ದೂರ ಇರುವುದೇ
ಹಣೆಬರಹ ವಾದರೆ
ನಮಿಬ್ಬರ ಭೇಟಿ ಯಾಕೆ?
ಭೇಟಿಯ ನೆನೆದು ಜೀವನಪೂರ್ತಿ
ಕಣ್ಣೀರು ಹಾಕೋದು ಯಾಕೆ? ?
ನೀನೆಂಬ ಕಲ್ಪನೆ
ಕಾಡುತ್ತಿದೆ ನನ್ನನೆ
ಮಾಡಲೆಗೆ ವರ್ಣನೆ
ಕನಸಲ್ಲಿ ಕಾಣುವೆ ನಿನ್ನನೆ
ಆ ನಿನ್ನಯ ಮುಗುಳುನಗೆ
ತಲೆ ಕೆಡಿಸಿದೆ ನನ್ನನೇ
ನಿನ್ನಯ ಪ್ರೀತಿಯ ನೋಟಕ್ಕೆ
ಕಳೆದು ಹೋದೆ ನನ್ನಲೆ....!!
ನಿಮ್ಮಲ್ಲರ ಪ್ರೀತಿಗೆ
ನಾನೆಂದಿಗೂ ಚಿರಋಣಿ...
ನಿಮ್ಮ ಮಾತುಗಳೆಲ್ಲಾ,
ಸಿಹಿ ಜೇನಿನಾ ಹನಿ...
ರಕ್ತ ಬಂಧವಿಲ್ಲದಿದ್ದರೂ,
ನೀವೆಲ್ಲರೂ ನನ್ನ ಬಂಧುಗಳು...
ಶುಭ ಕೋರಿದ ಪ್ರತಿಯೊಬ್ಬರಿಗೂ,
ತುಂಬು ಹೃದಯದ ಧನ್ಯವಾದಗಳು
ಮೂಕನಾದೆನು ಕೇಳಿ,
ನಿಮ್ಮ ಪ್ರೀತಿಯ ಮಾತುಗಳ...
ಬರದಿರುವೆ ನಾನು
ಈ ಕವಿತೆಯ ಸಾಲಗಳು...
ಎಮ್.ಎಸ್.ಭೋವಿ...✍️
ನಿನ್ನ ನಾ ಏನೆಂದು ವರ್ಣಿಸಲಿ
ಮಲಗುವಾಸೆ ನನಗೆ ನಿನ್ನ ಮಡಿಲಲ್ಲಿ
ನಿನ್ನ ಒಂದೊಂದು ಮಾತು ಬಲು ಚೆನ್ನ
ನೀ ಮೌನವಾಗಿದ್ದರೆ ಅಪ್ಪಟ ಚಿನ್ನ
ನಿನಗೆಂದಿಗೂ ಕಾವಲು ಆಕಾಶ
ನಿನ್ನೊಳಗೆ ನಾ ಇರಲು ಕೊಡು ನನಗೊಂದು ಅವಕಾಶ
ನೀನು ಎಷ್ಟೊಂದು ಸುಂದರವಾಗಿರುವೆ
ನಿನ್ನ ವರ್ಣಿಸಿ ನಾ ಕವಿಯಗಿರುವೆ