ಯಾಕೆ ಹಾಗೆ ತಟ್ಟನೆ ತಿರುಗಿ
ನಿಂತೆ ಹೇಳೇ ಚೆಲುವೆ ?
ಕನ್ನಡಿ ನಿನಗೇನಾದರೂ ಸೋತು
ಕಣ್ಣು ಹೊಡೆಯಿತೆ ?
ನಿನ್ನ ಸುಂದರ ಮೊಗದ ಹಿಂದೆ
ಅಡಗಿರುವ ನೋವು
ಅಚಾನಕವಾಗಿ ನಿನಗೆ ಕಂಡು ಬಿಟ್ಟಿತೇ ?
ಎಲ್ಲೋ ದೂರದಲ್ಲಿ ಒಂದು ಮಗುವು
ಅಮ್ಮಾ ಎಂದ ಹಾಗೆ ದ್ವನಿಯು ಕೇಳಿತೆ ?
ಎಲ್ಲಾ ಭಾವುಕ ಸರಕುಗಳ
ಬದಿಗಿರಿಸಿ ಕೊಂಚ ನಗು ಚೆಲ್ಲು ಸುಂದರಿಯೇ,
ನಿನ್ನ ಚಂದ್ರ ವದನದಲ್ಲಿ ಅರಳಿರುವ
ಪ್ರೇಮ ಪುಷ್ಪದ ಗಂಧವನು ನೀನರಿಯೇ.
ಬಿಡು ಉಪಯೋಗವಿಲ್ಲದ ಬಿಗುಮಾನ
ಕೊಡು ಸ್ವಾರ್ಥವಿಲ್ಲದ ನಗುವ ಸಮ್ಮಾನ
ಪಡು ನಿನ್ನಷ್ಟಕ್ಕೆ ನೀನೇ ಹೇಳಿಕೊಂಡು ಸಮಾಧಾನ
ಯಾರಿಗಿಲ್ಲ ಇಲ್ಲಿ ನಿನ್ನ ಕಶ್ಟ ಕೇಳುವ ವ್ಯವಧಾನ.
ಕಾರಣವೇ ಬೇಕಿಲ್ಲ ಜಗಳಕ್ಕೆ ಈ ಜನಕ್ಕೆ
ಜರುಗಿದ್ದು ಒಂದಾದರೆ ಆಡುವುದು ಇನ್ನೊಂದು
ಮಾತು, ಹೇಳುವುದು ಬೇರೊಂದು ಕಥನ.
ಮಾತೊಂದೆ ಇವರ ಅಸ್ತ್ರ,
ನರವಿಲ್ಲದ ನಾಲಿಗೆಗೆ ಅಡ್ಡಿ ಏನು ಈ ಮನುಜರಿಗೆ,
ಪ್ರತಿಯೊಂದು ನಲಿವನ್ನು ನೂಕಿ ಹಾಕಿ ಪಾತಾಳಕ್ಕೆ
ಮಾತಲ್ಲಿ ಕೊಂಡು ತರುವರು ತಪ್ಪಿತಸ್ಥ ಭಾವನೆ
ಮನಕ್ಕೆ.
ಪಾಪ ಎಂಬುದು ಕೂಡಿಟ್ಟ ಬುತ್ತಿಯಂತೆ ಒಬ್ಬರ ಕಣ್ಣೀರು ನುಂಗಿ ಈ ಕ್ಷಣದ ನಗುವು ಪಡೆದರೆ
ನೋವು ಮರಳಿ ಬರುವುದು ನಿಮ್ಮೆಡೆಗೆ ಬಿಡದ
ಬೇತಾಳನಂತೆ ಬೆನ್ನೇರಿ.
ಎಲ್ಲರಲ್ಲೂ ಮೆಚ್ಚುಗೆ ಪಡೆಯುವ ಹುಚ್ಚು
ಏತಕೆ ಈ ಮನಸ್ಸಿಲ್ಲದ ಸ್ವಾರ್ಥಪರರಿಗೆ,
ನೋವು ಕೊಟ್ಟ ನಡೆತೆಯೇ ಸರಿಯೆಂದು
ಸಮರ್ಥಿಸಿಕೊಳ್ಳುವವರು ನೋಡಿದವರ
ಮುಂದೆಯೇ.
ಜಗಳ ಮಾಡದಿದ್ದರೆ ನೋವು ಕೊಡದಿದ್ದರೆ
ಊಟ ಸೇರದೇನೋ!
ಕಣ್ಣೀರ ಕಾಣದಿದ್ದರೆ ಕುಡಿದ ನೀರು ಗಂಟಲು
ಇಳಿಯದೇನೋ!
ಒಂದು ತಿಳಿಯದು ನನಗೆ ಇಂದು ಈ ಜೀವವಿಲ್ಲದ
ಜಗಳದಿಂದ ಜೀವಿ ಹಿಂಡುವುದೇಕೆಂದು?
ಮನಕ್ಕೆ ಖುಶಿಯ ಕೊಡುವುದು ಆ ನಿನ್ನ ಮುಗುಳ್ನಗೆ
ಮೆರಸುವುದು ಮನದೊಳಗಿನ ದುಗುಡಗಳನೆ
ಕೊಡುವುದೆನಗೆ ಉತ್ಸಾಹ ಹುಮ್ಮಸ್ಸು
ತರಿಸುವುದು ಎನ್ನ ಮೊಗದಲೂ ಅದೆ ಮುಗುಳ್ನಗೆ
ಕಾಯುತಿರುವೆನಾ ಮತ್ತೆ ನೋಡಲು ನಿನ್ನ ಆ ಮುಗುಳ್ನಗೆ
ಪಂಚೆ ಪೈಜಾಮುಗಳ ಮುಂದೆ ಪ್ಯಾಂಟ್ ಟೀ ಶರ್ಟ ಗಳು ಬಂತು...
ಲಂಗ ದಾವಣಿಗಳ ಮುಂದೆ ಜೂಡಿದಾರ
ನೈಟಿಗಳು ಬಂತು
ಅಂಚೆ ತಂತಿಗಳ ಮುಂದೆ ಜಂಗಮವಾಣಿಯ ಅಲೆಯು ಉಂಟಾಯಿತು...
ಯಂತಾ ಕಾಲ ಬಂತು ಸುನಾಮಿ ತರ ಆಧುನಿಕ ಕಾಲ ಬಂತು...||
ಅರಿಶಿನ ಕೇಸರಿಯಾ ಸ್ಥಾನದಲ್ಲಿ ಪೇರ್
ಅಂಡ್ ಲವ್ಲಿ ಬಂತು.
ಕುಂಕುಮ ವಿಭೂತಿಯಾ ಮುಂದೆ ಸ್ಟಿಕ್ಕರ್
ಚುಕ್ಕಿಗಳು ಬಂತು..
ಓಡಾಟ ಅಲೇದಾಟಗಳ ನಡುವೆ ವಿಷ ಉಗುಳುವ ಯಂತ್ರಗಳು ಬಂತು..
ಬಾನೆತ್ತರಕ್ಕೆ ಬೆಳೆದ ಮರಗಳಿಗೆ ಕುತ್ತು
ಉಂಟಾಯಿತು..||
ಯಂತಾ ಕಾಲ ಬಂತು ಸುನಾಮಿಯ ತರ
ಆಧುನಿಕ ಕಾಲ ಬಂತು..
ಹಣದಾಸೆಗೆ ಮನುಷ್ಯರನ್ನು ಕೊಲ್ಲುವ ಜರ್ಜರಿತ
ಕಾಲ ಬಂತು..
ಮೊಸ ವಂಚನೆಗಳಿಗೆ ದಾರಿಯು
ಸುಲಭವಾಯಿತು...
ಪಾಪ ಪುಣ್ಯಗಳೆಂಬ ನೆಲೆಯು ಲೆಕ್ಕಕ್ಕೆ
ಸಿಗದಷ್ಟು ಬೇಳೆಯಿತು...
ಆಗಾದರೂ ನಾವ್ ತುಂಬ ಒಳ್ಳೆಯ ಜನ ಎಂದು ಹೇಳಿಕೊಂಡು ತಿರುಗುವ ಕಾಲ ಬಂತು.||
ಯಂತಾ ಕಾಲ ಬಂತು ಸುನಾಮಿಯ ತರ ಆಧುನಿಕ ಕಾಲ ಬಂತು...
ಮಂಗಳಕ್ಕೆ ರಾಕೆಟ್ ಕಳುಹಿಸುವಂತಾ
ಬುದ್ದಿವಂತರ ಕಾಲ ಬಂತು..
ಅಂಗಾದರೂ ಮೂಢನಂಬಿಕೆಗಳನ್ನು ಹೊಗಲಾಡಿಸದಾಯಿತು..
ಕಣ್ಣು ಕಿವಿ ಮೂಗೆಂಬ ಪಂಚೆಂದ್ರಿಯಗಳ ಮೇಲೆ
ಇಡಿತ ಕಡಿಮೆಯಾಯಿತು..
ಇದರಿಂದ ಅತ್ಯಾಚಾರ ಅನಾಚಾರಗಳ ಸಂಖ್ಯೆಯು ಹೆಚ್ಚಾಯಿತು....||
ನಾ ಗಿಚಿದೆ ಒಂದು ಕವಿತೆ
ನನ್ನೆದೇಯ ಪುಟವ ತೆರೆದು
.......................
ಒಲವಿನ ಲೇಖನಿಯ ಹಿಡಿದು
ನನ್ನೋಲವ ಕಥೆಯನ್ನೆಲ್ಲ
ಬರೆಸಿಟ್ಟೆ ಅದರಲ್ಲಿ...
ಅಲೆಯಂತೆ ಬರುತಿಹುದು
ಪದಗಳಾ ಸಾಲು
ಎಷ್ಟು ಗೀಚಿದರು ಮುಗಿಯುತಿಲ್ಲ
ಪದಪುಂಚಗಳ ಸಾಲು
ಪುಟತಿರುಗಿಸಿದಂತೆಲ್ಲ ಮುರುಕಳಿಸುತಿದೆ
ಸಿಹಿಕಹಿ ನೆನಪುಗಳೇಲ್ಲ
ನಾ ಆಡದ ಒಂದೊದು ಮಾತು
ಪದಗಳಂತೆ ಬರೆದಿಡುವ
ಪುಟಗಳ ಸಾಲು......
ಹೋಸ ಚಿಗುರಿನಂತೆ
ಚಿಗುರೊಡೆಯುತಿದೆ ಭಾವನೆಗಳ
ಸಾಲು ದಿನಗಳು ಮುಗಿದಂತೆ
ಹೊಸ ದಿನಗಳೂ ಬರುವಂತೆ
ಎಂದಿಗು ಮುಗಿಯದ ಈ ನನ್ನ ಕವಿತೆ
ಪುಟಗಳು ಮುಗಿಯದಿರಲಿ ಈ
ಒಲವಿನ ಕವಿತೆಗೆ....
ನಾ ಬರೆದಿಟ್ಟ ನನ್ನೋಲವ ಪುಸ್ತಕದಲ್ಲಿ.......