ನಿತ್ಯ ಕಡಲದಂಡೆ ವ್ಯತ್ಯಾಸವಿಲ್ಲ
ಆಗೊಮ್ಮೆ ಈಗೊಮ್ಮೆ ಸುಳಿವಾಗ
ಕಣ್ಣಿಗೆ ಕಂಡಿದ್ದೆಷ್ಟೋ ಕಾಣದೆ ಉಳಿದದ್ದೆಷ್ಟೋ
ದೂರ ದಿಗಂತದಿ ಕೈ ಕೂಡಿದ
ಭುಜಕೆ ಭುಜ ತಾಗಿಸಿದ
ಇಳಿಸಂಜೆಯ ಜೋಡಿ ಮೆಲ್ಲನೆ
ಹೆಜ್ಜೆ ಇರಿಸಿದೆ ಕಡಲ ತೀರವೇ
ಉಳಿದ ಒಂಟಿ ನಾನು
ಮರೆತೇ ಹೋಯ್ತು ನನ್ನ ಲವಲವಿಕೆಯ ಮಾತುಗಳು,
ಮರೆತೇ ಹೋಯ್ತು ನನ್ನ ನಗುವ ಕಾರಣಗಳು,
ಮರೆತೇ ಹೋಯ್ತು ಅಚ್ಚುಮೆಚ್ಚಿನ ಸ್ನೇಹಿತರ ಮನಸು ಮುನಿಸುಗಳು,
ಮರೆತೇ ಹೋಯ್ತು ಮನದಲ್ಲಿನ ಪದಗಳ ಕೊಯ್ಲು ಕವನಕೆ ಸೇರಿಸುವ ಪರಿ.
ಮರತೆ ಹೋಯ್ತು ಮೌನದಲ್ಲಿ ಇದ್ದ ಸೊಬಗು,
ಮರತೆ ಹೋಯ್ತು ಕನ್ನಡಿಯಲ್ಲಿ ಕಂಡ ನನ್ನ ನಗುವಿನ ಹೊನಲು,
ಮರತೆ ಹೋಯ್ತು ನಡೆದು ಬಂದ ದಾರಿಯಲ್ಲಿ ನನ್ನಿಂದೆ ಇದ್ದ ನೆರಳಿನ ಹುಡುಕಾಟ ಇಂದು.
ರೂಢಿ ಆಗಿ ಹೋಯ್ತು ನಾನಲ್ಲದ ನನ್ನ ಜೊತೆಗೆ ದಿನ ಕಳೆಯುವುದು ಪ್ರತಿನಿತ್ಯ,
ರೂಢಿ ಆಗಿ ಹೋಯ್ತು ನನ್ನ ಈ ಸ್ಥಿತಿಗೆ ತಲುಪಿಸಿದ ಪ್ರತಿಯೊಂದು ಕಣ್ಣೀರ ಹನಿಯನ್ನು ನಿಂದಿಸಿ ಅಳುವುದು ನನಗೆ.
"ಹೆತ್ತು ಹೋತು, ಬೆಳಸಿದೆ
ಬಾಳೆಯ ಗಿಡದಂತೆ,
ಲಾಲನೆ ಪಾಲನೆ ಮಾಡಿ ಸಾಕಿದೆ
ಬಾಳೆಯ ಎಲೆಯಂತೆ,
ಎದೆಯಾಲುಣಿಸಿ ಅಸಿವು ನಿಗಿಸಿದೆ
ಮಳೆಯ ಹನಿಯಂತೆ,
ಸೆರಗು ತೊಟ್ಟಿಲು ಕಟ್ಟಿ ಮಲಗಿಸಿದೆ
ಆಗಸದ ಚಂದ್ರನಂತೆ,
ಜೋ... ಜೋ.. ಜೋಗುಳ ಹಾಡಿದೆ
ದುಂಬಿಯ ಜೇನ್ಕಾರದಂತೆ.
ಜೀವ ತೈದು ಜೋಪಾನ ಮಾಡಿದೆ
ಹಿಮಾದ ಮುತ್ತಿನಂತೆ,
ಶೃಂಗಾರ,ಬಂಗಾರ ಮಾಡಿದೆ
ಬಂಗಾರದ ಗೊಂಬೆಯಂತೆ.
"ಎಲ್ಲಿ ಹೋದರಲ್ಲಿ ಸೇರಗಿಡಿದು ಸುತ್ತಿದೆ
ಅವ್ವ...ಅವ್ವ...ಎಂದು ಮರಿದುಂಬಿಯಂತೆ
ಸರಿಸಾಟಿ ಇಲ್ಲ ಈ ಜಗದೊಳ್ ನಿನಗೆ
ಎಷ್ಟೇ ಗುಣಗಾನ ಮಾಡಿದರು ಸಲಾದು
ಈ ಜನ್ಮದೊಳ್ ನನ್ನವ್ವ..........................
ಮದುವೆಗೂ ಮುನ್ನ ನೀನೆ ಇಂದಿರ ನೀನೆ ಚಂದಿರ
ಜಗವೇ ಬೇಡ ನೀನಿದ್ದರೆ ಸಾಕು ನನ್ನ ಹತ್ತಿರ
ಈಗ ಪಕ್ಕದ ಮನೆ ಕೋತಿ ಮೂತಿಯೇ ಸುಂದರ
ಅವಳ ನೋಡಲು ಕ್ಷಣ ಕ್ಷಣ ಎಲ್ಲಿಲ್ಲದ ಕಾತರ
ನಾನು ಹೋದರೆ ಆಗ ಅವರ ಹುಡುಕಿ ಹತ್ತಿರ
ಕಂಡೊಡನೆ ಹೌಹಾರಿ ತತ್ತರಿಸಿ ಮಾಡಿಕೊಳ್ಳುವರು ಬೇಸರ
ಇದಕ್ಕೆಲ್ಲ ಇರುವುದೆ ಯಾರ ಬಳಿಯಾದರು ಮೂಗುದಾರ
ಎದ್ದೇಳು ಬೇಕೆನುವಷ್ಟರಲಿ ಅವನು ಹತ್ತಿರ ಬಂದ
ಇನ್ನ ಸ್ವಲ್ಪ ಹೊತ್ತು ಮಲಗು ನಾ ಟೀ ತರುವೆ ಎಂದ
ಯಾರಿಗೂ ಸಿಗನು ಇಂತ ಗಂಡ ಆಹಾ ಎಂಥಾ ಚೆಂದ
ಎಂದು ಅವನ ನೆನೆದು ಪಡುತ್ತಿರುವಾಗಲೆ ಆನಂದ
ಎದ್ದೇಳೆ ಬೇಗ ಎಷ್ಟೊತ್ತ್ಮಲಗೋದು ನನಗೆ ಟೀ ಬೇಕೆಂದ
ಆಗಲೆ ನೆನಪಾದದ್ದು ಗಂಡ ಕನಸಲಷ್ಟೆ ಚೆಂದ
ಕನಸಲೇ ಅವನ ಕಂಡು ಪಡಬೇಕು ಆನಂದ
ನಿಜವಾಗಿ ಅವನಿಗಿಂತ ಒಂದು ಪ್ರಾಣೀನೆ ಚೆಂದ
ಕಾಣದಿದ್ದಾಗಲಷ್ಟೆ ಅವನು ನನಗೆ ಬೆಳಗಾವಿ ಕುಂದ