Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ತಿರುಗಿ ಬಂದುಬಿಡುವೆಯಾ ಮತ್ತೆ.....

ನೀರವ ಮೌನದ ಒಂಟಿ ಮನೆಯ ಮುಂದೆ
ಅಳುತ್ತಿದ್ದೇನೆ ಒಬ್ಬಂಟಿಯಾಗಿ...
ಮುಸುಕಿದೆ ಸುತ್ತಲೂ ಅಂಧಕಾರ,
ಸನಿಹ ಸೇರುತ್ತಿದ್ದಾರೆ ಒಬ್ಬೊಬ್ಬರಾಗಿ..
ಸೂತಕದ ಛಾಯೆ ಆವರಿಸಿದೆ ಸುತ್ತಲೂ,
ಕಾರಣವ ತಿಳಿಯದೆ ಮನುಜರು..
ಸಂತೈಸುತ್ತಿದ್ದಾರೆ ನೊಂದುಕೊಂಡು
ಯಾಕೀ ವೇದನೆ?
ಪ್ರಶ್ನೆಗಳು ಕಾತರದಿ ಕಾಯುತ್ತಿದೆ,
ಉತ್ತರ ಮಾತ್ರ ಯಾರಿಗೂ ತಿಳಿದಿಲ್ಲ
"ಕಣ್ಣೀರು ಇಳಿಯುತ್ತಿದ್ದ ಕನ್ಯೆಯ ಮೊಗ
ಬಾಡಿ ಹೋದ ಕುಸುಮದಂತಿದೆ"
ಯಾರೋ ಪಿಸುಗುಟ್ಟಿದ ಮಾತುಗಳು
ನನ್ನನು ತಲುಪಿ ಗಾಯವ ಮಾಡುತ್ತಿದೆ.
ಸಮಯ ಉರುಳುತ್ತಿದೆ,ಆತಂಕ ಹೆಚ್ಚುತ್ತಿದೆ
ಕರುಣೆಯು ಅಗಾದವಾಗಿದೆ.
ಮನಸು, ಹೃದಯದ ತುಂಬಾ ತುಂಬಿಕೊಂಡ
ನೋವಿನ ಯಾತನೆ ಸುಡುತ್ತಿದೆ
ಅಪರಾಧಿಯ ಹುಡುಕಲು ಹೃದಯ ಹಿಂಜರಿಯುತ್ತಿದೆ
ಮನಸ್ಸು ಕಲ್ಲಿನಂತೆ ಕುಳಿತಿದೆ...
ಎಷ್ಟೋ ವರುಷಗಳಿಂದ ನನ್ನ ಜೊತೆಗಿದ್ದ
ಮೊಗದಲ್ಲಿ ಸುಮದಂತೆ ಅರಳುತ್ತಿದ್ದ
"ನಗುವಿನ ಕೊಲೆಯಾಗಿದೆ"
ಕಣ್ಣುಗಳು ಅತ್ತು ಅತ್ತು ಸೋತುಹೋಗಿವೆ...
ಕಾರಣವ ತಿಳಿದ ಮನುಜರು
ಚಿತೆಯ ತಯಾರಿಯಲ್ಲಿದ್ದಾರೆ
ಇನ್ನೇನು ಚಿತೆಯಲ್ಲಿಡಲು
ಹೊತ್ತುಕೊಂಡು ಹೋಗುತ್ತಿದ್ದಾರೆ
ನನ್ನೊಂದಿಗೆ ಜೊತೆಯಾಗಿದ್ದ ನಿನ್ನನು
ಆಹುತಿ ಮಾಡಲು ನನಗಿಷ್ಟವಿಲ್ಲವೇ?
ನಾನೇನು ಮಾಡಲಿ
ಮರಳಿ ನೀನಾದರು ಬಂದು ನನ್ನಲಿ ಸೇರಿಕೋ,
ಕರೆದಾಗ ನೀನೆಲ್ಲಿ ಬರುವೆಯಾ ಇನ್ನು?
ವಿಧಿಯಾಟ ನೋಡು
ಕೊನೆಗೂ ನನ್ನ ಕೈಯಿಂದಲೇ ಕೊಳ್ಳಿ ಇಟ್ಟುಕೊಂಡೆಯಾ?
ಬದುಕ ತುಂಬಾ ಅಳುವನ್ನು ತಂದಿಟ್ಟೆಯಾ?
ನಾ ಏನು ಮಾಡಲಿ
ಅಗಲಿಕೆಯು ಅನಿವಾರ್ಯವಾಗಿದೆ!

- ಪ್ರಿಯಾಂಕ

26 Dec 2017, 07:53 pm

ಹನಿ

ಸಪ್ತ ಸಾಗರದಾಚೆ ಖಾಲಿ ಅವಕಾಶವೊಂದಿದೆ
ಹೋಗಿ ಬನ್ನಿ ಕವಿತೆಗಳೇ
ಅವಳ ಕಾಲ್ಗೆಜ್ಜೆ ಮಣಿಗಳಿಗೆ
ಕಟ್ಟಿದ್ದ ಕನಸ್ಸುಗಳು ಉದುರಿ ಬಿದ್ದಿದೆಯಂತೆ
ಈ ತೀರದಲಿ ಹುಡುಕಬೇಕು ನಾನು.

- basavarajsirnayakpreethu

26 Dec 2017, 01:54 pm

ಮಂದಾರ ಮಾಲೆಗಳು.......

ಮೇಘಮಾಲೆ
ಮುಗಿಲೋಳಗೆ ಅಡಗಿರುವ
ಮುಗಿಲ ಮಾಲೆ
ಅಲೆ ಅಲೆ ಯಾಗಿ
ಹರಿದು ಬರುವಳು
ಭುವಿಯ ಮಾಲೆ
ಹೊಸ ಬೆಳಕ ತರುವ
ಮಿಂಚು ಮಾಲೆ
ಬಾನೆತ್ತರಕ್ಕೆ ಎಗರಿ
ಯಾರಿಲ್ಲದ ಮಾಯ ಮಾಲೆ
ಪ್ರೀತಿ ಬೆಸುಗೆ ಹಾಕುವ
ಮದುರ ಮಾಲೆ
ಬಾನಾಗಲದ ತುಂಬ
ಚಿತ್ತಾರ ಬಿಡಿಸಿ
ಕಣ್ಣ ತುಂಬಿಸುವ
ಚಿತ್ತ ಮಾಲೆ.........
ಮನಸುಗಳ ಬೆಸೆದು
ಬಂದವ ಕಟ್ಟಿ ಹೊಸ
ಸೃಷ್ಟಿಯ ಬೆಸವ ಬಂದ ಮಾಲೆ......
ಕನಸುಗಳ ಕಟ್ಟಿ ಮನಸುಗಳಿಗೆ
ತಂದೆಸೆದು ಗುರಿಯ ತೊರಿಸೋ
ಕಂದ ಮಾಲೆ.........
ಋತುಚಕ್ರ ಉರುಳಿಸಿ
ಋತುವಿನ ಒಳಗೆ ಹೊಸ
ಚಿಂಗುರಿನ ಜೊತೆಗೆ ಬೆರೆವ
ವಂಸತ ಮಾಲೆ......
ಯಲ್ಲರೆದೆಯಲಿ ಹೊಸ ತನವ
ತಂದು ಹೊಸ ಹಾದಿಗೆ
ಕರೆದೊಯ್ಯವ ಚೆಲುವ ಮಾಲೆ....
ಮುಗಿಲೋಳಗೆ ಮರೆಯಾಗಿ
ಹಗಲಿರುಳು ಜೊತೆಯಾಗಿ
ಮಾಯೆಯಂತೆ ದಿನ ಸಾಗಿಸೋ
ದೈವ ಮಾಲೆ..........
ಮೇಘ ಮಾಲೆ ಯೋಳಗೆ
ಸುಗಂದ ವಿಲ್ಲದ ಎಂದು ಬಾಡದ
ಮಂದಾರ ಮಾಲೆಗಳು............

- ರಾಗಸಿರಿ....

26 Dec 2017, 07:19 am

ನನ್ನವ್ವ

"ಕೊರೆವ ಚಳಿಗೆ
ಮೈಯೊಡ್ಡಿ,
ಸುಡುವ ಬಿಸಿಲಿಗೆ
ಕೈಯೊಡ್ಡಿ
ಸುರಿಯುವ ಮಳೆಗೆ
ಸೇರಗೊಡ್ಡಿ ,
ಜೋಪಾನ ಮಾಡಿದೆ
ನನ್ನವ್ವ.

"ತಿಳಿಯಾದ ಈ ಲೋಕದಲ್ಲಿ
ಒಬ್ಬಂಟಿ ಮಾಡಿ
ಜಾರಿದೆಯಲೇ,ಚಿರ ನಿದ್ರೆಗೆ
ಏಕೆ.....ನನ್ನವ್ವ

"ಎಷ್ಟೇ ಜನ್ಮ ಎತ್ತಿದರು
ತಿರಿಸಲರೇನು, ತೀರಿಸಲಾಗದ
ನಿನ್ನ ಋಣವಾ,ಹೇಂಗೆ ತೀರಿಸಲಿ
ನಿನ್ನ ಋಣವ ಹೇಳೇ ನನ್ನವ್ವ.

................ರಾಜು

- ರಾಜು ಹಾಸನ

26 Dec 2017, 01:07 am

ಮುದ್ದು ಮಗು

ಮುದ್ದು ಮುದ್ದಾದ ಓ ಮುದ್ದು ಮಗು
ಪುಟ್ಟ ಕಣ್ಣ ಕೆಂಪ ತುಟಿಯ ನೀ ಚೆನ್ನ ಮಗು
ಓ ಚಿನ್ನ ಮಗು ನೀ ರನ್ನ ಮಗು
ನಿನಗೊಂದುಮ್ಮ ಕೊಡಲೇ ಪುಟ್ಟ ಮಗು

ಹೊಸಬರ ಕಂಡರೇ ಕಣ್ರೇಪ್ಪೆಯೇ
ಮಿಟುಕಿಸದೇ ನೋಡುವೇ
ಎತ್ತಿ ಮುದ್ದಾಡಲು ಮುಂದಾದರೇ
ಅಮ್ಮನ ಬಿಗಿದಪ್ಪಿ ಅಳುವೇ

ಹಸಿದಾಗ ಅಮ್ಮನ ಕರೆಯುವೇ
ಒಂದೇ ಸಮನೆ ಬಿಕ್ಕಿ-ಬಿಕ್ಕಿ ಅಳುವೇ
ಅಮೃತವುಂಡಿ ಅಮ್ಮನ ಮಡಿಲಲಿ ನಲಿವೇ
ಅಮ್ಮನ ಜೋಲಾಲಿಗೆ ಆಡಿ ಮಲಗುವೇ....

- ಡಿ.ಸಿ.ಎನ್@100%

25 Dec 2017, 09:42 pm

ಪ್ರೇಮದ ಬುತ್ತಿ..

ಅಲೆಗಳ ಸಂತೆಯ ತೀರದ ಮೌನ,
ಮರಳಿನ ಹೆಸರಿನ ಕವನ,
ಪೆದ್ದು ಹೆಜ್ಜೆಗಳ ನೆನಪಿನ ಪಯಣ,
ಕಾಯುತಿಹ ಪ್ರಶ್ನೆಗಳ ಉತ್ತರಿಸುತ,
ಕಾದ ಉತ್ತರಗಳ ಪ್ರಶ್ನಿಸುತ,
ತರುವೆಯ ಪ್ರೇಮದ ಬುತ್ತಿಯ???



..............ಶ್ರೀ...............

- Sri....

25 Dec 2017, 09:36 pm

ಮುನಿದಿಹನೇನೋ

ಅತ್ತಿಂದೆತ್ತ ಸಾಗುತಿಹರು
ಸಾಲು ಸಾಲಾಗಿ, ಸವಾರಿ
ಹೊರಟಂತಿದೆ ಶಿಕಾರಿಗೆ
ಮುನಿದಿಹನೇನೋ
ಮಿತ್ರನಿಲ್ಲದ ನೆಲೆಗೆ ದಾವಿಸಲು

ಬಾಯ್ಬಿರಿದು ನಿಂತ
ಇಳೆಯಲಿ
ಭಗ ಭಗನೆ ಸುಡುತಿಹ
ಧರೆಯಲಿ
ಕಾದು ಕಾದು ಅಂಧರಾದವರ
ಹೊಲಗಳಲಿ
ಪಶು ಎಲುಬುಗಳೇ ತುಂಬಿದ
ಮೈದಾನದಲಿ
ಒಣಕೊಂಬೆಗಳ ಹೊತ್ತು ನಿಂತ
ಶೃಂಗಗಳಲಿ
ಹಬ್ಬದ ಒಣ ತಳಿರು ತೋರಣ ಕಂಡ
ಮನೆ ಮನೆಯ ಮನದಂಗಳದಲಿ
ನಿಂದು.....
ಘಳಿರು ಘಳಿರುಮನೆ ಕಂಬನಿ
ಸುರಿಸಿ ನಡೆಯ ಬಾರದೇ...‌‌.‌.‌... ಡಿ.ಸಿ

- ಡಿ.ಸಿ.ಎನ್@100%

25 Dec 2017, 09:24 pm

!!...ಗೆಳತಿ...!!

ಆಟವಾಡಿರುವುದುಂಟು, ಜೊತೆಗೆ ಊಟಮಾಡಿರುವುದುಂಟು
ಊಟವನ್ನು ಹಂಚಿ,ಕಿತ್ತು ತಿಂದಿರುವುದುಂಟು.
ಒಂದೇ ಡಬ್ಬಿಯಲ್ಲಿ ತಿಂದಿರುವುದುಂಟು
ಒಂದು ಮಿಠಾಯಿಗಾಗಿ ಜಗಳವಾಡಿರುವುದುಂಟು.

ಬಿದ್ದಾಗ ನಕ್ಕಿರುವುದುಂಟು
ನಕ್ಕಿ ಮುಗಿದ ಮೇಲೆ ಎತ್ತಿರುವುದುಂಟು.
ನಾಲ್ಕು ನಾಲ್ಕು ಸೇರಿದರೆ ಆಗುವುದು ಎಂಟು
ಎಂದು ಪರೀಕ್ಷೆಯಲ್ಲಿ ಹೇಳಿಕೊಟ್ಟಿರುವುದುಂಟು.

ಹುಟ್ಟು ಹಬ್ಬದ ದಿನ ಮುಖಕ್ಕೆ ಕೇಕ್ ಬಳಿದಿರುವುದುಂಟು
ಅದೇ ತುಂಡನ್ನು ಬಾಯಿಗಿಟ್ಟಿರುವುದುಂಟು.
ಜುಟ್ಟು ಕಿತ್ತು , ಮೇಲೆ ಜಿಗಿದು ಜಗಳವಾಡಿರುವುದು ಸಹಜ
ಅದೇ ಜುಟ್ಟು ಮತ್ತೆ ಹಾಕಿ ಇಟ್ಟಿರುವೆನು ಒಂದು ಹೂ ರೋಜ.

ತರಗತಿಯ ಆ ಕೊನೆಯ ಬೆಂಚಿನಲ್ಲಿರುವ ಮಜಾ
ಸಿಗದು ಟಾಕೀಸಿನಲ್ಲಿ ಮೂರು ಗಂಟೆ ಕೂತರೂ ನಿಜಾ.
ನನಗಿರುವುದು ನಿನ್ನ ಮೇಲೆ ಒಂದು ಚೂರು ಹುಚ್ಚು
ಎಂದೆಂದಿಗೂ ಗೆಳತಿ ನೀನು ನನ್ನ ಅಚ್ಚುಮೆಚ್ಚು...

- Priyanka H.S

25 Dec 2017, 09:23 pm

ನನ್ನ ಮುದ್ದಿನ ಅಜ್ಜಿ ಮತ್ತು ಅಜ್ಜ

ನನ್ನ ಮುದ್ದಿನ ಅಜ್ಜಿ ಅಜ್ಜ
ನಾನೆ ನಿನ್ನಯ ಪ್ರಪಂಚ ಆ ದಿನಗಳಲಿ
ಹಾಲು ಬೆಣ್ಣೆ ತುಪ್ಪ ಮೃಷ್ಟಾನ್ನದ ಸವಿಯನುಣಿಸಿದಿರಿ
ದಂಡಿಸಿಧೆ ನನ್ನ ಬಯ್ಯಲು ಬಂದವರಿಗೆ
ನಿನ್ನ ಭದ್ರ ಕೋಟೆಯಲ್ಲಿ ಬೆಳೆದೆ ನಾನು
ನೀಡಿದೆ ನೀ ಮುತ್ತಿನ ಸುರಿಮಳೆ
ನೆನೆದು ಮೆಲುಕು ಹಾಕುತ್ತಾ ಆ ದಿನವ
ಸವಿದೆ ನಾ ಆ ಮಧುರವಾದ ಕ್ಷಣಗಳನು
ಹೀಳಿದೆ ವಿಧವಿಧದ ಕಥೆ
ಕಲಿಸಿದೆ ಜೀವನದ ಪಾಠಗಳನ್ನು ಈ ಕಥೆಯ ಸಾರದಲಿ
ನೀವೆನ್ನ ಜೀವನದ ನಾಯಕಿ ನಾಯಕ
ಓ ನನ್ನ ಮುದ್ದಿನ ಅಜ್ಜಿ ಅಜ್ಜ

- ರಘು

25 Dec 2017, 09:08 pm

ಕಿವಿಯೋಲೆ

ಕಿವಿ ತಮಟೆಯ ಹಿಡಿದು
ದಿನವೆಲ್ಲ ಓಲಾಡಿ
ಏನೆಲ್ಲ ಹೇಳುತಿದೆ ಹುಡುಗಿ
ನಿನ್ನ ಕಿವಿಯೋಲೆ ?

ಸವಿ ಮಾತುಗಳ ನುಡಿದು
ಸೊಗಸಾಗಿ ತೇಲಾಡಿ
ದಿನವೆಲ್ಲ ಕಾಡಿಹುದೇ ಬೆಡಗಿ
ನನ್ನ ಕವಿಯೋಲೆ !

ನರ ಜನ್ಮ ಬೇಡೆನಗೆ
ಹೊಸ ಬದುಕು ನೀಡೆನಗೆ,
ಕಳೆದು ಬಿಡುವೆ ಕೊನೆಯ ವರೆಗೂ
ನಿನ್ನ ಸುಂದರ ಕಿವಿಯ ಹಿಡಿದು
ಜೋಕಾಲಿ ಆಡುತಲಿ
ಕಿರು ಕಿವಿಯೋಲೆಯಾಗಿ.

ಎಷ್ಟು ಚೆಂದವೋ
ನಿನ್ನ ನುಣುಪು ಕೆನ್ನೆಯ ಅಂದವ
ಹತ್ತಿರವಿದ್ದು ನೋಡಿ ಸವಿಯುವ ಬಗೆ
ಏನು ಅದೃಷ್ಟವೋ
ನಿನ್ನ ಸೊಂಪು ಕೂದಲುಗಳ
ಮಾರುತದಡಿಯಲ್ಲಿ ಮಿಂದೇಳುವ ಮಿಗೆ!

- ಶ್ರೀಗೋ.

25 Dec 2017, 08:38 pm