡಪಡಿಸದಿರು ಹೃದಯವೇ ನಿನಗೆಂದು
ಒಂದು ಛಾಯೆಯೂ ಜೊತೆಗಿಲ್ಲವೆಂದು ಮರೆತು
ಮಂಕಾಗಿ .

ಕಾಡ್ಗಿಚ್ಚು ನಿನ್ನ ಬಡಿತಕೆ ಬೆರೆತಿದೆಯೆಂದು
ಕಿರುಚಿ ಹೇಳದಿರು ನನ್ನಲ್ಲಿ ನಾ ಸುಟ್ಟು ಬೂದಿಯಾಗುತ್ತಿರುವೆನೆಂದು.

ಕಣ್ಣ ಹನಿಗಳು ಉದುರಿ ನಿನ್ನ ಕೋಮಲ ರೂಪಕೆ ನಂಜಾದಿತೆಂದು ದೂರದಿರು ನನ್ನ ಇಂದು ನಿನಗಿಲ್ಲದ ಮಾತು ನನ್ನಲ್ಲೆಕೆಂದು ಮೌನಕ್ಕೆ ನನ್ನಲ್ಲಿ ಬರವಿಲ್ಲ ತುಂಬಿಕೊ ಎಂದು.

ಅಶರೀರ ಮನಕೆ ಕಲ್ಪಿತ ಸ್ವರೂಪ ನೀನೆಂದು ಮೆರೆಯದಿರು ನಿನ್ನಲ್ಲಿನ ಸೊಕ್ಕು ಚೊಕ್ಕಾಗಿ ಮುಗಿಲೇರಿಸದೆ ನನ್ನಲ್ಲೇ ಕೂಡಿಟ್ಟಿದೆಯೆಂದು ತಿಳಿದು ನನ್ನ ನಿರ್ಲಕ್ಷಿಸದಿರು.

- ಚುಕ್ಕಿ

21 Nov 2017, 11:58 pm

ಶವದ ಯಾತ್ರೆ

ನನ್ನ ಶವದ ಯಾತ್ರೆ
ಸಾಗುವಾಗ, ಮರೆಯಲ್ಲಿ
ನನ್ನವಳು ನಿಂತು
ಅಳುವುದು
ಕಂಡು ನನ್ನ ಮನಸ್ಸು
ದೂರದಿಂದಲೇ
ಮರಗೀತು..|


✍ಅನಿಲ್ ಕುಲಕರ್ಣಿ

- ಅನಿಲ್ ಕುಲಕರ್ಣಿ

21 Nov 2017, 11:36 pm

ನನ್ನನಗಲಿ ಹೋಗದಿರು

ನಿಲ್ಲದಿರು ನೀನೆಂದಿಗೂ ನನ್ನಗಲಿ ಹೋಗದಿರು
ಕಂಬನಿಯೇ ಬದುಕಲು ಬಿಡದ ಜನರಿಗೂ
ನನ್ನ ಬಿಟ್ಟು ಹೋಗದ ನಿನಗೂ ಅಜಗಜಾಂತರ
ವ್ಯತ್ಯಾಸವುಂಟು.

ನಿತ್ಯ ನರಕತೋರುವವರು ಮಾತಲ್ಲಿ ನಿತ್ಯ ನನ್ನ
ನೋವಲ್ಲೂ ಜೊತೆಗಿರುವರುವೆ ನಲಿವಲ್ಲೂ
ಹುಡುಕಿಬರುವೆ ನೀನಿಗಿಂತ ಆತ್ಮೀಯ
ಬಂದುವಿಲ್ಲ ಈ ಬಡಪಾಯಿ ಜೀವಕೆ.

- ಚುಕ್ಕಿ

21 Nov 2017, 11:16 pm

ಪ್ರೀತಿ

ನಿನ್ನ ನೆನಪಿನ ದೋಣಿಯಲಿ
ನಾ ಕಾಯುತ್ತಿರುವೆ ನಿನಗಾಗಿ
ಪ್ರೀತಿ ತುಂಬಿದ ಹೃದಯದಲಿ
ನೀ ಬಂದು ಸೇರು ನನ್ನನು, ಹಿತವಾಗಿ

- ಪ್ರಿಯಾಂಕ

21 Nov 2017, 09:49 pm

ಒಲವು ನಿನಗಾಗಿ

ಕಾಗದದ ದೋಣಿಯಲಿ ನನ್ನೆಸರನು ಬರೆದು
ನನ್ನೊಲವಿನ ತುಂಬು ಪ್ರೀತಿಯನು ಬೆರೆಸಿ
ನಿನ್ನ ಹೃದಯವ ಕನ್ನ ಕೊರೆದು
ತೇಲಿಸಿಬಿಡುವೆನು ನನ್ನೆಲ್ಲಾ ಭಾವನೆಗಳನು ಸೇರಿಸಿ!

ಪ್ರಿಯಾಂಕ✍

- ಪ್ರಿಯಾಂಕ

21 Nov 2017, 09:47 pm

ಒಂಟಿ ಹಕ್ಕಿ..

ಗ್ರೀಷ್ಮ ಕಾಲದ ಒಣ ಮರದಲ್ಲಿ
ಒಂಟಿ ಹಕ್ಕಿಯು ಅಳುತಲಿದೆ,
ಒಣಗಿದ ಕಂಗಳ ಒಳಗಿನ ಬಿಸಿ ಹನಿ
ಬಿಸಿಲಿನ ಬೇಗೆಗೆ ಆರುತಿದೆ.

ಹಾರುವ ದೂರ ಹರವಿದೆ ಪೂರ
ಕಾಣುವ ಕಣ್ಣು ಕುರುಡಾಯ್ತೆ ?
ರೆಕ್ಕೆಯು ಮುರಿದಿದೆ, ಪಕ್ಕೆಯು ಒಡೆದಿದೆ
ಜೀವನ ಪಯಣ ಬರಡಾಯ್ತೆ ?

ಯಾರೋ ಗೀಚಿದ ಒಲವಿನ ಕವನದ
ಹಾಳೆಯು ನೆನೆದಿದೆ ಸುರಿ ಮಳೆಗೆ,
ಅಕ್ಷರ ಕರಗಿ ಮಂಜಾಗಿರುವುದು
ಮುರುಟಿದ ಮರುಗಿದ ಮನದೊಳಗೆ.

- ಶ್ರೀಗೋ.

21 Nov 2017, 09:37 pm

ಮುದ್ದು ಪೆದ್ದು.......

ಏನೆಂದು ಬರೆಯಲಿ ನಿನ್ನ ಬಗ್ಗೆ
ಹೇಗೆಂದು ಗುಣಗಾನ ಮಾಡಲಿ
ನಿನ್ನ ಬಗ್ಗೆ.....
ಏನು ತಿಳಿಯದೆ ಆದ ಗೆಳೆತನ
ಎಂದು ಮುರಿಯದಿರಲಿ ಇ ನಮ್ಮ ಬಂಧನ.......
ಮುದ್ದು ಮನಸಿನ ಪೆದ್ದು ಹುಡುಗ
ಇವನು....
ಮಾತಿನಲ್ಲಿ ಬರಿ ಆಗಲಕಾಯಿ
ಮನಸು ಮಾತ್ರ ಮಗುವಿನಂತೆ
ಎಲ್ಲರ ಮನವ ಅರಿಯೋ
ಮೌನದ ಹುಡುಗ......
ಜಗಳದಲ್ಲಿ ಇರುವನು
ಮೌನದಲ್ಲಿ ಮರೆಯಾಗುವನು.....
ಅಕ್ಕ ತಂಗಿಯರ ನಡುವೆ
ಬೆಳೆಯುತಿರು ಮುದ್ದು ಮನಸಿನ
ಪೆದ್ದು ಹುಡುಗ ಇವನು.......
ನೀನಗೆ ನೀನೆ ಸರಿ ಸಾಟಿ
ಮೇಲೆರಿ ಕೂರಬೇಡ ಎಲ್ಲವನ್ನು ದಾಟಿ......
ಹಸಿ ಮನಸಿನ ಹುಸಿ ಹುಡುಗ....ಮುದ್ದು ಪೆದ್ದು.......

- ನೆನಪಿನ ನಾವಿಕ

21 Nov 2017, 08:22 pm

ನಮ್ಮ ಜೋಡಿ.....

ಬೆಳದಿಂಗಳ ಅಂಗಳದಲ್ಲಿ
ನನ್ನವನ ಮಡಿಲಲ್ಲಿ ನಾ ಹಾಯಾಗಿ
ಮಲಗಿರಲು ಆ ಚಂದ್ರ ನಾಚುವಂತಿರಬೇಕು.....

ಮುಸಂಜೆಯ ವೇಳೆಯಲಿ
ನನ್ನವನ ಎದೆಗೆ ನಾ ಒರಗಿ ಜಗವ ಮರೆತಿರಲು
ಹೊಂಗಿರಣಗಳು ನಾಚಿ ಮುಳುಗುವಂತಿರಬೇಕು.........

ಮಧ್ಯಾಹ್ನ ನನ್ನವನ ಕೈ ಹಿಡಿದು ನಾ
ನಡೆಯುವಾಗ ಸುರ್ಯನ ಕಿರಣಗಳು
ಕಣ್ಣು ಹೋಡೆಯುವಂತಿರಬೇಕು.......

ಮುಂಜಾನೆಯ ಮಸುಕಲ್ಲಿ ನನ್ನವನ ಮುಖ
ನೋಡಿ ನಾ ನಾಚುವ ಮುನ್ನ ಸುರ್ಯನು ನಾಚಿ
ಮರೆಯಾಗಿರಬೇಕು...

ನಮ್ಮ ಹುಚ್ಚು ಪ್ರೀತಿಯ ನೋಡಿ ಸೃಷ್ಟಿಯೆ
ನಾಚುವಂತಿರಬೇಕು.........

- ರಾಗಸಿರಿ....

21 Nov 2017, 07:51 pm

ಮನದ ಮಾತು

ಕೇಳೆನ್ನ ಚೆಲುವೆ ನೀನು
ನನ್ನ ಮನದ ಮಾತನು
ಹಿಡಿದಿರುವೆ ನನ್ನೊಳಗೆ
ನಿನ್ನ ಪ್ರೀತಿ ಮಾಧುರ್ಯವನು

ರಸಸಂಜೆ ಕಾದಿಹುದು
ಆಸೆಗಳು ಕರೆದಿಹುದು
ತೋಳಲಿ ಬಳಸಿ ನನ್ನ
ಬಿಗಿದಪ್ಪು ನೀನು ಇನ್ನಾ

ಕಾಲಿಗೆ ಗೆಜ್ಜೆಯ ತೊಡಿಸಿ
ಮುಡಿಗೆ ಮಲ್ಲಿಗೆ ಮುಡಿಸಿ
ನಿನ್ನ ಪುಟ್ಟ ಮನದೊಳಗೆ
ಸೇರುವ ಬಯಕೆಯು ನನಗೆ


ಇನ್ನೇನನೂ ಕೇಳಲಾರೆ
ನಿನ್ನಿಂದ ಹೋಗಲಾರೆ
ಕೊನೆವರೆಗೂ ಜೊತೆಗಿರುವ
ನೀಡೆನಗೆ ಈ ವರವ
ಹೇ ನನ್ನ ದೇವತೆ

- ನೆನಪಿನ ನಾವಿಕ

21 Nov 2017, 05:09 pm