Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ತಿರುಗಿ ನೋಡಲಾರದವ..

ಚೆಂದದ ಪ್ರೀತಿಯರಮನೆಯ ಎದೆಯೊಳಗೆ ಕಟ್ಟಿದವ ನೀನು
ಹರೆಯದ ಕನಸುಗಳ ಮೂಟೆಗಳ ಹೊತ್ತು ತಂದವ ನೀನು‌

ಇರುಳ ಚಂದಮನ ಬೆಳಕು ಸಾಟಿಯಲ್ಲ ನಿನ್ನ ಪ್ರೀತಿಗೆಂದು
ಈ ಕತ್ತಲೊಳಗೆ ನನ್ನ ಒಂಟಿ ಮಾಡಿ ಕಾಣದಾದವ ನೀನು

ಮುಂಗುರುಳ ಮುತ್ತಿಗೆ ರಂಗೇರಿದ ಕೆನ್ನೆಯ‌ ಕಂಡು ಆ ರಂಗಿಗೊಡೆಯ
ನಾನೆಂದು ಮುಂಗುರುಳ ಗದರಿಸಿ ಸರಿಸಿ ಮರೆಯಾದವ ನೀನು

ಕೈ ಕೈ ಬೆಸೆದು, ಬಾಳ ಕನಸುಗಳ ಜೊತೆಗೆ ಹೆಗ್ಗಿಲ್ಲದೆ ಹೆಣೆದು
ನೆನಪುಗಳ ಉಡುಗೊರೆ ಕೊಟ್ಟು ಅನಾಮಿಕನಾದವ ನೀನು

ನಗುವಾಗ ಕಾಣುವ ಕಣ್ಬೆಳಕಿಗಾಗಿ ಕಾಯುವ ಪ್ರೇಮಿ ಎಂದು
ಕಣ್ಣೀರ‌ ಕಡಲೊಳಗೆ ಈಜಲಾಗದ ನನ್ನ ನೂಕಿ ಹೋದವ ನೀನು

ಹೃದಯದ ಕದವ ಮಾತಿನಲೆ ತಟ್ಟಿ ತೆರೆದು ಒಳ ಸೇರಿ
ಮಾತಿನಲೆ ಕೊಂದು, ನಗುತಲೇ ಹೊರ ನಡೆದವ ನೀನು

ಒಬ್ಬಂಟಿಯಾಗಿ ನಾ ಕಣ್ಣ ಹನಿಗಳ ಪ್ರೇಮಿಸಿ, ರಮಿಸಿ
ಮುದ್ದಾಡಿದರೂ ಈ ಕಾವ್ಯಳ ತಿರುಗಿ ನೋಡದಾಗಿರುವವ ನೀನು

- ಶ್ರೀಕಾವ್ಯ

19 Dec 2017, 01:32 pm

ಬಾಲ್ಯ ವಿವಾಹ

ಪಾಠಿ ಪುಸ್ತಕ ಹಿಡಿದ ಬೆರಳಿನ್ನು
ಬರೆಯುವುದು ಕಲಿತಿಲ್ಲ ಸರಿಯಾಗಿ,
ಬಂಧನದ ಬಲಿ ಏತಕೆ ಬಡವಿಯಾದ
ಕಾರಣಕ್ಕೆ ಮದುವೆ ಎಂಬ
ಜೀವಿತಾವಧಿಯ ಸೆರೆಮನೆಯಲ್ಲಿ?

ಮೊಡವೆಯು ಮೂಡಿಲ್ಲ
ಮುಖದ ಅಂದವ ಹೆಚ್ಚಿಸಲಿಂದು
ಮೂಗುತಿ ಏಕೆ ಸಂಪ್ರದಾಯದ ಹೆಸರಿನಲ್ಲಿ ,
ಬೆಳ್ಳಿ ಕಾಲುಂಗುರದ ಬೆಲೆಯೂ ತಿಳಿದಿಲ್ಲ
ಕಟ್ಟಿ ಹಾಕುವಿರಿ ಏತಕೆ ಸವಿ ಬಾಲ್ಯವ
ಸಾಯಿಸಿ ಇಂದು?

ಗುರುತು ತಿಳಿಯದ ಸರಿ ಸುಮಾರು
ವಯಸ್ಕನ ಪರಿಚಯ ಏತಕೆ ನನಗೆ
ಅವನ ಕಟುವಾದ ಕಣ್ಣ ಕೆಳಗೆ
ಹೂವಿನಂತೆ ಬಾಡಿ ಹೋಗಲಿಂದು,
ವಿದ್ಯೆ ನನ್ನ ಹಕ್ಕು ಎಂದು ತಿಳಿಯದ ತಂದೆ - ತಾಯಿ
ಅವರು ಹೆತ್ತ ಕಾರಣಕ್ಕೆ ಕಟ್ಟಿ ಹಾಕಿ ಕಳಿಸುವರು
ಮೂರು ಗಂಟು ನೇಣಿನಂತೆ
ಊರ ಮಂದಿ ಎದುರಿಗೆ ಮೀಸೆ ತಿರುವಿ ಗರ್ವದಿ.

ಪರಿಚಯವೇ ಇಲ್ಲದ ಪಾಮರರಿಂದು
ತನ್ನ ಮನೆ ಆಳಿನಂತೆ ನೋಡುವರು,
ಅತ್ತೆ-ಮಾವಂದಿರರು ನಾದಿನಿ-ಮೈದುನರು,
ಹೆಜ್ಜೆ ಸದ್ದು ಆದಿತೆಂದರೆ ಬೈಯುವಳು ಅತ್ತೆವ್ವ
ಎಂತ ಬುದ್ದಿ ಕಲಿಸಿರುವಳು ನಿನ್ನ ಹೆತ್ತವಳೆಂದು,
ಎಲ್ಲಿ ಕಲಿಸಿದವಳು ಬುದ್ದಿ
ನನಗೆ ತಿಳುವಳಿಕೆ ಬರುವಷ್ಟರಲ್ಲೇ
ಹಣದ ಆಸೆ ತೋರಿ ಅವರಿಗೆ ಕೊಂಡುಕೊಂಡರಲ್ಲ
ನನ್ನ ವಯಸ್ಸಾದ ನಿಮ್ಮ ಮಗನಿಗೆ ವಧುವಾಗಿ.

ಇರುವಳೊಬ್ಬಳು ಸೊಸೆ
ಹಡೆದಿರುವಳು ಒಂದು ವಂಶೋದ್ದಾರಕನನ್ನ
ಎಂದು ಹೇಳಿಕೊಳ್ಳಲು ಹೆಮ್ಮೆಯಿಂದ
ತಮ್ಮ ಮಗನು ಗಂಡು ಎಂದು,
ನನ್ನ ದೇಹ ರಚನೆ ಪೂರ್ತಿಯಾಗುವ ಅಷ್ಟರಲ್ಲಿ
ದಾರುಣವಾಗಿ ನನ್ನ ಮೇಲೆ ಹಲ್ಲೆ ನಡೆಸಿ
ಚಿತ್ರವದೆಯ ಕೊಡುವಿರಾ?

ಆಡಿದರೆ ಮಾತೊಂದು
ಮತ್ತೆಲ್ಲಿ ತಮ್ಮ ಪಾಪ ಹೊರ ಬೀಳುವುದೆಂದು,
ನನ್ನ ಬಾಯಿಗೆ ಬೀಗ ಹಾಕಿ
ಹೆಣ್ಣು ಹೆಚ್ಚು ಮಾತನಾಡಬಾರದೆಂದು
ಸೆರಗಿನಿಂದ ನನ್ನ ಸರಪಳಿಯಲ್ಲಿ ಕಟ್ಟಿ ಹಾಕುವಿರಾ?

ಬಾಲ್ಯ ನನ್ನ ಸುಂದರ ಕನಸು,
ಹೆಣ್ಣೆಂದು ಮುರಿಯದಿರಿ ಅದನ್ನ
ಬಾಲ್ಯ ವಿವಾಹದ ಕಾರಣಕ್ಕೆ ಇಂದು,
ಅಂಗಲಾಚಿ ಬೇಡುತಿರುವೆ ನಿಮ್ಮನ್ನ
ನಾನಿಂದು ಅರಿತು ನಡೆಯಿರಿ
ನಾನು ಒಂದು ಉಸಿರಾಡುವ ಜೀವವೆಂದು......

- ಚುಕ್ಕಿ

19 Dec 2017, 12:06 pm

""ತಾಯಿ ಭೂ ತಾಯಿ""

"ಜೀವಕ್ಕೆ ಉಸಿರು
ದೇಹಕ್ಕೆ ಪ್ರಾಣ
ಸೋತಾಗ ಸಮಾಧಾನ
ಗೆದ್ದಾಗ ಪ್ರೋತ್ಸಾಹ
ದಣಿದಾಗ ಮೃಷ್ಟಾನ
ಸತ್ತಾಗ ಕಂಬನಿಯ
ಮಹಾಪುರ ಸುರಿಸುವ
ನನ್ನ "ತಾಯಿ" ನಿನಗೆ
ನಾ ಚಿರಋಣಿ.

"ಜೀವಕ್ಕೆ ಜೀವ
ಪ್ರಾಣಕ್ಕೆ ಪ್ರಾಣ
ಪ್ರೀತಿಗೆ ಪ್ರೀತಿನಾ
ಇದ್ದಾಗ
ಯಾರಿಗೂ ಕೊಡದಿದ್ದರೂ
ಸತ್ತಾಗ
ಭೂ ತಾಯಿಗೆ ಕೊಟ್ಟೆ ಕೊಡ್ತೀವಿ
ಏಕೆಂದರೆ
ಈ ಜೀವ,ದೇಹ,ಪ್ರೀತಿ,ಮನಸ್ಸು. ಕೊಟ್ಟಿದು
ಈ ನನ್ನ "ಭೂ" ತಾಯಿ.


***ರಾಜು ಗುಡಿ***ಹಾಸನ

- ರಾಜು ಹಾಸನ

19 Dec 2017, 11:44 am

ಪ್ರೀತಿಯೇ ಇರಲಿಲ್ಲ

ಹೇಳುತ್ತಿದ್ದಳು ಅವಳು ನನಗೆ ನೀನು ತುಂಬಾ ಇಷ್ಟ ಎಂದು,
ಆದರೆ ಅವಳ ಮನಸ್ಸಲ್ಲಿ ಪ್ರೀತಿಯೇ ಇರಲಿಲ್ಲ.

ದಿನವೆಲ್ಲ ಕಾದೆ ಅವಳ ಕರೆಗಾಗಿ,
ಆದರೆ ಎಲ್ಲಿಯೂ ಅವಳ ಧ್ವನಿಯೇ ಇರಲಿಲ್ಲ.

ಕನಸಲ್ಲಾದರು ಅವಳನ್ನು ಭೇಟಿಯಗೊಣ ಅಂದುಕೊಂಡೆ,
ಆದರೆ ರಾತ್ರಿಯೆಲ್ಲ ಕಣ್ಣಿಗೆ ನಿದ್ದೆಯೇ ಇರಲಿಲ್ಲ.

ಸಾಕಷ್ಟು ಅತ್ತೆ ನಾನು ಅವಳಿಗಾಗಿ,
ಆದರೆ ಕಣ್ಣೀರಿಗೆ ಅರ್ಥವೇ ಇರಲಿಲ್ಲ.

ಕೇಳಿದ್ದೆ ನಾನು ಮನಸಿದ್ದಲ್ಲಿ ಮಾರ್ಗ ಎಂದು,
ಆದರೆ ಅವಳಿಗೆ ಮನಸ್ಸೇ ಇರಲಿಲ್ಲ.

ಇಂದಿಗೂ ಬಹಳ ನೋವಾಗುತ್ತೆ ನನ್ನ ಹೃದಯಕ್ಕೆ,
ಏಕೆಂದರೆ ಅವಳಿಗೆ ನನ್ನ ಮೇಲೆ ಪ್ರೀಘಿಯೇ ಇರಲಿಲ್ಲ.

- gataksingh

19 Dec 2017, 06:24 am

ಪಯಣ

ಅಗಣಿತ ಗಣಗಳ ನಡುವಿನ ದೂರ,
ತುಡಿದ ಮನಸುಗಳ ಅಂತರ,
ಅನಾನುಭವಿಗೆ ನೀಡಿದ ಹೊಸ ಅನುಭವ,
ಮನುಜನ ಮಾಡಿತು ಸಂವತ್ಸರ,
ಕಾಲ್ಪನಿಕ ಈ ಪಯಣ.........®

- Sri....

18 Dec 2017, 10:29 pm

ಗೆಲುವಿನ ಹಾದಿ....

ಸೋಲಿಲ್ಲದೆ ನಡೆಯುತಿರು
ನೀ ಮುಂದೆ......
ನಡುಗುವ ಮನಸೇಕೆ ನಿನಗೆ
ಅಂಜಿಕೆಯ ಬದುಕೇಕೆ ನಿನಗೆ
ಭಯದ ನಡುವೆ ಬೆಂದು ಬುದಿ
ಆಗುವ ಮುನ್ನ ದೈರ್ಯದ
ದಾರಿಯ ಹಿಡಿದು ಗೆಲುವೆಂಬ
ಸಾದನೆಯ ಗುರಿಯೆಡೆಗೆ ಸಾಗು ನೀ
ಅಂಜಿಕೆಯ ಕತ್ತಲಲ್ಲಿ ಕಣ್ಣು ಕಾಣದೆ
ಅಲೆಯುವ ಬದಲು ದೈರ್ಯ ವೆಂಬ
ಬೆಳಕಿನೇಡೆಗೆ ಸಾಗು ನೀ.....
ಸೋಲೆ ಗೆಲುವಿನ ದಾರಿ
ದೈರ್ಯದಿಂದ ಎಂದಿಗು
ಹಿಂದಿರುಗದೆ ಸಾಗು ನೀ ಮುಂದೆ
ದೈರ್ಯವೆಂಬ ಹಾದಿಯಲ್ಲಿ.....

- ರಾಗಸಿರಿ....

18 Dec 2017, 09:45 pm

ಬಾಣಂತಿ

ಬಾಣಂತಿ ನನ್ನೊಡತಿ ಎಳೆಕೂಸ
ಅಡೆದಿರುವಳು ಇವಲಿಂದು.
ಹಸಿಮೈಯೇ ನಿನಗಿಗ ಭಾರಗಳನು ಹೊರಬೇಡ ಲಚ್ಚವ್ವ ನನ್ನರಸಿ ನಾನಿರುವೆ ನಿನಗಾಗಿ ಎಂದರು ಕೇಳದವಳು.

ಮಲಗಿದ್ದಲ್ಲಿ ನಿನ್ನ ಆರೈಕೆಯ ಮಾಡೆಲೆಂದು
ನಿನ್ನ ಹೆತ್ತವಳಿಲ್ಲ!
ನನ್ನ ಸೊಸಿ ಮುದ್ದಾದ ಮಗುವನ್ನು ಕೊಟ್ಟಿರುವಳೆಂದು ನೋಡಿಕೊಳ್ಳಲು ನನ್ನ ಹೆತ್ತವಳಿಲ್ಲ!

ನಿನಗೆಲ್ಲಾ ನಾನೇನೆ ಮುತ್ತೈದೆ ನೀ ಕೇಳೇ,
ಕಣ್ಣ ಹನಿ ಜಾರುವ ಮುನ್ನ ನನ್ನ ಕೈಯನೇಟಿಕಿಸುವೆ ನಿನ್ನ ಕೆನ್ನೆಗೆ ಆಸರೆಯಾಗಿ,
ಕಾಲು ಕೇಳಗಿಡದಂತೆ ನನ್ನ ಮಡಿಲಲ್ಲಿ ಮಲಗಿಸಿ ಕೊಂಡು ನಾ ನೋಡಿಕೊಳ್ಳುವೆ.

ಕೈಯಾರೆ ಅಡಿಗೆ ಮಾಡಿ ತಾಯಿಯಂತೆ ತುತ್ತ ಕೊಡುವೆ,
ಶೀತವಾಗದಂತೆ ಬಿಸಿ ಬಿಸಿಯ ಕಷಾಯ ಕೊಡುವೆ ,
ಮಗುವು ನಿದ್ದೆಯಲ್ಲಿ ಅತ್ತರೆ ನೀ ನಿದ್ದೆ ಕೆಡದಂತೆ ಉಸಿರ ಲಾಲಿ ಹಾಡಿ ಎದೆಯ ಮೇಲೆ ಪ್ರೀತಿ ಹಾಸಿಗೆ ಹಾಕಿ ಮಲಗಿಸುವೆ .

ಯಾರಿಲ್ಲದಿದ್ದರೆನೆ ಲಚ್ಚವ್ವ ಒಲವಿನ ಸಂಗಾತಿ ನಿನ್ನ ಜೀವನದಲ್ಲಿ ಸುಖ ದುಃಖ ಹಂಚಿಕೊಂಡ ನಾನಿಲ್ಲವೇನೇ, ನಿನ್ನ ನಗುವು ನನ್ನದಾದರೆ ನಿನ್ನ ನೋವು ಕೂಡ ನನ್ನದೇನೆ ಚೆಲುವೆ ಎಂದಿಗೂ ನಿನ್ನ ಬಿಡನೇ ಪುಟ್ಟ ಮಗುವೇ.

- ಚುಕ್ಕಿ

18 Dec 2017, 09:11 pm

ಮುರುಕು ಹಳ್ಳಿಯ ಮರುಕ ಮನಸು

ಹೆದರಿ ಏಕೆ ಕುರಿವೆ ಹಳ್ಳಿಯ ಹುಡುಗನೆಂದು ಈ ಮುಖವಾಡದ ಪಟ್ಟಣದ ಪ್ರಬುದ್ಧರ ಮುಂದೆ.

ಐಷಾರಾಮಿ ಜೀವನದಲ್ಲಿ ಪಾಲುಗಾರಿಕೆ ಪಡೆಯುವಾಸೆ ಇದ್ದಾಗ ನಿನ್ನಲ್ಲಿ ಇವರ ಜೊತೆಗೂಡಿ ,
ಸ್ವಾಭಿಮಾನವನ್ನು ಮೂಲೆ ತಳ್ಳಿ ತಲೆ ಭಾಗಿ ನಿಲ್ಲು, ಇವರ ದುಡ್ಡಿನ ಅಹಂಕಾರದ ಮುಂದೆ ಬಡವನಂತೆ ವಿದ್ಯೆ ಇದ್ದು.

ನಿನ್ನ ಮೂಲ ತಾಯಿಯ ಹೊಟ್ಟೆಯಲ್ಲಿ ,
ನಿನ್ನ ಅಂತ್ಯ ಭೂತಾಯಿಯ ಮಡಿಲಲ್ಲಿ ,
ಮಧ್ಯದಲ್ಲಿ ಭಯವೇತಕೆ ಈ ಜನರ
ಯಾಂತ್ರಿಕ ಜೀವನದಲ್ಲಿ.

ಮುರುಕು ಹಳ್ಳಿಯಿಂದ ಬಂದರೆನು?
ಮರುಕ ಮನಸ ನಿನ್ನ ಎದೆಯಿಂದೆ ತೊಟ್ಟರೇನು? ಬಾಳು ನೀನು ಧೈರ್ಯವಾಗಿ ಈ ಖಾದಿಮರ ಗುಂಪಿಗೆ ದೂರವಾಗಿ.

- ಚುಕ್ಕಿ

18 Dec 2017, 09:09 pm

"'''""ಒಡಯ ಒಡತಿ""''"

"ಪ್ರೀತಿಯ ಮುತ್ತು ಧರಿಸಿ
ಮುತ್ತಿನಂತೆ ಕಂಗೊಳಿಸುವ
ನನ್ನ ಪ್ರೀತಿಯ ಒಡತಿ,

"ಕತ್ತಲು ತುಂಬಿದ ಜೀವಕ್ಕೆ
ನೀನೇ ಬೆಳದಿಂಗಳ ಚಲುವೆ
ನನ್ನ ಪ್ರೀತಿಯ ಒಡತಿ,

" ಎಷ್ಟೇ ಪ್ರೀತಿಸಿದರು
ಸಲಾದೇನಿಸಿದೆ
ನನ್ನ ಪ್ರೀತಿಯ ಒಡತಿ ,

"ನೀ ಎಂದು ಬಂದು ಸೇರುವೆ
ನಿನ್ನ ಒಡಯನ ಮನಸ್ಸು
ನನ್ನ ಪ್ರೀತಿಯ ಒಡತಿ,

"ಎಳೇಳು ಜನ್ಮಕ್ಕೂ
ನೀನೇ ನನ್ನ ಹೃದಯದ ಒಡತಿ
ನನ್ನ ಪ್ರೀತಿಯ ಒಡತಿ.

***ರಾಜು ಗುಡಿ*** ಹಾಸನ

- ರಾಜು ಹಾಸನ

18 Dec 2017, 02:15 pm

ಒಡಹುಟ್ಟಿದವರು

ನೀ ಹುಟ್ಟಿದ ಉದರದಲಿ
ಹುಟ್ಟಿದ ಕುಡಿ ಇವಳು
ನೀ ಕುಡಿದು ಬಿಟ್ಟ
ಎದೆ ಹಾಲು ಕುಡಿದವಳು
ನೀ ತೋಟ್ಟುಬಿಟ್ಟ
ಅಂಗಿಯ ತೋಟ್ಟವಳು
ಬೆಂಬಿಡದೆ ನಿನ್ನ ಬೆನ್ನ ಹಿಂದೆ ಬರುವ
ನಾ ನಿನ್ನ ಒಡಹುಟ್ಟಿದವಳು

ಚಿಕ್ಕಂದಿನಲ್ಲಿ,ಆಡಿದ ದಿನಗಳ
ಮರೆಯಲಿ ಹೇಗೆ ನಿನ್ನ ಮಮತೆಯ ಮಡಿಲ
ಕೂಸುಮರಿ ಮಾಡಿ
ಕೈ ತುತ್ತು ನೀಡಿ
ಕೈ ಹಿಡಿದು ನೆಡೆಸಿದೆ
ಬಿಳದಂತೆ ನನಗೆ ಆಸರೆಯಾದೆ
ಅಣ್ಣಾ ನನ್ನ ಬಾಳಿನ ಬೆಳಕು ನೀನಾದೆ
ನಾ ನಿನ್ನ ಮಡಿಲಲಿ ಮಗುವಾದೆ

ನನ್ನ ಚಿಕ್ಕ ಚಿಕ್ಕ ಜಯಗಳನು
ನೋಡಿ ವಿಜೃಂಬಿಸಿದೆ ನೀನು
ನನ್ನ ಸಂತೋಷವ ಕಂಡು
ಕುಣಿದಾಡಿದವನು
ತಂದೆಗಿಂತ ಹೆಚ್ಚು ಮಮತೆಯ ನೀಡಿದವನು
ಕಣ್ಣೀರು ಬರದಂತೆ ನೋಡಿ ಕೊಂಡವನು
ನನ್ನ ತವರಿನ ಐಸಿರಿಯು ಇವನು
ಅವನೇ ನನ್ನ ಒಡಹುಟ್ಟಿದವನು....

ನನ್ನನ್ನು ಹೇಗೆ,ಬಿಟ್ಟಿರುವೇಯೋ ನಾ ಕಾಣೆ
ನಿನ್ನ ಕಣ್ಣಲ್ಲಿ ಕಣ್ಣೀರು ಬಂದರೇ ನನ್ನಾಣೆ
ಮರೆಯದಿರು ಅಣ್ಣನ ತವರಿದೆ ನಿನಗೆ
ಎಂಬ ಮಾತಿನ ನೋವು ತಿಳಿದಿದೆ ನನಗೆ
ನಿನ್ನ ಪ್ರೀತಿಯ ಗೂಡು ಬಿಟ್ಟು ಹೋರಟಿರುವೆ..
ಮನದಲ್ಲಿ ನಿನ್ನ ಮಮತೆಯ ಹೋತ್ತು,ಮದುವೆ ಎಂಬ
ಮೂರಕ್ಷರದ ಜೋತೆಗೆ
ಹರಸಿ ನಲಿವಿರಲೆಂದು ನನ್ನ ತವರು ಮನೆಗೆ..
ನಿನ್ನ ಆಶಿವಾ೯ದ ಇರಲಿ ನನಗೆ,ನನ್ನ ಕಡೆವರೆಗೆ

- Bhagya Girish

17 Dec 2017, 11:30 pm