Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಹೂವು

ನಿನ್ನ ಪ್ರೇಮದ ಸಾನಿಧ್ಯಕರಳಿದ ಪ್ರೀತಿ ಹೂವು
ನಿನ್ನ ಮೋಸಕೆ ಬಾಡಿ ಉದುರಿ ನೆಲಸೇರಿ
ಕಂಡ ಕಂಡವರ ಕಾಲಧೂಳ‌ ಕಂಡು
ಹೆದರಿ ಉಸಿರೂ ಬಿಡಲಾಗದೆ ನರಳುತಿದೆ


ನಿನ್ನ ಕಣ್ಬೆಳಕಿನ ಕಾಂತಿಗೆ
ಬಾಳಿಗೆ ಬೆಳಕರಿದಂತಾಗಿ ನಿನ್ನೆಡೆಗೆ
ಬಾಗಿದ ನಾ ಸೂರ್ಯಕಾಂತಿ ಹೂವು
ನಿನ್ನ ಕಣ್ಣ ಸೆಳೆತವಿರದ
ಕ್ಷಣ ಕ್ಷಣವೂ ನನಗೆ ಸಾವು


ಅವಳ ಅಂದವ ಕಂಡ
ಲತೆಗೂ‌ ಏಕೊ ನಾಚಿಕೆ ಬಂತೇನೊ
ಸೌಂದರ್ಯವೆಂದರೆ ಅವಳೆ ಅನಿಸಿ
ಬಳ್ಳಿ ತುಂಬಾ ಹೂವು ಅರಳಿಸಿ
ನಾನು ಸುಂದರಿ ಎಂದು ಅಳುತ್ತಿತ್ತು

- ಶ್ರೀಕಾವ್ಯ

30 Nov 2017, 09:30 pm

ಅಸಲಿ ಮಾತು

ಚಿಗುರು ಗಿಡವಾಗಿ ಬೆಳೆವಾಗ
ಯಾರು ಹೊಯ್ದಿಲ್ಲ ನಾಲ್ಕು ಹನಿ ನೀರು
ಆದರೂ ಮರವಾದೆ ಸ್ರಷ್ಟಿ ಔದಾರ್ಯ
ರಸ್ತೆ ಬದಿಯಲ್ಲಿ ನಿಂತು
ದಾರಿ ಹೋಕರಿಗೆ ನೆರಳೀಯುತ್ತಿದ್ದೇನೆಂಬ
ಹಮ್ಮುತನವಾಗಲಿ
ಹತ್ತಾರು ಪಕ್ಸಿಗಳು ನನ್ನಲ್ಲಿ
ಗೂಡುಕಟ್ಟಿ ಬದುಕುತ್ತಿವೇ ಎಂಬ
ಹೆಗ್ಗಳಿಕೆಯಾಗಲಿ ನನಗಿಲ್ಲ
ಇಷ್ಟಾದರೂ ಕಲ್ಪಿಸಿದ ದೈವದೊಲುಮೆ ಬಗೆಗೆ
ಧನ್ಯತಾ ಭಾವ
ಸ್ವಾರ್ಥ ಪರರು ನನ್ನ ಬುಡಕ್ಕೆ
ಕೊಡಲಿ ಇಟ್ಟಾಗ ಕಂಪಿಸಿದ್ದು
ಸಾಯುತ್ತೇನೆಂಬ ಭಯದಿಂದಲ್ಲ
ನನ್ನ ಆಶ್ರಿತರೆಲ್ಲ ಇನ್ನೊಬ್ಬರನ್ನು
ತಬ್ಬಬೇಕಲ್ಲ ಎಂಬ ನೋವಿನಿಂದ.

- ಯು.ರಾಮು ಸಿರಿಗೆರೆ

30 Nov 2017, 09:30 pm

ಕಂಬನಿ

ನಿನ್ನ ಕಣ್ಗಳ
ಮಧುರ ನೋಟಕೆ
ಕರಗಿಹೋಗಿಹೆ ನಲ್ಲೆ

ಕಣ್ಣೀರ ಹನಿಯಾಗಿ
ನಿನ್ನ ಕಣ್ಗಳಿಂ ಉದುರಿ
ಮೃದುಕದಪುಗಳ
ಮುತ್ತಿಕ್ಕಿಹೆನಲ್ಲೆ

ನಿನ್ನಧರಕಿಳಿದ
ಕಂಬನಿಯಲಿ
ನನ್ನನರಸಿ ಅಧರದಿಂ
ಸೆಳೆಯಲೆ ನಲ್ಲೆ?

ಕಣ್ಣಲ್ಲಿ ಕಣ್ಣಿಟ್ಟು
ನಿನ್ನಲ್ಲಿ ಕೇಳಲು
ನಾ ನಿನ್ನ ಕಣ್ಗಳಲೇ
ಕಂಬನಿಯಾಗಿಹೆನಲ್ಲೆ!

- ನಾಗರಾಜ್

30 Nov 2017, 08:03 pm

ಒಲವ ದಾರಿ (ಗಜಲ್)

ಗಜಲ್

೧. ಒಲವ ದಾರಿ

ಅಂದು ನೀ ನೀಡಿದ ಭಾಷೆ, ಯಾರು ಮರೆತರಿಗ ಹೃದಯವ ಮೊದಲು
ಒಲವ ದಾರಿಯ ಮರೆಯಿತೇ ನಿನ್ನ ಹೃದಯ ಕೈ ಹಿಡಿದು ಸಾಗುವ ಮೊದಲು

ಬೂದಿ ಮಾಡಿದೆ ನೀ ನನ್ನ ಎದೆಯ ಅರಮನೆಯನ್ನು
ನಿನ್ನ ಪಾದವ ಉರಿ ನೀ ರಾಣಿ ಆಗುವ ಮೊದಲು

ಮಸಣದ ಹಾದಿ ತೋರಿಸಿದೆ ನೀ ನನ್ನ ಕನಸುಗಳನ್ನು
ಹೂವಿನಂತೆ ಅರಳಿ ಅವು ನನಸಾಗುವ ಮೊದಲು

ಕೊಡಿಟ್ಟ ಕನಸುಗಳನ್ನು ಚೆಲ್ಲಾಡಿ ನೀ ನಡೆಯುವಾಗ
ನನ್ನ ಮಾತುಗಳು ಸಹ ಮೌನವಾದವು ನಾ ಹೇಳುವ ಮೊದಲು

ಕಣ್ಮರೆಯಾಯಿತು ಆ ನಿನ್ನ ತಂಗಾಳಿಯ ಪಿಸು ಮಾತಿನ ಹೊನಲು
ನಿನ್ನ ಆ ಪಿಸು ಧ್ವನಿಯ ನಾದವಿಲ್ಲದೆ ನರಕ ಕಾಣುತ್ತಿದೆ ಈ ಅನಿಲನ ಹೃದಯ ಸಾಯುವ ಮೊದಲು

✍ಅನಿಲ್ ಕುಲಕರ್ಣಿ
ಕೆರೊರ (ತಾ: ಬದಾಮಿ)

- ಅನಿಲ್ ಕುಲಕರ್ಣಿ

30 Nov 2017, 04:36 pm

ಪ್ರೀತಿಯ ರೀತಿ ....

ನಿ ಯಾಕ್ ಇಂಗ್ ಆಡ್ತಿಯೋ ಗಂಡ
ನಿ ಬಲು ಬಂಡ ಬಯ್ದ್ರ ಬಯಸ್ಕೊತಿ
ಹೋಡದರ ಹೋಡಸ್ಕೋತಿ
ನಿ ಯಾಕ್ ಇಂಗಾ ಆಡ್ತಿಯೋ ಗಂಡ

ನಾ ನಿನ್ ಪ್ರೀತಿ ವಲ್ಲೆ ಅಂದರು
ಬಂದ ಬಾಯಿ ಬಡಕೋತಿ
ನಾ ಸೌಟ್ನಾಗ್ ಒಂದ್ ಬಿಟ್ನ ಅಂದರೆ
ಬಾಯಿ ಮುಚ್ ಕೋಂಡು ಒಡತಿ
ನಿ ಯಾಕ್ ಇಂಗ್ ಆಡ್ತಿಯೋ ಗಂಡ

ನಾ ವಲ್ಲೆ ಅಂದರು ಜಗತ್ನಾಗ್
ಇರೋದೆಲ್ಲ ತಂದು ಸುರಿತಿ
ಇಂಗ ದುಡದದ್ದೆಲ ಕಾಲಿ ಮಾಡಿದರ
ಮುಂದ ನನ್ ಕೈನಾಗ್ ಆಯ್ತಿ ನಿನಗೆ
ಜಗತ್ನಾಗ್ ಇಲದೆ ಇರೋ ಬಾಸುಂಡಿ
ನಿ ಯಾಕ್ ಇಂಗ್ ಆಡ್ತಿಯೋ ಗಂಡ

ನಾ ವಲ್ಲೆ ಅಂದರು ಎದೆಯಲ್ಲಿ ಬಚ್ಚಿಟ್ಕೊತಿ
ಅಪ್ಪ ಅವ್ವನ ನೆನಪು ಬರದಾಂಗ್ ನೋಡ್ಕೊತಿ
ಮುಗಿಲ ತುಂಬ ಪ್ರೀತಿ ಮಳೆತುಂಬಿಸ್ತಿ
ಅದನ್ನ ಹೇಂಗ್ ಹೋತ್ಕೊಂಡು ನೀನ್
ಪ್ರೀತಿ ಋಣ ತಿರಿಸಲೋ ನನ ಗಂಡ
ನಿ ಯಾಕ್ ಇಂಗ್ ಆಡ್ತಿಯೋ ಗಂಡ......

- ರಾಗಸಿರಿ....

30 Nov 2017, 04:21 pm

ಸಂದೇಹ

ಹಗಲು ಇರಳು ಏನ್ನದೇ
ನೆನದು ಮಾಡುವ ಕರ್ತವ್ಯ
ಹಣದ ಮುಂದೆ ಏಲ್ಲವೂ ವಿಸ್ಮಯ
ಸತ್ಯ ಕಾಣದ ವಿಚಲಿತ ನಾದವ
ದ್ವೇಶ ಅಸೊಯೇ ಏಲ್ಲವ ಮರೆತು
ಸೇವೆಯೊಂದೇ ಸದಾ ಶಿಷ್ಠಚಾರ
ಮಾಡಿದ ಪಾಪ ಪುಣ್ಯಗಳ ಅನ್ವಷಣೆ
ಕಾಡುತಲಿದೆ ಮನುಷ್ಯನಲಿ
ಇಂದಿಗೂ ಏಂದೆಂದಿಗೂ ಸಂದೇಹ
ಮಧುಸೂಧನ ಗೌಡ

- madhusudhanagowda@gmail.com

30 Nov 2017, 08:42 am

ಜಾತ್ರೆಗೆ ಹೋಗಿದ್ವಿ ಗೆಳತಿಯರು

ಎಷ್ಟು ಚಂದ ಇತ್ತು
ಆ ಸುತ್ತಾಟ ಜಾತ್ರೆಗೆ ಹೂಗಿದ್ವಿ
ಗೆಳೆತಿಯರೆಲ್ಲ..

ಜಾತ್ರೆಗೆ ಹೋಗಿದ್ವಿ ಕೈ ಕೈ ಹಿಡಿದು
ನಮ್ಮ ಕೆಳುವವರು ಯಾರಿರಲಿಲ್ಲ
ಜನಗಳೆ ತುಂಬಿರುವ ತೇರಲ್ಲಿ
ನಾವೆ ಸುತ್ತಾಡಿದಿವಿ
ಮನದಲ್ಲಿ ತುಂಬಿತ್ತು
ಸಂತೋಷ ಮುಖದಲ್ಲಿ ಕಾಣುತ್ತಿತ್ತು
ಉಲ್ಲಾಸ ಗೆಳತಿಯರೆ ನಾವು
ಜೋಕಾಲಿ ಎರದ್ವಿ
ತೊಟ್ಟಿಲ ಕುಸುಗಳು ಆಗಿದ್ವಿ
ಗಿರಿಗಿಟ್ಲೆ ಅತ್ತಿದ್ವಿ
ತಲೆತಿರುಗಿ ಕುತಿದ್ವಿ
ಮಕ್ಕಳ ರೈಲು ಅತ್ತಿದ್ವಿ
ಗಿಲಿ ಬಿಲಿ ಸದ್ದಮಾಡಿದ್ವಿ
ಬಯಲು ನಾಟಕ ನೋಡಿದ್ವಿ
ನಾವೋಂದು ಪದ ಆಡಿದ್ವಿ
ಕಡಲೆ ಮಿಟಾಯಿ ತಿಂದಿದ್ವಿ
ಐಸ್ ಕಡ್ಡಿ ಚಪ್ಪರಿಸಿದ್ವಿ
ತೇರಿಗೊಂದು ಬಾಳೆ
ಹೋಡೆಯಲು ಹೊಗಿ
ಪುಜಾರಿಯ ಬೋಡು
ತಲೆಗೆ ಹಾಕಿದ್ವಿ.....
ಜಾತ್ರೆಯಲ್ಲ ಸುತ್ತಿದ್ವಿ ಹುಡುಗರ ಕಣ್ಣು
ಕುಕ್ಕುವ ಹಾಗೆ.....
ಬಣ್ಣ ಬಣ್ಣದ ಬಳೆಗಳ ತೋಟ್ಟಕೊಂಡ್ವಿ
ಬಗೆಬಗೆಯ ರಿಬ್ಬನ್ನು ತಕ್ಕೋಡ್ವಿ
ಮಿರಿ ಮಿರಿ ಮಿಂಚುವ ಕಾಲ್ಗೆಜ್ಜೆ
ಹಾಕ್ಕೋಂಡು ಸದ್ದು ಮಾಡುತ್ತ
ಸುತ್ತಿ ಸುತ್ತಿ ಬಂದ್ವಿ ತೇರನ್ನ
ಅಣ್ಣನ ಕಣ್ ತಪ್ಪಿಸಿ ಅವಿತು ಕುತಿದ್ವಿ ತೆರಿನ ಪಕ್ಕದಲ್ಲಿ ಸುತ್ತಾಡಿ ಸುಸ್ತಾಗಿ
ಮನದಲ್ಲಿ ಸಂತಸ ತುಂಬ್ಕೋಂಡು
ಬೊಗಸೆ ತುಂಬ ಜಾತ್ರೆಯನ್ನೆ ತುಂಬಿಕೊಂಡು
ಅಮ್ಮ ಬಯವಳೆಂದು ಮನೆಕಡೆಗೆ ಒಡಿದ್ವಿ......
..ಜಾತ್ರೆಗೆ ಹೋಗಿದ್ವಿ ಗೆಳತಿರೆಲ್ಲ ನಾವು.....

- ರಾಗಸಿರಿ....

30 Nov 2017, 07:04 am

ನೀನೆಂದರೆ...

ನೀನೆಂದರೆ ನನಗೆ
ಮಳೆ ನಿಂತರೂ ತೊಟ್ಟಿಕ್ಕುವ
ಮರದೆಲೆಯ ಪಟಪಟ ನೀರ ಹನಿ,
ಇಂಪಾಗಿ ಅಡರುವುದು ಹೆಣ್ಣೇ
ನಿನ್ನೆದೆಯ ಪ್ರೇಮದ ಮಧುರ ದನಿ.

ಹ್ಯಾಗೆ ಮರೆತೇನೇ ಚೆಲುವಿ..
ನೀನಿತ್ತ ತಾಯಿ ಪ್ರೇಮದ ಕೈ ತುತ್ತ !
ಕೆನ್ನೆಗಿತ್ತ ನಿನ್ನ ಕೆಂದುಟಿಗಳ ಸಿಹಿ ಮುತ್ತ,
ಭುಜಕ್ಕೆ ಒರಗಿ ಕುಳಿತು
ಮಗಳಾಗಿ ನೀ ಕೊಟ್ಟ ಸ್ವಲ್ಪ ಹೊತ್ತ !

ನಮ್ಮ ನಡುವೆ ನಡೆದಾವು
ನೂರಾರು ವಿನಾಕಾರಣದ ಹುಸಿ ಜಗಳ,
ಅದರೂನು ಒಡೆಯಲಾರದು ಎಂದಿಗೂ
ಕೂಡಿರುವ ಎರಡು ಗಟ್ಟಿ ಮನಸುಗಳ.
ತೊರೆದೆಯಾದರೆ ಹುಡುಗಿ ನೀನೆನ್ನ ಸಂಗ,
ಖಾಲಿ ತೊಟ್ಟಿಲಾಗುವುದು ಮನಸು
ಮಗುವು ಇಳಿದು ಹೊರಟು ಹೋದ ಹಾಂಗ!

ಬೇರ್ಪಡಿಸಲಾದೀತೆ ಹೇಳು ಹುಡುಗಿ,
ನೀರಿನಿಂದ ಆಮ್ಲಜನಕ, ಜಲಜನಕ ?
ಅಂತೆಯೇ ಕೂಡಿರುವುದು ನಮ್ಮ ಮನ
ಈ ಜೀವನ ಕಳೆಯುವ ತನಕ !

- ಶ್ರೀಗೋ.

30 Nov 2017, 06:16 am

*೧.ಕಾದಿರುವೆನು ನಿನಗಾಗಿ*

ನಿನ್ನೊಲವಿನ ತುಂಬು ಪ್ರೀತಿಗಾಗಿ ಕಾದಿರುವೆ
ಮತ್ತೊಮ್ಮೆ ಪ್ರೀತಿಸಿಬಿಡು ಇನಿಯ
ಹೃದಯದ ತುಂಬೆಲ್ಲ ನೀನೇ ತುಂಬಿರುವೆ
ಪ್ರೀತಿಯ ಮಳೆಯನು ಸುರಿಸಿಬಿಡು ಇನಿಯ!

ನನ್ನುಸಿರು ತಂಗಾಳಿಯಲಿ ಬೆರೆತು
ನಿನ್ನುಸಿರನು ಹುಡುಕುತಲಿದೆ ಮೌನದಿ
ನನ್ನುಸಿರು ನಿಲ್ಲುವ ಮೊದಲೇ
ಒಂದುಕ್ಷಣ ನನ್ನೆದುರು ಬಂದುಬಿಡು ಇನಿಯ!

ನೀ ತಂದ ಕಾಣಿಕೆಯ ನಾ ಒಡೆದಿರಲು
ಮುನಿಸಿಕೊಂಡು ಜಗಳವಾಡಿ ದೂರಾಗಿರಲು
ಅತ್ತು ಮನಸಲ್ಲುಳಿದ ಆ ಕಹಿನೆನಪುಗಳ
ಆ ಕ್ಷಣಗಳನು ಮರೆತುಬಿಡು ಇನಿಯ!

ಮುಂಜಾನೆ ತಂಪಿನಲಿ,ಹಕ್ಕಿಗಳ ನಾದದಲಿ
ಬೆಳಗುವ ರವಿಯನ್ನೇ ನೋಡುತ್ತ
ನಿನ್ನೆಸರನೆ ಜಪಿಸುವ ಪ್ರಿಯಳ ನೆನೆಯುತ್ತ
ಒಂದೊಳ್ಳೆ ಕವನವ ಗೀಚಿಬಿಡು ಇನಿಯ!

ಪ್ರಿಯಾಂಕ✍

- ಪ್ರಿಯಾಂಕ

29 Nov 2017, 02:57 pm

ರೋಗಿಗಳ ಭಾಗ್ಯಜ್ಯೋತಿ

ಎಲ್ಲೆಲ್ಲೊ ನೋಡಿದರೂ ಇವರದೇ ಕೀತಿ೯
ಸದಾ ಮನದಲ್ಲಿ ತುಂಬಿರುವುದು ಪ್ರೀತಿ
ಎಲ್ಲರಿಗೂ ಮಾದರಿ ಇವರು ಜೀವಿಸುವ ರೀತಿ
ಸರಳತೆಯು ಇವರ ಬಾಳ್ವೆಗೆ ಸ್ಪೂತಿ೯

ರಾತ್ರಿ ಹಗಲೆನ್ನದೇ ರೋಗಿಗಳಿಗೆ
ಆರೖೆಕೆ ಮಾಡುವ ತ್ಯಾಗಮೂತಿ೯ಯೂ
ಸಂಕಷ್ಟ ಪರಿಸ್ಥಿಯಲ್ಲೂ ಆತ್ಮಿಯತೆ ತೋರುವ ಮಮತಾ ಮಯಿಯು
ಅಗಾದವಾದ್ದು ಇವಳು ಸೇವೆ ಸಲ್ಲಿಸುವ ರೀತಿಯು
ಇವರೆಂದು ರೋಗಿಗಳ ಬಾಳಿನ ಭಾಗ್ಯಜ್ಯೋತಿಯು

ಸಹೋದರಿಯಾಗಿ ಕಷ್ಟಗಳಲ್ಲಿ
ಸಹಕರಿಸುವ ಸದ್ಗುಣವಂತಳು
ತಾಯಿಯಾಗಿ ನೋವುಗಳಿಗೆ
ಸ್ಪಂದಿಸುವ ಮಮತೆಯ ನೆಲೆ ಇವಳು
ನಗುವಿನೊಂದಿಗೆ ಎಲ್ಲಾ ರೋಗಿಗಳಿಗೆ
ಔಷದಿ ನೀಡುವ ಅಮೃತದ ಸೆಲೆ ಇವಳು
ಸೇವೆಯಲ್ಲಿ ಸವೊ೯ತ್ತಮಳು
ಇವಳು ದೇವತೆಯಂತೆ ಕಂಗೋಳಿಸುತಹಳು
ದೇವತೆಯೇ ಶೂಶ್ರೂಷಕಿಯಾಗಿ
ಧರೆಗಿಳಿದು ಬಂದಿಹಳು.....

- Bhagya Girish

29 Nov 2017, 12:08 pm