Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಆಸೆ

ಆಸೆ ಪದವು
ನೋಡಲದುವೆ ಚಿಕ್ಕದು
ಒಮ್ಮೆಯದರ ಸುಳಿಗೆ ಸಿಲುಕೆ
ಹೊರಗೆ ದಾರಿ ಕಾಣದು

ಹಸಿದ ಜೀವದಲಿ
ಹೊಟ್ಟೆದೊಂದೆ ಚಿಂತೆ
ಉದರ ವ್ಯಥೆ ಕಳೆಯುತಿರೆ
ತಿರುಕನಲೂ ಕನಸಿನಾ ಸಂತೆ

ಚಿಕ್ಕ ಪುಟ್ಟ ಆಸೆಯು
ಬೇಕು ಬಾಳ ನಡೆಸಲು
ಆಸೆ ತಿರುಗಿ ದುರಾಸೆಯಾಗೆ
ನೋವು ಜಗದಿ ಸುರಿವುದು

'ಆಸೆಯೇ ದುಃಖಕ್ಕೆ ಮೂಲ'
ಬುದ್ದನಿತ್ತ ಉಪದೇಶ
ಅರಿತರದುವೆ ಮನುಕುಲ
ಶಾಂತಿಬಾಳ್ವೆಗೆ ಸಂದೇಶ

- ನಾಗರಾಜ್

29 Nov 2017, 10:00 am

ಮಮಕಾರ

ಮಗಳೆಂಬ ಮಮಕಾರ
ಮಡಿಲಿಂದ ಬಹುದೂರ!!
ಪರ ಶಿವನು ನೀಡಿದನೇ
ಇದಕೆಲ್ಲ ಸಹಕಾರ!!

ಯಾರದೋ ಮನೆಯಲ್ಲಿ
ಯಾರದೋ ಅಧಿಕಾರ!!
ನೀಡುವವರು ಯಾರೋ
ಇದಕೆಲ್ಲ ಪರಿಹಾರ!!

ನಾನು ನನ್ನವರನ್ನು
ತೊರೆದು ಬಂದಿಹ ಗಳಿಗೆ!!
ಬೆಸೆದುಕೊಂಡಿತೇ ಬದುಕು
ಹೊಸ ನಂಟಿನ ಜೊತೆಗೆ!!

ನನ್ನವರು ಯಾರಿಲ್ಲ
ಒಂಟಿಯೂ ನಾನಲ್ಲ!!
ಬಾ ಮಗಳೇ ಬಳಿಗೆಂದು
ಕರೆವವರೂ ಯಾರಿಲ್ಲ!!

ಹೊಸತಾದ ಮನೆಗೀಗ
ಅತಿಥಿಯು ನಾನಲ್ಲ!!
ನನ್ನವರು ಎನ್ನುವವರ
ಒಡನಾಟ ನನಗಿಲ್ಲ!!

ಕಣ್ಣ ಅಂಚಿನಲ್ಲಿ ಸಾಲು
ಭಾವನೆಯು ಹೊರಬರಲು!!
ಸೊರಗಿಹುದು ಈ ಮನವು
ತನ್ನವರ ನೆನಪಿನಲ್ಲಿ!!

- ಪಿ.ಜಿ.ಜ್ಯೋತಿ

29 Nov 2017, 08:26 am

ಎಲ್ಲರು ಬಂದಾಯ್ತು

ಬಾನಾಲ್ಲಿ ಎರಿ ಬಂದಾಯ್ತು
ಜಗದ ಅಂದಕಾರವ ಮರೆಮಾಚಿ
ಬೆಳಕ ಕೋಡಲು ಆ ರವಿಯು
ಮುಗಿಲಲ್ಲಿ ಕೂತಾಯ್ತು......

ಹಕ್ಕಿಗಳೆಲ್ಲ ಜಿಲಿಪಿಲಿ ಸದ್ದು
ಮಾಡುತ್ತ ಕಾಳು ಕಡಿಗಾಗಿ
ಗೂಡು ಬಿಟ್ಟು ಹೋರಟಾಯ್ತು.........

ಗಿಡಮರಗಳೆಲ್ಲ ನಮಗಾಗಿ
ಮುಂಜಾನೆಯೆ ಎಂದ್ದು ತಂಪಾದ
ಗಾಳಿ ಬಿಸಲು ಎದ್ದು ಸದ್ದು ಮಾಡಲು
ಬಂದಯ್ತು.........

ದೇವತೆಗಳೆಲ್ಲ ಮನೆಯ ಮುಂದೆ ರಂಗೋಲಿ
ನೋಡಿ ಬಂದು ಬಾಗಿಲಲ್ಲಿ ನಿಂತಿಹರು
ಎದ್ದು ಸ್ವಾಗತಿಸಿ ಅವರನ್ನೆಲ್ಲ
ಬಂದು ಮನೆಬಾಗಿಲಲ್ಲಿ ನಿಂತಾಯ್ತು.......
......ಶುಭೋದಯದ ಸವಿ ನುಡಿಗಳು.........

- ರಾಗಸಿರಿ....

29 Nov 2017, 07:18 am

ಹೆಸರೋಳೆಯದ ಕವಿತೆ

ರೈತನತ್ರ ಮಳೆ-ಬೆಳೆ-ಕಳೆಯ ಚಿಂತೆ..
ರಾಜಕರಣಿಗಳತ್ರ ಓಟು-ನೋಟಿನ ಕಂತೆ..
ಅಧಿಕಾರಿಗಳತ್ರ ದರ್ಪ-ದೌಲತ್ತಿನ ಸಂತೆ
ಪ್ರೇಮಿಗೆ ಒತ್ತು-ಮುತ್ತಿನ ಬ್ರಾಂತಿ ಅಂತೆ...

ಕವಿಗೆ ಪದ-ಪುಂಜದ ಇರಾದೆ..
ಕಾರ್ಮಿಕನಿಗೆ ಮೈ-ಕೈ ನೋವಿನ ಪುರದೆ.
ಹಗಳುಗಳ್ಳನಿಗೀವತ್ತು ಎಲ್ಲಿ-ಇಲ್ಲದ ಮರ್ಯಾದೆ..
ಸೇರುಗು ಬಿಚ್ಚಿವ್ವಳೆ ಇವತ್ತು ರತಿ-ಮತೀಯ ರಾಧೆ...

ಮುದಕನಿಗೆ ಮಕ್ಕಳು-ಮೊಮ್ಮಕ್ಕಳ ಬ್ರಾಂತಿ..
ರೋಗಿಗೆ ಕೆಮ್ಮು-ಧಮ್ಮಿನ ಶೀತದ ವಾಂತಿ..
ಚೆಂದುಳ್ಳಿ ಚೆಲುವೆಗೆ ಮಾಟ-ನೋಟವೇ ಕಾಂತಿ..
ಕೊಲೆಗಡುಕನಿಗೆ ಜಗಳ-ತೆಗಳವೆ ಅವನಿಗೆ ಕ್ರಾಂತಿ..
ಸುಗ್ಗಿ...

- ಆರ್ ಎಸ್ ಸುಗ್ಗಿ.

28 Nov 2017, 08:26 pm

ನನ್ನ ಮನದ ಬಂಗಾರಿ ನೀನು

ನನ್ನ ಮನದ ಬಂಗಾರಿ ನೀನೆ
````````````````````````````````````
ನನ್ನ ಹ್ರುದಯ ಗೆದ್ದ ಮದನಾರಿ.
ನಾನೆ ನಿನ್ನ ಪ್ರೇಮ ಪೂಜಾರಿ.
ನಿನ್ನ ಕನಸ್ಸುಗಳಿಗೆ ನಾನೆ ರುವಾರಿ.
ನಿನಗಾಗಿ ತಂದಿರುವೆ ನಾನೆ ನಿರ್ಮಿಸಿದ
ಅಂಬಾರಿ .
ನಾವಿಬ್ಬರು ಸೇರಿ ಹೊಗೋಣ. ಪ್ರಣಯ ಪಕ್ಷಿಗಳಂತೆ ಹಾರಿ

ನಾವಿಬ್ಬರು ಸೇರಿ.ಉಯ್ಯಾಲೆ ಅಡೋಣವೇ ಕಾಮನ ಬಿಲ್ಲನ್ನು ಏರಿ.
ಇ ಜಗಕೆ ಪ್ರೀತಿ ಎಂಬ ಬೆಳಕ ಚೆಲ್ಲೊಣ ಚಂದಿರನನ್ನು ಮೀರಿ.

- ಸಂತೋಷ್//ಜೀತು

28 Nov 2017, 08:18 pm

""""ಪ್ರಿಯ ಹುಡುಗಿ""""

ಮುದ್ದು ಮನಸ್ಸಿನ ಪ್ರಿಯ ಹುಡುಗಿ
ಕದ್ದು ನೊಡುವ ನಿನಗಾಗಿ, ಎದ್ದು ಬಿದ್ದು
ಬರುವೆ ದಿನವೂ ನಿನ್ನ ಮನೆಯ ಅಂಗಳಕೆ
ಅಂಗಳಕೆ ಬಿಡುವ ರಂಗೋಲಿ ನನ್ನೆದೆಗೆ ಬಿಡು ನೀನೊಮ್ಮೆ ಅಳಿಸದೆ ಉಳಿಸವೆ
ನನ್ನುಸಿರಿರುವವರೆಗೂ ನನ್ನೊಲವಿನ ಆಣೆ

ಈ ಕಣ್ಣಲಿ ನಿನ್ನದೇ ಛಾಯೆ
ಈ ಮನಸಿಗೂ ಮಾಡಿದೆ ನೀ ಏನೂ ಮಾಯೆ
ಅರಿವಿಲ್ಲದೆ ಶುರುವಾಗಿದೆ ನನಗೂ ಒಲವು
ತೋರೆ ನೀ ಕಿರು ಬೆರಳನು
ಹಿಡಿಯುವೆ ನಾ ಪ್ರತಿ ಜನ್ಮಕೂ

ಶುರುವಾಗಿದೆ ಒಲವ ಜ್ವರ
ಯಾವುದೇ ಸೂಚನೆ ಕೊಡದೆನೆ
ಸರಿ ಹೋಗಬಹುದು ನೋಡು
ಸನಿಹ ನೀ ಬಂದರೆ ಮುತ್ತಿನ ಔಷಧಿ ಕೊಟ್ಟರೆ

- uday

28 Nov 2017, 05:01 pm

ಎಲ್ಲಿಂದ ಬಂದವರು........

ಓ ಮುಗಿಲೆ ನೀನೆಕೆ ಹೋದೆ
ಅಷ್ಟು ದೂರ ಕೈಗೆಟುಕದ ಹಾಗೆ
ನಿನ್ನ ಅಲ್ಲಿ ಇಟ್ಟವರಾದರು ಯಾರು
ನನಗು ಹೇಳುವೆಯ....
ಓ ಕಾಣದ ಕಡಲೆ ನಿಹೇಗೆ
ಬಂದೆ ಇಲ್ಲಿಗೆ ಎಲ್ಲಿಂದ ಬಂದೆ
ನಿನ್ನ ಸಾಗರ ಮಾಡಿದವರು ಯಾರು
ನನಗು ಹೇಳುವೆಯ........
ಓ ಹಿಮಗಳ ರಾಣಿಯೆ
ನೀನೆಷ್ಟು ಸುಂದರ ನೀ
ಯಾರ ಮಗಳೆ ಎಲ್ಲಿಂದೆ ಬಂದೆ
ನನಗು ಹೆಳುವೆಯ......
ಓ ಹಸಿರಿನ ತವರೆ ನೀ
ಹೇಗೆ ಇಷ್ಟು ಹಬ್ಬಿನಿಂತಿರುವೆ
ನಿನ್ನ ಇಲ್ಲಿ ಕಳಿಸಿದವರಾದರು ಯಾರು
ನನಗು ಹೇಳುವೆಯ......
ಓ ಸುಂದರ ನದಿಗಳೆ
ಎಲ್ಲಿಂದ ಹರಿದು ಬಂದಿರೆ ಭೂಮಿಗೆ
ನಿಮ್ಮನ್ನು ಇಲ್ಲಿಗೆ ಕರೆದವರಾದರು ಯಾರು
ನನಗು ಹೇಳುವಿರ......
ಯಾರಿಗು ತಿಳಿಯದೆ ಯಾವಾಗ
ಹುಟ್ಟಿರಿ ಎಲ್ಲಿಂದ ಬಂದಿರೆ ಎಲ್ಲ
ನನಗು ಹೇಳುವಿರೆನೆ ಸ್ವಲ್ಪ....

- ರಾಗಸಿರಿ....

28 Nov 2017, 01:52 pm

ಅವಳ ನೆನಪು(ಕವನ)

ತಿಳಿದರೂ ತಿಳಿಯಲಾದೆನೂ
ನಿನ್ನ ದೂರವ ಸಹಿಸಲಾರೆನೂ
ಕ್ಷಣವೂ ನೆಪಕೆ ಬಂದು ಹೋಗು
ನಿನ್ನ ಮೊಗವ ತೋರಿ ಹೋಗು||೧||

ನಿನ್ನ ಒಲವೇ ಸ್ಪೂರ್ತಿ ಚಿಲುಮೆ
ಬದುಕು ಬಂಡಿಯ ನಡೆಸಲು
ಹಳೆಯ ಕ್ಷಣಗಳು ಮರಳಿ ಬೇಕು
ಕಳೆದ ದಾರಿಯ ನೆನೆಯಲು||೨||

ಮನವೇ ನೀನು ಏಕೆ ಹೀಗೆ
ಎದುರು ಇದ್ದರು ಇಲ್ಲದ್ಹಂಗೆ
ಕನಸುಗಳಿಗೆ ಜೀವ ತುಂಬು
ಒಲವ ಸುಧೆಯ ಚೆಲ್ಲುವವು||೩||

ಮರಳಿ ಬಾ ಎನ್ನ ಮನವೇ
ದೂರ ಸಾಗದೇ ಎಲ್ಲಿಯೂ
ಕಾಣುತಿರುವೆ ನಿನ್ನ ಕನಸೇ
ನನ್ನ ಬೊಗಸೆ ಕಣ್ಣಲ್ಲಿಯೂ.||೪||

- ಅನಿಲ್ ಕುಲಕರ್ಣಿ

28 Nov 2017, 10:10 am

ಒಲವಿನ ವಿಸ್ಮಯ ಜಗತ್ತು

ಸ್ವಾತಿ ಮಳೆಯ ಹನಿ.....
ಮುತ್ತಾಗುವುದು ಕಪ್ಪೆ ಚಿಪ್ಪಿನಲಿ,
ಬೆಚ್ಚನೆ ಅಪ್ಪುಗೆಯ ಸ್ಪಷ೯ದಲಿ....
ಸಾಗರದಾಳದ ತಡಿಯಲಿ....

ಮೊಗ್ಗೊಂದು ಅರಳಿ,
ಹೂವಾಗುವುದು ಇಲ್ಲಿ....
ಸೂಯ೯ ರಶ್ಮಿ ತಾಗಿ....
ನಸು ನಗೆ ಬೀರುತ ನಿಂತಿದೆ
ಹೂ ತಾ ತಲೆ ಬಾಗಿ.....

ವಿರಹವಿರುವುದು ಪ್ರೀತಿಯಲಿ,
ಮಧುರ ಸ್ಪಷ೯ದ ಮಿಲನದಲಿ....
ಪ್ರೀತಿ ತುಂಬಿದ ಮನದಲಿ,
ಒಂದಾಗಿ ಬದುಕುವ ಜೋತೆಯಲಿ....

ಈ ವಿಸ್ಮಯ ಲೋಕದ ಸೃಷ್ಠಿಯಲಿ.....
ಪ್ರತಿಯೊಂದು ಅಚ್ಚರಿ,ಈ ಲೋಕದಲಿ,
ಪ್ರೀತಿ ಜಾದುವಿನ ಮೋಡಿಯಲಿ,
ಜಗ ನಿಂತಿದೆ ನೋಡುತ ಒಲವಿನಲಿ.....

- Bhagya Girish

27 Nov 2017, 11:33 pm

ನನ್ನೆಜಮಾನ !!

ಚೆಲುವಾಂತ ಚೆನ್ನ ನನ್ನ ಯಜಮಾನ
ಎಷ್ಟು ಹಾಡಿದರೂ ಸಾಲದವನ ಗುಣಗಾನ
ಹೊಗಳಿಕೆಗೆ ಏರುವುದವನ ಬಿಗುಮಾನ,
ಅಪ್ಪಿ ಮುತ್ತು ಕೊಟ್ಟರದುವೆ ಸನ್ಮಾನ !

ನಿನ್ನೊಲುಮೆಯ ಕೊಳದಲ್ಲಿ
ಆಡುತ್ತಿರುವ ಹಂಸ ನಾನು,
ಅರೆ ಗಳಿಗೆಯೂ ನಿನ್ನನಗಲಿ
ಇರಲಾರದ ಕೂಸು ನಾನು.

ತೊರೆಯಲಾರೆ ಚೆಲುವ ನಿನ್ನ
ಅರಿಯಲಾರೆ ನೀನು ನನ್ನ,
ತೋರು ಬೆರಳನಿಡಿದುಕೊಂಡು
ತೋಳ ಬಳಸಿ ನಡೆದುಕೊಂಡು
ಬರುವೆ ನಿನ್ನನೊಡಗೂಡಿ
ನಿನ್ನೆದೆಯೆನಗೆ ಗಂಧದ ಗುಡಿ.

ಸೂರ್ಯನೆಲ್ಲಿ ಹೋದರೂನು
ಬರಲೇ ಬೇಕು ಸಂಧ್ಯಾ ನಾನು
ತರಲೆ ಬೇಕು ಪ್ರೀತಿ ಜೇನು
ತರಳೆ ನಾನು ಕಾದಿರುವೆನು.

- ಶ್ರೀಗೋ.

27 Nov 2017, 01:04 pm