ಧಮ೯ದ ಹೆಸರಲ್ಲಿ..ಮಾಡುವಿರಿ ಹೋರಾಟ..
ಧಮ೯ವೇ ನಲುಗುತ್ತೀದೆ ನೋಡಿ ನಿಮ್ಮ
ಪುಂಡಾಟ..|
ರಕ್ತಸಿಕ್ತಹೋಕಳಿಯಲಿ,ಧಮ೯ದ
ನರಳಾಟ..
ಇನ್ನೊ ನಿಂತಿಲ್ಲವೇ..ರಕ್ಕಸ ರೂಪದ
ಮಾನವನ ಹಾರಾಟ..|
ತನ್ನನ್ನ ತಾ ಅರಿಯದೇ,
ನೀ ಧಮ೯ವನೇಗೆ ಅಥೈ೯ಸುವೆ..|
ಧಮೋ೯ ರಕ್ಷತಿ ರಕ್ಷಿತಃ ಎಂಬ ಮಾತಿನ
ಮಮ೯ವ,ತಿಳಿಯದೇ,
ಧಮ೯ವನೇಗೆ ಅಳೆಯುವೇ..|
ಮಾನವ ಧಮ೯ ತಿಳಿಯದೇ,
ನೀ ಬೀದಿಗೆ ಬಿದ್ದು,ಈಗೇತಕೆ
ಬೋಬ್ಬೆ ಹೋಡೆಯುವೆ..
ಯಾವುದು ಧಮ೯,
ಮಾನವ ನೀ ಮಾಡುವುದೇಲ್ಲಾ ಅಧಮ೯..|
ನೀ ಮಾಡುವ ಪಾಪದ ಕಮ೯..
ನೀ ನರಳುವಂತೆ ಮಾಡಿ, ಸುಲಿಯುವುದು ಕೋನೆಗೆ ನಿನ್ನ..ಮೈ ಚಮ೯..|
ಈಗ ಹೇಳು ಮಾನವ ನಿನಗೆ ಬೇಕೇ..
ಜಾತಿಗೋಂದು ಧಮ೯,
ಅನುಭವಿಸು,ಅದು ನಿನ್ನ ಕಮ೯|
ಎದೆಯೆಂಬ ಗೂಡ್ನಾಗೆ
ಪುಟ್ಟ ಗುಬ್ಬಿ ಮರಿ ಯೊಂದು
ಹಾರಿ ಬಂದು ಕುಂತಿದೆಯಲ್ಲೋ.....
ತನ್ನವರನ್ನೆಲ್ಲ ತೊರೆದು
ಬಂದನಗಳ ಕಳೆದು ನನ್ನರಸಿ
ಬಂದಿದೆಯಲ್ಲೋ......
ಲೋಕವೆ ಅರಿಯದ ಮುಗ್ದ ಮರಿ
ನಾ ಕೈಬಿಟ್ಟರೆ ಗಿಡುಗನ ಪಾಲಾದಿತೇನು...
ನಾ ಹೇಗೆ ಜೋಪಾನ ಮಾಡಲೋ ಅದನ್ನ
ಕಣ್ಣಿನ ರೆಪ್ಪೆಯಂತೆ ಬಚ್ಚಿಡಲೆ
ಅದನ್ನ ನನ್ನೋಳಗಿನ ನೋವಿನೊನಗೆ
ಕಣ್ಣಿರಾಗಿ ಹೊರ ಬಂದಿತೆನೋ....
ನನ್ನ ಪ್ರೀತಿಯಂಬ ಹೋವಿನರಮನೆ ಯಲ್ಲಿ
ಇಟ್ಟು ದಿನ ಕಾವಲು ಕಾಯಲೆನೂ...
ನನ್ನ ಹುಚ್ಚು ಪ್ರೀತಿಗೆ ಹುಚ್ಚಿಯಂತಾದಿತೇನು....
ಮನದರಮನೆಯಲ್ಲಿ ದೇವತೆಯಂತೆ ಇಟ್ಟು
ಪುಜಿಸಲೇನು...
ದೇವತೆ ಯಂತೆ ಮೌನ ವಾದಿತೇನು....
ನನ್ನೆದೆಯ ಒಳಗೆ ಇಟ್ಟು ಆರಾದಿಸಲೇನು
ತಾನೋಂದು ಬಂದಿಯಂತೆ ಮಂಕಾಗಿ ಹೋದಿತೆನು....
ನನ್ನುಸಿರಿನ ಜೊತೆ ಬೆರೆಸಿ ಕೊಳ್ಳಲೇನು
ನನ್ನುಸಿರಿನಾ ಜೊತೆ ನಿಂತು ಹೊದಿತೇನೂ...
ಈ ಜೀವದ ಜೊತೆ ಬಚ್ಚಿಟ್ಟು ಕೋಳ್ಳಲೇನು
ಈ ಜೀವದ ಜೀವವೆ ಬಿಟ್ಟಿತೇನು......
ಹೇಗೆ ಜೋಪಾನ ಮಾಡಲಿ ಆ ಗುಬ್ಬಿಮರಿಯನ್ನ
ನನ್ನರಸಿ ಬಂದಿದೆಯಲ್ಲ........ನನ್ನಂನ್ನೆ ನಂಬಿ....
ಎಲ್ಲಾ ಕ್ಷಣನು ನಿನ್ನ ಜೊತೆ ಇರೊಕೆ ಆಗಲ್ಲ ಆದ್ರೆ ಪ್ರತಿ ಕ್ಷಣ ನಿನ್ನ ನೆನಪು ಇಲ್ಲದೆ ಬದುಕೊಕೆ ಆಗೊಲ್ಲಾ
ನೀನು ಒಂಟಿಯಾಗಿ ನಡಕೊಂಡು ಹೊಗುವಾಗಾ ನಿನ್ ಜೊತೆ ನಾನಿಲ್ಲಾ ಅನಕೊಬೆಡಾ
ಸುಮ್ಮನೆ ತಿರುಗಿ ನೊಡು ನಿನ್ನ ನೆರಳು ನಾನಾಗಿರತೀನಿ....
ಜೀವನವೊಂದು ನಿತ್ಯ ಗಿಜಿಗುಡುವ ಸಂತೆ
ಕೊಳ್ಳುವವಾರ್ಯಾರಿಲ್ಲ ಇಲ್ಲಿ ಅಂತೆ ಕಂತೆ
ಏತಕೆ ನೋವಲಿ ಸುಮ್ಮನೆ ಕುಂತು ಮಾಡುವೆ ಚಿಂತೆ
ನಿನ್ನ ಬದುಕು ನಿನಗಷ್ಟೆ ಯಾರು ಬರಲಾರರು ಜೊತೆ
ಎಲ್ಲವ ಮರೆತು ನಕ್ಕುನಗಿಸಿ ಬಿಡು ಏರುವ ಮುನ್ನ ಚಿತೆ
ನನ್ನ ಕಿರುಬೆರಳ ಹಿಡಿದು ನಡೆದಿದ್ದ ಪುಟ್ಟ ಕೈ
ಮತ್ತೊಂದು ಕಿರುಬೆರಳ ಹುಡುಕಿ ಹೊರಟಿದೆ
ಒಂಟಿಯಾಗುತುದೆ ಬೆರಳೆಂದು ನೋವಲಿ ಕೊರಗಿ ಅಳಲೆ
ನಾ ಸಾಯುವ ಮುನ್ನವೇ ಜಂಟಿಯಾಯಿತೆಂದು ಹರಸಲೆ
ಪುಟ್ಟಹಕ್ಕಿಗೆ ಅಮ್ಮ ತಿನ್ನಿಸುತ್ತಿದ್ದಳು ಮಾಡುತ್ತ ಮುದ್ದು
ಎಲ್ಲಿಂದ ಹಾರಿ ಬಂದೀತೋ ಆ ಯಮರೂಪ ಹದ್ದು
ಕೆಳಗೆ ಬಿದ್ದೇ ಹೋದಳು ಅಮ್ಮ ರಕ್ತದಲಿ ದೇಹವ ಅದ್ದು
ಹಾರುವ ಮುನ್ನವೇ ಹಕ್ಕಿಗೆ ಅನಾಥ ನೋವಿನ ಗುದ್ದು