Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಅತ್ತವರು

ಬಿದ್ದ ಮರಕ ಅತ್ತವರಿಲ್ಲ
ಸೊತವಗ ಹೆಗಲ್ಯಾರು ಇಲ್ಲ
ಗಳಿಸಿದ್ದಕಿಂತ ಕಳಿದಿದ್ದ ಹೆಚ್ಚು ಆಯಸ್ಸ
ಉಸಿರಿನೊಡನೆ ಉರಿಯು ಸೆರಿ
ಸುಡುತಿದೆ ಮನವ ಕೌರವನ ತನವ

- ಕೌರವ

08 Dec 2017, 10:16 am

ಸೈನಿಕ, ಸೈನಿಕ


ನಿನ್ನಿಂದ ಕಲಿತು ಆದೆ ನಾ ಪ್ರಾಮಾಣಿಕ,
ನಿನ್ನಲ್ಲಿರುವ ಒಬ್ಬ ದುಖಿಃತನಾದ ಮೌನಿಕ,
ಆದರು ನೀನು ನಮ್ಮನ್ನು ಸದಾ ಕಾಯುವ ರಕ್ಷಕ,
ನೀನು ಎಂದಿಗೂ ಬಿಡುವುದಿಲ್ಲ ನಿನ್ನ ರಕ್ಷಣೆಯ ಕಾಯಕ,
ನಿನ್ನಲ್ಲು ಇರುವ ಒಬ್ಬ ಆಸೆಯೆಂಬ ಒಳ್ಳೆಯ ಮಾಂತ್ರಿಕ,
ನಮ್ಮೆಲ್ಲರಿಗೆ ಅಭಯ ನೀಡುತ್ತ,ನಮ್ಮಯ ಸುಖಕ್ಕೆ ನಿನ್ನ ಸುಖ ಬಿಟ್ಟು ದುಡಿಯುತ್ತಿರುವ ನೀನೆ ಮಹಾನ್ ಶ್ರಮಿಕ,
ನಿನ್ನ ಪ್ರತಿಯೊಂದು ಕಷ್ಟದ ಹೆಜ್ಜೆಗು ಇದ್ದೆ ಇದೆ ನಮ್ಮ ಬಹುಪರಾಕ,
ನಿನೊಬ್ಬ ಈ ದೇಶದ ಚಿತ್ರಿಕ,
ನಿನ್ನ ಜೊತೆ ಮತ್ತೊಬ್ಬನಿರುವ ರೈತನೆಂಬ ನಾಯಕ,
ನಿಮ್ಮಿಬ್ಬರನ್ನು ಕಡೆಗಣಿಸಿದವನೆ ದೊಡ್ಡ ಮೂರ್ಖ
......(ಮುಂದುವರೆಯುವುದು ಅನಂತದವರೆಗೆ)
"ಯುವಕ ಆಗಲು ಪ್ರಯತ್ನಿಸು ಸೈನಿಕ"

- SHASHI

08 Dec 2017, 10:05 am

ವ್ಯಾಪಾರಿ

ನನ್ನನು ಕನಿಷ್ಠವಾಗಿ ಕಂಡ ಮಾತ್ರಕ್ಕೆ
ನಿಮ್ಮ ಘನತೆ ಹೆಚ್ಚುವುದಿದ್ದರೆ ಅಷ್ಟಾದರು ಬದುಕು ಸಾರ್ಥಕಗೊಂಡಿದ್ದಕ್ಕೆ
ಹರ್ಷಿಸುತ್ತೇನೆಯೇ ಹೊರತು
ವ್ಯಕ್ತಿತ್ವಕ್ಕೆ ಕುಂದಾಯಿತೆಂದು ನಿಂದಿಸಲಾರೆ
ಪೂರ್ವಿಕರ ಗಂಟಾಗಲಿ
ಧನಿಕರ ನಂಟಾಗಲಿ ಇಲ್ಲದೆ
ಅಸ್ತಿತ್ವದುಳಿವಿಗೆ ಆಯ್ದುಕೊಂಡ ಜೀವನ
ನಿಮ್ಮ ದ್ರಷ್ಟಿಯಲ್ಲಿ ಕೇವಲವೆನಿಸಿದರೆ
ಸಂಕುಚಿತ ಮನೋಬಿಂಬವೇ ವಿನಹ
ಆಯ್ಕೆಯ ಅನಾರ್ಹತೆಯಲ್ಲ
ಅರಿವಿನೆಡೆಗೆ ಹರಿಯದ ಜಡ ಚಿತ್ತ
ಸೊಗಸಿಗು ತೆರೆಯದ ಅಂದತ್ವ
ವ್ಯಕ್ತಿ ವೈಕಲ್ಯಕ್ಕೆ ಸೃಷ್ಟಿ ಹೊಣೆಯಲ್ಲ
ಹೇಗೆಯೇ ಇರಲಿ ಆಂತರ್ಯ
ಹಣ ತೆರದಿದ್ದರೆ ಇಲ್ಲ ಔದಾರ್ಯ
ನನ್ನದು ವ್ಯವಹಾರಿಕ ಜಗತ್ತು
ಭಾವನೆಗಳಿಗಿಲ್ಲ ಕಾಸಿನ ಕಿಮ್ಮತ್ತು

- ಯು.ರಾಮು ಸಿರಿಗೆರೆ

08 Dec 2017, 09:52 am

ಸಾವಿನ ಪ್ರೀತಿ ....

ಸಾವನ್ನು ಹೂಡುಕಿಕೊಂಡು ಹೋಗುವ
ಮನಸ್ಸಿಗೆ ಪ್ರೀತಿಯ ಮಾತುಗಳು....

ಕ್ಷಣಗಳಲ್ಲಿ ಕಣ್ಣ ಮರೆಯಾಗುವ ಜೀವಕ್ಕೆ
ಬದುಕ ಬೇಕೆಂಬ ಆಸೆ....

ಗೆಳೆಯ ಈ ಜೀವ ಮಣ್ಣಿಗೆ ಹೋದರು
ನಾನು ನಿನ್ನನೇ ಪ್ರೀತಿಸುವೆ...

ಇಂತಿ ನಿನ್ನ ಪ್ರೀತಿಯ
ದಾಸಿ....

- sparsha surya

08 Dec 2017, 08:49 am

ಅಂಗಂತ್ಕೋಬೇಡಿ

ನಾನಂತು ಓತ್ಲ
ಹೊಡಿತೀವ್ನಿ ಗೊತ್ತ
ಅದ್ಕೆ ಕವನವ ಗೀಚ್ತಿನಿ
ಟೈಮ್ಪಾಸ್ಗೆ
ನಿಮ್ಗೆ ಅದ ಸೆಂಡ್ಮಾಡ್ತಿನಿ ಆಗಾಗ್ಗೆ.

ಅಂದ್ಕೊಂಡ್ರ ಹಾಗಂತ
ಎಲ್ಲಾದ್ರು ನೀವೆಲ್ಲ
ಅದು ತಪ್ಪು ನಿಮ್ಮ ಭ್ರಾಂತಿ
ಭಾವನೆಯ ಲೋಕದಲಿ ಸ್ವರ್ಗ ಐತಿ.

ಆ ನಾಕ ದೊರಕದು
ಅದು ಎಷ್ಟೋ ಹಣ ಕೊಟ್ರು
ಲಭಿಸಿವುದು ನನ್ನ ಪಾಲ್ಗೆ
ವಂದಿಸುವೆ ಸಿರಿಗನ್ನಡಮ್ಮ ಬಾಳ್ಗೆ.

ಜಿ.ಎಂ.ಮಧುಕೇಶವ್
9686617840

- ಮಧುಕೇಶವ್

08 Dec 2017, 05:45 am

ಮನುಜಾ. ... .ನಿನಗೆ....ಕೊನೆ....ಎಂದು

ದ್ವೇಷವೆಂಬ ಬೆಂಕಿಯಲ್ಲಿ....
ಬಿದ್ದು ಒರಳಾಡುವ ಮನುಜ....
ಬರಿದು ಮಾಡುತ್ತೀರುವ....ಉರಿದು ಮುಕ್ಕಿ,
ಭೂದೇವಿಯ ಒಡಲ ಕಣಜ....
ಧಮ೯ದ ಹೆಸರಲ್ಲಿ....
ನಾಶಮಾಡುತ್ತೀರುವ....ಸಮಾಜ..
ಮನುಷತ್ವವನ್ನೇ....ಮೂರುಕಾಸಿಗೆ ಮಾರಿ...
ಮೆರೆಯುತ್ತೀರುವ.....ಅನುಜ....
ನೋಡಿಯೂ ....ಸುಮ್ಮನೆ....
ನಿಂತಿರುವೆಯಲ್ಲಾ....ಅಗ್ರಜ.....
ನಿನ್ನ ಮನದಲ್ಲೂ.... ಕೂತೀದೆಯಾ...
ಜಾತಿಯ ವಿಷ ಬೀಜ....

ನಿನ್ನ...ನೀಚ ಬುದ್ದಿಗೆ ಸಿಲುಕಿ..
ಮರೆಯಾಗಿದೆ..ನಿನ್ನೋಳಗಿನ...ಸ್ನೇಹ....
ನೆನೆದು ....ಸಂಬಂಧಗಳಿಗೆ, ನೀನು.... ಮಾಡಿದ.....ದ್ರೋಹ
ಹುಚ್ಚು....ಮಧದಿಂದ ಹೆಚ್ಚಾಗಿದೆ....ನಿನಗೆ....
ನಾನು...,ನನ್ನದು..ಎಂಬ ಮೋಹ....
ಜೋತೆಗೆ....ಹೆಣ್ಣು,ಹೊನ್ನು,ಮಣ್ಣು,
ಇವುಗಳ ಮೇಲೆ ಹೆಚ್ಚು ದಾಹ....
ನಿನ್ನ ಲೋಭಬುದ್ದಿಯ...ವಂಚನೆಗೆ..ಸಿಕ್ಕಿ,
ರಕ್ತ ಸಿಕ್ತಗೋಂಡಿರುವ ಅವೇಷ್ಟೋ..ವನ್ಯಜೀವಿಗಳ.....
ಅವಶೇಷಗಳ ಸಮ್ಮೂಹ...
ಕಾತರಿಸಿ..ಕಾಯುತ್ತಾ..ಕುಳಿತಿವೆ....
ವಂಚುಹಾಕಿ,ಕುಕ್ಕಿ..ಕುಕ್ಕಿ....ತಿನ್ನಲು...
ನಿನ್ನ....ಈ....ಜೀವಂತ ದೇಹ....
ನೀಜವಾಗಿಯೂ..ನೀನು ಬುದ್ದಿವಂತ ಪ್ರಾಣಿಯೇ.....ಎಂಬುದೆ ಪ್ರಕೃತಿಮಾತೆಯ ಸಂದೇಹ....
.

- Bhagya Girish

07 Dec 2017, 10:47 pm

ಮೊಗ್ಗು ಅರಳಿ ಹೂವಾಗಿ

ಮೊಗ್ಗು ಅರಳಿ ಹೂವಾಗಿ
ಹೂವು ಅರಳಿ ಹೆಣ್ಣಾಗಿ!!
ಹೆಣ್ಣು ಅರಳಿ ತಾಯಾಗಿ
ಆ ತಾಯೇ ಮಮತೆಗೆ ಹೆಸರಾಗಿ!!

ಮಾತಾಡುವ ಆ ತಾಯಿ
ಜೋಗುಳವ ತಾ ಹಾಡಿ!!
ಮಡಿಲಲ್ಲಿನ ತನ್ನ ಮಗುವ
ಮುದ್ದಿಸಲು ನಗು ಮೊಗವು!!

ಸಿರಿ ಸಂಪಿಗೆ ನಿನ್ನ ಕಂಪಿಗೆ
ಹೆಸರೇನೇ ಆ ತಾಯಿ!!
ಮನೆದೇವರೇ ಹರಿಕೆ ಇದೆ
ಆ ತಾಯಿಯ ನೀ ಕಾಯಿ!!

ನೋವನ್ನೇ ಹಡೆದಿರುವಳು
ಎಳೆ ಕಂದನ ತೆರವಾಗಿ!!
ಆ ತಾಯಿಗೆ ನೆರವಾಗಿರು
ಓ ದೇವನೇ ಸುಖವಾಗಿ!!

ಮಣ್ಣನಲ್ಲೂ ಕೂಡ
ಹುಣ್ಣಿಮೆಯನ್ನು ನೋಡ!!
ಆ ತಾಯ ಹೆಜ್ಜೆ ಗುರುತು
ಕಂಗಳಿಸಿ ಹೊಳೆವಾಗ!!

ಕಣ್ಣ ತುಂಬ ಕರುಣೆ ಬಿಂಬ
ತುಂಬಿ ತಂದಳು ಅವಳು!!
ಅವಳಿಗಾಗೇ ಹಗಲು ಇರುಳು
ದೇವನು ಇತ್ತ ನೋಡು!!

- ಪಿ.ಜಿ.ಜ್ಯೋತಿ

07 Dec 2017, 09:46 pm

ಕನಸು......

ಕನಸೆ ನೀನು ನಿಜವಾಗ ಬಾರದೆ
ಕಣ್ಣೋಳಗೆ ಗುಬ್ಬಿಯಂತೆ ಅವಿತು
ಕುತಿರುವೆಯಲ್ಲೆ
ಹೋರಗೆ ಬಂದು ರೆಕ್ಕೆ ಬಿಚ್ಚಿ
ಹಾರಾಡ ಬಾರದೆ ....
ಹೋರ ಜಗತ್ತನ್ನೂ ನೋಡೆ
ಎಷ್ಟು ಸುಂದರ ಜಗದೂಳಗೆ
ನೀನು ಒಬ್ಬಳಂತೆ ಬದುಕು ಬಾರೆ
ಯಲ್ಲರ ಮನದೋಳಗೆ ಮನೆ
ಮಾಡಿರುವೆಯಲ್ಲೆ ಹೋರಗೆ
ಬಾರೆ ಹೋ ಕನಸೆ
ನನಸಾಗಿ ಯಲ್ಲರ ಮುಖದಲ್ಲಿ
ನಲಿದಾಡೆ ಕತ್ತಲ ಕನಸೆ........

- ರಾಗಸಿರಿ....

07 Dec 2017, 09:02 pm

ಮಂಜಿ ಗಂಡನ ಜೀವನ..

ಕುಚ್ಚಲಕ್ಕಿ ಗಂಜಿ,
ಒಣಮೀನು ನೆಂಜಿ
ಅದಾಂಗಾತು ಸಂಜಿ
ಕಾಯ್ತಿದ್ಲೇನೋ ಮಂಜಿ.

ಅಮಾವಾಸ್ಯೆ ಆಡಿಕೆ
ಆಳುಲೆಕ್ಕ ಕೂಡಿಕೆ
ಗೌಡ್ರ ಮುಂದೆ ಬೇಡಿಕೆ
ಚಿಲ್ರೆ ಪಲ್ರೆ ನೀಡಿಕೆ.

ಗುರುವಾರ ಸಂತೆ
ಬಂಗ್ಡೇ ಮೀನ ಚಿಂತೆ
ವೈನ್ ಶಾಪಲ್ ನಿಂತೆ
ಬಸ್ ಸ್ಟಾಪಲ್ ಕುಂತೆ.

ವರದಾ ಬಸ್ಸಲಿ ಜಾತ್ರೆ
ಬೇಕು ಅನಾಸಿನ್ ಮಾತ್ರೆ
ಹಂಗೂ ಹಿಂಗೂ ಕೂತ್ರೆ
ತಲೆಮೇಲ್ ಯಾರ್ದೋ ಪಾತ್ರೆ.

ಸಾಕಾಗ್ಲಿಲ್ಲ ನೈನ್ಟಿ
ಮನೇಲಿ ಹೆಂಡ್ತಿ ಒಂಟಿ
ಆಕೆ ಸ್ವಲ್ಪ ತುಂಟಿ
ಆದ್ರೂ ಜಗಳ ಗಂಟಿ.

ಒಲೆಲಿ ಉಂಟಾ ಕೆಂಡ
ಸುಡು ಮೀನಿನ ತುಂಡ
ಉಪ್ಪು ಗಂಜಿ ಉಂಡ
ಅವನೇ ಮಂಜಿ ಗಂಡ !

- ಶ್ರೀಗೋ.

07 Dec 2017, 09:00 pm

ಸಂಭಂದ

ದರೆಗೂ ಉರಿವ ಸೂರ್ಯನಿಗೂ
ಏನೆನು ಸಂಬಂದ ?
ಅಳುವ ಮಗುವಿಗೂ ನಗುವ
ಅಮ್ಮನಿಗೂ ಅದೇನು ಅನುಬಂದ ?
ಬೇಲಿ ಹೂ ಮಾಲೆಯಾದರೆ
ಅದಕೆಂತಾ ಆನಂದ ?
ನವಿಲು ನಡಿಗೆ ಬಿಸಿಲು ಮಳೆಗೆ
ಕಾಡು ಬೆಳೆದಾಂಗ ?
ಮಣ್ಣು ಬೀಜ ಹಣ್ಣು ಮರಕ್ಕೆ
ಹಕ್ಕಿಗೂಡ ಹುಲ್ಲು ಕಡ್ಡಿ
ಮಳೆ ಮೋಡ ಬೇಟ್ಟಗಳಿಗೆ
ಅದೆನೊ ಸಂಭಂದ ?
ತೀರದೊಡನೆ ಅಲೆಗಳ ಜಗಳ
ತೀರದಂತಾ ದ್ವೆಷಗಳಾ
ತಿರುಗಿ ನೊಡಿ ಹೊದೆಯಲ್ಲ
ನಿನ್ನದೆಂತಾ ಜಗಳ
ನಾ ಕೌರವ ಅನ್ನೊ ಬೈಗಳ

- ಕೌರವ

07 Dec 2017, 06:55 pm