Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನಿನ್ನ ನೆಲೆ..

ನೆನಪುಗಳ ನೋವು ಮನದಿ ಮನೆಮಾಡಿರಲು,
ಹೇಳಲಾಗದೆ ಮನ ಮೌನವತಾಳಿರಲು,
ನಿನ್ನ ನೋಡವ ಆಸೆಯು ಮನತುಂಬಿರಲು,
ಗೆಳತಿ
ಎಲ್ಲಿ ಹುಡುಕಲಿ ನಾ ಈಗ ನಿನ್ನ ನೆಲೆ
ಕಾಯುತಿರುವೆ ಸದಾ ಆ ನಿನ್ನ ನೆನಪಲೆ.

- Spb...@#

22 Nov 2017, 05:22 pm

ಫಲ

ಶಿರವ ಧರೆಗೆ ತಾಗಿಸಿ ಮಲಗಿದರೆ
ಕಾಣುವುದು ನೀಲಾಂಬರವು ಕಣ್ಣೆದುರೆ
ಉಣ್ಣಲು ಅನ್ನವಿಲ್ಲ,ಉಡಲು ಬಟ್ಟೆಯಿಲ್ಲ
ಮಿದು ಬೆಳಕಲಿ,ಮಧುಭರಿತ ಸ್ವಪ್ನವಿದೆ
ಸಾಧಿಸಲು ಮನ್ನುಗ್ಗಿದರೆ ಫಲವಿದೆ!

ಕಡಲೊಂದು ದುರ್ಗಮ ಹಾದಿಯ
ಸುಗಮವಾಗಿಸಿ ಸಾಗಬಲ್ಲುದು
ಕಾನನದ ಕುಸುಮವೊಂದು
ದೈವ ಪೂಜೆಯಲ್ಲಿ ಎಡೆ- ಪಡೆಯಬಲ್ಲುದು
ಅಲಕ್ಷಿಸಲ್ಪಟ್ಟವರೆ ಎಲ್ಲರ ಲಕ್ಷ್ಯಸೆಳೆಯಬಲ್ಲರು!

ಹಕ್ಕಿಯೊಂದು ಧೃತಿಗೆಟ್ಟರೆ
ಹಾರಬಲ್ಲದೆ ಆಗಸದೆತ್ತರ
ಎದುರಾದ ಎಡರು- ತೊಡರಿಗೆ
ಬಲಿಯಾದರೆ ಸಾಗೀತೇ
ಸಾಧನೆಯ ಬಹುದೂರದಾದಿ!



ಶಾರಧ

- ಶಕುಂತಲಾ

22 Nov 2017, 05:13 pm

ಕನಸುಗಳ ದಾರಿ.

ತಿರುಗಿ ಬರುವೆನೆಂದ ನನ್ನವಳು
ಬರುವ ಹೊತ್ತಾದರೂ ಬಾರದಾಗ,
ಬರುವ ದಾರಿಯ ಹಿಡಿದು ಹೊರಟೆ ಬರುವಳೆಂದು,
ಕಾಲ ಕಳೆದರೂ ಕಾಲು ಸವೆದರೂ,
ದಿನರಾತ್ರಿ ಸದಾ ಒಡುತಲಿರುವೆ ನನಸಲ್ಲದ ಆ ಕನಸುಗಳ ದಾರಿಯಲಿ...

- Spb...@#

22 Nov 2017, 12:10 am

ಮುಖವಾಡ ಬೇಕಾಗಿದೆ

ಮುಖವಾಡ ಬೇಕಾಗಿದೆ ನನಗೊಂದು,
ಚೆಂದನೆಯ ಆಕರ್ಷಕ ಮುಖವಾಡ,
ನೋಡಿದವರು ಮತ್ತೊಮ್ಮೆ ಮಗದೊಮ್ಮೆ
ನೋಡುತ್ತಲೇ ಇರಬೇಕು,
ಇವ ನಯ ನಾಜೂಕಿನವನೆಂದು ನಂಬಬೇಕು !
ನಯ ವಂಚನೆಗೆ ಹೇಳಿ ಮಾಡಿಸಿದಂತಿರಬೇಕು,
ರಾತ್ರಿ ಕಂಡ ಬಾವಿಗೆ ಹಗಲು ಬಿಳುವಂತಿರಬೇಕು.

ಬೇಕೇ ಬೇಕು ಮುಖವಾಡ,
ನಮ್ಮ ನೋವ ಮರೆಸಿ
ಹೊರಗೆ ಮುಗುಳ್ನಗೆ ಚೆಲ್ಲಲು
ದುಮ್ಮಿಕಿದ ಎರಡು ಹನಿ ಕಣ್ಣೀರು
ಪನ್ನೀರೆಂದು ಹೇಳಿ ನಂಬಿಸಲು !

ಆತ್ಮ ಬಂಧುಗಳು ಕೊಡುವ
ಕೊಡಲಿ ಏಟನು ತಾಳಿ,
ನೋವು ನಲಿವುಗಳನ್ನು ಮೀರಿ
ತನ್ಮಯತೆಯಲಿ ಬಾಳಿ,
ಜತನದಲಿ ಬಾಳ ಪಯಣವನ್ನು ಬೆಳೆಸಲು..
ಬೇಕೇ ಬೇಕಾಗಿದೆ ನನಗೊಂದು
ಸುಂದರ ಮುಖವಾಡ !
ಸಾಕಾಗಿದೆ ಈ ಬಣ್ಣ ಗೆಟ್ಟು ಸುಕ್ಕು ಬಿದ್ದ
ಆತ್ಮಾಭಿಮಾನದ ಕೆಟ್ಟ ಮುಖ.

- ಶ್ರೀಗೋ.

22 Nov 2017, 12:02 am

ನಂಜಾದಿತೆಂದು

ಚಡಪಡಿಸದಿರು ಹೃದಯವೇ ನಿನಗೆಂದು
ಒಂದು ಛಾಯೆಯೂ ಜೊತೆಗಿಲ್ಲವೆಂದು ಮರೆತು
ಮಂಕಾಗಿ .

ಕಾಡ್ಗಿಚ್ಚು ನಿನ್ನ ಬಡಿತಕೆ ಬೆರೆತಿದೆಯೆಂದು
ಕಿರುಚಿ ಹೇಳದಿರು ನನ್ನಲ್ಲಿ ನಾ ಸುಟ್ಟು ಬೂದಿಯಾಗುತ್ತಿರುವೆನೆಂದು.

ಕಣ್ಣ ಹನಿಗಳು ಉದುರಿ ನಿನ್ನ ಕೋಮಲ ರೂಪಕೆ ನಂಜಾದಿತೆಂದು ದೂರದಿರು ನನ್ನ ಇಂದು ನಿನಗಿಲ್ಲದ ಮಾತು ನನ್ನಲ್ಲೆಕೆಂದು ಮೌನಕ್ಕೆ ನನ್ನಲ್ಲಿ ಬರವಿಲ್ಲ ತುಂಬಿಕೊ ಎಂದು.

ಅಶರೀರ ಮನಕೆ ಕಲ್ಪಿತ ಸ್ವರೂಪ ನೀನೆಂದು ಮೆರೆಯದಿರು ನಿನ್ನಲ್ಲಿನ ಸೊಕ್ಕು ಚೊಕ್ಕಾಗಿ ಮುಗಿಲೇರಿಸದೆ ನನ್ನಲ್ಲೇ ಕೂಡಿಟ್ಟಿದೆಯೆಂದು ತಿಳಿದು ನನ್ನ ನಿರ್ಲಕ್ಷಿಸದಿರು.

- ಚುಕ್ಕಿ

21 Nov 2017, 11:58 pm

ಶವದ ಯಾತ್ರೆ

ನನ್ನ ಶವದ ಯಾತ್ರೆ
ಸಾಗುವಾಗ, ಮರೆಯಲ್ಲಿ
ನನ್ನವಳು ನಿಂತು
ಅಳುವುದು
ಕಂಡು ನನ್ನ ಮನಸ್ಸು
ದೂರದಿಂದಲೇ
ಮರಗೀತು..|


✍ಅನಿಲ್ ಕುಲಕರ್ಣಿ

- ಅನಿಲ್ ಕುಲಕರ್ಣಿ

21 Nov 2017, 11:36 pm

ನನ್ನನಗಲಿ ಹೋಗದಿರು

ನಿಲ್ಲದಿರು ನೀನೆಂದಿಗೂ ನನ್ನಗಲಿ ಹೋಗದಿರು
ಕಂಬನಿಯೇ ಬದುಕಲು ಬಿಡದ ಜನರಿಗೂ
ನನ್ನ ಬಿಟ್ಟು ಹೋಗದ ನಿನಗೂ ಅಜಗಜಾಂತರ
ವ್ಯತ್ಯಾಸವುಂಟು.

ನಿತ್ಯ ನರಕತೋರುವವರು ಮಾತಲ್ಲಿ ನಿತ್ಯ ನನ್ನ
ನೋವಲ್ಲೂ ಜೊತೆಗಿರುವರುವೆ ನಲಿವಲ್ಲೂ
ಹುಡುಕಿಬರುವೆ ನೀನಿಗಿಂತ ಆತ್ಮೀಯ
ಬಂದುವಿಲ್ಲ ಈ ಬಡಪಾಯಿ ಜೀವಕೆ.

- ಚುಕ್ಕಿ

21 Nov 2017, 11:16 pm

ಪ್ರೀತಿ

ನಿನ್ನ ನೆನಪಿನ ದೋಣಿಯಲಿ
ನಾ ಕಾಯುತ್ತಿರುವೆ ನಿನಗಾಗಿ
ಪ್ರೀತಿ ತುಂಬಿದ ಹೃದಯದಲಿ
ನೀ ಬಂದು ಸೇರು ನನ್ನನು, ಹಿತವಾಗಿ

- ಪ್ರಿಯಾಂಕ

21 Nov 2017, 09:49 pm

ಒಲವು ನಿನಗಾಗಿ

ಕಾಗದದ ದೋಣಿಯಲಿ ನನ್ನೆಸರನು ಬರೆದು
ನನ್ನೊಲವಿನ ತುಂಬು ಪ್ರೀತಿಯನು ಬೆರೆಸಿ
ನಿನ್ನ ಹೃದಯವ ಕನ್ನ ಕೊರೆದು
ತೇಲಿಸಿಬಿಡುವೆನು ನನ್ನೆಲ್ಲಾ ಭಾವನೆಗಳನು ಸೇರಿಸಿ!

ಪ್ರಿಯಾಂಕ✍

- ಪ್ರಿಯಾಂಕ

21 Nov 2017, 09:47 pm

ಒಂಟಿ ಹಕ್ಕಿ..

ಗ್ರೀಷ್ಮ ಕಾಲದ ಒಣ ಮರದಲ್ಲಿ
ಒಂಟಿ ಹಕ್ಕಿಯು ಅಳುತಲಿದೆ,
ಒಣಗಿದ ಕಂಗಳ ಒಳಗಿನ ಬಿಸಿ ಹನಿ
ಬಿಸಿಲಿನ ಬೇಗೆಗೆ ಆರುತಿದೆ.

ಹಾರುವ ದೂರ ಹರವಿದೆ ಪೂರ
ಕಾಣುವ ಕಣ್ಣು ಕುರುಡಾಯ್ತೆ ?
ರೆಕ್ಕೆಯು ಮುರಿದಿದೆ, ಪಕ್ಕೆಯು ಒಡೆದಿದೆ
ಜೀವನ ಪಯಣ ಬರಡಾಯ್ತೆ ?

ಯಾರೋ ಗೀಚಿದ ಒಲವಿನ ಕವನದ
ಹಾಳೆಯು ನೆನೆದಿದೆ ಸುರಿ ಮಳೆಗೆ,
ಅಕ್ಷರ ಕರಗಿ ಮಂಜಾಗಿರುವುದು
ಮುರುಟಿದ ಮರುಗಿದ ಮನದೊಳಗೆ.

- ಶ್ರೀಗೋ.

21 Nov 2017, 09:37 pm