Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ದಾರಿ

1.ನಾ ಹೋಗೋ ದಾರಿಯಲ್ಲಿ
ಎದುರಾಗಿ ನೀನೇಕೆ ಬಂದೆ
ದಿನವಿಡೀ ನಿನ್ನದೇ ನೆನಪಿನಲ್ಲಿ
ಕನಸುಗಳ ಜೊತೆಯಲ್ಲಿ ನಾ ತೇಲಿಹೋದೆ!



2.ನೀ ಕಟ್ಟಿದ ಪ್ರೀತಿಯ ಅರಮನೆಯಲ್ಲಿ
ಕಾಲ ಕಳೆಯುತ್ತಿರುವೆನು ಏಕಾಂಗಿಯಾಗಿ
ನೀ ಬರುವ ದಾರಿಯಲ್ಲಿ
ಕಾದು ಕುಳಿತಿರುವೆನು ನಿನಗಾಗಿ!



3.ಸರಿಯಾದ ದಾರಿ ತೋರಿಸುವ ಗುರುಗಳಿಗೆ
ನಾವು ಸಲ್ಲಿಸಬೇಕು ನಮನ
ಕೆಟ್ಟ ಚಟ ತುಂಬಿದ ದುಷ್ಟ ಜನರಿಂದ
ದೇಶ ರಕ್ಷಿಸುವಲ್ಲಿರಬೇಕು ನಮ್ಮ ಗಮನ!

- ಪ್ರಿಯಾಂಕ

17 Dec 2017, 04:05 pm

ಕಾಯುತಿರುವ ಪ್ರೇಮಿ..

ನನ್ನೊಲವ ಗುಡಿಯ ದೇವತೆ
ಮರೆಯಾಗಿ ನೀ ಎಲ್ಲಿ ಕುಳಿತೆ
ನಗುವೂ ಸುಳಿಯದಾಗಿದೆ ಸನಿಹ
ಕಣ್ಣುಗಳ ನೋಟ ಬೆಸೆಯದ ವಿನಹ

ನಿನ್ನ ದಾರಿ ಕಾಯುತಿರುವ ಪ್ರೇಮಿ ನಾನು
ಕಾಣದಾಗಿರುವೆ ನನಗೆ ಏಕೆ ನೀನು
ಬಾಡಿತೇನು ಪ್ರೀತಿ, ನಿನಗಾಗಿ ತಂದ ಹೂವಿನಂತೆ
ನೋವಲಿ ತೆರೆದು ಕುಳಿತಿರುವೆ ನೆನಪುಗಳ ಸಂತೆ

ನನ್ನ ನೋಡಿ ಮರುಗಿ, ಮುಳುಗುತಿರುವ ನೇಸರ
ಅವನಿಗೂ ಆಯಿತೇನೋ ಚಡಪಡಿಕೆ ಕಂಡು ಬೇಸರ
ಸಾವಿನ ಮನೆಗೆ ಬುನಾದಿ, ನೀ ಕಾಣದ ಈ ಹಾದಿ
ನೀನಿರದೆ ಉಸಿರುಳಿಯದು ಕಣೇ ಈ ಜೀವದಿ

ಹೇ ಗೆಳತಿ ನೀ‌ ಕ್ಷೇಮವಿರುವೆ ತಾನೆ
ತಾಳಲಾಗುತ್ತಿಲ್ಲ ನೀನಿರದ ನೋವಿನ ಬೇನೆ
ಮನಸಲಿ ನೂರಾರು ಬೇಡದ ಆಲೋಚನೆ
ಎಲ್ಲವ ಸುಳ್ಳಾಗಿಸಿ ಉಳಿಸಬೇಕು ನನ್ನ ಆ ದೇವನೆ

- ಶ್ರೀಕಾವ್ಯ

17 Dec 2017, 01:28 pm

""ಮುತ್ತು"''

"ಪ್ರೀತಿ ತಿಳಿಯಾದ
ಹೃದಯದಲ್ಲಿ
ಚಿಗುರೋಡೆಯಿತು
ಪ್ರೀತಿಯ ಮುತ್ತು

"ಆ ಪ್ರೀತಿಯ ಮುತ್ತು
ಶಶಿಯಾ ಇರುಳಲಿ ನಲಿದು
ಸೂರ್ಯನ ತಾಪಕ್ಕೆ ನಲುಗಿ
ಭೂ ತಾಯಿಯ ಮಡಿಲು ಸೇರಿತು
ಪ್ರೀತಿಯ ಮುತ್ತು.

***ರಾಜು ಗುಡಿ*** ಹಾಸನ

- ರಾಜು ಹಾಸನ

17 Dec 2017, 10:56 am

ಇನಿಯನ ನೆನಪು

ನನ್ನ ಇನಿಯನ ನೆನೆದು
ಮನವೋಮ್ಮೆ ತವಕದಲಿ
ಪುಳಕಗೊಂಡಿಹುದಿಲ್ಲಿ
ಕನಸುಗಳು ಹುಚ್ಚೆದ್ದು
ಕುಣಿಯುತಿದೆ ಎದೆಯಲ್ಲಿ
ಒಲವಿನಾಸರೆ ಬಯಸಿ ಮನಸ್ಸಲ್ಲಿ..

ರೆಕ್ಕೆ ಪುಕ್ಕಬಂದಿಹ ಹಕ್ಕಿಯಂತೆ
ಮೊದಲ ಹನಿ ಭುವಿಯ ಸ್ಪಷಿ೯ಸಿದಂತೆ
ಎತ್ತ ನೋಡಿದರತ್ತ ಸಂಭ್ರಮದಿ
ಜಿಗಿಯುವ ಜಿಂಕೆಯಂತೆ
ಲಗಾಮು ಇಲ್ಲದ ಕುದುರೆಯಂತೆ
ಮನ ಓಡುವುದು ,ಇನಿಯನ
ನೆನೆಪಿನ ಜೋತೆ

ಹೇಗೆ ಬಚ್ಚಿಟ್ಟುಕೊಳ್ಳುವುದು ಭಾವನೆಗಳ
ಮನದಾಳದ ತುಡಿತಗಳ
ಗೆಳತಿ,ತಡೆಯಲಾದಿತೆ ಕನಸ್ಸುಗಳ
ಕಾಡುವ ಇನಿಯನ ನೆನೆಪುಗಳ
ಪ್ರೀತಿಯ ಬಯಕೆಗಳ
ಹುಚ್ಚು ಮನಸ್ಸಿನ ಕನವರಿಕೆಗಳ

- Bhagya Girish

16 Dec 2017, 11:58 pm

ಚಲಿಕರು ಅಣ್ಣಾ ನಾವೇ ಚಾಲಕರು

ಚಾಲಕರು ಅಣ್ಣ ನಾವ್ ಚಾಲಕರು
ಚಲಿಕರು ಅಣ್ಣಾ ನಾವೇ ಚಾಲಕರು

ದೇಶಕಾಯೋ ಯೋಧರಂತೆ
ಅನ್ನ ನೀಡೋ ರೈತರಂತೆ
ಉಸಿರ ಉಳಿಸೊ ವೈಧ್ಯರಂತೆ
ಊರಕಾಯೋ ರಕ್ಷಕರಂತಣ್ಣ
ಚಲಿಕರು ಅಣ್ಣಾ ನಾವೇ ಚಾಲಕರು

ನಿದ್ರಿಸದ ಮಂಪರು ಕಣ್ಣಲ್ಲಿ
ಬೆಟ್ಟಗುಡ್ಡಗಳ ಕಾರ್ಯಾಚರಣೆಯ ನಡುವಲ್ಲಿ
ಶಸ್ತ್ರಾಸ್ತ್ರಗಳು ಕುಣಿಯುತಿಹ ಯುದ್ದದ ಮಡುವಲ್ಲಿ
ಮದ್ದು,ಗುಂಡುಗಳ ಸಾಗಿಸುವವರ್ಯಾರಣ್ಣಾ
ಚಲಿಕರು ಅಣ್ಣಾ ನಾವೇ ಚಾಲಕರು

ಹಿಂಧೂ,ಮುಸ್ಲೀಂ,ಕ್ರೈಸ್ತ ಯಾರದರೇನು
ಮಂದಿರ,ಮಸೀಧಿ,ಚರ್ಚಾದರೇನು
ಜಾತಿ,ಧರ್ಮದ ಹಂಗು ನಮಗಿಲ್ಲ
ಕರೆದೊಡನೆ ಬರುವೆವು, ನೆನೆದೊಡೆಗೆ ನಡೆವೆವು
ಚಲಿಕರು ಅಣ್ಣಾ ನಾವೇ ಚಾಲಕರು

ಹಬ್ಬದ ಹೊಸತನ ಸಖ ಸಂತೋಷದ ಸಡಗರ
ಅನ್ನ ನೀಡಿ ಹಾರೈಸುವವರ ಜೊತೆ
ಸಂಬಂಧದ ಬಂಧಗಳು,ನೋವು ನಲಿವುಗಳು
ದೇಶದ ನವ ಪೀಳಿಗೆಯಾ ಜೊತೆ
ದೇಶದ ಏಳಿಗೆಯಲೀ, ಕಾಯಕವೇ ಕೈಲಾಸ ನಮ ಧರ್ಮ
ಚಾಲಕರು ಅಣ್ಣಾ ನಾವೇ ಚಲಿಕರು

ಚಳಿಯಾಗಲಿ,ಮಳೆಯಾಗಲೀ,ಬಿಸಿಲೇ ಸುಡಲಿ
ಹಿಗ್ಗದೆ ಹಿಂಜರಿಯದೇ ಕುಗ್ಗದೇ ಕೂರದೇ
ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಸರಪಳಿ ಕೊಂಡಿಗಳು
ನೋವಿನಲ್ಲೂ ನಲಿಸುತ, ನಲಿಯುತ ಸಾಗುವೆವು
ನಮಗಿಲ್ಲಿ ಬೆಲೆಯಿಲ್ಲ ಅದರ ಚಿಂತೆ ನಮಗಿಲ್ಲ

ಚಾಲಕರು ಅಣ್ಣ ನಾವ್ ಚಾಲಕರು
ಚಲಿಕರು ಅಣ್ಣ ನಾವೇ ಚಾಲಕರೂ.....ಚಾಲಕರೂ

- ಡಿ.ಸಿ.ಎನ್@100%

16 Dec 2017, 10:44 pm

ನೋವಿನಲ್ಲು ನಲಿವು ಕಾಣುವಳವ್ವ!

ಅಣುವಾಗಿ ಗರ್ಭವ ಸೇರಿದ
ಕೂಸಿನ ಚೊಚ್ಚಲ ಬಯಕೆ
ತಾಯಿ-ತನದ ಆನಂದದ
ಹೊನಲು ಹೊಮ್ಮುವುದು
ಲತೆಯ ಅಂಕುರವು ವಿಕಸಿಸುವಂತೆ!

ನವಮಾಸ ಕಳೆವಳು ತಾಯಿ
ನವರಸಗಳ ಸಮಾಗಮದಲಿ
ಮಕ್ಕೋಟಿ ದೇವರ ನೆನೆವಳು
ಮುಕ್ಕಣ್ಣನಂತ ಮಗನಿಗಾಗಿ
ಉದರ ಬಾರವ ನೀಗುವಳು ಮೇಣದ ಬೆಳಕಲಿ!

ಅಡೆದವರ ಅಡಿಗಡಿಗೆ ನೆನೆಯುತ
ಅಡೆದವಳ ಮಡಿಲ ನೆನೆಯುತ
ಒಡಹುಟ್ಟಿದವರ ಬಳಿಗೆ ಕರೆಯುತ
ಒಡನಾಡಿಗಳ ಸಲ್ಲಾಪ ಮೆಲ್ಲುತ
ಪ್ರಸವತೆಗಾಗಿ ಪರಿತಪಿಸುತ ದೂಡುವಳು ದಿನಗಳ!

ಹರಿವ ತೊರೆ,ಬೀಸೊ ಗಾಳಿ
ಬೆಳಗೊ ಇನ,ತೊಳೆವ ಇಬ್ಬನಿಯಂತೆ
ತನ್ನೆಲ್ಲ ನೋವ ನುಂಗಿ ನೀಡುವಳು
ತನ್ನ ಕರುಳ ಕುಡಿಗೆ ಜೀವ,
ಜಗವ ಬೆಳಗುವ ತ್ಯಾಗಮಯಿ ತಾಯಿ!



ಶಾರಧ

- ಶಕುಂತಲಾ

15 Dec 2017, 09:34 pm

ಪ್ರಿಯೆ

ನಾ ಪ್ರೀತಿಸಿದ್ದು ಒಬ್ಬಳನು
ಅವಳು ಪ್ರೀತಿಸಿದ್ದು ಇನ್ನೊಬ್ಬನನು
ಹುಂ.... ನನಗೆ ಅವಳಿಲ್ಲ
ಅವಳಿಗೇನೋ ಅವನಿಲ್ಲ
ಆದರೂ......
ನನ್ನೆದೆಯಲಿ ಅವಳದೇ ಚಿತ್ತಾರ
ಅವಳೆದೆಯಲಿ ಯಾರದೋ.........?

ಕಣ್ಣ ಸೆಳಸಿ
ಅಂದವ ಚಿಮ್ಮಿಸುವನು
ಚಂದಿರನು.....
ಅವನ ನೋಡಿ ನಲಿಯಬೇಕಷ್ಟೇ
ಹಿಡಿಯಲಾಗದು, ಧರೆಗಿಳಿಸಲೂ ಆಗದೂ
ಹಾಗೆಯೇ ನೀ ನನಗೆ ನಲ್ಲೇ
ಆ ಚಂದ್ರನಂತೆ........‌‌‌‌! ಡಿ.ಸಿ

- ಡಿ.ಸಿ.ಎನ್@100%

15 Dec 2017, 04:20 pm

ಕಲ್ಪನೆ (ಚುಟುಕು)

ತರಾವರಿ ಸುಂದರ ಕಲ್ಪನೆಗಳ
ಹೂವುಗಳನ್ನೆಲ್ಲ ಕೊಯ್ದು ಕೊಯ್ದು
ಬುಟ್ಟಿ‌ ತುಂಬಾ ತುಂಬಿಸಿದ್ದಾಗಿದೆ
ಬಾಡುವ ಮುನ್ನ ಮಾಲೆ ಮಾಡಿ
ಇರಿಸುವುದೊಂದೆ ಬಾಕಿ ಮುಡಿಗೆ


ಕಲ್ಪನೆಯ ಕೂಸು ಒಡಲಲ್ಲಿ
ಚಿಗುರಿತ್ತೆಂದರೆ ಶುರು
ಸಂಭ್ರಮ ಚಡಪಡಿಕೆ ಭಯ

ಜೊತೆಗೆ ಬೆಸೆದ‌ ಕೈಗಳು
ಜಾರುವ ಮುಂಗುರುಳು
ಕಣ್ಣ ನೋಟದ ಬೆಳದಿಂಗಳು
ನಿನ್ನೊಟ್ಟಿಗೆ ಸಪ್ತಪದಿ ತುಳಿದಂತೆ ಹೆಜ್ಜೆಗಳು
ಆ ಕಲ್ಪನೆಯ ನೆನಪಿಗೆ ತುಂಬಿ ನಿಂತಿದೆ ಕಂಗಳು

- ಶ್ರೀಕಾವ್ಯ

15 Dec 2017, 01:01 pm

""ಕನಸುಗಾರ""

"ನಾ ಬರೆದೆ
ಪ್ರೀತಿ ಎಂಬ ಕವನವ
ಜೀವನ ಎಂಬ ಮಳೆಯಲ್ಲಿ,

ಆದರೆ

"ಮಳೆಯ ನೀರಿನಲ್ಲಿ
ಕೊಚ್ಚಿ ಹೋಯಿತ್ತು
ಪ್ರೀತಿಯ ಕವನ.

***ರಾಜು ಗುಡಿ***ಹಾಸನ

- ರಾಜು ಹಾಸನ

15 Dec 2017, 10:58 am

"ತವರು ಮನೆ"

"ಮಲ್ಲಿಗೆಯ ಪರಿಮಳ ಚೆಲ್ಲಿದಳು
ನನ್ನ ಮುದ್ದು ತಂಗಿ
ಈ ಅಣ್ಣನ ಮನದಲ್ಲಿ,

"ಕಾತೊರಿಯುತ್ತಿದ್ದ ತವರು ಮನೆಗೆ ಬಂದಳು
ಸೂರ್ಯ ನ ಹೊಂಗೀರಣದಂತೆ,
"ತಂದಳು ಊಡುಗೂರೆಯಾಗಿ
ಪುಟ್ಟ ಮುದ್ದಾದ ಕಂದ
ದ್ರುವ ನಕ್ಷತ್ರ ವ,

"ಸಿಂಗರಗೊಂಡಿದೆ
ಪುಟ್ಟ ಮುದ್ದಾದ
ನನ್ನ ಕಂದನ ತುಂಟತನದಿ,

"ಹರುಷಗೊಂಡಿದೆ
ಪುಟ್ಟ ಮುದ್ದಾದ ಕಂದನ
ಪುಟಾಣಿ ಮಾತುಗಳಿಂದ
ಈ ಅಣ್ಣನ ತವರು ಮನೆ

***ರಾಜು ಗುಡಿ ***ಹಾಸನ

- ರಾಜು ಹಾಸನ

14 Dec 2017, 08:51 pm