Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಅಣ್ಣ ಎಂದರೆ ಶಕ್ತಿ
ನನ್ನಲ್ಲಿನ ಬಲವೇ ನನ್ನಣ್ಣ.....
ಅವನ ಪ್ರೀತಿಗೆ ಕೊನೆಯೇ ಇಲ್ಲ
ನನ್ನ ಜೀವದ ಜೀವ ನನ್ನಣ್ಣ....
ನನ್ನಲ್ಲಿನ ನಂಬಿಕೆ ನನಗಾಗಿಯೇ
ಜನಿಸಿರುವ ನನ್ನಣ್ಣ....
ನನ್ನ ಅಣ್ಣನೆಂದರೆ ನನ್ನ ಮುದ್ದು
ನನಗೆ ನನ್ನ ಮುದ್ದು ಅಣ್ಣ....
- sparsha surya
09 Dec 2017, 07:41 pm
ಅಂದವೆ ಇಲ್ಲದ ಮಲ್ಲಿಗೆ
ನೀ ಯಾಕೆ ಮರುಗುವೆ
ನನ್ನ ಅಂದ ಕೊಡಲೇನೆ ನಿನಗೆ......
ಜೀವವೆ ಇಲ್ಲದ ಓ ಮುದ್ದು
ಗೊಂಬೆ ಕೂರಗದಿರು ನೀ ಹಿಂಗೆ
ಈ ಜೀವ ಕೊಡಲೇನೆ ನಿನಗೆ....
ಪ್ರೀತಿಯೇ ಇಲ್ಲದ ಓ ಮನಸೆ
ಅಳುಕದಿರು ನನ್ನ ಪ್ರೀತಿ
ಕೊಡಲೇನೆ ನಿನಗೆ........
ಚಂದವೆ ಇಲ್ಲದ ಓ ಮುದ್ದು
ಕರುವೆ ಅಳದಿರು ನನ್ನ
ಚಂದ ಕೊಡಲೇನೆ ನಿನಗೆ........
ಮಾತೆ ಬಾರದ ಓ ಮೂಗ ಹಕ್ಕಿಯೆ
ಅಳದಿರೂ ನನ್ನ ದನಿಯ
ಕೊಡಲೇನೆ ನಿನಗೆ.......
ನಲುಗುವ ಮನಸುಗಳೆ
ನಲುಗದಿರಿ ನಿಮಗು ನಲಿಯುವ
ದಾರಿ ಇದೆ................
- ರಾಗಸಿರಿ....
09 Dec 2017, 04:50 pm
ರಾತ್ರಿ ದೇವರನ್ನು ನೆನೆಯಲು
ಬರುವೆ ಕನಸಿನಲ್ಲಿ ದಿನಾಲು
ಕೇಳಿದೆ ಮನಸ್ಸನ್ನು ಯಾರೆಂದು
ಹೇಳಿತು ನನ್ನ ಕನಸಿನ ರಾಣಿಯೆಂದು.
ನಂಬು ನನ್ನಯ ಮಾತನ
ಕಾಣಲು ನಿನ್ನನ್ನು, ಮನ
ಬಿಗಿ ಹಿಡಿದಿದೆ ಉಸಿರನ
ತೋರಿಸು ನಿನ್ನಯ ವದನ
ಹೇಳು ಚೆಲುವೆ, ನೀ ಎಲ್ಲಿ ಅವಿತೆ
ನೀನಿಲ್ಲದೆ ಕಳೆದೆ ಅದೆಷ್ಟೋ ಹಗಲಿರುಳು
ಮರುಕಳಿಸುವವು ನಿನ್ನ ನೆನಪುಗಳು
ಆಗಾಗ ತುಂಬುವುದು ನನ್ನ ಕಣ್ಣುಗಳು
ಬಾ ಚೆಲುವೆ ಕನಸಿನಲ್ಲಿ ದಿನಾಗಲು
- manu
09 Dec 2017, 04:15 pm
ಬದುಕಿರುವವರೆಗೂ ಸಾವಿನ ಚಿಂತೆ..!
ಹೋಗುವ ಕಾಲಕೆ ಬದುಕಿನ ಚಿಂತೆ..!
ಹೊತ್ತಿರುವೆವು ನಾವು ಪಾಪ ಪುಣ್ಯಗಳ ಕಂತೆ..!
ಅದಕ್ಕೆಲ್ಲ ಉತ್ತರ ಇಲ್ಲೇ ಪಡೆಯಬೇಕಂತೆ..!
ಸಾವಿನಾಚೆಯ ಊರು ಕಂಡವರು ಯಾರು..!
ಸ್ವರ್ಗ ನರಕಗಳ ಊಹೆಗಳು ನೂರಾರು..!
ಸ್ವರ್ಗ ದಾನಂದದಲಿ ಮಿಂದು ಬಂದವರಿಲ್ಲ..! ಎದುರಿನಲಿ..!
ನರಕದ ಬೆಗೆಯಲಿ ಬೆಂದು ಬಂದವರಿಲ್ಲ ಆಸು ಪಾಸಿನಲಿ..!
ಸಾವಿನ ಸುತ್ತ ಅಂತೆ ಕಂತೆಗಳ ಭೂತ..!
ಇಲ್ಲಿಹುದು ನನಗೆ ತಿಳಿದಿರುವ ಅರ್ಥ..!
ಸಾವು ಬಂದಾಗ ನಮ್ಮ ದೇಹ ಕಾಣುವುದು ಅಂತ್ಯ..!
ಆತ್ಮ ಹುಡುಕುತಾ ಹೊರಡುವುದು ಹೊಸ ದೇಹದ ಸಾಂಗತ್ಯ..!
೦0೦......೦0೦......೦0೦......೦0೦......೦0೦...
- ಪ್ರಕಿ..
09 Dec 2017, 04:01 pm
ಉದ್ದ ಜಡೆಯ ಮುದ್ದು ಚೆಲುವೆ
ಕಣ್ಣ ಸನ್ನೆ ಇಲ್ಲದೇನೆ ಕಟ್ಟಿ ಹಾಕಿದೆ ನಿನ್ನ
ಕೆಳಗಿಳಿಸಿದ ರೆಪ್ಪೆಯ ತುದಿ ಹಂಚಿನಲ್ಲೇ.
ನಾನೇನು ಬಲ್ಲೆ ನಿನ್ನ ಸಿಂಧೂರದ ರಂಗು
ನನ್ನ ಪ್ರೀತಿಯ ಹಂಗೆಂದು ಈಗಿಂದು ನನ್ನ
ಕಾಡುವುದೆಂದು ನಿನ್ನ ರೂಪದಲ್ಲಿ.
ಚಿನ್ನದ ಜುಮ್ಕಿ ಪ್ರತಿಕ್ಷಣ ನಿನ್ನ ಕೆನ್ನೆಯ
ಪಕ್ಕನಿಂತು ಕಿಸಕ್ಕನೆ ನಕ್ಕಿ ನನ್ನ ಗೇಲಿ
ಮಾಡುತುರುವುದು ನಿನ್ನ ಕೆನ್ನೆ ತನ್ನದೆಂದು
ನನಗೆ ಅಲ್ಲಿರುವ ಅದೃಷ್ಟವಿಲ್ಲವೆಂದು.
ಮುತ್ತಿನ ಹಾರ ಗಮ್ಮತ್ತಾಗಿ ನಿನ್ನ ಕತ್ತು ಸೇರಿ
ಅಲಂಕರಿಸಿ ಕೊಳ್ಳುತ್ತಿದೆ ನಿನ್ನ ಬಣ್ಣ
ತಾನೊಂದು ಚುರು ಕದ್ದು ಹಚ್ಚಿಕೊಂಡು.
ಘಮಘಮಿಸುವ ಜಾಜಿ ಮಲ್ಲಿಗೆ ನಿನ್ನ
ಮುಡಿಯನೇರಿ ಇಣುಕಿ ನೋಡಿತಿರುವುದು
ನಿನ್ನಿಂದಿನ ನನ್ನ ನೆರಳನು ನನ್ನ ಜಾಗ
ನಿನಗಿಲ್ಲವೆಂದು ಇಂದು.
ನಡುಕಟ್ಟು ಬಲವಾಗಿ ನಿನ್ನ ಬಳ್ಳಿಯಂತ
ಸೊಂಟವ ಬಿಗಿದಪ್ಪಿ ನನ್ನ ಹಿಯಾಳಿಸುತ್ತಿದೆ
ನಿನ್ನ ಕೈಗಳೆಂದಿಗೂ ನನ್ನ ಜಾಗ ಪಡೆಯವೆಂದು.
ಹಿಂತಿರುಗಿ ನೋಡೇ ನನ್ನೊಳವೆ ಕನ್ನಡಿಯಲ್ಲಿ
ಕುಂತ ನಿನ್ನಂದವ ಕಾಣುವ ಬಯಕೆಯಾಕಿದೆ
ಮನಸಿಗೆ ಬೆಡಗಿ ಬಲು ಚಂದದ ಹುಡುಗಿ.
ಬಂಗಾರದ ಮಿಂಚಿನ ರವಿಕೆ ಬದನೆ ಬಣ್ಣದ
ಸೀರೆ ಕೈಗಳಿಗೆ ಸೊಗಸೇರಿಸುವ ಕೈಬಲೇ ಕುಂಚ
ಕರಿಯದೇನೆ ಬಂದು ನಿಂತಂತಿದೆ ನನ್ನೆದುರು
ಮುದ್ದಾದ ಗಂಧದ ಗೊಂಬೆ ಇಂದು.
- ಚುಕ್ಕಿ
09 Dec 2017, 03:29 pm
ಮಾತಿನ ಸರಮಾಲೆ
ಎಷ್ಟು ಎಣಿಸಿದರು
ಎಣಿಸಲಾಗುತ್ತಿಲ್ಲ ......
ಮಾತುಗಳೆ ನಿಮ್ಮನ್ನ
ಮೌನವೆಂದ ದಾರದೋಳಗೆ
ಮಣಿಗಳಂತೆ ಪೋಣಿಸಿ ಬಿಡಲೆ
ಎಷ್ಟು ಮೌನವಿದ್ದರು ಸಾಲುತ್ತಿಲ್ಲ
ಈ ಮಾತುಗಳ ಮಣಿಗಳು
ಮುಗಿಯುತ್ತಿಲ್ಲ ಪೋಣಿಸಿ ಪೋಣಿಸಿ
ಮೌನ ಕಳಚದಿದ್ದರೆ ಸಾಕು
ಕಳಚಿದರೆ ಮಾತುಗಳು ಉದುರಿ
ಹೋಡೆದು ಹೋದೀತು
ಮತ್ತೆ ನಾ ಹೇಗೆ ಪೋಣಿಸಲೆ
ನಿಮ್ಮನ್ನ ಮೌನದ ದಾರದೋಳಗೆ
ಹುಡುಕಿ ಹುಡುಕಿ ಅಲೆಯ
ಬೇಕಾದಿತು ಆಮೇಲೇ ನಿಮ್ಮನ್ನ
ಮಾತು ಮುತ್ತಿನಂತೆ ಹೋಡೆದರೆ
ಮತ್ತೆ ಸೆರಿಸಲಾಗದು.....
- ರಾಗಸಿರಿ....
09 Dec 2017, 01:35 pm
ನೀನಿರಲು ನನ್ನ ಸನಿಹ
ಇನ್ಯಾರು ಬೇಡ ನಿನ್ನ ವಿನಹ
ಒಮ್ಮೆ ನನ್ನ ಸಮೀಪಿಸಿ ನೋಡು
ನನ್ನದೆಯ ತುಂಬಾ ನಿನ್ನದೆ ಹಾಡು.....
ನಿನ್ನದು ಕೊನೆಯಿರದ ಮೌನದ ಪ್ರಲಾಪ
ಎಂದಿಗೆ ತೋರುವೆ ನಿನ್ನ ಮಾತಿನ ಸಲ್ಲಾಪ
ನಿನ್ನ ಮಾತೆ ಆಗಲಿ ನನಗೆ ಕೊನೆಯಿರದ ಆಲಾಪ
ತಿರುಗಿ ನೋಡು ಒಮ್ಮೆ ನನ್ನ ಮನಸಿನ ವಿಲಾಪ
ನೀನೆನೆ ನನ್ನ ಎಂದಿಗೂ ಮುಗಿಯದ ಪ್ರೀತಿಯ ರೂಪ....
ನೀನೆದುರು ಬಂದರೆ ಏನೊ ಪುಳಕ
ಕನಸಿನೂರಲು ನಿನ್ನ ನೋಡಲು ನಿಲ್ಲದು ತವಕ
ನೀ ನನಗೆ ಕಾಣದಿದ್ದರೆ ನಾನಗುವೆ ಭಾವುಕ
ನಿನ್ನ ಜೊತೆಯಲಿ ಕಳೆಯುವ ಘಳಿಗೆಗಳೆ ನನಗೆ ರೋಚಕ
ಏತಕೆ ನಾನೆಂದರೆ ನಿನಗೆ ಇಂತ ಕುಹಕ
ನಿನ್ನ ನಗುವೆ ನನ್ನ ಉಸಿರಾಟಕೆ ವಾಹಕ
ನಿನ್ನ ಒಲವಿನ ಹಾಡಿಗೆ ಆಗಲೇನು ವಾದಕ
ಒಪ್ಪಿ ಬಿಡಿಸು ನೀನಿರದ ನೋವು ನೀಡುವ ಬಾದಕ
ಬಂದರೆ ನೀನು ನಾನೆ ಆ ಖುಷಿಗೆ ಧನಿಕ
ನಾನು ನಿನ್ನ ಪ್ರೀತಿ ಪೂಜಿಸೊ ಆರಾಧಕ
ಇನ್ನೂ ನೋಡಬೇಡ ಒಪ್ಪಿ ಬರಲು ಜಾತಕ
- ಶ್ರೀಕಾವ್ಯ
08 Dec 2017, 11:57 pm
ಎರಡೂ ಕಾಲಿಲ್ಲದ ಅವಳ ಅಂದವ
ಕಂಡು ಆ ಕಾಲ್ಗೆಜ್ಜೆಯು ನಿಟ್ಟುಸಿರುಬಿಟ್ಟಿತಂತೆ
ದೇವರ ಪಾದವ ಸೇರಲಾಗದ
ಬೇಲಿ ಹೂವಂತೆ ನಾನಾದೆನೆಂದು
ಹುಣ್ಣಿಮೆ ರಾತ್ರಿಯಲಿ ನನ್ನವಳ ಗೆಜ್ಜೆ ಸದ್ದು
ದೇವತೆ ಕೆಳಗಿಳಿದು ಭೂರಮೆಗೆ ಬಂದಂತೆ
ಆದರೆ ಅಮಾವಾಸ್ಯೆ ರಾತ್ರಿಯಲಿ ಅವಳು ನಡೆದರೆ
ಅದೇ ಘಲ್ ಘಲ್ ಮೋಹಿನಿಯು ಕಾಡಿದಂತೆ
ಗೆಜ್ಜೆ ಕಟ್ಟಿ ಅವಳು ಕುಣಿವಾಗ
ಗರಿ ಗೆದರಿ ಕುಣಿವ ನವಿಲು ಕೂಡ
ಕೊಂಚ ನಾಚಿ ದೂರ ನಿಂತು
ಮರೆಯಲಿ ನೋಡುತ ಅಸೂಯೆಯಲಿ
ಆ ಕುಣಿವ ಹೆಣ್ಣು ನಾನಾಗಬಾರದೆ ಎಂದಿತಂತೆ
- ಶ್ರೀಕಾವ್ಯ
08 Dec 2017, 11:56 pm
ಮನಸೊಳಗೆ ನೆನಪುಗಳ ಮಳಿಗೆ ತೆರೆದಿದೆ ಗೆಳತಿ
ಹೃದಯವು ಕತ್ತಲಲಿ ಅಳುವ ತಬ್ಬಿ ಕುಳಿತಿದೆ ಗೆಳತಿ
ನಮ್ಮಿಬ್ಬರ ಸಂಗಮ ಜಾಗ ಹುಡುಕಿ ಬಂದ ನನಗೆ
ನಿನ್ನ ಜಾರುವ ಮುಂಗುರುಳ ನೋಡುವ ಕಾತುರವಾಗಿದೆ ಗೆಳತಿ
ನಮ್ಮ ಕಣ್ಣ ಭಾಷೆಗೆ ಅಂದು ಮೌನವೇ ಮಾತಿನ ಪ್ರತಿರೂಪ
ನಿನ್ನ ಕಣ್ಣ ಸೆಳೆತವಿರದೆ ಇಂದು ಮಾತು ಮೌನವಾಗಿದೆ ಗೆಳತಿ
ನಿನ್ನ ಅಧರದ ಚೆಲುವು, ಮಡಿಲಿನ ಒಲವು ಇಲ್ಲವಾದ ಮೇಲೆ
ಕನಸುಗಳೆಲ್ಲ ಮಸಣದಲಿ ಮಣ್ಣ ಸೇರಿದಂತಾಗಿದೆ ಗೆಳತಿ
ನೀನೆ ನನ್ನ ಬದುಕಿಗೆ ಒಡತಿ, ನೀನಿರದೆ ನನಗೆ ಉಳಿವಾದರು ಎಲ್ಲಿ
ನೀನು ಈ ಉಸಿರ ಉಳಿಸಲಾದರು ಒಮ್ಮೆ ತಿರುಗಿ ಬರಲಾಗದೆ ಗೆಳತಿ
- ಶ್ರೀಕಾವ್ಯ
08 Dec 2017, 11:55 pm
ಎನ್ನ ಮನೆಯಂಗಳದರಳಿದ ಸುಮವಿಂದು
ಸೇರುತಿದೆ ಇನ್ನೊಂದು ಮನೆಯ ಪೂಜೆಗೆಂದು
ಬಾಡದಿರಲಿ ಆ ಹೂವಿನ ನಗುವು ಎಂದೆಂದೂ
ಬೇಡುವೆ ಆ ದೇವರ ಅನುದಿನ ಕಾಪಾಡೆಂದು
ಹೆತ್ತವರಿರದ ಮುದ್ದು ಹೆಣ್ಣು ಕೂಸಿಗೆ
ನನ್ನ ಮಡಿಲೇ ಬೆಚ್ಚನೆಯ ಹಾಸಿಗೆ
ಸಾಕಿದೆನವಳ ತೆಕ್ಕೆಲಿಟ್ಟು ತಾಯಿಯ ಹಾಗೆ
ಅವಳೇ ಬೆಳಕು ಈ ಅಣ್ಣನ ಕತ್ತಲ ಬಾಳಿಗೆ
ನನ್ನ ಕೈ ಹಿಡಿದು ನಡೆಯುತ್ತಿದ್ದ ಕೂಸಿಂದು
ಹೊರಟಿದೆ ಇನ್ನೊಂದು ಮನೆಯ ಬೆಳಗಲೆಂದು
ಕಣ್ಣೀರ ಕಡಲೆ ಸ್ವಂತವಾಗಿದೆ ನನಗಿಂದು
ಅವಳ ನಗುವಿರದ ಮನೆಯ ನೆನೆನೆನೆದು
ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆಂದು
ನೊಂದು ದೂರಾಗಬೇಡ ಕಂದ ನೀನೆಂದು
ನೀ ಕರೆದ ಮರ ಘಳಿಗೆ ನಾನಿರುವೆ ನಿನ್ನ ಮುಂದೆ
ನಿನ್ನ ಸುಖ ದುಃಖಗಳಿಗೆ ನಾನಾಗಿ ಬರುವೆ ತಂದೆ
- ಶ್ರೀಕಾವ್ಯ
08 Dec 2017, 11:53 pm