Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕಣ್ಣ ತುಂಬಾ

ಸದಾ ನನ್ನ ಕಣ್ಣ ತುಂಬಾ
ಕಂದ ಇರಲಿ ನಿನ್ನದೆ ಬಿಂಬ
ಕೊಡುವೆ ನನ್ನ‌ ಅಪ್ಪುಗೆ ಆಸರೆ
ಬಿಡಿಸಲು ನಿನ್ನೆಲ್ಲ ಬಾಳಿನ ಸೆರೆ

ನೀ ಬಯಸಿದ್ದೆಲ್ಲ ಕೊಡಿಸುವಾಸೆ ಚಿನ್ನ
ಅದಾಗದಿದ್ದರೆ ಮನ್ನಿಸಿ ಬಿಡು ಎನ್ನ
ನೋಡಬೇಡ ಸೋತೋದ ನನ್ನ ಕಣ್ಣೀರನ್ನ
ಕಸಿದು ಬಿಡಬಹುದು ಅದು ನಿನ್ನ ನಗುವನ್ನ

ಸಿಂಗರಿಸುವೆ ನಿನ್ನ ಇಟ್ಟು ಕಾಡಿಗೆ ದೃಷ್ಟಿಬೊಟ್ಟು
ಕಲಿಸುವೆ ನಿನಗೆ ಜೀವನದ ಎಲ್ಲ ಒಳಗುಟ್ಟು
ನೀ ಏರಬೇಕು ಬಾಳಿನ ಉತ್ತುಂಗದ ಶಿಖರ
ಯಾರ ಮುಂದೆಯೇ ಬಾಗಿಸದೆ ನಿನ್ನ ಶಿರ

ಪುಟ್ಟ ಪುಟ್ಟ ಕಾಲಿಗೆ ಹಾಕುವೆ ಗೆಜ್ಜೆ
ಇಡಲಿ ಎಂದು ದಿಟ್ಟ ಮಾದರಿ‌ ಹೆಜ್ಜೆ
ಸಂತಸದೊನಲ‌ ಹರಿಸಲಿ‌ ಅಳಿಸಿ ಒಡಕು
ನೀನಾಗದಿರಲೆಂದು ಲೋಕಕೆ ಕೆಡುಕು

- ಶ್ರೀಕಾವ್ಯ

08 Dec 2017, 11:53 pm

ಕಾಪಾಡಬೇಕಿರುವವರೆ

ಅಪ್ಪನ ಸಿಹಿ ಮುತ್ತು
ಗುರುವಿನ ಗೌರವದ ಗತ್ತು
ಮಣ್ಣ ಸೇರಿ ಹೋಗಿವೆ ಸತ್ತು
ಯಾರ ನಂಬುವುದೆಂದು ತಿಳಿಯದಾಗದ ಹೊತ್ತು

ಸಿಲುಕಿದರೆ ಕಾಯುವ ಕೈಯೆ ಕಾಮದ ಮಾಯೆಗೆ
ಯಾವ ಸ್ಪರ್ಶವೂ ಹಿತವಿರದು ಮೈಯಿಗೆ
ಏನು ಅರಿಯದ ಎಳೆ ಕಂದನ ಬಿಡರು
ಅರಳುವ ಮುನ್ನವೆ ಕತ್ತಲಿಗೆ ನೂಕುತಿರುವರು

ಕಾಪಾಡ ಬೇಕಿರುವಣ್ಣನೆ ಕಾಡುವ
ದೇಹದಾಸೆಗೆ ಗೆಳೆಯನೆ ಸೋತುಬಿಡುವ
ಗುರಿ ತೋರಿ ಬುದ್ಧಿ ಕಲಿಸ ಬೇಕಿರುವವ
ಕೂಸೆಂದು ನೋಡದೆ ಕಾಮಣ್ಣನಾಗುತಿರುವ

ಎತ್ತಪ್ಪನ ಕಂಡರೆ ಎದುರುವ ಸ್ಥಿತಿ
ಮುದ್ದು ಮಾಡುವಣ್ಣನೆಂದರೆ ಭೀತಿ
ಗೆಳೆಯನಿಗೂ ತೋರಲಾಗದೆ ಪ್ರೀತಿ
ಅವಳ ಮನದೊಳಗುಟ್ಟುವ ನೋವ ಹೇಳುವುದಾವ ರೀತಿ

ಎಳೆಯ ಕಂದನಲೂ ಕಾಣುವುದಾದರೆ ಕಾಮ
ಅವನಾಗಲಾರ ಕಾಡು ಪ್ರಾಣಿಗೂ ಸಮ
ಕರುಳ ಕುಡಿ, ಬಗಲಿಗೆ ಬಿದ್ದವಳೆಂದು ತಿಳಿಯಲಾಗದ ಮೇಲೆ
ಅವನಿಗಿರಬಾರದು ಈ ಭೂಮಿಯ ಮೇಲೆಯೆ ನೆಲೆ

ಅಂತವರ ಚಿತ್ರಹಿಂಸೆ ಕೊಟ್ಟು ಕೊಂದರು ಬರದು ಪಾಪ
ನರಕ ಯಾತನೆ ತೋರಿದರೆ ಎಚ್ಚರಿಸಿಕೊಳ್ಳುವರೇನೊ ಸ್ವಲ್ಪ
ಆ ಹೆಣ್ಣೆ ಈ‌ ಜಗದ ಜನನಕೆ‌ ನೋವನುಂಗಾದಳು ಆದಿ
ಈಗ ಅವಳ ಮಾಡಬೇಡಿ ಈ ಜಗದಂತ್ಯಕಾಡುವಂತೆ ನಾಂದಿ

- ಶ್ರೀಕಾವ್ಯ

08 Dec 2017, 11:25 pm

ಅಂದ ಚೆಂದ.....

ದುಂಬಿ ಜೇನ ಹೀರಿತೆಂದು
ಹುವಿನ ಮದ್ಯೆ ಕಟ್ಟಿ ಹಾಕಿದರೆ ಅದು ಉಳಿಯುವುದೆ ಅದು ಹಾರಿ ಹೋಗಿ ಜೇನು ಗೂಡ ಕಟ್ಟಿದರೆನೆ ಚೆಂದ.....

ಕುಣಿವ ನವಿಲು ಅಂದ ಎಂದು
ಅದರ ಕಾಲು ಮುರಿಯುವುದೆ
ಅದು ಕುಣಿಯುತ್ತಿದ್ದರೆನೆ ಚಂದ.....

ಅರಳೂ ಮಲ್ಲಿಗೆ ಅಂದ ಎಂದು
ಗಿಡದಲ್ಲೇ ಒಣಗಿಸುವುದೆ
ಅದು ಮುಡಿಗೇರಿದರೇನೆ ಅಂದ....

ಹರಿವ ನದಿ ನೋಡಲು ಸೋಬಗೆಂದು
ಅಡ್ಡಲಾಕಿದರೆ ಹೇಗೆ ಅದು
ನದಿಯಾಗಿ ಹರಿದರೇನೆ ಚೆಂದ....

ನೋಡಲು ಅಂದ ಎಂದು ಗಿಳಿಯ
ಬಾಂಗಾರದ ಪಂಚರದಲ್ಲಿ ಇಟ್ಟರೇನು
ಅದು ರೆಕ್ಕೆ ಬಿಚ್ಚಿ ಹಾರಾಡಿದರೇನೆ ಅಂದ....

ಹಾಡುವ ಕೋಗಿಲೆಯ ಧ್ವನಿ ಕಟ್ಟಿದರೆನು
ಅದು ಹಾಡಿದರೇನೆ ಅಂದ....

- ರಾಗಸಿರಿ....

08 Dec 2017, 09:48 pm

ನಾಕಂಡ ಕನಸು

ನಾಕಂಡ ಕನಸು ಅಂದು
ತುಸು ನನಸಾಗಿದೆ ಇಂದು.
ಪಿಸು ಮಾತಾಗಿ. ಮಾತು ಮಧುರವಾಗಿ.
ಮನಸು ಮಗುವಾಗಿರಲಿ ಎಂದೆಂದೂ

- Nagaraj

08 Dec 2017, 09:21 pm

ದೊಡ್ಡಮನುಷ್ಯರು

ದೊಡ್ಡವರ ತಪ್ಪು ದೊಡ್ಡದಾಗಿ ಪ್ರಕಟವಾಗುತ್ತದೆ
ಅದೇ ತಪ್ಪು ನಾವು ಮಾಡಿದರೆ ಲೆಕ್ಕಕ್ಕಿಲ್ಲ
ತಪ್ಪಿಗೂ ದೊಡ್ಡಮನುಷ್ಯರು ಸಾಮಾನ್ಯರು ಎಂಬ ಬೇದ
ದೊಡ್ಡವರ ಚಿಕ್ಕ ಒಳ್ಳೆತನ ದೊಡ್ಡದಾಗಿ ಪ್ರಕಟ
ನಮ್ಮ ದೊಡ್ಡ ಒಳ್ಳೆಯತನ ಕಾಲಿಗೆ ಕಸ
ಒಳ್ಳೆಯದಕ್ಕೂ ದೊಡ್ಡಮನುಷ್ಯರು ಸಾಮಾನ್ಯರು ಎಂಬ ಬೇದ
ತಪ್ಪಿಗೂ ದೊಡ್ಡವರೇ ಬೇಕು ಒಳ್ಳೆಯದಕ್ಕೂ ದೊಡ್ಡವರೇ ಬೇಕು

- ನಾಗರಾಜ್

08 Dec 2017, 08:21 pm

ನಸುಕಿನ ಕನಸು

ಹುಸಿಯಲ್ಲ ನಿಜವಾಗ್ಲು
ನೀ ನನ್ನ ಸ್ವಪ್ನನದಲಿ
ಬಂದಿದ್ದೆ ಕಳೆದ ರಾತ್ರಿ
ಚಂದಿತ್ತು ಒಲವ ಜಾತ್ರಿ.

ನೀ ಬೇಕು ಎಂದೆನ್ನ
ಹಿತವಾಗಿ ಕೇಳಿದೆ
ಬಣ್ಣಾದ ನವಿಲೂಗರಿ
ಕೈ ಚಾಚಿ ಬೆರಳು ತೋರಿ.

ನಾ ನಿನ್ನ ರೇಗಿಸಲು
ಅದು ಬೇಡ ಎಂದೆನಲು
ನೀ ಮುನಿದೆ ನನ್ನ ಮೇಲೆ.
ನೋಡಲದು
ಸೊಗಸು ಕೇಳೆ.

ಮುನಿಸಲ್ಲು ನೀ ಚಂದ
ಅದಕಾಗಿ ನಾ ನಿನ್ನ
ಆಥರ ಸತಾಯಿಸಿದೆನು

ನಿನ್ನೊರತು ಯಾರತ್ರ
ನಾ ಹೀಗೆ ಆಡುವೆನು
ತಪ್ಪಿದ್ರೆ ಕ್ಷಮಿಸೆ ನೀನು.

ಎಂದು ನಾ ಕೇಳಲು
ಅಳುವೊಡನೆ ನೀ ನಗಲು
ಅಪ್ಪಿದೆ ನನ್ನನಲ್ಲೆ
ನನ್ನ ನೀ ಒಬ್ಳೆ ಬಲ್ಲೆ

ಈ ರೀತಿ ಸಾಗುತಿಹ
ಕನಸಿನಲಿ ಮಜವಿತ್ತು
ಅಷ್ಟರಲಿ ಸೂರ್ಯ ಬಂದ.
ಕಣ್ಬಿಟ್ಟಿ ಕೋಳಿಗಳ ಕೂಗಿನಿಂದ.

- ಮಧುಕೇಶವ್

08 Dec 2017, 05:09 pm

ನಮ್ಮನೆ.....

ಕಲ್ಪನೆಯ ತವರುರು ನಮ್ಮನೆ
ಕನಸುಗಳ ಮರೆಯೋರು ನಮ್ಮನೆ
ಅರಿಯೋರು ಯಾರಿಲ್ಲ ನಮ್ಮನೆ
ಮರೆತು ದೂರಾದರೆ ನಮ್ಮನೆ

ನಗುವ ಹೋ ಮಾಲೆ ನಮ್ಮನೆ
ಹರಿವ ಸಿರಿಯುರು ನಮ್ಮನೆ
ಮುಗಿಲ ಮಳೆಯುರು ನಮ್ಮನೆ
ಹೋಳೆವ ಮುಂಗಾರು ನಮ್ಮನೆ

ಹಸಿರ ದಿಬ್ಬಣ ನಮ್ಮನೆ
ಹಕ್ಕಿಗಳ ತವರುರು ನಮ್ಮನೆ
ಪ್ರಾಣಿಗಳ ಗಣಿಯುರು ನಮ್ಮನೆ
ಮುತ್ತಿನಂಗಳ ನಮ್ಮನೆ

ಕಾಣದ ಕಡಲುರು ನಮ್ಮನೆ
ಚೆಂದುಳ್ಳಿ ತೋಟ ನಮ್ಮನೆ
ಬಂದುಗಳ ನೆಲೆಯುರು ನಮ್ಮನೆ
ಅರಸಿ ಬಂದವರು ನಮ್ಮನೆ.......

ಮರೆಯದೆ ಇರುವರೆ ಸುಮ್ಮನೆ
ನಮ್ಮನೆ ನಮ್ಮನೆ ನಮ್ಮನೆ.......

- ರಾಗಸಿರಿ....

08 Dec 2017, 04:21 pm

ಮುದ್ದು ಗಿಳಿ.....

ಓ ನನ್ನ ಮುದ್ದು ಗಿಳಿಯೆ
ನಿ ಎಕೆ ಹಾರುತಿಯೆ
ನನ್ನ ಎದೆಯಂಬ ಪುಟ್ಟ
ಗುಡಿಯ ಮಾಡಿರುವೆ ನಿನಗೆ
ಇದ್ದು ಬಿಡಬಾರದೆ ಅಲ್ಲೆ
ರಾಣಿಯಂತೆ.....
ಹೊತ್ ಹೊತ್ಗೆ ಕಾಳು ಕಡಿ
ತಂದಿಡುವೆ ನಿ ವಲ್ಲೆ ಅಂದರು
ನಿನ ಬಾಯಗೆ ಸುರಿವೆ
ಕತ್ತಲೆಯ ಈ ಲೋಕದಲ್ಲೀ
ಹಾರಿ ಹೋಗಿ ಹೇಗೆ ಬದುಕುವೆ ನೀ
ನನ್ನ ಅಗಲಿ ........
ದುಷ್ಟ ರಣಹದ್ದುಗಳು
ನಿನ್ನನ್ನು ಕೋಂದರೆ
ನನ್ನ ಗತಿ ಎನೆ ಮುದ್ದು ಗಿಳಿ...
ರೆಕ್ಕೆ ಬಂದಿತ್ತೆಂದು ಹಾರಿ ಹೋಗಬೇಡವೆ
ನನ್ನ ಎದೆಯ ಆಸರೆಯ ಅಗಲಿ.....
ಓ ನನ್ನ ಮುದ್ದು ಗಿಳಿಯೆ.....

- ರಾಗಸಿರಿ....

08 Dec 2017, 04:02 pm

"ನಿವೇದನೆ•••••"

ಇಟ್ಟಿದ್ದೆ ಎದೆತುಂಬ ಕನಸುಗಳ ನಕ್ಷತ್ರ
ಪ್ರೀತಿ ಗೆರೆಯನು ಎಳೆದು ಬಿಡಿಸಿದ್ದೆ ನಿನ ಚಿತ್ರ...

ಅಪ್ಪನಾಣತಿಯಂತೆ ನೀನೆತ್ತ ನಡೆದೆ
ಪುಟ್ಟ ಮಗುವಿನ ತೆರದಿ ನಾ ಅತ್ತು ಕರೆದೆ...

ಎಷ್ಟು ಕೂಗಿದರು ನೀ ಕೇಳದೆ ಹೋದೆ
ನಂಬಿದ ಹ್ರುದಯಕೆ ದ್ರೋಹ ಬಗೆದೆ

ಇಂದಿಗೂ ನಿನ್ನ ನೆನಪಲ್ಲೇ ಬದುಕಿದೆ
ನನ್ನ ತೊರೆಯಬೇಡ ಮರಳಿ ಬಾರದೆ...

- Basawaraj

08 Dec 2017, 02:55 pm

ಎದೆಯ ಹಾಲು

ಹೆತ್ತ ತಾಯಿಯ ಎದಯ ಹಾಲು ವಿಷವ
ಚಿಮ್ಮಿತು ಅಹಂಕಾರದ ಕಡು ಸ್ವಾರ್ಥದಲ್ಲಿ.
ಅಡ್ಡಿಯಾಗಿದೆ ಕರುಳ ನಂಟು ಕೊಂದು
ಹಾಕಲು ಕರುಳ ಕುಡಿಯನು.

ಕತ್ತು ಹಿಸುಕಿ ಸಾಯಿಸಿದರೆ ಸತ್ತ ವರದಿ ತಾನೆತ್ತ ಕೇಳುವೇನೋ ಎಂದು ಹೃದಯಕ್ಕೆ ಚೂರಿ ಬಗೆದು ಮಾತಿದಿನಿಂದ ಇಂಚಿಂಚು ಗಾಸಿ ಮಾಡಿ ನರಕ ತೋರುತಿರುವೆಯ ?

ಒಂದೇ ಉಸಿರು ಕಟ್ಟಿ ಸತ್ತುಹೋಗುವಳೆಂದು ಇಂದು!
ಮಲತಾಯಿ ಅಲ್ಲದಿದ್ದರೂ ಮರುಳು ತಾಯಿ ಆಗಿಹೋದೆ ಕಟುಕರಿಗೂ ಕೀಳಾಗಿ ನನ್ನ ಕಾಡಿ ನಕ್ಕು ನಲಿದೆ.

ನಕಲಿ ಮಾಡಿ ನಿನ್ನ ನೀಚ ಬದುಕಿಗೆ ನನ್ನದೇ ಪ್ರತಿಬಿಂಬವನ್ನು ಅಂಟಿಸಿ ನನ್ನ ಭಾವ ಚಿತ್ರದಂತೆ ಲೋಕದೆಲ್ಲೆಡೆ ಸಾರಿ ನನ್ನ ಕಣ್ಣ ಹನಿಯ ಕುಡಿದು ಬದುಕುವೆಯ?

ಮೆಚ್ಚಿ ಬಂದ ಕಂದನಿಂದು ಚುಚ್ಚದೇನೆ ಹೊಂಚು ಹಾಕಿ ಕಟ್ಟ ಕಡೆಗೆ ಕೆಟ್ಟವಳೆಂದು ದೂರಿ ನೀನು ನನಗೆ ದೂರವಾಗುವೆಯ?

ಮಾತೃಮೂರ್ತಿ ಎಂದು ಕೊಂಡಾಡಿದ ಬಾಯಿಯಲ್ಲಿ ನೀನೊಂದು ಕಲ್ಲೆಂದು ಮಾನವತ್ವವಿಲ್ಲದ ರಾಕ್ಷಸಿಯೆಂದು ಕಂಬನಿಯೇ ನುಂಗಿ ಬದುಕುವಂತೆ ಮಾಡಿದೆಯಾ?

- ಚುಕ್ಕಿ

08 Dec 2017, 12:01 pm