Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಭಾವ ಬಾಳ್ವೆ

ಜೀವ ಜೀವಗಳ ಬೆಸುಗೆ
ಹೊಸ ಹೊಸ ಭಾವಗಳ ಜೋತೆಗೆ
ಹೋರಟಿದೆ ನೋಡು ಪ್ರೀತಿ ಪ್ರೇಮದ ಒಸಗೆ
ಹೊಸ ಪಲ್ಲವಿಯ ನೂತನ ಬಾಳ್ವೆಗೆ|

ರಂಗು ರಂಗಿನ ಕನಸ್ಸಿಗೆ
ಪ್ರೀತಿ ತುಂಬಿದ ಮನಸ್ಸಿಗೆ
ಮುದ ನೀಡುವ ವಯಸ್ಸಿಗೆ
ಹಾತೋರೆದು ಹೋರಟಿದೆ
ಹೊಸ ರಾಗದ ಅನುಪಲ್ಲವಿಗೆ|

ಸುಖ ದುಃಖಗಳ ಮಿಲನ
ಬಾಳಿನ ನವೀರಾದ ಈ ಪಯಣ
ಸಿಹಿ ಕಹಿಗಳ ಸಮ್ಮಿಲನ
ಬದುಕಿನ ಪಥದ ಈ ಹೊಸ ಯಾನ

ಕಲೆತು ಕೂಡಿದರೇ ಸುಖ
ಮರೆತು ಕಲಹ ಮಾಡಿದರೆ ದುಃಖ
ಇಬ್ಬರು ಹೋರಬೇಕು ಕುಟುಂಬದ
ಪ್ರೀತಿಯ ನೋಗ....
ಆಗ ತಾನೆ ಸಿಗುವುದು ಜೀವನದಲ್ಲಿ
ಹೊಸ ಜಗದ ಸುಖಮಯ ಬಳಗ

- Bhagya Girish

27 Nov 2017, 12:05 pm

ಹುಟ್ಟುವ ಸೂರ್ಯ

ಕಂಡು ಕಾಣದಂತೆ
ಹುಟ್ಟಿ ಮುಳುಗುವ ಸೂರ್ಯನೇ
ನಿನಗೇ ವಂದನೆ....
ಕಂಡು ಅರಿಯದೆ ಇರುವ
ನಿನ್ನ ಛಾಯೆ ಬೆರಗಾಗುವಂತಿದೆ...
ಮತ್ತೆ ಹುಟ್ಟಿ ಬಾ ಕಗ್ಗತ್ತಲು
ಕರಗುವಂತೆ ...
ನೋಡುತ್ತಲೇ ಹೋದೀತು
ಹಗಲು ಇರುಳು ...
ಕಾಲಮೆಯ ಹುರುಳಿ ಹುರುಳಿ...
ಚಂದ್ರನ ಆಕೃತಿ ಬದಲಾದಂತೆ
ಹುಟ್ಟುವುದೇ ಹುಣ್ಣಿಮೆ ಅಮವಾಸ್ಸೆ...
ಆಕಾಶದಲ್ಲಿ ಹೊರಟಿದೆ ಚಿತ್ತಾರದ
ಸೊಗಸು...

- pavan gowda

27 Nov 2017, 06:25 am

ಪತಿಯೇ ನನ್ನುಸಿರು

ನೀ ನಿಲ್ಲದ ಈ ಕ್ಷಣ
ಮನದಲ್ಲೇನೋ ತಲ್ಲಣ
ನೀ ಇರದ ಪ್ರತೀಕ್ಷಣ
ಗುರಿಯಿಲ್ಲದ ಪಯಣ

ಜೋತೆಗಿರೆ ನೀನು
ಸಾಧಿಸುವೆ ನಾನು
ಜಗವನೆ ಗೆಲ್ಲುವೆನು
ಬಳಿಯಿರಲು ನೀನು

ನೀನಿಲ್ಲದೆ ನನಗೇನಿದೆ
ಜೀವನವೇ ಸಾಕಾಗಿದೆ
ಉಸಿರಿರದ ಬದುಕೆಲ್ಲಿದೆ
ನನ್ನುಸಿರಲಿ ನಿನ್ನ ಹೆಸರೇ ಅಚ್ಚಾಗಿದೆ

ಸ್ನೇಹದ ಜೋತೆಯಲಿ
ಪ್ರೀತಿಯ ಒಲವಿದೆ
ಒಲವಿನ ಜೋತೆಯಲಿ
ನಲ್ಮೆಯ ಬದುಕಿದೆ
ನನ್ನ ಪತಿಯ ಮನದಲಿ
ನಂಬಿಕೆಯ ಸೆಲೆಯಿದೆ
ಆ ನಂಬಿಕೆಯ ಸೆಲೆಯಲಿ
ನನ್ನಯ ಉಸಿರಿದೆ....

- Bhagya Girish

26 Nov 2017, 11:07 pm

ಲಾಲಿ ಹಾಡು ಹೇಳಲೇನೆ

ಲಾಲಿ ಹಾಡು ಹೇಳಲೇನು ಗೆಳತಿ
ನಿನ್ನ ನೊಂದ ಕಣ್ಣಿಗೆ..
ಎಲ್ಲ ಮರೆತು ಮಲಗು ಒಡತಿ
ನಾನು ಇರುವೆ ಒಂದಿಗೆ.

ಸ್ನೇಹವೊಂದು ಹೂವಿನಂತೆ
ಕಾಯಬೇಕು ಬಾಡದಂತೆ,
ಪ್ರೀತಿ ನೀರ ಉಣಿಸಬೇಕು,
ಮನದ ಭಾರ ತಣಿಸಬೇಕು,
ಜೊತೆಗೆ ದೂರ ಕ್ರಮಿಸಬೇಕು
ಬದುಕ ಪೂರ ಸವೆಸಬೇಕು,
ಮಲಗು ಮುದ್ದು ಮಲ್ಲಿಗೆ
ನಾ ಹಾಡುತಿರುವೆ ಮೆಲ್ಲಗೆ ||

ಅರಳಿ ನಿಂತ ಹೂವ ಕಂಡು
ಬರಲು ಬಹುದು ದುಂಬಿ ಹಿಂಡು
ಸೋಲದಿರಲಿ ಮನವು ನಿಂದು,
ಆತ್ಮರತಿಯ ನಂಬಿಕೊಂಡು..
ನಾಳೆ ನಮಗೆ ಒಲಿವುದಂತೆ
ಹರುಷ ಹೊನಲು ಹರಿವುದಂತೆ,
ಮಲಗು ಮುದ್ದು ಮಲ್ಲಿಗೆ
ನಾ ಹಾಡುತಿರುವೆ ಮೆಲ್ಲಗೆ ||

- ಶ್ರೀಗೋ.

26 Nov 2017, 07:57 pm

ನಗುತ್ತಿರು ಗೆಳತಿ...

ನಗುತ್ತಿರು ಗೆಳತಿ
ಎಲ್ಲೇ ಇದ್ದರೂ ಹೇಗಿದ್ದರೂ
ನನ್ನೆಲ್ಲಾ ಆಸೆಗಳಿಗೆ ಕಡಿವಾಣ
ಹಾಕುವೆನು ನಿನ್ನೊಂದು ನಗುವಿಗಾಗಿ
ಬೇರೆಯವರ ಖುಷಿಗಾಗಿ
ಪ್ರೀತಿಯನ್ನೇ ಕಳೆದುಕೊಂಡ ತ್ಯಾಗಿ ನೀನು
ದೇವರ ಆಟಕೆ ನಾ ಏನೆಂದು ಹೇಳಲಿ
ನೊಂದು ಕೇಳುತಿರುವೆನು
ಕೋರಿಕೆಯ ಈಡೇರಿಸೆಂದು ದೇವರ ಬಳಿ
ಪ್ರೀತಿಸುವ ಜೀವಗಳನು ಒಂದುಮಾಡು..

- ಪ್ರಿಯಾಂಕ

26 Nov 2017, 06:41 pm

ಉದ್ರೀ ವ್ಯಾಪಾರಾ....

ಬೆಲೆ ಕಟ್ಟುವದೆಲ್ಲ ಸಿಗುವದೆ ಅತೀ ವಿರಳ,
ಇರಬಹುದೇ? ಅದಕೆ ನಾನು ಹೆಸರಿಗಷ್ಟೇ ಪತ್ತಾರ.

ತೊರು ಬೆರಳಿನ ತುದಿಯೆ ಅವಳು ಕುರುವ ಜಾಗ,
ಹೊರಟ ಅವಳನೆ ಕರೆದು ಕಾರಣ ಕೇಳಬಹುದಾ.

ಮುಚ್ಚಿಟ್ಟ ಪುಸ್ತಕದಲಿನ ಅವಿತಿದ್ದ ಪದ ಕದ್ದು ,
ತಂದಿದ್ದರೆ ನಾ ಅವಳನು ಹೊಗಳಬಹುದಿತ್ತಾ.

ಕಿವಿ ಚುಚ್ಚುವನ ಕಣ್ಣಲಿ ಪ್ರಿತಿ ಕಸವಾದದ್ದು ಕಚಿತ,
ರೆಪ್ಪೆ ಮುಚ್ಚೊಗದಂತೆ ಕಣ್ಣಿರಿನ ಕಾವಲಿಡಲಾ?.

ಕತ್ತಲ ಬೆನ್ನಿಗೆ ಬೆಳಕ ಬಳೆವ ಚಂದ್ರನ ಕರೆದು,
ಒಬ್ಬಂಟಿ ತಂತಿಗೆ ಜೊತೆಯಾಗಿ ಮಾಡಬಹುದಾ?.

ಹಗಲೂ ರಾತ್ರಿಗಳೆನದೆ ಜೊರಾಗಿ ನಡೆದಿದೆ ನನ್ನ,
ಹರಿದ ಮುಗಿಲಿನ ಉದ್ರೀ ವ್ಯಾಪಾರಾ.......

ರಚನೆ,,ಸಚಿನ್ ಪತ್ತಾರ..

- Sachin Pattar

26 Nov 2017, 03:32 pm

ಗಳೀರ್ ಅಂದವೋ ಗೆಜ್ಜೆ

ಮೆಲ್ಲ ಮೆಲ್ಲ ನೀನಿಟ್ಟು ಬಂದಾಗ
ಒಂದೊಂದೇ ಮೃದು ಹೆಜ್ಜೆ,
ಗಳೀರ್ ಎಂದವೋ ಚೆಲುವೆ
ನಿನ್ನ ಕಾಲ ಬೆಳ್ಳಿ ಗೆಜ್ಜೆ.

ಬಿಳಿಯ ಹೊದ್ದ ಬೆಳ್ಳಿ ಮೋಡ
ತೊಳೆದು ಕಳಿಸಿದ ಪಾದ ನೋಡ,
ಎಳೆಯ ಹೂವ ಎಸಳ ಪುಳಕ
ಇಳೆಯ ತೊಳೆದ ಇಬ್ಬನಿ ಜಳಕ.

ತೊಳೆದು ಇಟ್ಟ ಶುಂಠಿ ಕೊಂಬು,
ಹೊಳೆವ ಕಾಲ ಬೆರಳ ಇಂಬು.
ಜಗದ ಅಂದವೆಲ್ಲ ಜಾರಿ
ಸೇರಿತೇನೋ ಹೇಗೋ ಸೋರಿ.

ಬಾಳೆ ದಿಂಡಿನಂತ ನುಣುಪು,
ಗಂಧ ತೀಡಿದಂತ ಒನಪು,
ಪಾದರಸದಿ ತೋಯ್ದ ಪಾದ
ಜೊತೆಗೆ ಗೆಜ್ಜೆ ದಿವ್ಯ ನಾದ !

- ಶ್ರೀಗೋ.

26 Nov 2017, 03:21 pm

ಬದುಕುವಾಸೆ

ನನಗೂ ಬದುಕುವಾಸೆ
ಏಕೆ ತಡೆಯುವೆ ಮನಸೆ
ನೀ ಏತಕೊ ನೊಂದು ನರಳುವೆ
ಅದರಲಿ ನನ್ನನೂ ಏಕೆ ಸಾಯಿಸುವೆ

ನೀನು ಕೂಡಿಟ್ಟ ಭಾವಗಳ‌ ನೋವುಗಳಿಗೆ
ನನಗೇಕೆ ತರುವೆ ಸಂಕಟದ ವಿಷ ಗಳಿಗೆ
ನಿನ್ನ ನೋವುಗಳಿಗೆ ಆಗಬೇಕು ನೀನೆ ಹೊಣೆ
ಆದರೆ ನನಗೇಕೆ ಕೊಡುತಿರುವೆ ಇಂತ ಶಿಕ್ಷೆಯ ನಾಕಾಣೆ

ಅರಿಯದೆ ನಂಬಿ ನೀನು ಬಿದ್ದ ಕನಸು ಭಾವಗಳ ಬಾವಿಗೆ
ಎದ್ದುಬರಲಾಗದೆ ಶರಣಾಗಬೇಕೆ ಈ ದೇಹ ಸಾವಿಗೆ
ಕಣ್ಣಲ್ಲಿ‌ ಜಾರಿದರು ಕಣ್ಣೀರ ಕಡಲು ಯಾರಿಲ್ಲ ನೋಡಲು
ಕಾಲಿಯಿದ್ದರೂ ಒಡಲು ಬೇಕೆನಿವುದಿಲ್ಲ ಏನು ಉಣ್ಣಲು

ಸಾವಲ್ಲಾದರು ಸಿಗಬಹುದೆ ನೆಮ್ಮದಿಯ ನಿಟ್ಟುಸಿರು
ಹೇಗಿರುವುದೋ ಏನೋ ಕಾಣದ ಆ ಸಾವಿನೂರು‌
ತಿಳಿಸಿ ಹೇಳಲು ಹೋದವರು ಹಿಂದಿರುಗಿ ಬಂದಿಲ್ಲ ಯಾರು
ಹೋಗಿ ನೋಡಿ ಬರಲೇ ಒಮ್ಮೆ ಹೇಗಿರಬಹುದು ಆ ಊರು

- ಶ್ರೀಕಾವ್ಯ

26 Nov 2017, 09:47 am

ಅಭಿಯಾನದ ದಾರಿ...

ಪರಿಣಿತಿಯು ಶರಣಾಗಿ
ಉಸಿರಾಟ ಬಿಗಿಯಾಗಿ
ನೆರಳಿರದ ನೆಲೆಯಾಗಿ
ವಿಧಿಯಾಟ ಶುರುವಾಗಿ,
ಮನಮೋಹಕವಾಗುವ, ಹೊಸ ರೋಚಕ ನೀಡುವ,
ಅಭಿಯಾನಕೆ ದಾರಿ ನೀ ತೋರಿದೆ ಇಂದು...

- Spb...@#

26 Nov 2017, 09:38 am

ಕಾಲ

ಹೇಳಬೇಕಾದವರಿಗೆ
ಹೇಳಬೇಕಾದದ್ದು
ಹೇಳೋದಕ್ಕೆ ತುಂಬಾ
ಇದೆ ಮನದಲ್ಲಿ

ಕಾಲ ಕೂಡಿ
ಬರಬೇಕಷ್ಟೇ

ಧೃಡ ವಿಶ್ವಾಸವಿದೆ
ಬಂದೇ ಬರುತ್ತದೆ
ಆ ಕಾಲ ಮತ್ತೊಮ್ಮೆ
ನನಗಾಗಿ,

ಕೇಳಿಸಿಕೊಳ್ಳುವ
ತಾಳ್ಮೆಯುಳ್ಳ
ಮನಸ್ಸುಗಳಿಗಾಗಿ...

- ಅಲ್ತಾಫ್ ಬಿಳಗುಳ

26 Nov 2017, 12:18 am