Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನನ್ನವ್ವ..


ಬದುಕಿನಲ್ಲಿ ಹೊಸ ಭರವಸೆಯ ಬೆಳಕಿನೊಂದಿಗೆ...
ನಂಬಿಕೆಯ ಕೈಹಿಡಿದು ಹೊಸ್ತಿಲಲ್ಲಿ ಸೇರು ಒದ್ದು,
ಸಾಲು ಸಾಲು ಜವಾಬ್ದಾರಿಯ ತನ್ನ ಹೆಗಲ ಮೇಲೆ ಹೊತ್ತು,
ನೂರಾರು ಕನಸು ಕಟ್ಟಿ ಒಡಲು ತುಂಬಿಕೊಂಡಳು... ತನ್ನೊಡಲೊಳಗಿರುವಾಗಲೇ ನನ್ನ ಮೇಲೆ ಪ್ರಾಣವಿರುಸಿದವಳು.
ಹಡೆದು ಕಂದನ ಕಪ್ಪು ಬಿಳುಪು ಎನ್ನದೆ ತನ್ನಎದೆಗೆ ಅಪ್ಪಿ ಮುತ್ತಿಟ್ಟಳು.....
ಸಾವಿರ ಕನಸುಗಳ ತೊಟ್ಟಿಲ ಕಟ್ಟಿ ಮಲಗಿಸಿ ತೂಗಿದಳು.
ಬಲು ಸುಂದರ! ನನ್ನ ಮಗ ಎಂದು ಮೊದಲು ದೃಷ್ಟಿ ತೆಗೆದವಳು.
ಸ್ವಾಭಿಮಾನ,ಧೈರ್ಯ, ಆತ್ಮವಿಶ್ವಾಸ,ಛಲದ ಮೊದಲ ಪಾಠ ಕಲಿಸಿದವಳು ನನ್ನವ್ವ..
ತುತ್ತು ಕೊಟ್ಟು ಮುತ್ತನಿಟ್ಟು ಪ್ರಾಣವನ್ನೇ ಮುಡುಪಾಗಿಟ್ಟಳು.
ತೊರೆದು ಆಸೆ ಆಕಾಂಕ್ಷೆ ಮರೆತು ಅವಳ ಸುಖದ ಜೀವನವ ನಮಗಾಗಿ..
ಚಳಿ ಮಳೆ ಗಾಳಿ ಬಿಸಿಲೆನ್ನದೆ ದುಡಿದು ಗಂಡನಿಗೆ ಬಲವಾದಳು..
ತಾನುಟ್ಟ ಸೀರೆ ಹಳೆಯದಾದರೂ ನಂಬಿಕೆಯ ಸೂರು.. ತನ್ನೊಡಲ ಕಟ್ಟಿ ಮಕ್ಕಳು ಒಡಲಿಗೆ ತುತ್ತು ಅನ್ನವೂ ಕಡಿಮೆ ಮಾಡದವಳು
ಜೀವಿಸಿದಳು ಮಕ್ಕಳ ಖುಷಿಯನ್ನು ತನ್ನ ಖುಷಿಯಂತೆ ಸಂಭ್ರಮಿಸಿ..
ಗೆಲುವು ಸೋಲು ಸುಖವೋ ದುಃಖವೋ ನೆರಳಂತೆ ಜೊತೆಯಾಗಿರುವಳು
ತನಗಾಗಿ ಯಾವ ಪ್ರತಿಫಲವನ್ನು ಬಯಸದ ಜೀವ.... ನಿನಗೆ ನನ್ನ ನಮನ.
- ಸುದೀಪ್ ಎಚ್ ಟಿ
U29XR24E0081




- vijay

28 Feb 2025, 12:25 am

ಶಿವಮಯ

ಎಲ್ಲೆಲ್ಲೂ ಝೇಂಕರಿಸುತಿದೆ ಶಿವಮಯ
ಶಿವರಾತ್ರಿ ಸಂಭ್ರಮಿಸುವ ಶುಭ ಸಮಯ

ಬಿಲ್ವಪತ್ರೆಗಳಿಂದ ಪೂಜೆ ಮಾಡಿ
ಸಿಹಿಯನ್ನು ನೈವೇದ್ಯಕೆ ಇಡಿ

ಹಣ್ಣುಹಂಪಲ ತಿಂದು ಉಪವಾಸ ಮಾಡಿ
ಕಷ್ಟ ನೋವುಗಳನ್ನು ಶಿವನಿಗೆ ಬಿಡಿ

ಭಕ್ತಿ ಭಾವದಿಂದ ನಮಸ್ಕಾರಿಸಿ
ಶಿವ ನೀಡುವ ಪ್ರಸಾದ ಸ್ವೀಕರಿಸಿ

- laxmi

25 Feb 2025, 11:39 pm

ನಾ... ನಿನ್ನ ಕಾಯ್ತಿತಿನಿ ಗೆಳತಿ‌‌...

ಸೂರ್ಯನು ಭೂಮಿಗೆ ಬೆಳಕು ಕೊಟ್ಟಂಗೆ
ನಾ... ನಿಂಗೆ ಪ್ರೀತಿ ಕೊಡ್ತೀನಿ
ಬೆಳಂದಿಂಗಳ ಚಂದ್ರನಂತೆ
ನಾ... ನಿನ್ನ ಬಾಳಿಗೆ ನೆರಳಗ್ತಿನಿ
ಕಟು ಮನಸಿನ ಹೃದಯವು ನಂದೈತಿ
ಈ ಮನಸಿಗೆ ಪ್ರೀತಿ ಕೊಡೋ ದೈರ್ಯ ನಿಂಗೈತಿ
ಗುಲಾಬಿ ಹೂವ್ನ ಮುಳ್ಳು ಕಾದಂಗ
ನಾ... ನಿನ್ನ ಕಾಯ್ತಿತಿನಿ ಗೆಳತಿ....
ಎಮ್.ಎಸ್.ಭೋವಿ...✍️

- mani_s_bhovi

24 Feb 2025, 10:21 pm

ಮನುಷ್ಯತ್ವ

ಆಶೆಯಿಂದ ಮನುಷ್ಯನ ರಚಿಸಿದ ದೇವರು
ಮನುಷ್ಯತ್ವ ಇಲ್ಲದ ಮನುಷ್ಯ ಎರೆಚಿದ ಕೆಸರು

ಮುಕ್ತಿಯನು ಇಚ್ಚಿಸಿದರು ಕಲಿಯುಗದಲ್ಲಿ
ಮುಳಿಗಿದರು ಎಲ್ಲರು ಕುಂಭದಲ್ಲಿ

ಮನುಷ್ಯತ್ವವನ್ನು ಎದ್ದೇಳಿಸಿ ಈ ಜಗದಲ್ಲಿ
ಆತ್ಮಸಾಕ್ಷಿಯನ್ನು ಎಚ್ಚರಗೊಳಿಸಿ ನಂಬಿಕೆಯಲ್ಲಿ

ದೇವರನ್ನು ಆರಾಧಿಸಿ ಭಕ್ತಿಯಿಂದ
ಕಾಪಾಡವನು ಎಲ್ಲರನ್ನು ಅವನ ಶಕ್ತಿಯಿಂದ


ವಿಶಾಲಾ ಮಂಜುನಾಥ

- laxmi

21 Feb 2025, 11:29 pm

ಯಾತ್ರೆ

ವೈವಿಧ್ಯತೆಯಿಂದ ಕೂಡಿದೆ ಎಲ್ಲರ ಯಾತ್ರೆ
ಯಾವುದಕ್ಕೂ ಕಡಿಮೆಯಿಲ್ಲದಂತ ಜಾತ್ರೆ

ಸವಿನೆನಪುಗಳನ್ನು ತುಂಬಿಸಿರಿ ಚೀಲದಲ್ಲಿ
ಕಹಿನೆನಪುಗಳನ್ನು ಎಸೆಯಿರಿ ತೊಟ್ಟಿಯಲ್ಲಿ

ಕೊನೆಯಾಗುವದು ಒಂದು ದಿನ ಎಲ್ಲರ ಯಾತ್ರೆ
ಬೆಚ್ಚಿಬೀಳದಿರಿ ನಿದ್ದೆಯಿಲ್ಲದೆ ಪೂರ್ತಿ ರಾತ್ರೆ

ಸಂತೋಷವಾಗಿಸಿ ನಿಮ್ಮೆಲ್ಲರ ಯಾತ್ರೆ
ನಿರ್ಮಿಸಿ ಒಂದೊಳ್ಳೆ ಚರಿತ್ರೆ


ವಿಶಾಲಾ ಮಂಜುನಾಥ

- laxmi

21 Feb 2025, 09:33 pm

- Nuage Laboratoire

15 Feb 2025, 10:30 am

ಕವನದ ಶೀರ್ಷಿಕೆ ಪರಿಶುದ್ಧ ಮನಸ್ಸು.


ಗೃಹಸ್ಥಾಶ್ರಮ ಪ್ರವೇಶಕ್ಕೆ ಅಡ್ಡಿಯಾದ ಅರಸನ ಶಾಸನ,
ಬ್ರಹ್ಮಚರ್ಯದಲ್ಲೇ ಬಳಲಿಸಿತು ಸೈನ್ಯ ಸೇರೋ ಯುವಕರನ್ನ.

ಶರಧಿಯ ತಡಿಯಲ್ಲಿ ಮೋಹಿಸಿದ ಹೃದಯಗಳಿಗೆ,
ವಿವಾಹದ ಮೇಘದೂತನಾದ
ಸೇಂಟ್ ವ್ಯಾಲೆಂಟೈನ್ಸ್ಟೈನ.

ರಾಜನ ಅಂಕೆ ದಾಟಿದವಗೆ ಮುಳ್ಳಿನ ಪಂಜರದ ಸೆರೆ,
ಅನ್ಯಾಯ ರಹಿತ ಮನಸಿಗೆ ಅಲ್ಲಿ ಜೊತೆಯಾದ ಜೂಲಿಯಾಳೆ ಅಪ್ಸರೆ.

ನುಂಗುವ ಮೊಸಳೆ ಅಂತ ದೊರೆಯ ಹಿಂಸೆಗೆ ಕರಗಿದ ಸೇಂಟ್ ಮಣ್ಣಿನಲ್ಲಿ,
ಪಾರಿವಾಳ ಪರಿತಪಿಸಿದ ಪತ್ರದ ಸಾಲು ಸ್ಥಿರಗೊಂಡಿತು ಪ್ರೇಮಿಗಳ ಹೃದಯದಲ್ಲಿ.

ಹಿಗ್ಗುವ ಅಂತರಂಗಕ್ಕೆ ತಾಕುವ ಪ್ರೀತಿ,
ಸರ್ಪಗಾವಲಂತೆ ತನ್ನವರ ಕಾಯುವುದು ಬಿಡಿಸಿ ಭೀತಿ.

ಮಾರುವೇಷದಿ ಮೈ ಮರೆಸಲು ಬಂದ ಉಡುಗೊರೆಗಳು,
ಹೊತ್ತು ತರಬಹುದು ಕಬ್ಬಿಣದ ಸಲಾಕೆಯಂತೆ ಸುಡುವ ಕ್ಷಣಗಳು.

ಪರಿಶುದ್ಧ ಮನವಿರಲಿ ಬಯಸುವವರ ಎದೆಯಲ್ಲಿ,
ಫೆಬ್ರವರಿ 14 ಶ್ರೇಷ್ಠತೆಯ ಕಾರ್ಯಗಳ ನೆನಪಾಗಿರಲಿ.

- nagamani Kanaka

14 Feb 2025, 11:39 pm

?ನೊಂದ ಹೃದಯ?

ಕೈಗೂಡಲಿಲ್ಲ ನೀ ಕಂಡ ಕನಸು
ಭಾರವಾಗಿಹುದು ಅದರಿಂದ ನಿನ್ನ ಮನಸು
ಕಮ್ಮಿಯಾಗಿಲ್ಲ ನನ್ನ ಮೇಲೆ ನಿನಗೆ ಮುನಿಸು
ಇದೊಂದು ಬಾರಿ ದಯವಿಟ್ಟು ನನ್ನ ಕ್ಷಮಿಸು
ಕೈ ಮುಗಿದು ಕೇಳುವೆ ಮತ್ತೊಮ್ಮೆ ನನ್ನ ಪ್ರೀತಿಸು ..?



❤️ಪ್ರೇಮಿಗಳ ದಿನದ ಶುಭಾಶಯಗಳು❤️
ನನಗೆ ನೀನು ನಿನಗೆ ನಾನು ಎಂದಿಗೂ
ಮರೆಯದಿರು ನನ್ನ ನೀನು


ಇಂತಿ..
ನಿನ್ನವನು ನಾನು.. ?❤️

- ಚಂದ್ರಶೇಖರ

14 Feb 2025, 10:45 am

❤️ನಾ ನಿನ್ನ ಪ್ರೀತಿಸುವೆ❤️.. ?

ನೆನಪಿಲ್ಲ ನನಗೆ ನಿನ್ನ ಪ್ರೀತಿಸಲು ಶುರು ಮಾಡಿದ ಕ್ಷಣ
ಹುಚ್ಚನಾದೇನು ನನ್ನೊಳಗೆ ನಿನ್ನ ನೋಡುತಲೂ ದಿನ
ಪ್ರತಿದಿನವೂ ಹಂಬಲಿಸುತಲಿತ್ತು ನಿನ್ನ ನೋಡಲು ಈ ನನ್ನ ಮನ
ಉತ್ತರ ದೊರಕಿತು ಒಂದು ದಿನ ನಿನ್ನ ಮುಗ್ಧ ನಗುಮುಖವೆ ಇದಕೆಲ್ಲ ಕಾರಣ
ಆಹಾ ಅದೆಂತಹ ವರ್ಣಿಸಲಾಗದ ಅಂದಂದ ನಗು ನಿಂದು
ಅನಿಸುತಿದೆ ಆ ನಗುವೇ ಈ ನನ್ನ ಬಂಗಾರಿಯ ಆಭರಣವೆಂದು
ತಿಳಿದಿರುವೆ ಯಾವತ್ತಿದ್ದರೂ ಭವಿಯ ನಗು ನನಗೆ ಸ್ವಂತವೆಂದು
ಚಿರಕಾಲ ನಗುತಿರು ನೀ ಹೀಗೆ ಎಂದೆಂದೂ
ಅಂತೂ ಇಂತು ಕೂಡಿ ಬಂತು ನನ್ನ ಪ್ರೇಮ ನಿವೇದನೆಯನ್ನುನಿನಗೆ ತಿಳಿಸುವ ಸಮಯ ದಯವಿಟ್ಟು ಬಿಟ್ಟುಹೋಗಬೇಡ ನಿನ್ನ ದಮ್ಮಯ್ಯ

- ಚಂದ್ರಶೇಖರ

08 Feb 2025, 02:46 pm

ನೆನಪು?

ಅವಳು ವoತರಾ ಸಿಹಿಯಾಗಿರ್ರೋ ಕರದಂಟು ?️
ಅವಳನ್ನ ಮುಟ್ಟಿದ್ರೆ ಆಗುತ್ತೆ ನನ್ ಕಯ್ ಅoಟ ಅoಟು
ಅವಳೇ ನನ್ ಲೈಫನ ಪರ್ಮನೆಂಟು
ಅವಳನ್ನ ನೆನ್ಸ್ಕೊಂಡು ನಾನ್ ಹೊಡೀತಿನಿ ಇಂಡಿಮೈಂಟು ?

ಜೀವಾ (instagram jeevan0118)

ಕಣ್ಣು ಮುಚ್ಚಿ ಕುಳಿತಾಗ ಕನಸಲ್ಲಿ ಕಂಡವಳು ನೀನು ಕಣ್ಣು ಬಿಟ್ಟು ನೋಡಿದಾಗ ಮಾಯವಾದವಳು ನೀನು


- Jeeva0118

08 Feb 2025, 01:36 pm