ತೋರದಿರಿ ತೋರದಿರಿ ದಲ್ಲಾಳಿಗಳೆ ದರ್ಪ
ನ್ಯಾಯಕ್ಕೂ ಅನ್ಯಯಕ್ಕೂ ನೀವೇ ಕಾರಣವಪ್ಪ.
ರೈತರಿಂದ ಹಣತಿಂದು ಬಂದಿದೆ ಹೊಟ್ಟೆ ದಪ್ಪ
ನಿಮ್ಮ ಹೊಟ್ಟೆ ತುಂಬುವುದು ಅವರಿದಂತಾ ತೀಳಿತೆನಪ್ಪ....
ರೈತರ ಕಣ್ಣಿರಿನಲ್ಲಿ ಸ್ನಾನ ಮಾಡುವ ಆಸೆ ನೀಮಗೇಕಪ್ಪ
ಸ್ಯಾಪಲ್ ಹೇಸರಿನಲ್ಲಿ ತುಂಬುವುದು ನಿಮ್ಮ ಚೀಲ ದಪ್ಪ
ತೂಕಗಳಲ್ಲಿ ಮೋಸ ನಿಮಗೆ ಕಾಮನ್ ಅಪ್ಪ
ಅದನ್ನ ಬಿಟ್ಟು ಸ್ವಲ್ಪ ಮಾನವೀಯತೆ ಕಡೆ ನಿವ್ ನೊಡ್ರಪ್ಪ..
ದುಡ್ಡು ಗಳಿಸೋದೆ ಜೀವನವಲ್ಲ..
ಪಾಪ ಪುಣ್ಯಗಳಿವೇ ಮರಿಬಾರ್ದು ನಾವೇಲ್ಲ.
ಮೋಸ ವಂಚನೆ ತುಂಬಿವೇ ಜಗವೆಲ್ಲ.
ಅದರಲ್ಲಿ ಇದು ಒಂದ್ ಭಾಗ ಅನ್ಕೊಂಡ್ ಸುಮ್ನಿರಕಾಗಲ್ಲ....
ಕೇಳು ದೇಶಕ್ಕೆ ಅನ್ನ ನೀಡುವ ರೈತ
ನಿನ್ನ ಕಣ್ಣಿರಿಗೆ ಬೆಲೆ ಇಲ್ಲ ತೀಳಿತಾ..
ಭೂ ಮಾತೆ ನಿನ್ನ ಕೈ ಬೀಡುವುದಿಲ್ಲ.
ಯಾರನ್ನು ನಂಬಿಕೊಂಡು ನೀ ಕೆಲಸ ಮಾಡಲ್ಲ..
ವರುಷದಲ್ಲಿ ವರುಣನ ದರುಶನವಾದರೆ ಸಾಕು......
ಇದು ನಮ್ಮುರಿನ ರೈತರನ್ನು ಮತ್ತು ದಲ್ಲಾಳಿಗಳನ್ನ ನೋಡಿ ಬರ್ದಿದ್ದು..
ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಕುವೆಂಪು
ಕನ್ನಡ ನಾಡಿನ ರತ್ನಕಿರೀಟ ಕುವೆಂಪು
ತುಂಬಿರುವರು ತಾವು ಬರೆದಿರುವ
ಪ್ರತಿಯೊಂದು ಕನ್ನಡ ಪದಗಳಲ್ಲೂ,
ತಮ್ಮ ಕನ್ನಡಪ್ರೇಮದ ಕಂಪು ಕಂಪು
ಕನ್ನಡ "ಕವಿಚಕ್ರವತಿ೯" ಕುವೆಂಪು.
....... ಸಣ್ಣ ಕವಿ
ರಘುವಿಜಯ ಕಸ್ತೂರಿ
ಬಿಸಿಲು ಬೆಂಗಾಡಿನ ಬಸವಳಿದ
ನನ್ನ ಬಾಳ ಪಯಣದಲ್ಲಿ
ನೀನೇಕೆ ಜೊತೆಯಾದೆ ಒಲವೇ
ನಿನಗೆ ಬೇರೇನೂ ಕೆಲಸ ಇರಲಿಲ್ಲವೇ ?
ಕೆಸರಿನ ಸಮಾಜದಲ್ಲಿ ಮೊಳೆತು ಅರಳಿದ
ಕಂಪು ಸೂಸಿ ನಗೆಯ ಹರಡಿದ
ಕೆಂಪು ತಾವರೆಯು ನೀನು,
ದಿಕ್ಕು ದೆಸೆಯಿಲ್ಲದೆ ಬಂದು
ಬಾಂಧವ್ಯಗಳ ಕಿತ್ತೆಸೆದು,
ತಿಲಾಂಜಲಿಯಿತ್ತು ಹೊರಟಿದ್ದೆ ನಾನು
ಬಿಟ್ಟೆಲ್ಲ ಸಂಪ್ರದಾಯಗಳ
ಬೇಡವಾಗಿತ್ತು ಇನ್ನೆಂದೂ
ಈ ಹುಲು ಮಾನವರ ಸಹವಾಸ
ಹೇಳಿ ಬಿಟ್ಟಿದ್ದೆ ಎಲ್ಲಾ ಸಂಕೋಲೆಗಳಿಗೂ ವಿದಾಯ,
ಆದರೂ ಎಲ್ಲಿಂದ ಬಂದು ನೀನು ಆತುಕೊಂಡೆಯೋ ನಾನರಿಯೆ,
ಬಿಟ್ಟೆನೆಂದರೂ ಬಿಡದೀ ಮಾಯೆ
ಬಟ್ಟಲು ಕಂಗಳ ಮೋಹಕ ಛಾಯೆ
ನಿನ್ನ ಮೋಹದ ಸಂಕೋಲೇ ಕಳಚಿ ಮುಂದೆ ಓಡಲೇ?
ನಿನ್ನ ಕೈ ಹಿಡಿದು ನನ್ನೊಡನೆ ಎಳೆದು ಸಾಗಲೇ ?
ಅರಿತೇನೆಂದರೂ ಅರಿಯಲಾರೆನು ಹೆಣ್ಣೇ
ನಮ್ಮ ಈ ಸಲುಗೆಯ ಕೊನೆಯನ್ನು.
ಮರೆತೇನೆಂದರೂ ಮರೆಯಲಾರೆ ಹೆಣ್ಣೇ
ನಿನ್ನ ಈ ಮಮತೆಯ ಸವಿಯನ್ನು.