Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಬೇಸರ...

ಹಕ್ಕಿಗಳ ಇಂಚರದಿ
ತಂಪಾದ ಮುಂಜಾವಲಿ
ನಗುಮೊಗದಿ ಬರುವ
ಪೂರ್ವದಲಿ ನೇಸರ..!
ಹಗಲೆಲ್ಲ ಉರಿದು
ದಘದಹಿಸಿ ಮೆರೆದು
ಸಂಜೆ ಹೊರಡುವ ಮುನ್ನ
ಅವನ ವದನದಲೂ
ಅದೆಕೋ ಕೊಂಚ ಬೇಸರ..!!
#ಸಿದ್ದು_ಗುಂಡ

- - ಸಿದ್ದು ಕನ್ನಡಿಗ

31 Dec 2017, 05:37 pm

ಸೂರ್ಯೋದಯ

ನಸು ನಸುಕಿನ ಇಬ್ಬನಿಯ ಮಂಜಿನಲ್ಲಿ
ಸೂರ್ಯನ ಕಿರಣ ಮಂಜಿನಲ್ಲಿ ಸ್ಪರ್ಶಿಸಿದಾಗ
ಆ ಇಬ್ಬನಿಯ ಮಂಜು ಮಾಯಾವಾಯಿತೆ

ಬದುಕು ಎಂಬ ಜಂಜಾಟದಲ್ಲಿ ಸುಖ ದುಃಖಗಳು
ಆಹ್ವಾನಿಸಿದಾಗ ಜೀವನ ಸುಗಮವಾಯಿತೆ

- ಮಲ್ಲೇಶ್ವರ ನಾಯಕ

31 Dec 2017, 11:51 am

ಗುಂಡನ್ ಕವಿತೆಯ ಪ್ರಾಣ..

ಕನಸಾಗ್ ಬಂದು
ಕಾಡ್ತಾಳಲ್ಲೋ
ಏಂಥಾದ್ ಅವಳ ರೂಪ..!
ಕತ್ತಲ್ ಕೋಲ್ಯಾಗ
ಹಚ್ದಂಗೈತೆ
ಬೆಳ್ಳಿ ಬಟ್ಲಾಗ ದೀಪ...!

ಬೊಮ್ಮ ಏನ್ ಇವಳ
ಮಾವ್ನಿರಬೇಕು
ಜಾಸ್ತಿ ಕೊಟ್ಟವ್ನೆ ಅಂದ..!
ನಾನೇ ಶ್ಯಾಮ
ಅವಳೆ ಭಾಮ
ನಮ್ದು ಜನುಮದ್ ಬಂಧ..!

ಸೀರೆ ಉಟ್ಕೊಂಡ್
ಮಲ್ಗೆ ಮುಡ್ಕೊಂಡ್
ತಳುಕ್ತಾ ಬಳುಕ್ತಾ ಬಂದ್ರೆ..!
ಉರಿಯೋ ಸೂರ್ಯನೆ
ತಣ್ಣಗ್ ಆತಾನೆ
ಇವ್ಳ್ ಹಂಸದ ನಡಿಗೆ ಕಂಡ್ರೆ..!

ಗಂಧದ ವನದೊಳು
ಚಂದದಿ ಅರಳಿದ
ಘಮ್ಮೆನ್ನುವ ಹೂವಿನ ಘ್ರಾಣ..!
ಅವಳದೇ ಧ್ಯಾನ
ಅವಳದೇ ಗ್ರಾಣ
ಅವಳೇ ಗುಂಡನ್ ಕವಿತೆಯ ಪ್ರಾಣ..!

~ ಸಿದ್ದು ಗುಂಡ

- - ಸಿದ್ದು ಕನ್ನಡಿಗ

31 Dec 2017, 11:44 am

ವಧುದಕ್ಷಿಣೆ

ಸಿಂಗಾರದ ಗೊಂಬೆ ಬಂಗಾರ
ತೊಟ್ಟು ಕುಂತಿಹಳು,
ಹರೆಯದ ಹೊಸ ಮಿಂಚಲಿ
ಕಣ್ಣಂಚಿನ ಪನ್ನೀರ ಮಳೆಯಲಿ.

ಬೇಡಿ ಬಂದ ವರನ ಮನ
ಒಲಿಸಿಕೊಳ್ಳಲು ನೂರೆಂಟು ಕನಸು
ಕಾಣುತಿಹಾಳು,
ಸೆರಗಿನ ಹಿಂದೆ ಮುಂದಿನ ಜೀವನದ್ದೆ.

ಲಕ್ಷಗಟ್ಟಲೆ ಹಣವ ಪಡೆದು
ಮಾರಿಕೊಂಡರು ಮಗಳನ್ನು
ಹೆತ್ತ ತಂದೆ - ತಾಯಿ,
ಎಲ್ಲಿಲ್ಲದ ಖುಷಿಯಲ್ಲಿ ಮದುವೆ
ನಡೆಸಿದರು ಕೋಟ್ಯಾದೀಶನ ಕೈ
ಸೇರಿದಳು ತಮ್ಮ ಮುದ್ದಿನ ಮಗಳೆಂದು.

ಅದ್ದೂರಿಯಿಂದ ಮುಗಿಯಿತು
ಮದು ಮಂಗಳ ಮಂತ್ರ,
ಮೆಟ್ಟಿದಳು ಗಂಡನ ಮನೆಯ
ಹೊಸಳನ್ನು ಸರಸತಿ.

ನಿಬ್ಬೆರೇಗಾಗಿ ಕುಸಿದು ಬಿದ್ದಳು
ಅರಮನೆಯಿಂದಿರುವ ಗುಡಿಸಲು
ತಾನಿರುವ ಮನೆಯೆಂದು ತಿಳಿದು,
ಕೊಟ್ಟ ವಧುದಕ್ಷಿಣೆ ರಾಜರ ಬಳಿ
ಸಾಲವೆಂದು ಅರಿತು.

- ಚುಕ್ಕಿ

31 Dec 2017, 10:58 am

ತವರಿಗೆ ಹೊಗ್ಯಾಳೆ ಹೆಂಡಾತಿ

ತವರಿಗೆ ಹೊಗ್ಯಾಳೆ ನನ್ನಾಯ ಹೆಂಡಾತಿ.
ತಮ್ಮನ ಮದುವಿ ಇನ್ನಾ ತಿಂಗಳೈತಿ.
ಹೇಳಾಕ ಕೇಳಾಕ ಏನ್ ಇಲ್ಲದಂಗ ಹಾಗೈತಿ.
ಯಾರಿಗೂ ತೀಳಿತಿಲ್ಲ ನಮ್ಮ ಪಚೀತಿ..


ಬಯ್ಯೊಕೆ ಮನಸ್ಸಿಲ್ಲ ಗದರೋಕೆ ಮನಸ್ಸಿಲ್ಲ
ಯಾಕೆಂದರೆ ಅವಳೇ ನನ್ನ ಮನದ ಒಡತಿ.
ಪ್ರೀತಿಯಾ ಮುತ್ತಿನ ಪಲ್ಲಕ್ಕಿಯನ್ನು
ಏರಿ ಬಂದಳು ನನ್ನಾಯ ಗೆಳತಿ
ಅಂತಾ ನನಗೆ ಬಾಸವಾಗ್ತೈತಿ

- ಅಮರ್ತ್ಯ ಮಾರುತಿ

30 Dec 2017, 11:34 pm

ನಿನ್ನ ಮಾತು

ಇದ್ದಾಗ ಜೊತೆಯಲ್ಲಿ ಕೇಳಲು ನಿನ್ನ ಮಾತು ಪುರುಸೊತ್ತೆ ಇರಲಿಲ್ಲ
ನಿನ್ನಿಂದ ಇರಲು ಇಷ್ಟು ದಿನ ದೂರದಲಿ
ಕಿವಿಗಳು ಕಾದಿರುವುವು ಇಂದು ಮತ್ತೆ ಕೇಳಲು
ಆ ನಿನ್ನ ಮಾತುಗಳನು
ಮನನೊಂದೆ ನಾನಿಂದು
ಮೆಲುಕು ಹಾಕುತ್ತಾ ಆ ನಿನ್ನ ಮಾತು

- ರಘು

30 Dec 2017, 09:55 pm

ಅಮ್ಮ........!!!!!!

ನೀರಿಲ್ಲದೆ ಮೀನುಗಳಿಲ್ಲ,
ಸೂರ್ಯನಿಲ್ಲದೆ ಬೆಳಕಿಲ್ಲ,
ಮಳೆಯಿಲ್ಲದೆ ಬೆಳೆಯಿಲ್ಲ,
ತಾಯಿ ನೀನಿಲ್ಲದೆ ನಾವಿಲ್ಲ.

ನವಮಾಸ ನರಳಿ ಜನ್ಮಕೋಟ್ಟೆ ನಮಗೆ,
ವರ್ಣಿಸಲಿ ಹೇಗೆ ನಿನ್ನ ಮಹಿಮೆಯ ಬಗ್ಗೆ,
ಅದಕ್ಕಾಗಿ ಬರೆಯುತ್ತಿರುವೆ ನಿನಗೆ ಈ ಕವಿತೆ,
ನಮ್ಮಗೆಲ್ಲರಿಗೂ ನೀನೆ ದೇವತೆ.

ತಾಯಿ ನನ್ನ ಬೆಳೆಸಲು ಪಟ್ಟ ಕಷ್ಟ,
ನೋಡಿ ಅನುಭವಿಸಲಾರೆ ನಷ್ಟ,
ಖುಷಿಯಾಗಿ ನೀನು ಇರಲು,
ಆಗುವೆ ನೀನಗೆ ಊರುಗೋಲು.

ತಾಯಿ ನಿನ್ನ ಮುಗಳ ನಗೆ,
ಇರಿಸುತ್ತೆ ನಮ್ಮನ್ನು ತಣ್ಣಗೆ,
ನೀನೆ ಇರುವಾಗ ನಮ್ಮ ಜೊತೆಗೆ,
ಭಯವೇಕೆ.......ತಾಯಿ ಜಗವೇಕೆ??????

- manu

30 Dec 2017, 08:22 pm

ಮೂರನೇ ಮಹಾ ಯುದ್ದ ಬೇಕೆ

ಮೂರನೇ ಮಹಾಯುದ್ದ ಬೇಕೆ
ಮನುಷ್ಯ ಮನುಷ್ಯರ ನಡುವಿನ ಸ್ವಾಥ೯ಕ್ಕೆ
ಜಾತಿ ಧಮ೯ದ ಬಣ್ಣ ಲೇಪನ ಮಾಡಲೇಕೆ
ಮಾನವ ನಿನಗೆ ವಿಶ್ವಧಮ೯
ಯಾವುದೇಂದು ತಿಳಿದಿಲ್ಲವೇಕೆ

ಬಸವ, ಬುದ್ದ,ಏಸು,ಪೈಂಗಬರ್
ಸಾರಿ ಸಾರಿ ಹೇಳಿದ ಧಮ೯ದ
ಸಾರವೆಲ್ಲಾ ಒಂದೇ..
ಮೊದಲು ಮನುಜನಾಗಬೇಕಿದೆ ನೀನೀಗ ಇಂದೇ
ಇಡೀಭೂಲೋಕವನ್ನೆ ಸುಟ್ಟು ಬಿಡಬಲ್ಲೆನೆಂಬ ದುರುಳುತನ
ಸ್ವಾಥ೯ಕ್ಕಿದೆ
ಅದ ಮೆಟ್ಟಿನಿಲ್ಲುವ ಮನುಜ ಪಥದ ಶಕ್ತಿಯೂ ನಮ್ಮಲ್ಲಡಗಿದೆ
ವಿಶ್ವ ಶಾಂತಿಯ ಬಯಸುವ ಮನಸ್ಸುಗಳು ಒಂದಾಗಬೇಕಿದೆ
ವಿಶ್ವಪ್ರೇಮ ಎಲ್ಲರ ಮನದಾಳದಲ್ಲೂ ಹರಡಬೇಕಿದೆ
ಮನುಕುಲದ ಉದ್ದಾರಕ್ಕಾಗಿ
ವಿಶ್ವಧಮ೯ದ ನೀಜಸಾರ ತಿಳಿಯಬೇಕಿದೆ

ಪ್ರೀತಿಯಿಂದ ಅರಿತು ನಡೆದರೆ
ಮಹಾಯುದ್ದದ ಅಗತ್ಯವೇನಿದೆ
ದ್ವೇಶ ಅಸೂಹೆ ಅಹಂಕಾರಗಳಡಗಿ
ಮನಮನಸ್ಸುಗಳ ಬೇಸೆಯ ಬೇಕಿದೆ
ನವಯುಗದ ಆರಂಭಕ್ಕಾಗಿ ಹೋಸ ಚೇತನದ ಸೂಯ೯ ಎಲ್ಲರ ಮನದಾಳದಲ್ಲಿ
ಉದಯಿಸಬೇಕಿದೆ
ಶಾಂತಿ ಮಂತ್ರವ ಪಠಿಸಬೇಕಿದೆ..

- Bhagya Girish

30 Dec 2017, 07:29 pm

ನನ್ನ ಪಾಲಿನ ದೇವತೆ.....

ಕಣ್ಣೇರಿನಲಿ ನೀ ಇದ್ದೆ
ನಿದ್ದೆ ಇಂದ ನಾ ಎದ್ದೆ .
ನನ್ನನ್ನು ನೋಡಿದ ಆ ಕ್ಷಣವೇ
ನಿನಗೆ ಖುಷಿಯಾಯಿತಲ್ಲವೇ?
ದಾನ ಮಾಡಿದೆ ನನಗೆ ನಿನ್ನ ರೂಪವ
ನನ್ನ ಜೀವಕೆ ಕೊಟ್ಟೆ ನೀ ಒಂದು ದೇಹವ.
ನನ್ನ ಪುಟ್ಟ ಕೆನ್ನೆಗಳಿಗೆ ನೀ ಕೊಟ್ಟ ಮೊದಲ ಮುತ್ತು
ಹೊಸ ಜಾಗಕ್ಕೆ ಕಾಲಿಡಲು ಧೈರ್ಯ ತುಂಬಿತು.
ನಾ ಬಿದ್ದರೆ ನಿನಗೆ ನೋವು
ನಾ ತಿನ್ನದಿದ್ದರೆ ನಿನಗೆ ಹಸಿವು.
ಸದಾ ತಾಳ್ಮೆಯಿಂದ ನೀ ಇದ್ದೆ
ನನ್ನನ್ನು ತಿದ್ದುವುದಕ್ಕಾಗಿ ಒಂದೆರಡು ಒಡೆದೆ.
ನನ್ನ ನೋವನ್ನೆಲ್ಲ ನೀ ಸ್ವೀಕರಿಸಿದೆ
ನಿನ್ನ ಖುಷಿಯನ್ನೆಲ್ಲ ನನಗೆ ಕೊಡುಗೆ ನೀಡಿದೆ.
ನನಗಾಗಿ ನಿನ್ನ ಜೀವನವನ್ನೇ ತ್ಯಾಗ ಮಾಡಿರುವೆ
ನಿನ್ನ ಋಣವ ಏಳೀಳು ಜನುಮದಲ್ಲೂ ತೀರಿಸಲಾರೆ.
ನೀನೇ 'ನನ್ನ ಪಾಲಿನ ದೇವತೆ'ಯಾಗಿರುವೆ
"ಅಮ್ಮ....." ನೀ ಎಂದೆಂದಿಗೂ ನನ್ನವಳೇ....

- Priyanka H.S

30 Dec 2017, 07:29 pm

ಭರವಸೆ..

ಬಿಡು ಗೆಳತಿ, ಕಾಣೆಯಾದ ಕನಸುಗಳನ್ನು
ಕಟ್ಟಿಕೊಳ್ಳೋಣ ನಾವೇ ಹೊಸ ಭರವಸೆಗಳ
ಪುಟ್ಟ ಗುಡಿಸಲನ್ನು,
ಗುಡಿಸಿ ಒರೆಸಿ ಹಚ್ಚೋಣ
ದಿಟ್ಟ ಮನದ ದೀವಟಿಕೆಯನ್ನು,
ಕಿತ್ತು ತರುವೆನು ನಿನಗಾಗಿ
ಸಿಹಿ ಸುಖದ ಸವಿಜೇನನ್ನು,
ಉಣಿಸುವನು ಕಯ್ಯಾರೆ ಸವಿಜೇನ ಅಕ್ಕರೆಯ
ನಿನ್ನ ನಗುವಲ್ಲಿ ಕಲೆತ ಸಿಹಿ ಸಕ್ಕರೆಯ,
ನಿನ್ನ ಮಮತೆಯ ಮೃದಂಗ
ತೊಂ ತನನ ನುಡಿದಿಹುದು
ನನ್ನ ಅಂತರಂಗದೊಳಗ,
ಕರೆಯೊಂದ ನೀ ಏಕೆ ಚೆಲ್ಲುವೆ ಚೆಲುವೆ
ಕರೆಯದಿದ್ದರೂ ನಾ ಬಂದು ನಿಲ್ಲುವೆ
ನಿನ್ನ ಮನದ ಅಂತಪುರದೊಳಗೆ.

- ಶ್ರೀಗೋ.

30 Dec 2017, 01:07 pm