Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

""ಅಮ್ಮ""

"ಮುಂಜಾನೆಯ ಮಂಜಲಿ
ಮುತ್ತಿನಂತೆ ಹೋಳೆಯುತಾ,
"ಮುತೈದೆ ತಿಲಕ ಧರಿಸಿ
ಮುತ್ತಿನಂತೆ ಕಂಗೊಳಿಸುತಾ,
"ಕಾವೇರಿ ನದಿಯಂತೆ ಬಳುಕುತ
ಮನೆ ತುಂಬಾ ಹರಿದಾಡುತಾ,
"ಎದ್ದೆಳು ಕಂದ ಎದ್ದೇಳು ಎಂದು
ನನ್ನ ಪ್ರೀತಿಯಿಂದ ಸಾಕಿದ ,
ನನ್ನ "ಅಮ್ಮ" ನಿನಗೆ
ನನ್ನ ಕೋಟಿ ನಮಃನಗಳು.

ರಾಜು ಗುಡಿ ಹಾಸನ

- ರಾಜು ಹಾಸನ

14 Dec 2017, 07:44 pm

ಪ್ರೀತಿ (ಚುಟುಕು)

ಪ್ರೀತಿ

ಹೊಳೆಯುವ ಚಂದಿರ
ಮರೆಯಾದರು,
ನಿನ್ನ ಪ್ರೀತಿ ನನ್ನಲ್ಲಿ
ಮರೆಯಾಗಲಿಲ್ಲ
ಅವನ ಬೆಳಕಿನಲ್ಲಿ
ನಾವು ನಡೆದ ದಾರಿಯ
ಹೆಜ್ಜೆ ಗುರುತುಗಳು ಹಾಗೆ
ನನ್ನ ಮನದಲ್ಲಿವೆ ಗೆಳತಿ||

✍ಅನಿಲ್ ಕುಲಕರ್ಣಿ
ಕೆರೊರ (ತಾ: ಬದಾಮಿ)

- ಅನಿಲ್ ಕುಲಕರ್ಣಿ

14 Dec 2017, 04:42 pm

ಓ ಗೆಳೆಯ ........

ಓ ಗೆಳೆಯ
ಯಾಕೆ ನೀ ನನ್ನ ಬಳಿ ಬಂದೆ
ಯಾಕೆ ನೀ ಅಷ್ಟೊಂದು ಪ್ರೀತಿ ಕೋಟ್ಟೆ
ಯಾಕೆ ನಾ ನಿನ್ನ ಮಗುವಿನಂತೆ ನಂಬಿದೆ
ಯಾಕೆ ನಾ ಸಾಯುವಷ್ಟು ಪ್ರೀತಿ ಮಾಡಿದೆ
ಪ್ರೀತಿಯನ್ನು ದ್ವೇಷಿಸುವ ಮನಸ್ಸು ನನ್ನದು
ಆ ಕಲ್ಲು ಮನಸ್ಸನು ಹೇಗೆ ಕರಗಿಸಿದೆ ನೀನು
ನಾನು ಪ್ರೀತಿ ಮಾಡುವ ಹಾಗೆ ಹೇಗೆ ಮಾಡಿದೆ ನೀನು
ತಿಳಿಯುತ್ತಿಲ್ಲ ನನಗೆ .....
ನನ್ನ ದಾರಿ ಸರಿನ ತಪ್ಪ ಹೇಳು ಗೆಳೆಯ

ಪ್ರತಿ ಕ್ಷಣ ನೀ ನನ್ನ ಬಳಿಯೇ ಇರ ಬೇಕು ಎಂಬ ಆಸೆ
ನೀ ನನ್ನ ಬಿಟ್ಟು ಬೇರೆ ಯಾರ ಜೊತೆನು ಮಾತಡಬಾರದು ಎಂಬ ಹಠ
ನಾ ಹೇಳಿದ ಹಾಗೆ ಇರಬೇಕು ಎಂದ ಸ್ವಾರ್ಥ
ಏಕೆ ನಾ ಹೀಗೆ ಮಾಡುತಿರುವೆ ಹೇಳು ಗೆಳೆಯ .....
ನಿನ್ನ ಒಂದು ಕ್ಷಣ ಬಿಟ್ಟಿ ಇರಲಾರದಷ್ಟು ಪ್ರೀತಿ ತುಂಬಿಕೊಂಡಿರುವೆ ಗೆಳೆಯ ನಿನಗಾಗಿ ....
ಒಂದು ದಿನದಲ್ಲಿ ಪ್ರತಿ ಕ್ಷಣ ಕೂಡ ಜಗಳ ಕೋಪ ಸಿಟ್ಟು
ಇವೆ ಇರುತ್ತವೆ ಯಾಕೆ ಗೆಳೆಯ ......

ನಾ ಯಾಕೆ ನಿನ್ನ ಪ್ರೀತಿ ಮಾಡಿದೆ
ನಾ ಯಾಕೆ ನಿನ್ನ ನಂಬಿದೆ
ನಾ ಯಾಕೆ ನಿನ್ನ ಬಿಟ್ಟಿ ಇರಲಾರದಷ್ಟು ಹಚ್ಚಿಕೊಂಡಿರುವೆ
ಹೇಳು ಗೆಳೆಯ.....

ಓ ಗೆಳೆಯ ಸಿಗುವೆಯ ನೀನು
ಬರುವೆಯ ನನ್ನ ಬಳಿ
ಇಡಿಯುವೆಯ ನನ್ನ ಕೆೃ
ಕಟ್ಟುವೆಯ ಮೂರು ಗಂಟು
ನಿನ್ನ ದಾರಿಯ ಕಾಯುತ್ತ ಕುಳಿತಿರುವಳು ನಿನ್ನ
ಮುದ್ದು .......

- Shilpa

14 Dec 2017, 07:36 am

ಕೊನೆಗೊಂಡ ಕಿರು ಬಯಕೆ

ಕೊನೆಗೊಂಡ ಕಿರು ಬಯಕೆ ಮನದಲ್ಲಿ
ಉದಯಿಸಿ ಮಾತಲ್ಲಿ ಮುಗಿದು ಮೌನದ ಮಸಣದಲ್ಲಿ ಶಾಶ್ವತವಾಗಿ ನಿದ್ರಿಸುತ್ತಿದೆ.

ಎಚ್ಚೆತ್ತುಕೊಂಡ ಅತಿರಥ ಮಹಾರತರು
ನಮ್ಮ ಪುರುಷ ಪ್ರಪಂಚದ ಪ್ರಬುದ್ದರು,
ಊರ ಮೇಲೆ ಬಿದ್ದು ನಾರುಹಂದಿಗಳಂತೆ
ತಲೆ ಬಾಗದೆ ರಸ್ತೆಗೆ ಅಡ್ಡಲಾಗಿ ಕುಡಿದು ಬಿದ್ದಿರುವರು ಮೈಯ ಮೇಲೆ ಪ್ರಜ್ಞೆ ಇಲ್ಲದಂತೆ.

ನವ ಮಾಸಗಳೊತ್ತ ತಾಯಿ ಸೆರಗು ಹಿಡಿದು ಬದುಕಿದವರು ಇವರು ನಿದ್ದೆಯಲ್ಲಿ ಬೆಚ್ಚಿಬಿದ್ದು ಅಮ್ಮ ಭಯವೆಂದು,
ಆ ತಾಯಿಯೇ ಬೆಚ್ಚಿ ಬಿಳುವಳಿಂದು ಹತ್ತರ ಮೇಲೆ ಹೊರಗೆ ಹೋದರೆ ಯಾವ ಕುಡುಕನ ಕಣ್ಣು ಬಿಳುವುದೋ ಎಂದು.

ನಿನ್ನಲ್ಲಿನ ಅಹಂಕಾರವಿಂದು ತಾರತಮ್ಯವ ತಂದು ಒಡ್ಡಿತೆ ಹೆಣ್ಣೆಂದು ಗಂಡೆಂದು ಇಂದು,
ಮೊದಲ ಉಸಿರು ಮರೆಯದಿರು ನೀನೊಂದು ಹೆಣ್ಣೆಂದು ತದ ನಂತರ ಗಂಡಾಗಿ ಬೆಳೆದು ನಿಂತಿರಿವೆಯೆಂದು ಇಂದು.

ಸ್ವಾತಂತ್ರ್ಯ ಪುರುಷರ ಜನ್ಮಹಕ್ಕೂ ಅಲ್ಲ! ಗೃಹಬಂದನ ಹೆಣ್ಣಿನ ಜೀವನದ ಅಂಗವೂ ಅಲ್ಲ!
ಸಮಾನತ್ವ ಕೊಡಲಿಂದು ನೀನೊಂದು ದೇವರೆಂದು ನೀರಗಬೇಡ,
ನೀನು ಪಡೆದ ಈ ಜನ್ಮ ಜೀವನ ಒಂದು
ತಾಯಿ ಕೊಟ್ಟ ಭಿಕ್ಷೆ ನಿನಗೆ,
ಅವಳ ಕರುಳ ಕಿತ್ತುಕೊಂಡು ರಕ್ತದ ಮಡಿಲಲ್ಲಿ ಬಿದ್ದು ಎದ್ದು.

- ಚುಕ್ಕಿ

13 Dec 2017, 11:09 pm

*ಅಮವಾಸ್ಯೆ ರಾತ್ರಿಯಲಿ*

ಅಮವಾಸ್ಯೆ ರಾತ್ರಿಯಲಿ
ಚಂದಿರನ ಹುಡುಕುವ ಆಸೆ..
ಕೋಟಿ ತಾರೆಗಳನ್ನ ದಿನವೂ
ದೋಚುವ ಆಸೆ..
ಮುದ್ದು ಬೆನ್ನೇರಿ
ಹತ್ತೂರ ಸುತ್ತುವ ಆಸೆ..
ಗುಬ್ಬಿಗೂಡಿನಲಿ
ಜೀವನ ಕಳೆಯುವ ಆಸೆ..
ಕನಸಿನಲಿ ಅವನ
ಪ್ರತಿರೂಪ ಕಾಣುವಾಸೆ..

- ಮಳೆಯಲ್ಲಿ ಜೋತೆಯಲ್ಲಿ

13 Dec 2017, 10:03 pm

ಪುಟ್ಟ ಮಲ್ಲಿಯ ನಿದ್ರೆ

ಅಪರೂಪಕ್ಕೆ ಜಾರಿರುವಳು ಸುಖ ನಿದ್ರೆಗೆ
ನನ್ನ ಪುಟ್ಟ ಮಲ್ಲಿ,
ನೋವನುಂಡ ಮುಗ್ದ ಮೊಗದಲ್ಲಿ
ಸುಂದರ ಮಂದಹಾಸವ ಚೆಲ್ಲಿ.

ಮಂತ್ರಮುಗ್ದನಾಗಿ ನಾನು
ಸವಿಯುತ್ತ ಕುಳಿತಿರುವೆನವಳ
ಬೆಳುದಿಂಗಳ ಹೋಲುವ ಸ್ನಿಗ್ದ ರೂಪವ..
ಹುಣ್ಣಿಮೆ ಚಂದ್ರನಂತೆ ಹೊಳೆವ ಮೊಗ
ಹಾಲ್ಗೆನೆಯ ಹಾಕಿ ತೊಳೆದ ಹೊಳಪ ಕೆನ್ನೆಯ.
ಶುಭ್ರ ಬಿಳಿಯ ಹಾಳೆಯಂತೆ ವಿನೀತ ಹಣೆ
ಹುಬ್ಬು ಬಾಗಿ ನಿಂತ ಭತ್ತದ ತೆನೆ.

ರೇಶಿಮೆಯ ರೆಪ್ಪೆ ಮುಚ್ಚಿರುವ ಕಂಗಳೊಳಗೆ
ಕಾಣುತಿರುವಳೇನೋ ಮನೋಹರ ಕನಸ,
ಚಂದ್ರ ಶಿಲೆಯ ತೇದು ತೇದು ಸುಂದರಗೊಳಿಸಿದ
ನವಿರು ನುಣುಪ ನಾಸಿಕ.

ಜೇನಿನಲ್ಲಿ ಅದ್ದಿ ಇಟ್ಟ
ಚೆಂಗುಲಾಬಿ ಎಸಳಿನಂತೆ,
ಮೃದು ಮಧುರ ತುಟಿಯ ದಳವು,
ಅದುರುತಿರುವ ಸಡಿಲ ಸುಮವು.
ಆಲೆಮನೆಯ ಉಂಡೆ ಬೆಲ್ಲ,
ಅಂದಗಾತಿಯ ತುಂಡು ಗಲ್ಲ.
ಬೇರೆ ಏನೂ ಹೊಗಳಲಾರೆ,
ಎದ್ದ ಮೇಲೆ ಹೊಡೆವಳಲ್ಲ...

- ಶ್ರೀಗೋ.

13 Dec 2017, 12:14 pm

ಬದುಕು

ನೋವು-ನಲಿವಿನ ಅರ್ಥ ತಿಳಿಯದೆ
ಕಾರಣವಿಲ್ಲದೆ ಗಟ್ಟಿಯಾಗಿ ಕೂಗುತ್ತ
ನಮ್ಮನ್ನು ನಗಿಸುವನು ಒಮ್ಮೊಮ್ಮೆ.
ದಾರಿಯಲ್ಲಿ ಬಿದ್ದ ಕಸವನೆಲ್ಲ
ಜೋಳಿಗೆಯಲಿ ಹಾಕುತ್ತ
ಹುಚ್ಚನಂತೆ ಕಾಣಿಸುವವನು ಮತ್ತೊಮ್ಮೆ
ಏಕಾಂಗಿಯಾಗಿ ಮಾತನಾಡುತ್ತ
ಹಾದಿ-ಬೀದಿಯಲಿ ಮಲಾಗುತ್ತ
ಅನಾಥನಾಗಿ ಸಾಯುವನು ಕೊನೆಗೊಮ್ಮೆ .

ಪ್ರಿಯಾಂಕ✍

- ಪ್ರಿಯಾಂಕ

12 Dec 2017, 10:27 pm

ಗೆಳತಿ

ನನ್ನ ಹೃದಯದ ಪುಟ್ಟ ಗೂಡಲ್ಲಿ
ಸಾಗರದಷ್ಟು ಪ್ರೀತಿ ತುಂಬಿಸಿ
ಜೋಪಾನ ಮಾಡಿ ಕಾಯುವೆನು ಗೆಳತಿ,
ಜಿಂಕೆಯಂತೆ ಜಿಗಿಯುತ್ತ ನವಿಲಿನಂತೆ ನರ್ತಿಸುತ್ತ
ನನ್ನ ಹೃದಯದ ರಾಣಿಯಾಗಿ
ಸ್ವಚಂದವಾಗಿ ನಲಿಯುತ್ತಿರು ಗೆಳತಿ.

- ಪ್ರಿಯಾಂಕ

12 Dec 2017, 10:24 pm

ಗೌಡ ಗೌಡತಿ.....

ಯಾಕಿಂಗೆ ನೋಡಿಯೋ ಗೌಡ
ನನೇಜಮಾನ .......
ಬಿಸಿರೋಟ್ಟಿ ತಟ್ಟಿ
ಶ್ಯಾವಿಗಿನ ಒತ್ತಿ
ಒಬ್ಬಟ್ಟು ತಟ್ಟಿವ್ನಿ
ನಿಂಗತ ಸಿಹಿ ಉಟ ಮಾಡಿ
ಬಡಿಸಿವನಿ ಬಂದು
ಉಣಬಾರಲ ಗೌಡ
ಹಸಿರ ಸೀರೆ ಉಟ್ಟಿವನಿ
ನೀ ಕೊಟ್ಟ ಕಾಲ್ಗೆಜ್ಜೆ ಹಾಕಿವ್ನಿ
ಕೈ ತುಂಬ ಕೆಂಪು ಬಳೆಯ ತೊಟ್ಟಿವ್ನಿ
ಕಣ್ಣಲ್ಲೆ ನೋಡಿ ಮೊಡಿಯ
ಮಾಡ್ ಬ್ಯಾಡವೊ ನನ್ನ
ನಿ ನೋಡಿ ನಗಬ್ಯಾಡವೊ ನನ್ನ
ನಾ ಹೆಂಗ ನೋಡಲಿ ತಲೆ ಎತ್ತಿ ನಿನ್ನ
ಕರಗಿ ಹೊದೇನೊ ರನ್ನ
ನೀ ಹಿಂಗ ನೋಡಿದರೆ
ನಾ ಹೆಂಗ ಬಡಿಸಲೊ ಸಹಿ ಉಟ
ರನ್ನ ಗೌಡತಿ ಕರಗೊಗೊ ಮುನ್ನ
ನೀ ಹಂಗ ನೋಡಬ್ಯಾಡವೂ ಗೌಡ.....

- ರಾಗಸಿರಿ....

12 Dec 2017, 07:19 pm

ಹುಡುಕಾಟ

ನೇಸರನು ಪಡುವಣದಿ
ಚಿತ್ತಾರ ಬಿಡಿಸುತ ಲೋಕವ
ನೂಕಿದನು ಕತ್ತಲೆಯ ಕಾರಾಗಾರಕೆ
ಮಹಾತೃಣರು ಹಂತಕರ
ಹುಡುಕುತ ಶಶಿಯಿಂದ ರವಿ
ಬೆಳೆಗೆರೆಯ ನೂಕಿದರು ಪರಪ್ಪನಗ್ರಹಾರಕೆ

ದಾರಿ ತೋರಬೇಕಾದವರೆ,
ದಾರಿ ತಪ್ಪಿದಾಗ ಬೆಳಕಿಂಡಿ ಗೋಚರಿಪುದೆಲ್ಲಿ?
ಕೈಪಿಡಿದು ನಡೆಸುವವರೆ,
ಅಂಧರಾದಾಗ ಅಂಧರ ಬಾಳಿಗೆ ಪಥವದೆಲ್ಲಿ?
ಪ್ರಶ್ನಿಸುವವರೆ ಎಮಗೆ
ಪ್ರಶ್ನೆಯಾದಾಗ ಉತ್ತರವದೆಲ್ಲಿ ಹುಡುಕಲಿ?

ಹುಡುಕಲು ಗೌರಿ ಹಂತಕರ ಜಾಡು
ತೋರಿತೆ ರವಿ ಸಾಮ್ರಾಜ್ಯದ ಗೂಡು
ಕೋಗಿಲೆಯು ಮಾಮರವ ಹುಡಕುತ
ಬರುವಂತೆ ,ಎಲ್ಲಿಂದೆಲ್ಲಿಗೆ ಸಂಬಂಧ?



ಶಾರಧ

- ಶಕುಂತಲಾ

12 Dec 2017, 01:49 pm