Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮರೆವು.....

ಹುಟ್ಟು ಇದು
ಹುಟ್ಟು ಸಾವು ಇದು
ಹುಟ್ಟುತ್ತಲೆ ತಾಯಿಯ ಕರುಳ ಕತ್ತರಿಸಿ
ಕೊಂಡು ಹುಟ್ಟುವವರು ನಾವು
ಬೆಳೆಯುತ್ತ ಬೆಳೆಯತ್ತ ಅವರ ನಂಬಿಕೆಗಳನ್ನ
ನಾಶ ಮಾಡುವವರು ನಾವು
ತಂದೆಯ ಹೇಗಲೆರಿ ಬೇಳೆದು
ಆ ಹೆಗಲನ್ನೆ ಮರೆತು ಬದುಕುವವರು ನಾವು
ಅಕ್ಕ ತಂಗಿ ಅಣ್ಣ ತಮ್ಮ ಇವರ ವಾತ್ಸಲ್ಯ ಮರೆತು
ಬದುಕುವವರು ನಾವು
ಗೆಳೆಯರ ಸಲಿಗೆಯ ಮರೆತು
ದೂರ ಆಗುವವರು ನಾವು
ಯಲ್ಲರು ದೂರಾದರು ಮರೆತು
ಬುದುಕುವವರು ನಾವು
ಇನ್ನು ಈ ಹುಚ್ಚು ಪ್ರೀತಿ ಇದು
ಯಾವ ದೋಡ್ಡದು ಅದನ್ನು ಮರೆತು
ಬದುಕಿದರಾಯಿತು......
ಸಾವಿನ ಮನೆ ಸೇರುವ ವರೆಗು
ಮರೆವು ಮನುಷ್ಯನಗೆ ಇರುವ ದೋಡ್ಡ
ವರ ಮರೆತು ಮರೆತು ಬದುಕಿ ಬಿಡಿ ಎಲ್ಲರು......

- ರಾಗಸಿರಿ....

07 Dec 2017, 04:14 pm

ಬುತ್ತಿ

ಕೆಲವೊಮ್ಮೆ
ನಮ್ಮ ಕಠಿಣ
ಪರಿಶ್ರಮವು ಶೀಘ್ರವೇ
ಫಲ ನೀಡದೆ ಇರಬಹುದು

ಆದರೆ,

ನಮ್ಮ
ಪ್ರಾಮಾಣಿಕತೆಯ ಫಲವು
ಆ ದೇವರ ಉಡಿಯಲ್ಲಿ
ಕಟ್ಟಿಟ್ಟ ಬುತ್ತಿ ಎಂಬುವುದು
ಮರೆಯಬಾರದು !

- ನಾಗರಾಜ್

07 Dec 2017, 01:49 pm

ಬೇರೆ - ಬೇರೆ

ನನ್ನಲ್ಲಿ ರಕ್ತದ ನಾಲೆ ಇದೆ
ಉಸಿರಲ್ಲಿ ಜ್ವಾಲೆ ಇದೆ
ಎದೆಯಲ್ಲಿ ಪ್ರೇಮವಿದೆ
ನೀನ್ನಲ್ಲಿ ......?
ಆದರೂ ನಾವು ಬೇರೆ ಬೇರೆ
ನನಗೆ ಕಣ್ಣೆರಡು ಕಾಲೆರಡು
ಕಣ್ಣೊಳಗೆ ಕಡಲು
ಕಾಲಗಳಲ್ಲಿ ಬಲವು
ನಿನಗೂ ಅಷ್ಟೇ .....?
ಆದರೂ ನಾವು ಬೇರೆ ಬೇರೆ
ಮೇಲ್ ಬಾಯಿ ಕೇಳಗುದ್ದ
ತಿಂದು ಹೊರ ಹಾಕುವೆನು
ನೀನು ಅಷ್ಟೇ .......?
ಆದರೂ ನಾವು ಬೇರೆ ಬೇರೆ
ನೀನು ಹೆಣ್ಣಂತೆ ನಾನು ಗಂಡಂತೆ
ಅವರು ಇನ್ನನೆನೊ ಅಂತೆ
ಜಾತಿಯಂತೆ ಕುಲವಂತೆ
ನಾವಿಬ್ಬರೂ ದೂರವಂತೆ

- ಕೌರವ

07 Dec 2017, 07:26 am

ನೀವು - ನಾವು

ನಾನು ಮರಗಳನ್ನ ಅಪ್ಪಬೆಕಂತಿದ್ದೆ
ಕಡಿದು ಹಾಕಿದಿರಿ ನೀವು
ನಾನು ಕೆರೆಯಲಿ ಈಜ ಬೆಕೆಂದಿದ್ದೆ
ಮುಚ್ಚಿ ಹಾಕಿದಿರಿನೀವು
ನಾನು ತೋಟಕ್ಕೆ ಬೇಲಿ ಬಳ್ಳಿಯ
ಬೇಳಸ ಬೆಕೆಂದಿದ್ದೆ
ರೆಸಾರ್ಟ್ ಗಳು ನಿರ್ಮಿಸಿದ್ದಿರಿ ನೀವು
ದುಂಬಿಯೊಂದಿಗೆ ದೊಂಬಿ ಮಾಡಬೆಕೆಂದಿದ್ದೆ
ಪ್ಲಾಸ್ಟಿಕ್ ಹೂಗಳನ್ನು ಇಟ್ಟಿರಿ ನೀವು
ಮೊದಲ ಮಳೆಗೆ ಮಣ್ಣ ಮೂಸಬೆಕೆಂದಿದ್ದೆ
ಗಾಳಿಗೆ ರೋಗ ತಂದಿರಿ ನೀವು
ಮರಿ ಹಕ್ಕಿಗೆ ಗೂಡ ಕಟ್ಟಬೆಕೆಂದಿದ್ದೆ
ಹುಲ್ಲನ್ನ ಬೆಳಸದೆ ಹೊದಿರಿ ನಿವು
ನಾನು ಹಾಲ ಹಂಚ ಬೆಕೆಂದಿದ್ದೆ
ಹಸುವನ್ನೆ ಕೊಂದಿರಿ ನೀವು
ನಾನು ಅನ್ನ ಇಕ್ಕ ಬೆಕೆಂದಿದ್ದೆ
ರೈತನ ಬೆನ್ನ ಮುರಿದಿರಿ ನೀವು

- ಕೌರವ

06 Dec 2017, 10:40 pm

ತಬ್ಬಲಿ

ಬಂಧು ಬಳಗ ಇದ್ದು ತಬ್ಬಲಿ ನಾನು
ನನ್ನ ನೆರಳ ಕಾಯುವ ಜೀವವಿಲ್ಲದೆ.
ಎರಡು ಕಣ್ಣುಗಳಿದ್ದು ಕುರುಡಿ ನಾನು ಕಣ್ಣೀರು
ಒರೆಸುವ ಪ್ರೀತಿ ಇಲ್ಲದೆ.

ಬಿಡಿ ಬಿಡಿ ಬದುಕುಗಳು ಒಟ್ಟಿಗೆ ಉಸಿರಾಡುತ್ತಿದ್ದರು ಒಂದೇ ಉಸಿರಂತೆ ನಾವಿಲ್ಲ , ಕಮರಿ ಹೋದ ಆಸೆಗಳು ಬೆಚ್ಚಿ ಬೀಳಿಸುವ ಸತ್ಯಗಳು.

ಕಾಣದಿರುವ ಕಣ್ಣೀರ ವ್ಯತೆಯಿಲ್ಲದ ಸವಿಯದಿರುವ ಕಂಬನಿಯ ರುಚಿ ಇಲ್ಲ ,
ಯಾರಿಗಾಗಿ ದಿನನಿತ್ಯದ ಹೋರಾಟ ಕ್ಷಣಮಾತ್ರ ಸಮಯವಿಲ್ಲದೆ ಸತ್ತ ಕನಸುಗಳ ಎತ್ತಿ ಬಿಸಾಕಲು.

- ಚುಕ್ಕಿ

06 Dec 2017, 09:22 am

ಮೂಖ ಪ್ರೇಮಿ

ದಿನಾ ಬೆಳಗಾಯಿತೆಂದರೆ
ಅವಳ ಮನೆ ಮುಂದೆ ನಾನು
ಕಿಟಕಿಯಲ್ಲಿ ಅವಳು
ಕಣ್ಣ ಸನ್ನೆ , ಕೈ ಸನ್ನೆ
ಮೈ ಕೈ ತಾಕಿಸದೆನೆ
ಎದೆ ಗೂಡಲ್ಲಿ ಬಚ್ಚಿಡುವ ಹಠ
ಚಂದ್ರನ ಕಿವಿಯಲ್ಲಿ ಗುಟ್ಟು
ಹೇಳಿ ಕಳಿಸುವಳು
ನದಿ ಅಲೆಯ ರಮಿಸಿ
ನನ್ನ ಅತ್ತ ಕಳುಸುವಳು
ಪ್ರೀತಿ ನೀವೇದಿಸಲು
ಮಾತಿಲ್ಲ ಬರಿ ಕೈ ಸನ್ನೆ ಕಣ್ಣ ಸನ್ನೆ
ಮರಿಗುಬ್ಬಚ್ಚಿ ಅವಳು
ಹಾಲನೊರೆಯ ಕೆನೆಯವಳು
ಪತಂಗದೊಡನೆ ಪತ್ರಕಳಿಸಿ
ವಿಚಾರಿಸುವಳು ಮೂಖ ಪ್ರೇಮಿ ಅವಳು
ಹಠಕ್ಕೆ ಕೌರವನನ್ನೆ ಮೆಚ್ಚಿದಳು

- ಕೌರವ

06 Dec 2017, 04:32 am

ಸೃಷ್ಟಿ ರಹಸ್ಯ

ಬ್ರಹ್ಮಾಂಡವ ಸೃಷ್ಟಿಸಿದವರಾರು
ಕೋಟ್ಯಾಂತರ ಜೀವರಾಶಿಗಳ ಕರ್ತರಾರು
ಅಗಣಿತ ದೇವರುಗಳನಿಳೆಗೆ ತಂದವರಾರು
ಅಪರಿಮಿತ ವಿಷಯಗಳ ಜನಕರಾರು
ಯಾರು ....ಯಾರು.....ಅಗೋಚರರಾರು?

ಆಗಸವ ಅಳತೆ ಮಾಡುತ್ತ
ಆನಂದದಿ ಹಾರಾಡುವ ಹಕ್ಕಿಗೆ
ಯುಕ್ತಿ- ಶಕ್ತಿಯನಿತ್ತವರಾರು?
ಮುತ್ತಿನ ರಾಶಿ ಕದಡುತ;
ಹೊಂಬೆಳಕ ಚೆಲ್ಲುತ ಬರುವ
ಭಾನುವ- ಬಾನಲಿ ತಂದವರಾರು?

ಬಿರು ಬೇಸಗೆಯಲ್ಲು ,ಸತ್ವವಿಹೀನ
ವಾಗಿಹ ತರು ಲತೆಗಳು ತಂಪಾದ
ಚಾಮರವ ಬೀಸುತಿರಲು ನಿಸ್ವಾರ್ಥ
ಸೇವೆಗೆ ಸಮನಾವುದಿಹುದೀಜಗದಿ

ಮಾಂಸದ ಮುದ್ದೆಯಾಗಿ ಜನಿಸಿದನು
ಮುಲ್ಲೊಕಗಳ ಸಂಪರ್ಕಹೊಂದಿಹನು
ಕಲೆ,ತತ್ವ,ವಿಜ್ಞಾನಾದಿಗಳ ಕರ್ತನಿವನು
ಸಕಲವ ಸೃಷ್ಟಿಸುವ ಸೃಷ್ಟಿಕರ್ತನ ಸೃಷ್ಟಿಸುವನು

ಲೆಕ್ಕವಿಲ್ಲದಷ್ಟು ನಿಯಮಗಳ ಮಾಡಿಹನು
ಲೆಕ್ಕವಿಲ್ಲದಷ್ಟು ಶಾಸ್ತ್ರ-ಪುರಾಣಗಳ ರಚಿಸಿಹನು
ತನ್ನ ಸಾಹಸದಿ ಇತಿಹಾಸ ಸೃಷ್ಟಿಸಿಹನು
ಸೃಷ್ಟಿ ನಿಯಮಗಳ ತಲೆಕೆಳಗಾಗಿಸಿಹನಿಂದು

ಸಹಜತೆಗೆ ಸೆಡ್ಡೋಡೆದು ಬೆಳೆದಿಹುದೀಧರೆ
ಅಸಹಜವಾಗಿ ,ನಿಸರ್ಗವು ನಿಂದಿಹುದು
ಸಂಹಾರಕಾಗಿ,ಮಾನ ರಕ್ಷಣೆಗೆಂದು
ಮಾನ ರಕ್ಷಿಸಿದರೆ ಉಳಿಯುವುದು
ನಮ್ಮೆಲ್ಲರ ಪ್ರಾಣವಿಂದು


ಶಾರಧ

- ಶಕುಂತಲಾ

05 Dec 2017, 09:56 pm

ಆಸೆ

*೧.ಆಸೆ*

ಉಕ್ಕುವ ಸಾಗರವ ಸೇರುವ ತವಕದಲಿ
ಹರಿಯುತ್ತಿದ್ದಾಳೆ ತನ್ನೆಲ್ಲ ಆಸೆಗಳ ಜೊತೆಯಲ್ಲಿ
ಹಸಿರುಗಳ ನಡುವಲ್ಲಿ ತನ್ನದೇ ದಾರಿಯಲ್ಲಿ
ಸಾಗುತಿಹಳು ಬೆಟ್ಟ ಗುಡ್ಡದ ಕಣಿವೆಯಲಿ!

ಬರಡು ಭೂಮಿಯನ್ನು ಸ್ಪರ್ಶಿಸಿ
ಬಳಲಿದ ಜೀವಗಳಿಗೆ ತಂಪೆರೆದು
ಸೋತ ಹೃದಯಗಳಿಗೆ ಮುದನೀಡಿ
ಧುಮುಕುತ್ತಿದ್ದಾಳೆ ಶರವೇಗದಲಿ ತನ್ನಿನಿಯನ ಸೇರಲು!

ಜುಳುಜುಳು ನಾದದಲಿ ಸಂಗೀತವ ಗುನುಗುತ
ಅಂಕುಡೊಂಕಿನ ದಾರಿಯಲಿ ನರ್ತನವ ಮಾಡುತ
ನಿಸರ್ಗದ ಸೊಬಗಿನಲಿ ತಾನು ಒಂದಾಗುತ್ತ
ಕಾಣಿಸುತ್ತಿರುವಳು ಕಣ್ಣು ಕೋರೈಸುವಂತೆ!

ಜಲಚರ ಜೀವಿಗಳನ್ನು ತನ್ನಲ್ಲೇ ಹೊತ್ತುಕೊಂಡು
ಬೆಳದಿಂಗಳ ರಾತ್ರಿಯಲ್ಲಿ, ನಿಶ್ಶಬ್ಧದ ಮಡಿಲಿನಲ್ಲಿ
ಚುಕ್ಕಿ ಚಂದ್ರಮರ ಸಾಕ್ಷಿಯಾಗಿ
ಸಾಗರವ ಸೇರಿದಳು ತುಸುನಾಚುತಲಿ!

ಪ್ರಿಯಾಂಕ✍

- ಪ್ರಿಯಾಂಕ

05 Dec 2017, 09:55 pm

ಕಿಡಿ

ನನ್ನೊಳಗಿನ ಕಿಡಿ ಹಾರಿ
ಊರ ಸುಡದಿರಲಿ
ಅವಿತಿಡುವೆ ಕಿಡಿಯನ್ನ
ಅದು ದ್ವೇಷದ್ದು ಅಸೂಯೆದ್ದು
ಕಾಡ ಸುಡುವ ಬೆಂಕಿಯದು
ಲೋಭದ್ದು ಮೋಹದ್ದು
ಮನ ಮನದಿಂದ ಊರು ಊರಿಂದ
ಹಬ್ಬಿ ಉರಿಸುವ ಕಿಡಿಯದು
ಅವಿಚಿಡುವೆ ಎದೆಯಲ್ಲಿ
ಆಚೆ ಹೊಗದಂತೆ
ನೀರ ಸುರುವಿಯರೊ ಅದಕ್ಕೆ
ಎಣ್ಣೆ ಹೂಯಿವೆರೊ ದಗಿಸಲಿಕ್ಕೆ
ಹೊತ್ತಿದರೊಮ್ಮೆ ಉರು ಊರ ಸುಡುವುದು ಮತ್ಸ್ಯೆರ್ಯದ ಮದದಿಂದ
ನನ್ನೊಳಗಿನ ಕೌರವನ ಎದೆಯಿಂದ

- ಕೌರವ

05 Dec 2017, 09:55 pm

ಅರುಣಾ ರಾಗ..ಹಾಡುವ..

ಏನೀ .. ಮನಸ .. ಭಾಷೆ...
ಏನೀ ..ಹೃದಯದ..ಆಸೆ..
ಮನದಿಂಗಿತ ಹೇಳೊ ಬಯಕೆ
ಹೇಗೆ ಏಳಲಿ ಹೆದರಿಕೆ....

ಮನದಲ್ಲಿ, ಏನೋ ಹುಚ್ಚು ತುಡಿತ|
ಹೆಚ್ಚಾಗಿದೆ ನನ್ನ ಹೃದಯದ ಬಡಿತ|
ನನ್ನ ನೋಡಿ ನಗುತ್ತಿದೆ ದಿಗಂತ|
ಮತ್ತೇ ಬರಬಾರದೇ ವಸಂತ..
ನನ್ನ ಇನಿಯನ ಕೂಗಿ ಕರೆಯುತಾ..|

ತಂಗಾಳಿಯಲಿ...ಕುಳಿತು.. ಹಾಗೆ..
ಪಿಸು ಮಾತಲಿ ಹೇಳಲೇ ಒಮ್ಮೆ..
ಚಿಲಿಪಿಲಿ ಗುಟ್ಟುವ..ಹಕ್ಕಿಯ ...ಹಾಗೆ..
ನಿನ್ನ ಹೆಸರನ್ನ ಕೂಗಲೇ ಒಮ್ಮೆ..
ಸಮುದ್ರವ ಸೇರುವ ನದಿಯ ಹಾಗೆ..
ನಿನ್ನ ಬಂದು ಸೇರುವೇ.. ಒಮ್ಮೆ..
ಇನಿಯಾ...ಮನ ಬಯಸಿದೆ....ಈಗೇ..
ಇಬ್ಬರು ಸೇರಿ,ಹಾಡಲು.....
ಅರುಣಾ ರಾಗವ ಒಮ್ಮೆ....
ಅದುವೇ,ಒಲವಿನ........ಮಹಿಮೆ
ನನ್ನ ಪ್ರೀತಿಗೆ.... ಹಿರಿಮೆ...

- Bhagya Girish

05 Dec 2017, 09:36 pm