ಕರೆದು ಕರೆದು ಕರಗೋಯ್ತು ನನ್ನ ಧ್ವನಿ,
ಬರೆದು ಬರೆದು ಸೊರಗೋಯ್ತು ನನ್ನ ಕರ,
ಏತಕ್ಕೆ ಇಷ್ಟೊಂದು ಕಟುವಾಗಿದೆ ನಿನ್ನ ಮನಸು ಕೇಳಲಿಲ್ಲವೇ ನನ್ನ ಸ್ವರವೂ.
ಬರಬಾರದೆ ಒಮ್ಮೆ ನಾನಿರುವೆನೆಂದು ನಿನ್ನಲ್ಲೇ,
ಸಿಗಬಾರದೆ ಒಮ್ಮೆ ನಿನ್ನ ನೆರಳ ಹುಡುಕಾಡುವ ಸಮಯ ಉಳಿಸಲೇನೆಗೆ,
ಹೆಜ್ಜೆ ಇತ್ತ ಕಡೆಯಲ್ಲಿ ಪಾದ ಸವಿದ ಕ್ಷಣದಲ್ಲಿ ನೊಂದಿತು ನನ್ನ ಮನ ನಿನ್ನ ಕಾಲ ಕೆಳಗೆ ಹೂವಾಗಿ ಸೇರಲಿಲ್ಲವೆಂದು.
ಬಂದಿ ಆಗದಿರು ಸದ್ದಿಲ್ಲದ ಭಾವನೆಗಳ ಬವಣಿಯಲ್ಲಿ,
ಮಮತೆ ಗುಡಿಯ ಮಾತೆಯಾಗಿರು,
ನೆನೆದ ಮನಗಳ ಕರೆಗೆ ಓಗೊಟ್ಟು ಕರೆವ ಮುನ್ನ ಕಾರ್ತಿಕ ದೀಪವಾಗಿ ಬೆಳಕ ಚೆಲ್ಲುತಿರು.
ನೀ ಹೇಗೆ ಇರುವೆಯೋ
ನಾ ಹಾಗೆ ಇರುವೆನು
ಮನದಲಿ ನೂರು ಭಾವನೆಯು
ನೋಡಲು ನಿನ್ನ ರೂಪವನು
ನೀನೇ ನಾನು,ನಾನೇ ನೀನು
ನೀ ಕೋಟ್ಟಿದ್ದನ್ನೆ ಕೊಡುವೆನು ನಾನು
ಎಂದು ಹೇಳುವ ಕನ್ನಡಿ ತಾನು
ಜೀವನ ಸತ್ಯವ ತಿಳಿಸುವೆನು
ನಿನ್ನ ಭಾವದ ಮುನ್ನುಡಿಗೆ
ಕನ್ನಡಿಯಾಗಿ ನಿಂತಿಹೆನು
ವಂಚನೆಮಾಡಿ ನಟಿಸುವಕಲೆಯ
ಬಿಟ್ಟಬಿಡು ನೀನು
ಹಮ್ಮು ಬಿಮ್ಮಿನ ಬಿಗುಮಾನವನು
ಎಂದೂ ತೋರದಿರು ನೀನು
ಕಾಣುವೇ ನಿನ್ನ ಪ್ರತಿಬಿಂಬವನು
ನನ್ನ ಮಾತನ್ನು ಕೇಳು,
ನಿನ್ನ ಮನದಂತೆ ತಾನು
ನಿನ್ನ ಕೈಗನ್ನಡಿ ನಾನು
ಕೊಲ್ಲಬೇಡ ಚೆಲುವೆ ಎನ್ನನೀ ಆ ನಿನ್ನ ಓರೆ ಕಣ್ಣಿನ ಬಾಣದಲಿ
ಮನ ಸೋತೆ ಆ ನಿನ್ನ ನೋಟಕೆ
ಸೆಳೆವುದು ಎನ್ನನು ನಿನ್ನ ಸನಿಹಕೆ
ನಿನ್ನ ಮೊಗದ ಸೊಬಗನ್ನು ಎನಿತು ಬಣ್ಣಿಸಲಿ
ನೂರಮಡಿ ಮಾಡಿಹುದು ನಿನ್ನ ಸೊಬಗ ಆ ನಿನ್ನ ಓರೆ ಕಣ್ಣು
ಓ ನನ್ನ ಚೆಲುವೆ ಓ ನನ್ನ ಒಲವೆ
ನಿನ್ನ ಆ ಮೋಹಕ ಕಣ್ಣಗಳಲಿ ಕಣ್ಣಿಟ್ಟು ನೋಡಲು
ಕಂಡೆನು ನಾ ನನ್ನನಲ್ಲಿ ಬಿಂಬ ಪ್ರತಿಬಿಂಬ
ಮುಳುಗಿದೆನು ಆ ಸಾಗರದಾಳದಲಿ ಕಂಡೆ ನಾ ಮುತ್ತುಗಳು
ಪೋಣಿಸಿದೆವನು ನಿನಗಾಗಿ ಮುತ್ತಿನಾರವನು
ನೀ ತೋರಿದಾ ಒಲುಮೆ ಹೇಗೆ ಮರೆಯಲಿ ಚೆಲುವೆ
ಎಂದೆಂದಿಗೂ ಋಣಿಯು ನಾ ನಿನಗೆ ಓ ನನ್ನ ಒಲವೆ
( ಸ್ನೇಹ )
ಮಾತು ಕೊಡುವವರು ಹ್ರುದಯವಂತರು.
ಕೊಟ್ಟ ಮಾತು ಉಳಿಸಿ ಕೊಳ್ಳುವವರು
ನಿಷ್ಠಾವಂತರು.
ಮಾತುಕೊಡುವ ದೇಹವನ್ನು ಸ್ರುಷ್ಟಿಸುವವರು. ಬಗವಂತರು.ತಂದೆ . ತಾಯಿ.
ಮಾತಿನ ಜೊತೆ ವಿಶ್ವಾಸ ತುಂಬಿ.
ಕೈ ಹಿಡಿದು ನಡೆಸುವವರು .
ನಿಜವಾದ ಸ್ನೇಹಿತರು.
ಸ್ನೇಹದ ಮೇಲಿನ ಸಂಶಯಕ್ಕೆ ಸ್ತಳವಿಲ್ಲ .ಪ್ರೀತಿ ವಿಶ್ವಾಸಕ್ಕೆ ಬೆಲೆ ನಮ್ಮಲ್ಲೆಲ್ಲ .
ನಮ್ಮೆಲ್ಲರ ಸ್ನೇಹಕ್ಕೆ ಕೊನೆ ಎಂಬುದೇ ಇಲ್ಲವೇ ಇಲ್ಲ .
ಸಿರಿವಂತರ ಹೆಗಲ ಮೇಲೆ ಏರಿ ಕುಂತ ಸಿರಿತನ,
ಬಡವರನು ಅವರ ಕಾಲ ಕೆಳಗೆ ದೂಳಿನಂತೆ ಮಾಡಿತಲ್ಲಾ?
ದಿನಗೂಲಿ ಮಾಡುವಂತ ಬಡಜನರಿಗೆ ದುಡ್ಡಿನ ಬಲೆ ಎಸೆದು ಜೀತದಾಳುಗಳಾಗಿ ಮಾಡುವರಲ್ಲ ಮರಣದ ವರೆಗೂ.
ಕೊರಳಿಗೊಂದು ಸರಪಳಿ ಇಲ್ಲ ಆದರೂ ನೋಡುವರು ಯಜಮಾನರು ಕುನ್ನಿಗಳಂತೆ ನಮ್ಮನ್ನೆಲ್ಲಾ,
ಯಾವ ಸಂವಿಧಾನದಲ್ಲಿ ರಚಿತವಾಗಿದೆ ಈ ನೀತಿ ದುಡ್ಡಿರುವವರು ಮಾತ್ರ ದೊಡ್ಡವರೆಂದು ಮಿಕ್ಕಿದವರು ಅವರ ಕೆಲಸದವರೆಂದು?