ನೀ ನನ್ನ ಪ್ರೀತಿಸುತಿರುವುದು
ನಿಜವೋ...ಸುಳ್ಳೋ...
ಅದು ನನಗೆ ತಿಳಿಯದು
ಅದರೆ,,,,
ಆ ಪ್ರೀತಿ ನನ್ನ ಹೃದಯ ವೃಂದಾವನಕೆ
ಬೆಂಕಿ ಇಡದಿದ್ದರೆ ಅಷ್ಟೇ ಸಾಕು
ನಾಳೆಯದ್ದು ನಾಳೆ
ಈಗದರ ಚಿಂತೆ ಬೇಡ
ನನ್ನಷ್ಟಕ್ಕೆ ನಾನಿರುವೆ
ಏಕಾಂಗಿಯಾಗಿರಲು ಬಿಟ್ಟು ಬಿಡು
ಸಂಬಂಧಗಳ ಬಂಧದಲಿ
ಬಂಧಿಯಾಗಿರಲು ನನಗಿಷ್ಟವಿಲ್ಲ
ಏಕೆಂದು ಪ್ರಶ್ನಿಸದಿರು
ಕಾಡದಿರು...ಹಿಂಸಿಸದಿರು...
ಕೇಳಿದ್ದನ್ನೇ ಮತ್ತೆ ಮತ್ತೆ ಕೇಳುತಾ
ನಾ ಉತ್ತರಿಸದ ಮಾತ್ರಕ್ಕೆ ಉತ್ತರವಿಲ್ಲ ಎಂದಲ್ಲ
ಉತ್ತರವಿದ್ದರೂ ಹೇಳುವ ಸ್ಥಿತಿಯಲ್ಲಿ ನಾನಿಲ್ಲ
ಏಕೆಂದರೆ,,,
ಇತ್ತೀಚಿಗೆ ನನ್ನಲಿ ನಾನೇ ಇಲ್ಲ
ಅಳದಿರು ಎಲ್ಲ ನಿಂದನೆಗಳ ಸಹಿಸಿ
ಬಂದಿರುವೆಯಲ್ಲ ನಿನ್ನ ನೋವ ಅರಿಯುವವರೂ
ಯಾರು ಇಲ್ಲ....
ಹುಟ್ಟಿದಾಗ ಅಯ್ಯೋ ಅಂದ ಮೊದಲ ಕೂಗೆ
ಇಲ್ಲಿಯವರೆಗು ತಂದಿದೆ ಯಲ್ಲ.....
ನೆರೆಹೊರೆಯವರು ನಿನ್ನ ನಿಂದಿಸಿದರಲ್ಲ
ಹೆಣ್ಣಾಯಿತೆ ಎಂದು.....
ಸಂಬಂದಿಕರು ಆಡಿಕೊಂಡರಲ್ಲ
ಆ ಮಾತು ಮನದಲ್ಲಿ ಬೇರುರಿದೆ....
ಮರವಾಗಿ ಬೆಳೆಯುತ್ತಲೆ ಇದೆ
ತಂದೆ ತಾಯಿಯರ ನೋವು ಕೂಡ ಒಂದು
ಹೆಣ್ಣೆಂದು......
ಮದುವೆಯ ಮೆರವಣಿಗೆಯಲ್ಲು
ನಿಂದನೆ ತಪ್ಪಲಿಲ್ಲ ನಿನಗೆ
ಗಂಡನ ಮನೆಯಲ್ಲು ಯಲ್ಲರು ನಿನ್ನ ನಿಂದಿಸುವವರೆ.....
ಎಲ್ಲಿಯು ತಪ್ಪಿದ್ದಲ ಈ ನಿಂದನೆ
ಒಂದು ಹೆಣ್ಣಿಗೆ ಅವಳ ಜೊತೆಗೆ
ಅಕ್ಕನಂತೆ ಹುಟ್ಟಿರುತ್ತದೆ
ಯಾರು ಅದನ್ನು ಬಿಡಿಸಲು ಸಾದ್ಯವಿಲ್ಲ
ಅವಳು ಸ್ಮಷಾಣ ಸೇರುವ ವರೆಗು....
ನಿಂದಿಸಿದರು ಎಲ್ಲ ಒಂದು ಹೆಣ್ಣು ಎಂದು...
ಆದರೆ ಅವರಿಗೆ ತಿಳಿದಿಲ್ಲ ಹೆಣ್ಣಿಲ್ಲದೆ ಜಗತ್ತೆ ಇಲ್ಲವೆಂದು....
ಎಲ್ಲ ನಿಂದನೆಗಳ ಸಹಿಸುವುದು ಅವಳಿಗೆ
ಎಲ್ಲರನ್ನು ಹೆದರಿಸುವ ಸಾಮರ್ಥ್ಯ ಇಲ್ಲವೆಂದಲ್ಲ
ಅದು ಅವಳ ಗುಣ ತಾಳ್ಮೆ.....
ನಿಂದನೆಗಳೆ ನಿನ್ನ ಒಡಹುಟ್ಟಕ್ಕ.....
ಕೊರಗದಿರು ಎಂದೆದಿಗು......
ಹರಕಲು ಚಿಂದಿಯ ತೊಟ್ಟು
ಅಳುವ ಕಂದನ ಕಂಕಳಲ್ಲಿಟ್ಟು
ಸುಡುವ ಬಿಸಿಲಿನಲಿ, ಕಂದಮ್ಮನ
ಮೇಲೆ ಕರುಣೆಯ ಬಿಟ್ಟು
ಲಜ್ಜೆಗೆಟ್ಟಿ ಭಿಕ್ಷೆ ಬೇಡುವ ಜನ
ಆಡುವ ಕಂದನ ಅಳುವಿನಲ್ಲಿ
ಹಣ ಮಾಡಲು ಬಯಸುವ ಜನ
ಯಾರ ಜನ ? ಅವರ್ಯಾರ ಜನ ?
ನನ್ನ ಜನ ಅವರ ಮನ
ಯಾರ ಹೊಟ್ಟೆಯೂ ಹೊಡೆಯದೆ
ಬಿಕ್ಷೆ ಬೇಡಲೇಳುವುದು ಅವರ ತನ
ಅವರೇ ನನ್ನ ಜನ, ಸಿರಿವರ
ದಬ್ಬಾಳಿಕೆಗೆ ನಲಿಯದೇ, ಮೋಸಾಗ್ನಿಗೇ
ಮಡಿಯದೇ ಸಾವನೋವನುಂಡುತಿದೆ
ಅವರ ಮನ, ಅವರೇ ನನ್ನ ಜನ