Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಹೃದಯ

ಹೃದಯದೂರ ಹೆಬ್ಬಾಗಿಲಲಿ
ನಿಂತ ನೋವುಗಳಿಗೆಲ್ಲ
ಬೀಳ್ಕೊಡುಗೆ ಸಮಾರಾಂಭ ಏರ್ಪಡಿಸಿದಾಗಲೆಲ್ಲ
ಅವು ಕಣ್ಣ ತುಂಬಾ ನೀರು ತುಂಬಿಕೊಂಡು
ಹೋಗುವ ಮುನ್ನ ತಿರುಗಿ ಒಮ್ಮೆ ನೋಡಿದರೆ ಸಾಕು
ಮತ್ತೆ ಶುರು ಎದೆಯೊಳಗೆ ಅವುಗಳ ಮೇಲೆ ಪ್ರೇಮದಾರಂಭ


************************************************


ಈ ಮನಸಿನ ಮನೆಯ ತುಂಬಾ
ನಿನ್ನ ಹೆಜ್ಜೆ ಗೆಜ್ಜೆ ಬಳೆ ನಗು ಇವುಗಳದೇ ಸದ್ದು
ಒಮ್ಮೆ ಅವು ಕೇಳದಂತಾದರೆ ಸಾಕು
ಈ ಹೃದಯವು ಹೊದ್ದು ಮಲಗಿ ಬಿಡುತ್ತದೆ
ನೋವಿನಲಿ ಮೂಕವಾಗಿ ಕನಸುಗಳಿರದೆ ನಿರಾಹಾರಿಯಾಗಿ

- ಶ್ರೀಕಾವ್ಯ

30 Dec 2017, 08:31 am

ಎಡದೊರೆ ನಾಡಿನ್ ಭಂಡ (ಗುಂಡನ್ ಪದಗಳು)

ಎಲ್ರೂ ನನ್ ಕರೀತಾರ ಹಿಂಗ
ಪ್ರೀತಿಲ್.. ಲೋ ಸಿದ್ದು ಗುಂಡ..!
ಕನ್ನಡ್ ನನ್ ಪಿರಾಣ ಅನ್ನೋ
ನಾ ಎಡದೊರೆ ನಾಡಿನ್ ಭಂಡ..!

ಸಾಲಿ ಗೀಲಿ ಕಲ್ತೀನ್ ಸ್ವಲ್ಪ
ಆದ್ರ ಇಂಗ್ಲೀಷ್ನಾಗ ಬಾಳ್ ಹಿಂದ..!
ಕವಿತೆ ಗಿವಿತೆ ಬರ್ತೀನ್ ಸ್ವಲ್ಪ
ಕಾರ್ಣ ನಮ್ ಕನ್ನಡ್ ಬಾಸೆ ಬಲ್ ಚಂದ.!

ಮನಸಿಗ್ ಅನಿಸಿದ್ ಬರಿತೀನ್
ನಾ ಅದೀನ್ ಪಕ್ಕ ಹಳ್ಳಿ ಹೈದಾ..!
ಅಕ್ಷರ್ ಗಿಕ್ಷರ್ ತಪ್ಪಾಗಿದ್ರ
ಬುದ್ಧಿ ಹೇಳ್ರಿ ನೀವ್ ನಂಗ್ ಬೈದಾ..!

ನಾನ್ ಬರೆಯೋ ಪದಗಳ್
ಹಿಂಗೆನೇಯ ಅದ್ಯಾಕೋ ಸ್ವಲ್ಪ ತೊದ್ಲು..!
ನಾನ್ ಇನ್ ಪುಟ್ಟ ಬರ್ತಿನಿ ಇಟ್ಟ
ಹಿಂಗ್ ನಮ್ ರತ್ನಜ್ಜ ಬರದವ್ರೆ ಮೊದ್ಲು..!

ಕನ್ನಡ್ ನುಡಿವೆ ಕನ್ನಡ್ ಬರಿವೆ
ಕನ್ನಡ್ ನಾಡು ಬಾಸೆಗ್ ದುಡಿವೆ..!
ಗುಂಡನ್ ತೊದ್ಲು ಪದಗಳ್ನಾಡ್ತಾ
ಕನ್ನಡಮ್ಮನ್ ಮಡಿಲಲ್ ಮಡಿವೆ..!
- ಸಿದ್ದು ಕನ್ನಡಿಗ

- - ಸಿದ್ದು ಕನ್ನಡಿಗ

30 Dec 2017, 07:52 am

ಕನಸುಗಾರ

"ಕೂಗಿ ಹೇಳುವ ಆಸೆ,
ಅಪ್ಪಿ ಹೇಳುವ ಆಸೆ,
ನಾ ನಿನ್ನ ಪ್ರೀತಿಸುವೆ ಎಂದು.

"ತಿಳಿಯದೆ ಒಳಗಾದೆ ತಳಮಳಕೆ
ನಿನ್ನ ಕಂಡಕ್ಷಣ,ಹೇಗೆ ಹೇಳಲಿ
ನಾ ನಿನ್ನ ಪ್ರೀತಿಸುವೆ ಎಂದು.

"ಹೇಗೆ ತಿಳಿಸಲಿ ಮುಚ್ಚಿಡಲಾರದ
ಈ ಮನಸ್ಸಿನ ಮೌನ ಮಾತನಾ,
ನಾ ನಿನ್ನ ಪ್ರೀತಿಸುವೆ ಎಂದು.

"ಅಂತೂ ಇಂತೂ
ಕೂಗಿ ಹೇಳಿದೆ ಕಣ್ಮುಚ್ಚಿ,
ನಾ ನಿನ್ನ ಪ್ರೀತಿಸುವೆ ಎಂದು

"ಡವಾ,,,,ಡವಾ,,,, ಬಡಿಯುವ
ಹೃದಯ ಹಿಡಿದು,ಒಮ್ಮೆಲೇ ಹೇಳಿದೆ,
ನಾ ನಿನ್ನ ಪ್ರೀತಿಸುವೆ ಎಂದು.

"ಮುಗುಳ್ನಗೆ ಇಟ್ಟು,ನಾಚಿ
ತಿರು....ತಿರುಗಿ ನೋಡಿ, ಹೇಳದೆ ಹೋದೆಯಲ್ಲೇ,
ನಾ ನಿನ್ನ ಪ್ರೀತಿಸುವೆ ಎಂದು.

ರಾಜು

- ರಾಜು ಹಾಸನ

30 Dec 2017, 12:31 am

ಹುಚ್ಚು ಮನಸ್ಸಿನ ಹತ್ತು ಮುಖಗಳು

ಹುಚ್ಚು ಮನಸ್ಸಿನ ಹತ್ತು ಮುಖಗಳು


ಹೇಳದೆ ಖುಷಿ ಪಡುವುದು
ಕೇಳದೆ ದುಖಃ ಪಡುವುದು
ಕ್ಷಣಕಾಲ ಅನುಮಾನಿಸುವುದ
ಕ್ಷಣಕಾಲ ಅವಮಾನಿಸುವುದು

ಒಮ್ಮೆ ದ್ವೇಸಿಸುವುದು
ಮತ್ತೊಮ್ಮೆ ಪ್ರೀತಿಸುವುದು
ಅನುದಿನ ನೋಡುವುದು
ಅನುಕ್ಷಣ ಅನುಭವಿಸುವುದು

ಆಗಾಗ ಕೆಂಡ ಕಾರುವುದು
ಆಗಿಗ ಕೆಟ್ಟ ಆಲೋಚನೆ ಮಾಡುವುದು
ಏನನ್ನೋ ಯೋಚಿಸುವುದು
ಎನೆನೋ ಮರೆಸುವುದು

ಕಂಡಾಗ ನಗುವುದು
ಆ ನಗುವಲ್ಲಿ ನಗುವಿರದು
ಎದುರಿದ್ದಾಗ ಒಳ್ಳೆಯವನೆನ್ನುವುದು
ಮರೆಯಾದಾಗ ಹಿಯಾಳಿಸುವುದು

ಅತಿಯಾಗಿ ಪ್ರೀತಿಸುವುದು
ಪ್ರೀತಿ ಮರೆಯದಾಗ ದ್ವೇಷಿಸುವುದು
ಮನದಲ್ಲೊಂದು ಯೋಚನೆ
ಆಚರಣೆಯಲ್ಲೊಂದು ದುರಾಲೋಚನೆ

ಏನಿದೆಲ್ಲ ಮಾಯೆ,
ನಮಗರಿವಿದ್ದರೂ ಅರಿವಿಲ್ಲದವರಂತೆ
ನಟಿಸುತ್ತಿರುವ ಓ ಮೂಢ ಮನವೆ
ಕಳಚು ನಿನ್ನ ಮುಖವಾಡ ಧರಿಸು ನಿಜ ರೂಪ.


ಹುಚ್ಚು ಮನಸ್ಸಿನ ಹತ್ತು ಮುಖಗಳು
ಅಂಕೆಯಿಲ್ಲದ ಮಂಕು ಮನಸ್ಸಿನ ಹತ್ತು ಮುಖಗಳು.

- ರಾಜು ಹಗ್ಗದ

29 Dec 2017, 11:17 pm

ಕವಿ ಕೋಗಿಲೆ

ಕವಿ ಕೋಗಿಲೆ ಕೂಗಿತು
ಕರುನಾಡ ಮೂಳೆಯಲ್ಲಿ ಕುಂತು,
ಸ್ವರದ ಮಾಧುರ್ಯಕೆ ಎಲ್ಲೆಡೆ ಹಬ್ಬಿತು
ಅದರ ಖ್ಯಾತಿ ನೆರದಿಟ್ಟ ಮಾತಿಗಳಿಂದಾಗಿ.

ಗಮನಸೆಳೆಯುವ ಪ್ರಕೃತಿಯ
ಮಡಿಲ ಮಗುವಾತನು,
ಮೂಢನಂಬಿಕೆಗಳಿಗೆ ಕಡಿವಾಣ
ಹಾಕುವ ಲೇಖನಿಯ ಶಾಯಿ ತಾನು.

ಜಾತಿ- ಮತ ಮೇಲು- ಕೀಳು,
ಭೇದ- ಭಾವ ತಾರತಮ್ಯಗಳಿಲ್ಲದೆ ವಿಶ್ವ ಮಾನವತಾವಾದವನ್ನು ಬೋಧಿಸಿರುವ
ಏಕೈಕ ವ್ಯಕ್ತಿ ಈತನು ನಮ್ಮ ರಾಷ್ಟ್ರಕವಿ
ಕುವೆಂಪು ಈತನು.

- ಚುಕ್ಕಿ

29 Dec 2017, 09:43 pm

ನೂತನ ಪಯಣ...

ಮರಳುತ್ತಿದೆ ಮತ್ತದೇ ಜಾಗಕ್ಕೆ ಮನಸು
ಕಳೆದು ಕೂತೆನಲ್ಲ ನನ್ನಯ ಹೃದಯ
ವಿಸ್ಮಯ ಸುಂದರಿಯ ಮೌನದ ಮಾತಿಗೆ
ಅವಳ ಧ್ಯಾನದಲ್ಲೇ ಕಳೆಯಿತು ಇಪ್ಪತ್ತರ ವಯಸ್ಸು..!

ಮರೆಯಲು ಸಾಧ್ಯವೇ ನನ್ನ ಕನಸಿನ ಕಥೆ
ಮುಸುಕಿ ಹಾಕಲು ಹೋಗಲೆ ಪ್ರೇಮದ ವ್ಯಥೆ
ನೆನಪುಗಳ ಮಳೆಯಲ್ಲಿ ಸಿಹಿಕಹಿಗಳ ಹನಿಯಲ್ಲಿ
ಕೊರೆದು ಹಾಕಲು ನಿಲ್ಲಲೇ ಈ ಹೃದಯದ ಜೊತೆ..!

ಕವಿಯನ್ನಾಗಿ ಮಾಡಿದ ಆ ಬೆಡಗಿಗೆ
ಸವಿಯಾದ ಕ್ಷಣಕೊಟ್ಟ ಆ ಹುಡುಗಿಗೆ
ಕಾದು ಕುಳಿತಿರುವ ಈ ಹುಚ್ಚು ಮನಸಿಗೆ
ಏನ ಹೇಳಲಿಂದು, ಎಲ್ಲಿರುವುದು ಆ ಪ್ರೇಮ ಬಿಂದು..!

ಭೂತ ಭವಿಷ್ಯಗಳ ಸಂತೆಯಲಿ
ಕೊಳ್ಳುವೆ ನಾ ಒಂದು ಹೊಸ ಕವನ
ಮಾಡುವೆನು ಅದರ ಜೊತೆಗೆ ಪಯಣ ನೂತನ
ಹಿಂದಿರುಗಿ ನೋಡದಿರೆ ಬರೆಯಲಾಗದು ಕವನ..!

- ಸಿದ್ದು ಕನ್ನಡಿಗ

- - ಸಿದ್ದು ಕನ್ನಡಿಗ

29 Dec 2017, 09:21 pm

ಪ್ರೀತಿಯ ರಹಸ್ಯ

ಪ್ರೀತಿ ಮಾಡಿದ ಮೇಲೆ ರಹಸ್ಯವ ಬೇದಿಸಬೇಕು..
ಮುಕ್ತ ಮನಸಿನ ಮುಗ್ದ ಮನಸನು ಹೊದಿಸಬೇಕು..
ಅಂತರಾಳದ ಆಸೆಗಳಿಗೆ ಮಿತಿಯಿಲ್ಲದ ಹಠವ ಬಿಡಬೇಕು..
ಜಗಳವೇ ಪ್ರೀತಿಗೆ ನೀರುಣಿಸೋದೇನ್ನುವುದು ತಿಳಿಯಬೇಕು...

- ಆರ್ ಎಸ್ ಸುಗ್ಗಿ.

29 Dec 2017, 09:02 pm

.......

ಕಾಣದೆ ಬಂದವನು ಕಾಣದೆ ಮರೆಯಾದ
ತಿಳಿಯದೆ ಮಾಡಿದ ತಪ್ಪು
ಗೊತ್ತಿಲ್ಲದೆ ಆದ ಪ್ರೀತಿ
ಹೇಳಿದಷ್ಟು ಸುಲಭನ ಪ್ರೀತಿನ ಮರೆಯೋದು
"ಒಂದು ಕನಸು ಏಂದು ತಿಳಿದು ಮರೆತು ಬಿಡು "

ಪ್ರೀತಿನ ಮರೆಯುವುದಕ್ಕಾಗಿ ಪ್ರೀತಿಸಬೇಡಿ
ಪ್ರೀತಿನ ಪ್ರೀತಿಯಿಂದ ಪ್ರೀತಿಸಿ
ಪ್ರೇಮಿಯ ಮನಸ್ಸನು ನೋಯಿಸಬೇಡಿ
ಆ ಮನಸ್ಸಿನ ಮಾತನ್ನು ಕೇಳಿ
ಸಣ್ಣ ಸಣ್ಣ ಕಾರಣಕ್ಕೆ ದೂರ ಆಗೋಣ ಅಂತ ಹೇಳಬೇಡಿ
ಯಾಕೆಂದರೆ ಆ ಮಾತನ್ನು ಕೇಳುವ ಶಕ್ತಿ ಆ ಮನಸ್ಸಿಗೆ ಇರುವುದಿಲ್ಲ

ಪ್ರೀತಿನ ಗೌರವಿಸಿ
ನಿಮ್ಮನ ಪ್ರಾಣಕಿಂತ ಹೆಚ್ಚಾಗಿ ಪ್ರೀತಿಸುವ ಆ ಹೃದಯನ ಕಳೆದುಕೋಳ್ಳ ಬೇಡಿ
ಮತ್ತೆ ಆ ಜೀವ ನಿಮಗೆ ಸಿಗುವುದಿಲ್ಲ

- Shilpa

29 Dec 2017, 08:23 pm

ಭಾಷೆ....

ಗುಡಿಯ ಹೊನ್ನ ಕಲಶವದು
ಬೆಳಕು ಇಲ್ಲದೆ ಹೊಳೆವುದೆ..?!
ಯಾವುದಾದರೇನು ಭಾಷೆಯದು
ನಿತ್ಯ ಬಳಕೆ ಇಲ್ಲದೆ ಉಳಿವುದೆ..?!

- ಸಿದ್ದು ಕನ್ನಡಿಗ

- - ಸಿದ್ದು ಕನ್ನಡಿಗ

29 Dec 2017, 06:32 pm

ನಿನ್ನೆಗಳು..

ನಿನ್ನೆಗಳು..!
ನಿತ್ಯ ಸಂಭ್ರಮದ
ನಂತರ ಕಿತ್ತಿದ
ಕಂಬದ ಕುಳಿಗಳು..!!

- ಸಿದ್ದು ಕನ್ನಡಿಗ

- - ಸಿದ್ದು ಕನ್ನಡಿಗ

29 Dec 2017, 06:09 pm