Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ತಲೆಗೂದಲ ಜಲಪಾತ !

ಮೂಕ ವಿಸ್ಮಿತನಾದೆನು ಚೆಲುವೆ
ನಿನ್ನ ತಲೆಗೂದಲ ಜಲಪಾತವನು ಕಂಡು,
ದುಮ್ಮಿಕ್ಕಿರುವುದಲ್ಲೇ ಹುಡುಗಿ
ಬಾನಿನಿಂದ ಕರಿ ಮೇಘಗಳ ಹಿಂಡು.

ಎಷ್ಟು ತಪವ ಮಾಡಿ ಪಡೆದೆಯೋ ನೀನು
ಸೊಂಪಾದ ಗುಂಗುರು ತಲೆಗೂದಲನ್ನು,
ದೃಷ್ಟಿ ತಾಗಿತೋ ಏನೋ ನಾನರಿಯೆ
ಹೊರಳಿಸಲಾರೆ ಇನ್ನೆಲ್ಲಿಗೂ ನನ್ನ ಕಣ್ಣು.

ಕಪ್ಪು ಕೂದಲ ರಾಶಿಯ ನಡುವೆ
ಒಪ್ಪವಾದ ಚಂದ್ರ ಮೊಗದ ಬೀಡೇ?
ಬೆಪ್ಪಾದೇನೋ ಒಲವೇ,
ಕಳೆದೋಯ್ತು ಮನಸು ಕೂದಲ ಕಾಡಿನ ನಡುವೆ..

ಬೆಟ್ಟದ ಮೇಲಿಂದ ಧುಮುಕಿ ಭೋರ್ಗರೆದು
ಗಿರಿ ಕಂದಕಗಳಲಿ ತೂರಿ ಅಬ್ಬರಿಸಿದಂತೆ
ಅನಾಮಿಕ ಬಿಳಿ ನೀರ ತೊರೆ,
ಬೈತಲೆಯ ಗುಡ್ಡದಿಂದಿಳಿದು ಗಾಳಿಗೆ..
ಹುಬ್ಬ ತೀಡಿ,
ಕಾಡಿಗೆ ಕಂಗಳ ಕೊಂಚ ಮರೆ ಮಾಡಿ ನಾಚಿಸಿ
ಹಾಲ್ಗೆನ್ನೆಯ ತುಸುವೇ ಮುತ್ತಿಟ್ಟು ರಂಗೇರಿಸಿ
ಕಿವಿಗಳಲಿ ಪ್ರೇಮದ ನುಡಿಗಳನು ಉಸುರಿ,
ಹೊಂಗನಸನು ಹೊಸೆದ ಹೊಸ ಪ್ರೇಮಿಯಂತೆ
ಕತ್ತಿನ ಸುತ್ತ ಒತ್ತೊತ್ತಾಗಿ ಸುತ್ತಿ ಬಳಸಿ,
ನವಿರಾಗಿ ತೀಡಿ ತೊನೆದು ಮತ್ತೆಲ್ಲೋ
ಮೌನವಾಗಿ ಇಳಿದು..

ಹದಿ ಹರೆಯದ ದೇಹದೈಸಿರಿ ಬೆಟ್ಟಗಳನು
ನಾಚಿಕೆಯಿಂದಲೋ ಏನೋ ಮರೆಯಾಗಿಸಿ,
ಮೌನ ಕಣಿವೆಗಳಲಿ ತೊನೆದಾಡಿಹುದು ಒಲವೇ..
ನಿನ್ನ ತಲೆಗೂದಲ ಕಪ್ಪು ಅಸ್ತವೆಸ್ತ ಬಣವೆ.

ಒಮ್ಮೆ ನನ್ನ ಕೈ ಬೆರಳುಗಳಿಗೆ
ಅವಕಾಶವನು ಕೊಡು,
ಆ ನಿನ್ನ ಸೊಂಪಾದ ಕೂದಲ ರಾಶಿಯ ನಡುವೆ
ಚಿಕ್ಕದೊಂದು ಪ್ರೀತಿಯ ಗೂಡನ್ನು
ಈಗಲೇ ಕಟ್ಟಿ ಬಿಡುವೆ.

- ಶ್ರೀಗೋ.

11 Dec 2017, 02:01 pm

ಹೇಳಿಬಿಡು ಮನವೆ !

ವೃತ್ತಿಯರಸಿ ಶ್ರಮವ ಪಡಲೆ
ಯುಕ್ತಿಯರಸಿ ಶ್ರಮವ ಪಡಲೆ
ತೃಪ್ತಿಯರಸಿ ಶ್ರಮವ ಪಡಲೆ
ಒಮ್ಮೆ ನೀನೆನಗೆ ಹೇಳಿಬಿಡು ಮನವೆ!

ಚಿಗರೆಯಂತೆ ಜಿಗಿಯಿತಿಹ ಸಮಯ
ಕೂರ್ಮನಂತೆ ಸಾಗುತಿಹ ಕಾಯಕ
ತೀರ ಸೇರಿಸಬೇಕು ಸಂಸಾರ ನೌಕೆಯ
ನೀನೆನಗೆ ಮಾರ್ಗ ತೋರು ಮನವೆ!

ದಟ್ಟ ಗುರಿಯ,ದಿಟ್ಟತನದಿ ತಟ್ಟಿ
ಹಮ್ಮೆಯಿಂದ ಹಿಗ್ಗಿ ಬಾಳುವಾಸೆ
ಹಮ್ಮು- ಬಿಮ್ಮಿನಾದಿಯಲ್ಲಿ ಕುಟ್ಟಿ
ತಾ ಸಾಗಲೆಂದು ಅಟ್ಟಿದೆ ನೀನೆನ್ನ ದೇವನೆ!
ಏಳೈ ತಾಯೆ ನಿನಗಾಗಿ ಮಿಡಿಯಿತಿದೆ ಈ ಮನವೆ!


ಶಾರಧ

- ಶಕುಂತಲಾ

11 Dec 2017, 01:29 pm

ಅಮ್ಮನ ಬೈಗುಳ.....

ಅಮ್ಮನ ಬೈಗುಳ
ಶುರುವಾಯಿತು ಸದ್ದಿಲ್ಲದೆ
ಆ ಸುರ್ಯ ಮುಗಿಲೇರಿದರು
ನಮ್ಮಮ್ಮನ ಸದ್ದಿಲ್ಲದೆ
ನಮಗೆ ಬೆಳಕಾಗದು
ಮುಜಾಂನೆಯ ಹೋಸಿಲಲ್ಲಿ
ಕಾಣದ ಸ್ವರ್ಗ ಲೋಕಕ್ಕೆ
ಕನಸಲ್ಲೀ ನಾ ಹೋಗಿರಲು
ಅಮ್ಮನ ಕೂಗು ಹಿಂದಕ್ಕೆ
ಕರೆತಂದಿತ್ತು......
ಅಪ್ಪನ ಮುದ್ದು ನನಗಿರಲಿ
ಅಮ್ಮನ ಬೈದರು ಮಲಗಲಿನ್ನು ಕಂದ ಎಂದು
ಕಂಬಳಿ ಹೋದ್ದಿಸಿ ತಲೆ ಸವರಿದರು ಮುದ್ದು ಅಪ್ಪ
ಅಮ್ಮಂಗೆ ಬಂತು ಕೋಪ
ನಿಮ್ಮಿಂದ ಅವಳ ಹಠ ಹೆಚ್ಚಾಯಿತೆಂದು
ತಮ್ಮನ ಬೈದೆಬ್ಬಿಸಿದರು
ಅಪ್ಪ ಹಾಲು ತರಲೆಂದು
ಅದ ಕೇಳಿದ ನನ್ನ ಕಿವಿಗಳು
ಕಂಬಳಿಯ ಮುಚ್ಚಿ ಕೊಂಡು
ಗುಸು ಗುಸು ನಕ್ಕಿದವಳು ಆಗ
ನಿದ್ದೆಯಿಂದೆದ್ದಿದರು ಬೆಳಾಗದರು
ಅಮ್ಮನ ಬೈಗುಳಕ್ಕೆ
ಇವಳಿಗಿನ್ನು ಬೆಳಗಾಗದು
ಎದ್ದು ಹೆಣ್ಣುಮಗಳು ಬಾಗಿಲಿಗೆ ನೀರಾಕು
ಬಾರೆ ಎಂದರು ಹೇಳದ ಮುದ್ದು ಮಗಳು
ಬೈದು ಬೈದು ಅಮ್ಮನೆ ಮಾಡುವಳು
ಅವನ್ನೆಲ್ಲ ಅಮ್ಮನ ಬೈಗುಳವಿಲ್ಲದೆ
ನಡೆಯುತಿರಲಿಲ್ಲ ದಿನ ಆ ದಿನಗಳು ಅಮ್ಮನ ಬೈಗುಳಕ್ಕಾದರು
ಮೆಲೇಳದ ಸೋಂಬೇರಿ ನನಾಗ
ಅಮ್ಮನ ಬೈಗುಳ ಮುದ್ದು ಮುದ್ದು ಬೈಗುಳ
ನೇನಪಾದವು ಇಗ......
ನನ್ನಮ್ಮನ ಬೈಗುಳ.....

- ರಾಗಸಿರಿ....

11 Dec 2017, 07:02 am

ಮೆಲಕು ಹಾಕುತ್ತಾ

ಮೆಲಕು ಹಾಕುತ್ತಾ ಕೂರಲೇ ಮರೆಯಾದ
ನನ್ನ ಸ್ವಭಾವದ ಚಿತ್ರಣವನ್ನು,
ಆ ಹಳೆಯ ನಿಸ್ವಾರ್ಥಿ ನಲ್ಮೆಯ ಬಾಲ್ಯವನ್ನು.

ಮೆಲಕು ಹಾಕುತ್ತಾ ಕೂರಲೇ ಬಯಸಿದ್ದು ಬೇಕೆನ್ನುವ ಆ ತುಂಟಾಟದ ದಿನಗಳನ್ನು,
ಸಣ್ಣ ಪುಟ್ಟ ಸಂತೋಷಕ್ಕೆ ಎಲ್ಲರಲ್ಲೂ ಹಂಚಿಕೊಳ್ಳುವ ಆಸೆಯನ್ನು ಮೆಲಕು
ಹಾಕುತ್ತಾ ಕೂರಲೇ.

ಮೆಲಕು ಹಾಕುತ್ತಾ ಕೂರಲೇ ಐಸ್ಕ್ರಿಮಿನ
ಬಂಡಿಯ ಕಂಡು ಸ್ನೇಹಿತರೆಲ್ಲರನ್ನು
ಕರೆದುಕೊಂಡು ಅಜ್ಜನ ಬಳಿ ಕಾಸಿಗಾಗಿ
ಕೈಚಾಚಿದ ದಿನವನ್ನು ನೆನೆಯಲೇ.

ಮೆಲಕು ಹಾಕುತ್ತಾ ಕೂರಲೇ ಊರಿನವರೆಲ್ಲರು
ನಮ್ಮ ಬಂಧುಗಳೆಂದು ಬೇವು-ಬೆಲ್ಲ
ಹಂಚಿ,
ಕದ್ದ ಮಾವಿನ ಕಾಯಿ ಬಿತ್ತ ಕಡ್ಲೆಕಾಯಿ
ಮರವತ್ತಿ ಕಿತ್ತ ಪೇರಳೆಗಳ ಸವಿಯತ್ತ ಮರೆಯಲಿ ನನ್ನ ಜೀವನದಲ್ಲಿ.

ಮೆಲಕು ಹಾಕುತ್ತಾ ಕುರಲೇ ಕಪ್ಪೆ ಮರಿಗಳ ಜೊತೆಗಿನ ಆಟ ಕೈಗೆ ಸಿಗದ ಮೀನುಗಳಿಗಾಗಿ ಪರದಾಟ,
ಸೂರ್ಯನ ಶಾಖಕ್ಕಾಗಿ ಬೆಳ್ಳಂಬೆಳಗ್ಗೆ ಕಾದು
ಕುಂತ ಕಣ್ಣು,
ಕೇಳದೇನೆ ಲಭ್ಯವಿದ್ದ ಹಾಲು ಮೊಸರು ,ಗಿಣ್ಣು.

- ಚುಕ್ಕಿ

11 Dec 2017, 12:33 am

ಹೆಜ್ಜೆಯ ಗುರುತಲ್ಲಿ

ಮಾತು ಮನಸುಗಳ ನಡುವೆ
ನೂರಾರು ಸಂಬಂಧಗಳ ತಿರುವು
ಬಂಧನಗಳ ಬೆಸುಗೆಯೆ ಒಳನೋಟ
ನಮ್ಮೊಳಗಿನ ಸತ್ಯಾ ನಿಜವಾದ ಬದುಕು

- nageshwarh

10 Dec 2017, 10:38 pm

ಕರೆಯನು

ನೀ ಬರುವವರೆಗೂ ನನ್ನ ಬಾಳಲ್ಲಿ
ಹಾಯಾಗಿ ನಾನಿದ್ದೆ
ನನ್ನ ಜೊತೆಯಲ್ಲಿ,
ಹಿತವಾದ ನಿನ್ನ ಕರೆಯೂ
ಕೇಳದಾಯಿತು ನನ್ನ ಕಿವಿಯಲ್ಲಿ.

ಬಂಡೆಯನ್ನು ಕೊರೆದು ಶಿಲೆಯಂತಾಗಿಸಿ, ನಿನ್ನೆದೆಯ ಗುಡಿಯಲ್ಲಿ ಇಡುವೆನೆಂದು ನಂಬಿಸಿ ಬಿಡಿವಿಲ್ಲದಾಯಿತೆಂದು ನನ್ನ ಬಿಟ್ಟು ಹೊದೆಯೇನು ?

ನಿನ್ನ ನಯ ನಾಜೂಕಿನ ಮಾತು ಮರೆತಿಲ್ಲ
ನನ್ನ ನೆನಪಿನ್ನು,
ಹುಡುಕಿ ಬರುವುದು ಮನಸಿನ ನೆಲೆಯನು,
ಕೇಳಲಿಲ್ಲವೇನು ನೀನು ನನ್ನ ಮನಸ ಕರೆಯನು.

- ಚುಕ್ಕಿ

10 Dec 2017, 10:05 pm

ಚಿನ್ನಾರಿ

ಚಿನ್ನಾರಿ ಬರುವ ದಾರಿಗೆ ನಿನ್ನಸಿರು
ತಂಗಾಳಿಯಾಗಿ ಕರೆತರಲಿ.
ಮುತ್ತುಗಳ ರಾಶಿ ಸುರಿಯದಿದ್ದರು
ಮನನೊಂದ ಕಣ್ಣೀರಿಗೆ ತೋರುಬೆರಳು
ಆಸರೆಯಾಗಿ ಜೊತೆಗಿರಲಿ.

ವಯ್ಯಾರಿ ಕಳುಹಿದ ಕರೆಯೋಲೆಯಲ್ಲಿನ
ದುಂಡಾದ ಬರಹದಲ್ಲಿನ ಹೆಸರು ನಿನ್ನದಾಗಲಿ,
ಕಿರು ಪರಿಚಯ ಇಲ್ಲಿದೆನೆ ಕಡೆವರೆಗೂ ಹಿಂಬಾಲಿಸುವ ನೆರಳು ನಿನ್ನದಾಗಲಿ.

- ಚುಕ್ಕಿ

10 Dec 2017, 08:43 pm

ಕೊರೆವ ಚಳಿಯಲ್ಲಿ

ಬೆಳಗಿನ ಮಂಜಲ್ಲಿ ಮೈ ಕೊರೆವ ಚಳಿಯಲ್ಲಿ ನಿಂತಿರುವೆ ಏತಕೆ ಮಾತಿಲ್ಲದೆ ಬೆಡಗಿ ಜೀನ್ಸು ಪ್ಯಾಂಟಿನ ಹುಡುಗಿ.

ಮಲ್ಲಿಗೆ ಘಮವಿಲ್ಲ ಸುಗಂಧ ದ್ರವ್ಯ
ವಾಸನೆ ಬಿಡುತ್ತಿಲ್ಲ ,
ಮಾತಿನ ಗಲಭೆ ಇಲ್ಲ ಗುಂಗುರಾದ ಮುಂಗುರುಳು ಕೈಗೆ ಕೈ ಉಜ್ಜಿ ಕೆನ್ನೆಗಂಟುತಿರುವ ಬೆರಳು.

ನೈಲ್ ಪಾಲಿಶ್ ಹಿಂದೆ ಅಡಗಿರುವ ಪಾದಗಳು ಅದನ್ನು ಮುಚ್ಚಿಡುತ್ತಿರುವ ಚಪ್ಪಲಿಗಳು,
ಕಾಜಲ್ ಹಚ್ಚಿದ ಕಣ್ಣು ನೋಡಿ ನಾನಾದೆ ನಿನ್ನ ಹೊಗಳಿ ಬರೆಯುವ ಪೆನ್ನು.

ಕೆನ್ನೆಕುಳಿ ಮುದ್ದಾಗಿ ನಾಚುತ್ತಿದೆ
ಮರಳಿ ಮರಳಿ ಈ ತಂಪಾದ ಗಾಳಿಲಿ,
ಮೊಣಕಾಲು ದಾಟದ ಟಾಪು
ಬಿಳಿಯಾದ ಹೂಗಳಿಂದ ಆಕರ್ಷಿಸುವ ನಿನ್ನ ಶೇಪು.

ಜನರಿಲ್ಲದ ಖಾಲಿ ಖಾಲಿ ರಸ್ತೆ,
ಟಿ ಅಂಗಡಿಯಲ್ಲಿ ರೆಡಿಯಾಗಿದೆ
ಬಿಸಿ ಬಿಸಿ ಕಾಫಿ ಬನ್ನು ನಿನ್ನ ಮೇಲಿಂದ
ಚದರುತ್ತಿಲ್ಲ ನನ್ನ ಕಣ್ಣು,
ಬೇಕೆನೆ ನಿನಗ ತಿನ್ನಲು ಬಗೆ ಬಗೆಯ ಹಣ್ಣು.

- ಚುಕ್ಕಿ

10 Dec 2017, 07:20 pm

ಏನೋ ಒಂಥರ

ಪ್ರತಿ ಬಾರಿಯು ನಿನ್ನನು ನೋಡಿದ ಕ್ಷಣ
ಮನದಲ್ಲಿ ತಿಳಿಯದ ರೋಮಾಂಚನ
ತಂಪಾದ ಗಾಳಿಯು ಬೀಸಿದಾಗಲೆಲ್ಲಾ
ಬರಿ ನಿನ್ನದೆ ಸಿಹಿ ನೆನಪುಗಳು

ದಿನಾಗಲೂ ಸೂರ್ಯ ಮುಳುಗುವಾಗ
ಮನದಲ್ಲಿ ಏನೋ ತಿಳಿಯದ ಭಯ
ಮುಂಜಾನೆ ಸೂರ್ಯ ಹುಟ್ಟಿದಾಗ
ಮೊದಲು ನೀನೆ ಕಾಣಬೇಕೆಂಬ ತವಕ

ಬೇರೆಯವರ ಜೊತೆ ನೀ ಮಾತಾಡಿದಾಗ
ಕೋಪಗೊಂಡಿತ್ತು ನನ್ನ ಮನವಾಗ
ಮನವನ್ನು ಕೇಳಿದೆ ಅದು ಏನೆಂದು?
ಹೇಳಿತ್ತು ಅದು ಪ್ರೀತಿ ಯ ಮೊದಲ ಹಂತವೆಂದು

ರೋಮಿಯೋ ಜೂಲಿಯೆಟ್‌ರಂತೆ
ಇರಬಾರದು ನಮ್ಮ ಪ್ರೀತಿ
ಅವರಿಬ್ಬರಿಗೂ ಇರಲಿಲ್ಲ
ತಾಳ್ಮೆಯೆಂಬ ನೀತಿ

ನಮ್ಮಿಬ್ಬರ ಪ್ರೀತಿ ಕೇಳುವುದಕ್ಕೆ ಹಾಗೂ
ನೋಡಲು ಇರಬೇಕು ಹೊಸದಾಗಿ
ನಮ್ಮ ಪ್ರೀತಿಯು ಮಾಡಬೇಕು
ಆಕಾಶ ಭೂಮಿ ಹತ್ತಿರವಾಗಿ!!!!!

- manu

10 Dec 2017, 07:12 pm

ಅವಳ ಭೇಟಿಗಾಗಿ

ಬಾನಲಿ ಹಾರುವ ಬಣ್ಣದ ಹಕ್ಕಿಗಳೇ.......
ಕಾಯುತಿರುವಳು ನನ್ನವಳು ಈ ಘಳಿಗೆ!....
ರೆಕ್ಕೆ ಪಡೆಯುವ ಆಸೆ ನಿಮ್ಮಂತೆ ನನಗೆ................
ಹೋಗಲು ಹಾರಿಕೊಂಡು ನನ್ನವಳ ಬಳಿಗೆ!.....
ಅವಳ ಹೂ ನಗೆಗೆ......
ಸಾಗುತಿರುವೆ ನಾ ಮುಗಿಲ ಕಡೆಗೆ.
ನಮ್ಮ ಈ ಮೊದಲ ಭೇಟಿಗೆ.......
ಬರಲಿವೆ ಹಕ್ಕಿಗಳು ಮೂಕ ಸಾಕ್ಷಿಗೆ.
ಕಾಡಿಗೆಯೂ ನಾ ನಿನ್ನ ಕಣ್ಣ ರೆಪ್ಪೆಗೆ.....
ಕಂಬನಿ ಸುರಿಸಿ ತಳ್ಳದಿರು ದೂರದ ಅಂಟಿಗೆ.
ಮನದ ಪುಟದಿ ಬರೆದ ಈ ಕವಿತೆಗೆ......
ನಾಚಿ ತಲೆ ಬಾಗಿದೆ ಎಲ್ಲಾ ಹೂ ,ಬಗೆ.
ಈ ನಿನ್ನ ಮರು ಭೇಟಿಗೆ........
ಕಾದು ಕುಳಿತಿರುವೆ ಮನೆಯ ಬಾಗಿಲಿಗೆ.

- ಪೃಥ್ವಿ( ಪಿ.ಕೆ)

10 Dec 2017, 06:35 pm