Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನೀನು

ನಿದಿರೆಯ ಲೋಕದ
ಸುಂದರ ಸ್ವಪ್ನವು ನೀನು!!
ಹಗಲಲಿ ಕಾಡುವ
ನೆನಪಿನ ಛಾಯೆಯು ನೀನು!!

ಆ ತುಂತುರು ಮಳೆಗಳ
ಚಟಪಟ ಸದ್ದದು ನೀನು!!
ಎದುರಿದ್ದರೂ ಕಾಣದ
ಮಾಯದ ರೂಪವು ನೀನು!!

ಸಾಗರದ ಆ ಅಲೆಗಳು
ಬೋರ್ಗರೆಯು ಪರಿ ನೀನು!!
ಸಾವಿರ ಜನುಮಕ್ಕೂ
ತೀರದ ಒಲವು ನೀನು!!

- ಪಿ.ಜಿ.ಜ್ಯೋತಿ

25 Dec 2017, 06:15 pm

*ಜೋತೆ ಜೋತೆಯಾಗಿ*

ಜೊತೆಯಾಗಿ ಬರಲು ನೀನು
ನಿನಗಾಗಿ ಉಸಿರಾಡುವೆ ನಾನು....
ನನ್ನ ಪ್ರತಿ ನೋಟ ನೀನು
ಅದಕ್ಕೆ ಕ್ಷಣ ಕ್ಷಣಕ್ಕೂ ಮರುಳಾದೆನು ನಾನು..
ಒಲವಲೇ ಬೆರಳ ಹಿಡಿದೆ ನೀನು
ಜೊತೆಯಾಗಿ ಏಳು ಹೆಜ್ಜೆಯಿಡುವೆನು ನಾನು...
ಮನದ ಭಾವನೆಯ ಗೂಡು ನೀನು
ಅದರಲಿ ಅವಿತುಕೊಂಡಿರುವ ಪ್ರಳಾಯಂತಕ ನಾನು..
ನನಗಂತಲೇ ಬಂದೆ ನೀನು..
ನಿನ್ನ ಬಾಳಿಗೆ ಅಂತಿಮ ನಾನು..

- ಮಳೆಯಲ್ಲಿ ಜೋತೆಯಲ್ಲಿ

25 Dec 2017, 05:25 pm

ಕಡಲ ಮುತ್ತು

ಕಡಲ ಸ್ವಾತಿ ಮುತ್ತು ಭೀಕರ
ಅಲೆಗಳ ದಾಳಿಗೂ ಅಚ್ಚಳಿಯದೆ
ತಡೆದು ನಿಂತಿತ್ತು ತದನಂತರದ ಅಲೆ
ಮೆಲ್ಲಗೆ ಅಪ್ಪಳಿಸುವುದು ಎಂದು.

ಸಾಗರ ತೀರದ ಜಗತ್ತಿನ ಬಣ್ಣಗಳಿಗೆ
ಆಸೆ ಹೊತ್ತಿತ್ತು ನೂರು ವರ್ಣ ತನ್ನದಾದರೆ ಕಾಮನಬಿಲ್ಲಂತೆ ಕಾಣುವೆನೆಂದು ಲವಲವಿಕೆಯಿಂದ.

ಒಂಟಿಯಾದ ಮೇಘವೊಂದು ಜಂಟಿಸಿಗದೆ
ಮರುಗಿತು ಅದರ ಅಶ್ರುವಿನ ಹನಿಯೊಂದು ಜಲಚರ ಮೃದ್ವಂಗಿಯ ಒಡಲಿಗೆ ಜಾರಿ ಬಿತ್ತು ಆ ಕ್ಷಣದಿ ಸ್ವಾತಿ ಮುತ್ತು ಜೀವ ಪಡೆಯಿತು.

ಮುತ್ತು ಮಾರಾಟಗಾರ ಮಾಮೂಲಿ ಸರದಾರ
ಬಂದನೊಮ್ಮೆ ನೀಲಿ ಸಾಗರಕೆ ಬಲೆ ಹಾಕಿ ಹಿಡಿದನು ಮೀನು ಬುಟ್ಟಿಗಟ್ಟಲೇ ಬಿದ್ದೇನಲ್ಲಾ ಕಡೆಕು ಈ ಮೀನುಗಾರನಿಗೆ.

ನೋವಾದಿತು ನನ್ನ ಜೀವಕೆ ಕಿತ್ತು ತಗೆದನು
ಚಿಪ್ಪಿನ ಹೊದಿಕೆ ಕೊನೆಗಾಣಿತು ನನ್ನ ಪಯಣ ಸಮುದ್ರದ ಜೊತೆಗೆ,
ಚುಚ್ಚಿ ಮಾಡಿದನು ಚಿನ್ನದ ದಾರದಿ ಮುತ್ತಿನ ಹಾರ,
ಭೇಟಿಯಾದೆ ಹೊಚ್ಚ ಹೊಸ ಗೆಳೆಯರೊಂದಿಗೆ ನನ್ನಂತೆ ನೊಂದ ಕನಸ ಜೀವಗಳ ಜೊತೆಗೆ.

ಅದ್ವಿತೀಯ ಸುಂದರಿಯ ಕೊರಳ ಸೇರಿದೆವು ನಾವು ಕಂಠಕ್ಕೆ ಮುತ್ತಿಡುವಂತೆ ಮುತ್ತಿನ ಹಾರವಾಗಿ,
ಇಷ್ಟೇನಾ ಜೀವನ ಮುರುದಿನದ ಮನನ!

ಕಡೆಗೂ ಅವಳ ಪ್ರೀತಿಯ ಗದ್ದಲದಲ್ಲಿ ಕೈತಪ್ಪಿ ಕಳಚಿ ಹೋಯ್ತು ನಮ್ಮ ಬಂಧನ ಹೊಡೆದು ಚೂರಾದೆ ನಾನು ಮೈ ಮರೆತು ಈ ಕ್ಷಣ ಮರಳಾರೆ ಆ ಕಡಲಿಗೆ ಎಂದೆಂದಿಗೂ ನಾ..!!!

- ಚುಕ್ಕಿ

25 Dec 2017, 04:13 pm

ಅಷ್ಟೊಂದು ನೆನಿಬೇಡ

ಅಷ್ಟೊಂದು ನೆನಿಬೇಡ ಮಾರಾಯ ಒತ್ತರಿಸಿ ಬರುತಾವ ಬಿಕ್ಕಳಿಕೆ,
ಹೊಟ್ಟೆಯಾಳಗಿನ ನಿನ್ನ ಮಗ ನನ್ನ ಒದ್ದು ಎಬ್ಬಿಸುತಾನ,
ಅಪ್ಪನ ತೋರಿಸೆ ಅವ್ವಾ ಅಂತ ರಗಳೆಯ ಮಾಡತಾನ,
ಮಣ್ಣೊಳಗೆ ಮಲಗಿರುವ ನಿನ್ನ ಹೆಂಗ ತೋರಲೋ ಅವಗೆ ಅಪ್ಪನ.

ದೀರಾಧಿ ಧೀರ ನಿನ್ನ ಮನಸಾರೆ ಕೈ ಹಿಡಿದೆ,
ದೇಶ ಕಾಯೋ ಕಾವಲುಗಾರ ನೀ ನನ್ನ ಕಟ್ಟಿಕೊಂಡೆ,
ಯುದ್ಧ ಬಂದು ನುಂಗಿತಲ್ಲೊ ನನ್ನ ಕಂದನ ಅಪ್ಪನ,
ಇನ್ನೆಂಗ ಕರೆತರ್ಲಿ ನಿನ್ನ ಮಣ್ಣೊಳಗೆ ಮಕ್ಕೊಂಡಿರುವಿ ನೀ,
ಹೊಟ್ಯಾಗಿನ ನಿನ ಕೂಸು ನನ್ನ ಪ್ರಾಣ ತಿನ್ನತಾದ.
ನೆಲಕ ಬಿದ್ದು, ಕಣ್ ಬಿಡಾಕ ಮೊದಲೇ ಅಪ್ಪನ ಕಳಕೊಂಡ ದುರ್ದೈವಿ ಕೂಸು,
ಗಂಡೈತೋ ಹೆಣ್ಣಯ್ತೋ ಹೆತ್ತಾಗ ಬಂದ್ ನೋಡ ಒಂದ್ ತಾಸು.

ನಿನ್ನುಸಿರ ಬಿಸಿ ಕೈ ಬೆರಳ ಸ್ಪರ್ಶ ಇನ್ನು ಬಿಡಲಾರೆ ಅಂತಾನ ನನ್ನ ನನ್ನೊಳವಿನ ಚನ್ನ,
ಅತ್ತೆವ್ವ ಹೊಗಳಿಕೆ ಕೇಳ್ತಿವ್ನಿ ನಿನ್ ಬಗ್ಗೆ ದಿನಾಲೂ,
ನಿನ್ನ ಮಗನು ನಿನ್ನಂತೆ ದೇಶಕ್ಕಾಗಿ ಮಡಿದರೆ ನಾನು ಅತ್ತೆವ್ನಂತೆ ಹೆಮ್ಮೆಯಿಂದ ಹೇಳ್ತೀನಿ ನನ್ನ ಮಗನೆಂದು ಇವನ್ನ.

ನೆನೆಯದಿರು ಮಾರಾಯ ಬಿಕ್ಕಳಿಕೆ ಬರ್ತವಾ
ಹಡೆದ ತಕ್ಷಣ ತಕ್ಕೊಂಡು ಬರ್ತೀನಿ ನಿನ್ನ ಮಗನ್ನ ನೀನಿರುವ ಜಾಗಕ್ಕ.

- ಚುಕ್ಕಿ

25 Dec 2017, 02:06 pm

ಸ್ವರಾಭಿಷೇಕ

ಸಪ್ತಸ್ವರಗಳ ಸಾಮ್ರಾಜ್ಯದ
ಸಾಗರದ ಅಲೆಗಳಂತೆ ಅಬ್ಬರಿಸುತ
ಸಂಗೀತ ಸಾಮ್ರಾಟರ ಮುಂಭಾಗದ
ಸಭಾಂಗಣವ ನವರಸಗಳಲಿ ಮುಳುಗಿಸುತ
ತಾಯಿ ಶಾರದಾಂಬೆಯ ರಕ್ಷಕರಾಗಿ
ಮಹಾನ್ ದಿಗ್ಗಜರಿಗೆ ಸರಿಸಮನಾಗಿ
ಮಹಾನ್ ಚೇತನಗಳಾಗಿ ಬೆಳಗುತಿಹರು,
ಬೆಳೆಯುತಿಹರು,ಸರಿಗಮಪದಿಂದ
ಕರುನಾಡಿಗೆ ಸುಮದುರ ಗಾನದ
ಗಂಧವ ,ಎಲ್ಲೆಲ್ಲು ಚೆಲ್ಲುತಿಹರು
ತಾಯಿ ಶಾರದೆಗೆ ಸ್ವರಗಳ
ಅಭಿಷೇಕ ಗೈಯ್ಯುತಿಹರು


ಶಾರಧ

- ಶಕುಂತಲಾ

25 Dec 2017, 12:23 pm

ತಲೆದಿಂಬು

ನಿತ್ಯ ರಾತ್ರಿ ಮಿಂದು
ಬೆಳಕರಿಯುವ ಅಷ್ಟರಲ್ಲಿ ಮೈಯನು
ಒರೆಸಿಕೊಳ್ಳುವುದು ಕೆನ್ನೆ ತಗುಲಿ ಬೆಚ್ಚಗಾಗಿ.

ನವಿರು ನಲ್ಮೆಯಿಂದ ಮುತ್ತಿಕ್ಕಿ
ಮಲಗಿಸುವುದು ನಿನ್ನ ಮುಡಿಯ
ತುದಿಗೆ ತುಟಿ ತಾಗಿಸಿ ಬಿಗಿದಬ್ಬಿ.

ಹೆಸರಿಗೇರಡು ಜೀವಿಗಳು ಹುಸಿಯ
ಬದುಕು ಬಾಡಿತಿಂದು,
ಬೆನ್ನ ಒರಗಿ ಕುರುವೇ,
ಮಡಿಲ ಮಗುವು ಆಗುವೆ.

ಚಿತ್ತ ಮಾಡಿದ ಚಿಂತೆಯ ಭಾರವೆಲ್ಲಾ ನಿನ್ನ
ಹೆಗಲ ಮೇಲೆ ಇರಿಸಿ,
ಜಾರಿತಲ್ಲೇ ತಲೆದಿಂಬೆ ಸುಸ್ತಾದ
ಬಡ ಜೀವ ಗಾಢ ನಿದುರೆಯ ಕನಸಿಗೆ.

- ಚುಕ್ಕಿ

25 Dec 2017, 12:39 am

ಚೆಲುವ ಕನ್ನಡ ನಾಡು

ಕನ್ನಡವೇ ನಮ್ಮ ಜೀವನ ಎಂದೆಂದಿಗೂ ಇಲ್ಲಿರಲಿ ನನ್ನ ಜನನ,
ಹೃದಯದಿ ಮಿ‌‌ಡಿವುದು "ಕನ್ನಡ"!
ಪವಿತ್ರ ಸ್ಥಳವಿದು ಪಂಪ‌ ರನ್ನರ
ಕನ್ನಡವೇ ‌‌‌‌ ಹಸಿರು , ಅದಲಿಹುದು ನಮ್ಮ ಉಸಿರು ,
ಕನ್ನಡಾಂಬೆಯ ಮಡಿಲಲಿಹುದು ನಮ್ಮ ಹೆಸರು
ವೀರ ಸಾಹಸ , ರೋಷ ಪೌರುಷ ಜನರ ನೆಲವಿದು
ಮನ ರೋಚಿತ ಕೃತಿಗಳ ಸಾಗರ ಇಲ್ಲಿಹುದು
ಭವ್ಯ ಭವನ‌ಗಳ ತಾಣವಿದು,
ಸಾಹಿತ್ಯ ಕಲೆಯ ತೊಟ್ಟಿಲು ನಮ್ಮ ಚೆಲುವ ಕನ್ನಡ
-ನಾಡಿದು....

- Subhash

24 Dec 2017, 07:22 pm

ಒರತೆ

ಅಲ್ಲಿಂದ ಬಂದು
ಇಲ್ಲಿ ನೆಲೆ ನಿಂತಾಗ
ಅಪರಿಚಿತ ಮನಸ್ಸುಗಳ
ಪ್ರಶ್ನೆ ನೂರು
ಎಲ್ಲಿಂದಲೋ ಬಂದವನೆಂಬ
ಅವರ ಹಂಗಿನ ಭಾವ
ಹೊರ ಕಾಣದಿದ್ದರೂ
ಭೂದಿ ಮುಚ್ಚಿದ ಕೆಂಡ
ಗಂಟಿಲ್ಲದವನಿಗೆ ನಂಟಿನ ಭಯವೇನು ?
ಹರಡಿಕೊಳ್ಳುತ್ತಾ ಹೋದೆ
ಹರಕು ಮುರಕು ಸರಕು
ತಪ್ಪು ಸರಿಗಳ ಲೆಕ್ಕ ಪಕ್ಕಕ್ಕಿಟ್ಟು
ನಡು ನಡುವೆ ಬಿರುಗಾಳಿ
ಚಿತ್ತ ವಿಕಲರ ದಾಳಿ
ಬಯಸಿದ್ದು ಬೆಳಕು
ದೊರೆತ್ತದ್ದು ಬೆಂಕಿ
ಬಿಚ್ಚಿ ಹೋಗಿದೆ ಬದುಕು
ಕಟ್ಟಿದರೆ ಮುಂದೇನು ?
ಕಾಡುವ ಇರುಳಿನಲಿ
ಕರುಣೆಯ ಬೆಳಕರಸಿ
ಕಾಯುತ್ತ ಕುಳಿತೆ
ಕಳವಳಿಸಿ ಕನವರಿಸಿ
ಮನೆಯೊಳಗೆ ಬಂದವರು
ಮನದೊಳಗೂ ಬಂದರು
ಎದೆಯ ರಂಗಸ್ಥಳದಿ
ಕುಣಿದು ಕುಪ್ಪಳಿಸಿದರು
ಚಿತ್ತಾರ ಬಿಡಿಸಿದರು
ಚಿತ್ತಗೆಡಿಸಿದರು
ಕನಸ ನೆಟ್ಟರು ಹಲವರು
ಕಣ್ಣು ಕಿತ್ತರು ಕೆಲವರು
ಕಡೆಗೆಲ್ಲಾ ಮುಗಿದಂತೆ
ಹೊರಟೆ ಬಿಟ್ಟರು
ನಿರ್ಭಿಡೆಯ ಮನಸಿಗರು
ಬಯಕೆ ತಣಿದರೆ ಸಾಕು
ಬಸಿರು ಯಾರಿಗೆ ಬೇಕು
ಯಾವ ಹಿಡಿತಕ್ಕೂ ಸಿಗದ
ನುಣುಪು ಜಾರುಗರು
ಮುನಿದು ಕುಳಿತರೆ ನಾನು
ಸೃಷ್ಟಿ ನಿಲ್ಲುವುದೇ ತಾನೇ ?
ನಾಳೆಗೆ ಯಾರ ಹಂಗು ?
ಸತತ ತಿರುಗುವ ಚಕ್ರ
ಇಂದಿನದೇನೆ ಇರಲಿ
ಮುಂದಿನದೇ ಒಗಟು
ಹುಚ್ಚು ಹುರುಪಿನ ದೈರ್ಯ
ಹೊಸ ಬದುಕಿಗಡಿಪಾಯ
ಅಳಿದುಳಿದ ಕನಸೊಡನೆ
ನವರಂಗ ಪ್ರವೇಶ
ಇಲ್ಲಿ ಸಲ್ಲದವರು
ಅಲ್ಲಿಯೂ ಸಲ್ಲರು
ಹಿರಿಯರಾಡಿದ ಮಾತು
ಗಹಗಹಿಸುತ್ತು
ಸಂತೆಯೊಳಗಿದ್ದರೂ
ಕಾಡುವ ಒಂಟಿತನ
ಅಪ್ಪುವುದು ಯಾರನ್ನು ?
ಒಪ್ಪುವುದು ಏನನ್ನು ?
ಅವ್ಯಸ್ತ ಅಸ್ಪಷ್ಟ
ಕಲಸು ಮೇಲೋಗರ
ತಿರುತಿರುಗಿ ಮರಳಿದ್ದು
ಮತ್ತದೇ ಹಳೆಯ ಗೂಡು
ನಾನೇ ಕಟ್ಟಿದ್ದು ನನ್ನದೇ ಗೂಡು
ಸಂಬಂದ ಹಿಂದಿನಂತಿಲ್ಲ
ಸಡಿಲಗೊಂಡಿದೆ ಎಲ್ಲ
ನನ್ನೊಡನೆ ಇರಲೆಂದು
ನಾನೇ ತಂದಿರಿಸಿದ್ದು
ಅನ್ಯವೇನಲ್ಲ ನನ್ನ ಸಹ ಬಳಿಗಳೇ
ಅವುಗಳ ಪಾಲಿಗೀಗ
ನಾನೊಬ್ಬ ಆಕ್ರಮಿತ
ಮೇಲೆಷ್ಟು ಶಾಂತ
ಒಳಗೊಳಗೇ ಸಿಡಿತ
ಇಷ್ಟಾದರೂ ನಂಬಿಕೆ
ನನ್ನೊಳಗೆ ಸತ್ತಿಲ್ಲ
ಕನಸುಗಳ ರಿಂಗಣ
ಎದೆಯೊಳಗೆ ಬತ್ತಿಲ್ಲ
ಭರವಸೆಯ ಒರತೆ
ಹನಿಯುತ್ತಲೇ ಇದೆ
ಮತ್ತಷ್ಟೂ ಮೊಗೆದಷ್ಟು
ಮೊಗೆ ಮೊಗೆದು ಸುರಿವಷ್ಟು

- ಯು.ರಾಮು ಸಿರಿಗೆರೆ

24 Dec 2017, 06:59 pm

ಬೆಂಕಿಜ್ವಾಲೆ.....

ಬೆಂಕಿಜ್ವಾಲೆ
ನನ್ನೆದೆಯ ಗುಡಿಯೋಳಗೆ
ಹಚ್ಚಿಟ್ಟ ದೀಪ ಜೊರಾಗಿ
ಉರಿಯುತಿದೆ ಇಂಚಿಂಚು
ಸುಡುತಿದೆ ನನ್ನೆ ನಾನು
ಬುದಿಯಾಗುವ ಮುನ್ನ
ತಂಪಾದ ಗಾಳಿಯೊಂದು
ಬೀಸಿ ಕಡಿಮೇ ಮಾಡಿತೆ
ನನ್ನೆದೆಯ ಜ್ವಾಲೇ.....

ಯಾರಿಲ್ಲದ ಮರಳುಗಾಡಿನಲ್ಲಿ
ಒಂಟಿಯಾಗಿ ಅಲೆಯುತಿರುವೆ
ಎತ್ತ ನೋಡಿದರು ಮನಮುಚ್ಚಿದೆ
ಮರಳುಗಾಡು ನಾನೆತ್ತ ಹೋಗಲಿ
ನಡೆದು ನಡೆದು ಕಾಲು ಸೋತು
ನಡುಗುತಿವೆ ಎದೆಯೋಳಗೆ
ಭಯವೊಂದೆ ನುಗ್ಗುತ್ತಿದೆ
ಆಸರೆಗಾಗಿ ಯಾವ
ಪುಟ್ಟ ಗೂಡು ಕಾಣುತ್ತಿಲ್ಲ
ಎಲ್ಲೆಂದು ಹೂಡುಕಲಿ ನನ್ನವರ
ನನ್ನದೆಯ ಗುಡಿಯ ನನಗಾಗಿ
ಹುಡುಕುತಿರುವ ನನ್ನವರೂ ಮರೆಯಾಗಿ
ಹೋಗಿರುವರಲ್ಲ ಒಂಟಿಯಾಗಿ
ದಿಕ್ಕು ಕಾಣದೆ ಕೊರಗಿ ಮರುಗಿ
ಕೂತು ಬಿಟ್ಟೆ ಯಾರಿಲ್ಲದೆ ಎನಿಲ್ಲದೆ
ಮರಳುಗಾಡಿನೋಳಗೆ.........

ಯಲ್ಲರು ಇದ್ದರು ಯಾರಿಲ್ಲದ
ಬದುಕು ನನ್ನಾಸೆಯು
ಸುಟ್ಟು ಬುದಿಯಾಗುತಿದೆ
ಕೇಳಿ ಕೊಡುವವರು ಯಾರಿಲ್ಲ
ಮಗುವಂತ ಮನಸೋಳಗೆ
ಕೆಂಡವೋಂದು ಬಂದು
ಮನಸನ್ನೆ ಸುಟ್ಟುಬಿಟ್ಟಿತಲ್ಲ
ಇರುವುದಾದರೂ ಹೇಗೆ
ಆ ಬುದಿಯಲ್ಲೆ ಮರೆಯಾಗಿ
ಹೋಗುವೆ ಹೀಗೆ........

- ರಾಗಸಿರಿ....

24 Dec 2017, 04:04 pm

ನಿರ್ಲಕ್ಷ್ಯದಲ್ಲಿ!!

ಮರೆತರೇನು ಮೌನ ಉಳಿಯಿತು ಕವಿತೆಯಲ್ಲಿ,
ನೋವು ಎಂಬ ಎರಡಕ್ಷರ ನಾ ಬರೆಯಲು ಕವನವೆಂಬ ಮೂರಕ್ಷರದಲ್ಲಿ.

ನಾಲ್ಕಕ್ಷರದ ಕಣ್ಣ ಹನಿ ಕಳೆದೋಯ್ತು
ಮೌನ ವಿಧಿಸಿದ ಶಿಕ್ಷೆಯಲ್ಲಿ.

ಬೇಸರದ ಬೆಲೆಯನ್ನು ನಾನುಳಿಸಿಕೊಂಡೆ
ಮತ್ತೆ ಇಂದು ಒಂಟಿತನದಲ್ಲಿ,
ಹಲುಬಿದರು ಬಾರದಿರುವ
ನಿನ್ನ ನಿರ್ಲಕ್ಷ್ಯದಲ್ಲಿ.

- ಚುಕ್ಕಿ

24 Dec 2017, 03:36 pm