Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ನನ್ನ ನಲ್ಲೆಯ ಮುನಿಸು
ಮುಂಜಾನೆ ಹಸುರಡರಿ
ಮುತ್ತಂತೆ ಥಳ ಥಳಿಸೋ
ಹಿಮ ಬಿಂದುಗಳ ಸಾಲು
ಕೊಂಚ ಹರ್ಷದ ಬಿಸಿಲು
ವರ್ಷಿಸಲು ಮರೆಯಾಯ್ತು
ಸಂಚು ಅರಿಯದ ಮೊಗದಿ
ಸಂತಸದ ಹೊನಲು
ಮಾತಿನ ಮಾಟದಲಿ
ಹಮ್ಮು ಬಿಮ್ಮುಗಳಿಲ್ಲ
ಕೌತುಕದ ಕಂಗಳಲ್ಲಿ
ಆಹಮಿಕೆ ಇನಿತಿಲ್ಲ
ಲಜ್ಜೆಯ ಕದಪದೊಳು
ಉದಯಾಸ್ತ ರವಿ ರಂಗು
ಗೆಜ್ಜೆ ಬಳೆಗಳ ಧನಿಯೋ
ಕರ್ಣ ಸೆಳೆಯುವ ಗುಂಗು
ಬಚ್ಚಿಟ್ಟ ಭಾವಗಳ
ಬಿಚ್ಚಿ ಬಯಲಿಗೆ ತೂರಿ
ಹಚ್ಚಿದಳ ಎನ್ನೊಳಗೆ
ಹೊಸತನರಸುವ ದಾರಿ
ಆಗದೆಂಬ ಆಲ್ಪಮತಿ
ಅಂಜಿಕೆ ಕೊನೆಗೊಳಿಸಿ
ಸಾಧಕರ ಸಾಲಿನಲ್ಲಿ
ನಿಲ್ಲಿಸಿದಳೆನ್ನೆರಸಿ
- ಯು.ರಾಮು ಸಿರಿಗೆರೆ
03 Dec 2017, 09:11 pm
ಮನದೋಳಗೆ ಮುಳುಗಿ
ಸಾಯುವಷ್ಠು ನೋವಿದ್ದರು
ಕನಸೋಳಗೆ ನಡುಗಿ ಕರಗೋದರು
ಬದುಕೆಲ್ಲ ಬೆದರಿ ಮರುಭೂಮಿ ಆದರು
ಹೆದರಿ ಹಿಂದೆ ಸರಿಯದಿರಲಿ ಎಂದು
ಮುಖದ ಮೇಲಿನ ನಗು
ನಗವೋಂದಿದ್ದರೆ ಜಗವೆ ನಿನ್ನದು....
- ರಾಗಸಿರಿ....
03 Dec 2017, 09:03 pm
ಹುಣ್ಣಿಮೆಯ ಓ ಚಂದಿರನೆ
ಎಲ್ಲಿಂದ ಬಂತು ಈ ಅಂದ ಚಂದ
ನಿನಗೆ ಈ ದಿನ .......
ತಿಳಿನೀರ ಸಾಗರದಲ್ಲಿ ಮಿಂದು
ಗಂಧದ ಹೋಳೆಯಲ್ಲಿ ನಿಂದು
ಮೈಯಲ್ಲ ಅಂದದ ಹೊಂಬಣ್ಣ
ಸವರಿಕೋಂಡು
ಯಾರು ಇಲ್ಲದ ಆ ಆಗಸದಲ್ಲಿ
ಒಬ್ಬನೆ ಮದು ಮಗನಂತೆ
ಕಾಯುತಿರುವೆಯಲ್ಲ.....
ನಿನಗಾಗಿ ಕಾದಿರುವ ಆ ಮದು ಮಗಳ
ಹುಡುಕಿ ತರಲೆಂದೆ ಈ ಅಂದವೆ ನಿನಗೆ.....
ಆ ಮದು ಮಗಳ ಬಂದುಗಳು ನಾವು
ನಮಗು ಅಲ್ಲಿ ಜಾಗ ಕೋಡುವೆಯ
ಬೆಳದಿಂಗಳ ಅಂಗಳದಲ್ಲಿ ಹಸಿರ ಚಪ್ಪರ
ಹಾಕಿ ದಿಬ್ಬಣ ತರಿಸಿ ಮದುವೆಯ ಮಾಡಿ
ಸಡಗರದಿ ನಲಿಯುವೆವು ನಾವು
ಜಗತ್ತನ್ನೆ ನಿನ್ನ ಕೈಯಲ್ಲಿ ಇಟ್ಟು
ಬೆಳಕ ಚೆಲ್ಲುತ್ತಿರುವೆ ನೀನು
ನಿನಗಾಗಿ ನಾವು ಬೆಳದಿಂಗಳಲ್ಲಿ
ಮದುವೆಯ ದಿಬ್ಬಣ ಹೋತ್ತು ತರುವೆವು
ಕಾಯುತಲಿರು ಓ ಚಂದಿರನೆ.......
ಹುಣ್ಣಿಮೆಯ ಅಂಗಳದಲ್ಲಿ ಚಂದಿರನ
ಮದುವೆಯ ಮೆರವಣಿಗೆ ಸಾಗುತಿರಲಿ ಹೀಗೆ......
- ರಾಗಸಿರಿ....
03 Dec 2017, 08:43 pm
ಮತ್ತೆ ಯಾಕೋ ನೀ ನೆನಪಾಗಲು
ಕಮರಿ ಹೋದ ಕನಸುಗಳು
ಮತ್ತೆ ಬಂದು ಅಣಕಿಸಿದಂತಾಯಿತು...
ಬತ್ತಿ ಹೋದ ಕಣ್ಣ ಗುಡ್ದೆಗಳಲ್ಲಿ
ಮತ್ತೆ ನೀರಿನ ಆರ್ದ್ರತೆ ಪುಟಿದಂತಾಯಿತು...
ಅರ್ಧ ಕಟ್ಟಿದ್ದ ಕನಸೀಗ
ಕೈ ಬೀಸಿ ಕರೆದಂತಾಯಿತು...
ಅರ್ಧಕ್ಕೆ ನಿಲ್ಲಿಸಿದ ಕವನವೀಗ
ಮತ್ತೆ ಸೆಳೆದಂತಾಯಿತು...
ಒಡೆದು ಚೂರಾದ ಹೃದಯಕ್ಕೆ
ಮತ್ತೆ ಈಟಿಯಿಂದ ತಿವಿದಂತಾಯಿತು...
ಬಯಕೆಗಳೇ ಇಲ್ಲದ ಜೀವಕೆ
ಮತ್ತೆ ಸಾವಿನ ಆಸೆ ಮೂಡಿಸಿದಂತಾಯಿತು
- ಮೌನೇಶ..ಪಿ
03 Dec 2017, 07:27 pm
ಬರಹ ಬಾಳಿನ ಚಿಲುಮೆ.!!
ಮನಸಿರಬೇಕು ಅದರ ಒಲುಮೆ
ತನ್ನವರಿಗೆ ತನ್ನ ತಿಳಿಸಿಕೊಡುವುದು
ಬರಹ ಓದುಗರಿಗೆ ಮಾರ್ಗದರ್ಶನ
ನೊಂದವರಿಗೆ ಆಪ್ತ ದನಿಯ ಸ್ವಾಂತ್ವನ
ಸೋತವರಿಗೆ ಕೊಡುವ ಸ್ಪೂರ್ತಿ
ಬರಹ ಬವಣೆಯ ಅಲಿಸುವ ಮಾಯೆ
ದುಃಖವ ತಡೆಹಿಡಿವ ಛಾಯೆ
ಸರಳತೆಯ ಸಜ್ಜನರ ಸಚ್ಚರಿತ ಹಾದಿ
ಬರಹ ಕವಿ ಭಾವಗಳ ಗುಚ್ಚಾನಿಧಿ
ಬಳಕೆದಾರಾರ ಸ್ವಚ್ಚಂದಾವಧಿ
ಒಟ್ಟಿನಲಿ ಬರಹಗಳೆ ಕವಿಗಳ ಆಸರೆ.!!
ಬರಹ ಕಾವ್ಯ,ಕಾದಂಬರಿ ಕಥನವಾಗಿ
ಮುದಿ ಮನಕೆ ತಗಲುವಂತೆ ಮುಟ್ಟಿಸಿ
ಜ್ಞಾನ ಕೊಡುವ ಪರಮಗುರು..!!
ಬರಹ ಸೌಹಾರ್ದತೆಯ ನಿಲಂಬನ
ಐಕ್ಯತೆಗೆ ಸಮರ ಸಾರುವ ಮಹಾ ತ್ಯಾಗಿ
ಸಾಮರಸ್ಯ ನೆಲೆಸಲೆತ್ನಿಸುವ ಯೋಧ
ಬರಹ ಸರ್ವರಿಗು ಒತ್ತು ನೀಡಿ
ಬಾನೆತ್ತರೆಕೆ ಹಾರಿಸಿಬಿಡುವುದು
ಎಲ್ಲಾದಕ್ಕು ಬರಹವೇ ಅತ್ಯಮೂಲ್ಯ ಶಸ್ತ್ರ
- ನಾಗರಾಜ್
03 Dec 2017, 06:47 pm
ಈ ಒಲವೆಂದರ ಹಿಂಗ
ಹಳೆ ಚಾಪಿ ರಗ್ಗಿನಂಗ
ಮೊಲಗನು ಅಂದರ
ತಗಣಿ ಕಡಿತೆವು
ಹುಡುಗಿ ನೊಡೊಣ ಅಂದರ
ಅವರವ್ವ ಇರರ್ತಾಳ
ಒಲವೆಂದರ ಹಿಂಗ
ಹಳೆ ಚಾಪಿ ರಗ್ಗಿನಂಗ
- ಕೌರವ
03 Dec 2017, 04:11 pm
ಸುಂದರ ಬೆಳದಿಂಗಳು ನಿನಗಾಗಿ ಕಾದು ಕುಳಿತಿದೆ
ಸದ್ದು ಮಾಡದೆ ಬಂದುಬಿಡು ಸುಮ್ಮನೆ
ಹೃದಯವು ನಿನ್ನೆಸರನೆ ಜಪಿಸುತ್ತಿದೆ
ಸತಾಯಿಸಬೇಡ ಬಳಿಗೆ ಬರದೆ!
ಆ ಕುಡಿನೋಟದಲಿ ನನ್ನನೆ ಸೆಳೆದೆ
ಸಂತಸದಲಿ ಹೃದಯದ ಬಾಗಿಲ ತೆರೆದೆ
ಮೌನದಲಿ ಪ್ರೀತಿಯ ಮಳೆ ಸುರಿಸಿದೆ
ಸದ್ದಿಲ್ಲದೆ ಮಾಯವಾಗಿ ಹೋದೆ!
ನನ್ನೆಲ್ಲ ಕನಸುಗಳಿಗೆ ಸ್ಫೂರ್ತಿಯು ನೀನಾಗಿದ್ದೆ
ಕತ್ತಲ ಬಾಳಿಗೆ ಬೆಳಕಂತೆ ನೀ ಬಂದೆ
ಕಾರಣ ಹೇಳದೆ ಯಾಕಿಂದು ದೂರಾದೆ
ನಿನ್ನ ನೆನಪಲ್ಲಿ ಕಾಯುತ್ತಿದೆ ಹೃದಯದರಮನೆ!
ನಿನ್ನ ಕಿರುಬೆರಳಿನೊಂದಿಗೆ ನರ್ತನ ಮಾಡುತ್ತ
ಹೆಜ್ಜೆಯೊಂದಿಗೆ ಕನಸ ಹೆಣೆಯುತ್ತ
ಬಹುದೂರ ಸಾಗಬೇಕಿದೆ ಗೆಳತಿ
ಎಲ್ಲಿದ್ದರೂ ಮನ್ನಿಸಿ ಬಳಿಬಂದು ಬಿಡು ಬೇಗನೇ!
ಪ್ರಿಯಾಂಕ✍
- ಪ್ರಿಯಾಂಕ
03 Dec 2017, 11:39 am
ಉಂಗುರುಳು ಚಂದಿರನ ನಿಂಗೆ
ಉಡುಗೊರೆಯಾಗಿ ತಂದುಕೊಡುವೆ
ಸೂರ್ಯನ ಶಾಖ ತಾಕದಂತೆ
ನೆರಳಾಗಿ ನಿನ್ನ ನಾ ಕಾಯುವೆ....
ಪೊರ್ಣಮಿಯ ಚಂದಿರನ ಹೊಂಬೆಳಕ..ಓ
ಅಂಗೈಯಲ್ಲಿ ಹಿಡಿದು ನಿನ್ನತ್ತಿರತರುವೆ
ಹಿಮಾಲಯದ ತಂಪು ತಂಗಾಳಿಯ
ನಿನ್ನೆಡೆಗೆ ಕರೆತರುವೆ.........
ನನ್ನೆದೆಯ ಅಂಬಾರಿಯಲ್ಲಿ.......
ನಿನ್ನ ಕೂರಿಸಿ ನಾ ಮೆರೆಸುವೆ
ನಿನಗಾಗಿ ತಪಸ್ಸುಗೈದು ನೀ....
ಕೇಳಿದ ವರವ ನಾ.... ಪಡೆವೆ
ಕಡಲಿನ ಆಳದಲ್ಲಿ ಮುಳುಗಿ
ನಿನಗೋಸ್ಕರ ಮುತ್ತನ್ನ ಹೆಕ್ಕಿ ತರುವೆ
ನನ್ನ ಹೃದಯದಲ್ಲಿ ಗುಡಿ ಕಟ್ಟಿ
ನಿನ್ನ ಪ್ರತಿಷ್ಠಾಪಿಸಿ ಪೂಜಿಸುವೆ
....... ಗೆಳತಿ
ಒಪ್ಪಿಕೊ ನನ್ನ ನಿನ್ನ ಇನಿಯನೆಂದು.....
...ಮಂಜು
- ಮಂಜು
03 Dec 2017, 08:10 am
ಹೌದು
ನೀನು ಇದ್ದಿದ್ದೇ ಆಗಿದ್ದರೆ
ನಾನು ಹೀಗಾಗುತ್ತಿರಲಿಲ್ಲ
ನಿನ್ನ ಇರುವಿಕೆ ಅನುಮಾನಗೊಂಡದ್ದು
ನಾನು ನನ್ನಂತೆ ಜೀವಿಸಲಾರದ್ದಕ್ಕೆ
ಬಾಳು ಶುಷ್ಕವೆನಿಸಿ
ಸಾವಿನ ಮನೆ
ಕದ ಮುರಿಯಲೆತ್ನಿಸಿದ್ದು
ನಿನ್ನಲ್ಲಿಯ ನಂಬುಗೆ
ಮರಗಟ್ಟಿದಕ್ಕೆ
ಕಳ್ಳ ಸುಳ್ಳರ ಮನೆ
ಕದ ಕಾಯುವ ನೀನು
ದೀನರೆಡೆ ಕಿಂಚಿತ್
ಕರುಣೆ ಹರಿಸಬೇಕಿತ್ತು
ಇದಕ್ಕೆಲ್ಲ ನಿನ್ನ ಸಮಜಾಯಿಷಿ
ಕರ್ಮ ಸಿದ್ದಾಂತ
ಒಪ್ಪುವುದಿಲ್ಲ ಬಿಡು
ಹಸಿದು ಕಂಗೆಟ್ಟಾಗ
ಮೀರಲೇ ಬೇಕಾಗುತ್ತದೆ
ಆದರ್ಶದ ಕಟ್ಟೆ
- ಯು.ರಾಮು ಸಿರಿಗೆರೆ
02 Dec 2017, 08:40 pm
ಊರಿಂದ ಊರಿಗೆ ಅಲೆಯುವ ಅಲೆಮಾರಿ
ಯಾವ ಭರವಸೆಯ ನಂಬಿ ನಿನ್ನ ತಯಾರಿ
ಏನ ಕಾತರಿಸಿ ಹೋರಟಿದೆ,ನಿನ್ನ ಸವಾರಿ,
ಯಾವ ಕನಸಿನ ಬೇನ್ನೇರಿ....
ಎಷ್ಟೋ ಜನಗಳ ನೋಡಿರುವೆ.
ಎಷ್ಟೋಂದು ಅನುಭವ ಪಡೆದಿರುವೆ,
ವ್ಯಥೆಗಳ ಕಥೆಯ ಕೇಳಿರುವೆ,
ಜೀವನ ಸತ್ಯವ ಅರಿತಿರುವೆ....
ಯಾರನು ನಂಬದೆ,
ಯಾರನು ಸೇರದೆ,
ಏನನು ಬಯಸದೆ,
ನೀ ಚಿಂತೆಯ ಮಾಡದೆ....
ಚಿತೆಯೆರುವೆ ....ಯಾರ ಮನಸ್ಸನು ನೋಯಿಸದೆ,
ಯಾರಿಗೂ ತಲೆಯ ಬಾಗಿಸದೆ...
- Bhagya Girish
02 Dec 2017, 07:14 pm