Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮುಚ್ಚಿಡಲಾಗದು ನನ್ನಯ ಪ್ರೀತಿ........

ಮುಚ್ಚಿಡಲಾಗದು ನನ್ನಯ ಪ್ರೀತಿ
ಕಣ್ಣೆದುರಲಿ ನೀ ನಿಂತಾಗ
ಬಚ್ಚಿಡಬಹುದೇ ಹೃದಯದ ಆಸೆ
ಮೈಮನದಲಿ ನೀ ಕುಂತಾಗ!

ನಿನ್ನನೇ ಧ್ಯಾನಿಸಿ ಬರೆದಿಹ ಪದಗಳು
ಮೌನವಾಗಿದೆ ನನ್ನೆದೆಯೊಳಗೆ
ಸದ್ದನು ಮಾಡದೇ ಸುದ್ದಿಯ ನೀಡದೇ
ಆವರಿಸಿದೆ ನೀ ನನ್ನೊಳಗೆ!

ನಿನ್ನನು ನೋಡುವ ಕಣ್ಣುಗಳ್ಯಾಕೋ
ಅಚ್ಚರಿ ಸೂಸಿವೆ ಅರೆಕ್ಷಣದಿ
ಕಾಡುವ ಕಣ್ಣಿನ ಸೆಳತಕೆ ಸೋತು
ನನ್ನನೇ ಮರೆತೆನು ಮರುಕ್ಷಣದಿ!

ಪ್ರೀತಿಯ ತಳಮಳ ಯಾರಿಗೆ ತಿಳಿಸಲಿ
ಕನಸಲಿ ಒಪ್ಪಿಗೆ ತಿಳಿಸುವೆಯಾ
ಸುಮ್ಮನೆ ನಿಂತೆನು ನಿನ್ನಯ ಸನಿಹ
ನಗುತಲಿ ನನ್ನನು ಸ್ವೀಕರಿಸುವೆಯಾ!

- ಪ್ರಿಯಾಂಕ

02 Jan 2018, 09:56 pm

ನಿನ್ನ ಮೌನ

ಖುಶಿಯಾಗಿರು
ನಗುನಗುತಿರು
ಚಿಂತೆಯಾಕೆ ನಿನಗೆ
ನಾನಿರವೆ ಸದಾ ನಿನ್ನ ಜೊತೆಗೆ
ಓ ನನ್ನ ಬಾಳ ಸಂಗಾತಿ
ಮಾಡ್ಬೇಡ ನನಗೆ ಪ್ರೀತಿಯಲ್ಲಿಮಿತಿ
ಮಾತುಗಳೆ ಅಂತರಂಗದ ಭಾವನೆ
ಹೇಗೆ ಇರುವುದು ನಾ ನೀ ಮರತೇಬಿಟ್ಟೆ ನನೊಂದಿಗೆ ಮಾತಾಡುವುದನೆ

- ರಘು

02 Jan 2018, 12:52 pm

ಮೇಘ ಸಂದೇಶ

ಮೇಘಗಗಳೇ ಮೇಘಗಗಳೇ
ಹೋಸ ಸುದ್ದಿ ಏನೆಂದು ಹೇಳೆಲೆ
ನಿನ್ನ ಆಗಮನ ಯಾಕೆಂದು ತೋರಲೆ
ನನ್ನ ಇನಿಯನ ಬರುವಿಕೆಯ ಸಾರಲೆ

ಚದುರಿ ಹೋಗದೆ ನಿಂತು ಹೇಳಿರಿ
ಪ್ರೇಮ ಸಂದೇಶ ಅರುಹಿ ಹೋಗಿರಿ
ಮನದಲಿ ಪ್ರೀತಿಯ ಭಾವವೆಚ್ಚಿದೆ
ಹೃದಯದ ಬಡಿತ ಹಿಮ್ಮಡಿಯಾಗಿದೆ

ಇನಿಯನ ಕಾಣುವ ಕಾತರ ಹೆಚ್ಚಿದೆ
ಉಸಿರಿನ ಲಯವು ನಿನ್ನಲಿ ಅಡಗಿದೆ
ಮೇಘ ಸಂದೇಶ ಕೇಳಲು ಬಯಸಿದೆ
ಮನದಲಿ ಕಾಮನೆ ಕೆರಳಿ ನಿಂತಿದೆ


ಹೋಸ ಯುಗಳಗೀತೆ ಹಾಡಬೇಕಿದೆ
ಕೋಗಿಲೆಯ ಸ್ನೇಹ ಮಾಡಬೇಕಿದೆ
ವಸಂತನನ್ನು ಮನ ಕೂಗಿ ಕರೆದಿದೆ
ಪ್ರಾಣಕಾಂತನ ಸೇರಬಯಸಿದೆ
ಮೇಘ ನಿನ್ನ ಸಂದೇಶ ತಿಳಿಯ ಬೇಕಿದೆ

- Bhagya Girish

02 Jan 2018, 12:24 pm

ಹದಿನೆಂಟರ ತುಂಬು ಯೌವನಗಿತ್ತಿ...

ಹದಿನೆಂಟು ತುಂಬಿ ನಿಂತ
ಹದಿ ಹರೆಯದ ಹೆಣ್ಣು,
ಫಸಲು ಬಂದು ತುಳುಕಿದಂತೆ
ಮರದಲ್ಲಿ ಮಾವಿನ ಹಣ್ಣು.

ಗುಡುಗು ಸಿಡಿಲಿಗೆ ಪುಟಿದು ಮೊಳೆಯುವ
ಅಣಬೆಯಂತೆ ದುಷ್ಟ ಮೊಡವೆಯು
ಹರೆಯದೂರಿನ ಹಣೆಯ ಮೇಗಡೆ
ದಾಳಿ ಮಾಡಿವೆ ಬಿಡದೆ ಮೂಗನು.

ಕರಿಯ ಮೇಘವು ಜರಿದು ಬಿದ್ದಿತೊ
ಎನುವ ಅಂದದಿ ತಲೆಯ ಕೂದಲು,
ತಿದ್ದಿ ತೀಡಿದ ಹುಬ್ಬು ಬಾಗಿದೆ
ಮುದ್ದು ಗಲ್ಲವು ಉಬ್ಬಿಕೊಂಡಿದೆ.

ಬಟ್ಟಲು ಕಂಗಳಿಗೆ ಕಾಡಿಗೆಯ ಅಂಚು
ಬಿರಿದ ಕೆಂದುಟಿಗಳಲ್ಲಿ ಕಾಮನೆಯ ಮಿಂಚು
ಸಂಪದ್ಭರಿತ ಹೆಣ್ತನದ ಎದೆಯಂಗಗಳನ್ನ
ಹಿಡಿದಿಟ್ಟುಕೊಂಡ ಉಡುಪುಗಳೇ ಧನ್ಯ !

ಸೌಂದರ್ಯ ಸಿರಿವಂತಿಕೆ ತುಂಬಿದ ಚೆಲುವಿಗೆ
ಕಿರು ಸೊಂಟದಲ್ಲಿ ಮಾತ್ರ ಬಡತನದ ಕಾಣಿಕೆ
ಅಂದಗಾತಿಯ ಅಂದಕೆ ಸುಗುಣಗಳ ಅಲಂಕಾರ
ಹೂ ಮನಗಳ ಸೊಗಸುಗಾತಿಯ ಮೊಗಕೆ
ಸಂಕೋಚವೇ ಶೃಂಗಾರ.

- ಶ್ರೀಗೋ.

02 Jan 2018, 11:13 am

ಬೀಳ್ಕೊಡುಗೆ

ಮುಗಿದ ವರುಷಕೆ ಬೀಳ್ಕೊಡುಗೆ
ಮನಸಲಿ ನೆನಪುಗಳ ಮೆರವಣಿಗೆ
ಕಣ್ಣಾಮುಂದೆ ಎಲ್ಲ ಹಾದುಹೋಗೋ ಘಳಿಗೆ
ಎದೆಯೊಳಗೆ ಸಣ್ಣ ಕಂಪನ ಮೆರವಣಿಗೆಯ ಸದ್ದಿಗೆ

ಒಂದು ವರುಷ ನೂರಾರು ರಸ ನಿಮಿಷ
ದಿನವೂ ಕಷ್ಟ ಸುಖಗಳ‌ ಜೊತೆಗಿನ ಸರಸ
ಪ್ರೀತಿ ಹಂಚಿ ಪ್ರೀತಿ ಪಡೆದ ಕ್ಷಣ ತಂದ ಹರುಷ
ಎಲ್ಲ ನೆನೆನೆನೆದು ನಗಬೇಕು ಕುಳಿತು ಒಂದು ನಿಮಿಷ

ಬದಲಾವಣೆ ಜಗದ ನಿಯಮದ ಸಾರ
ಇಳಿಸಿ ಕೂಡಿಟ್ಟ ಎಲ್ಲ ಎದೆಯ ಭಾರ
ಸಾಗಬೇಕಿದೆ ಸೇರಲು ಮುಂದಿನ ತೀರ
ಹುಡುಕುತ ಕಂಡ ಬಾಳ ಕನಸುಗಳ ವಿವರ

ಈ ವರುಷ ಸೋತಿದ್ದರೇನು ಗೆದ್ದಿದ್ದರೇನು
ಕನಸಿಗೆಲ್ಲಾದರು ಕೊನೆಯಿರುವುದೇನು
ನಗುವ ತುಂಬಿ, ಆತ್ಮಬಲವ ನಂಬಿ ದಾಟಿಬಿಡಲೆ
ಎದುರಾದರು ದಾರಿಗೆ ಸಪ್ತ ಕಡಲೆ

- ಶ್ರೀಕಾವ್ಯ

01 Jan 2018, 06:07 pm

ಕನಸಿನಲ್ಲಿ ಪಯಣ......

ಮನಸು ತೇಲಿ
ನೀಲಿ ಬಾನಲಿ
ನಿನ್ನ ಪಿಸು ಮಾತಿನ ಒಲವಲಿ
ಎದೆತುಂಬಿ ಹೋಗಿದೆ ಮಮತೆಯ ಲಾಲಿ ಲಾಲಿ..

ನಿನ್ನ ಕಣ್ಣಂಚಲಿ
ಬೆಳಂದಿಗಳ ಚೆಲುವಿನಲಿ
ಅರಳಿದ ಸುಮದಲಿ
ಅಡಗಿದೆ ನಿನ್ನ ನಸು ನಗುವಿನ ಸುವ್ವಾಲಿ...

ನೀ ಇಟ್ಟ ಹೆಜ್ಜೆ ಗುರುತಲಿ
ನಾ ಹೊರಳಾಡಿದೆ ಖುಷಿಯಲಿ
ಭಾವನೆಗಳ ಲೋಕದಲಿ
ಮರೆತು ಹೋಗಿರುವೆನು ನಾನು ನಿನ್ನದೇ ಗುಂಗಲಿ..

- ಮಳೆಯಲ್ಲಿ ಜೋತೆಯಲ್ಲಿ

01 Jan 2018, 05:46 pm

ನೀನ್ಯಾರು?ನೀನೆಲ್ಲಿರುವೆ

ಬಾನಿನಲ್ಲಿ ಅವಿತ ಚುಕ್ಕಿಯಂತೆ,
ಹೂವಿನಲ್ಲಿ ಅವಿತ ಪರಿಮಳದಂತೆ,
ಕಣ್ಣಿನ ರೆಪ್ಪೆಯ ಹಿಂದೆ ಅವಿತು,
ಯಾರು ಇರದ ಸಮಯ ಬರುವೆ.

ರಸ್ತೆಯಲ್ಲಿ ನಾ ಓಡುವಾಗ,
ಕಲ್ಲು ತಗುಲಿ ಎಡವಿದಾಗ,
ಇರಲಿಲ್ಲ ಯಾರು ನನ್ನ ಜೊತೆ,
ಕ್ಷಣಮಾತ್ರದಲ್ಲಿ ಬಂದೆ ಮುತ್ತಿನ ಹನಿಯಂತೆ.

ಹಸಿವಿನಿಂದ ಕರು ದೂರವಾದಂತೆ,
ಹತ್ತಿರದವರು ದೂರವಾದಗ,
ಮೇಲಿನಿಂದ ಆಲಿಕಲ್ಲು ಉದುರುವಂತೆ,
ಮನಸ್ಸು ಚುಚ್ಚವಂತೆ ಬರುವೆ.

ಬಡಿಯುವ ಹೃದಯವ ನೋಡಿದೆ,
ಅದರ ಬಡಿತವನ್ನು ಕೇಳಿದೆ,
ಮಿಟಕ್ಕಿಸುವ ಕಣ್ಣರೆಪ್ಪೆಯನ್ನು ನೋಡಿದೆ,
ದುಃಖಪಟ್ಟೆ ನೀ ಕಾಣದೆ.

ಹೊಸ ಲೋಕ ನೋಡಲು ಬಂದಾಗ,
ನನ್ನ ಬಳಿಯಿರುವೆ,
ಸ್ವರ್ಗ ಲೋಕಕ್ಕೆ ಹೋದಾಗ,
ಬೇರೆಯವರ ಬಳಿಯಿರುವೆ.

ರೈತನ ಒಣಗಿದ ಭೂಮಿಯಲ್ಲಿ,
ಬರುವ ಮಳೆ ಹನಿಯಂತೆ,
ನನ್ನ ಮನಸ್ಸು ಬತ್ತಿ ಹೋದಾಗ,
ಎಲ್ಲಿಂದಲೊ ನೀ ಬರುವೆ.

ದೇವರು ಸೃಷ್ಟಿಸಿದ ನಿನ್ನನ್ನು,
ನೋವು-ನಲಿವು ಪ್ರತಿಬಿಂಬದಂತೆ,
ಕೊನೆಯಾಗಿ ತಿಳಿಯಿತು ನಿನ್ನ ಹೆಸರು,
ನಿನ್ನನ್ನು ಕರೆಯುತ್ತಾರೆ ಕಣ್ಣಿರು............

- manu

01 Jan 2018, 12:47 pm

ಕನವರಿಕೆ....

ಕಣ್ಣಂಚಿನ ಈ ಮಾತು,
ಕ್ಷಣದಿ ಮನವ ಕದಡಿತು,
ತುಟಿಯಂಚಿನ ಈ ಮುಗುಳ್ನಗು,
ಮರೆಸಿತು ನೂರೆಂಟು ನೋವನು,
ಶ್ರುಂಗಾರ ಕಾವ್ಯದ ಈ ಹೆಸರು, ಚಡಪಡಿಸಿತು ಮಗ್ನ ಕನಸಲ್ಲು....®

- Sri....

01 Jan 2018, 11:22 am

ನೆನಪಿಗೆ ನಮನ.

ನಮನ
""""""""""""""""

ಕನಸುಗಳಿಲ್ಲದ ಕವನಗಳು .
ಲೇಖನಿ‌ ಇಲ್ಲದ ಬರಹಗಳಂತೆ.
ಪಲ್ಲವಿ‌ ಇಲ್ಲದ ಚರಣಗಳು.
ಹ್ರುದವೇ ಮಿಡಿಯದ ಮನಸುಗಳಂತೆ
ಗಮನವ ಸೆಳೆಯುವ ಪ್ರಕೃತಿಯು.
ತಾಯಿಯ ಮಡಿಲಿನ ಹಾಸರೆಯು.

ರೆಪ್ಪೆಯಲ್ಲಿ‌ ಮಿಡಿಯುವ ಕಣ್ಣುಗಳು
ಕನಸೇ ಕಾಣದ ಬಲ್ಬುಗಳಂತೆ.
ರಸ್ತೆಯಲ್ಲಿ ಇರುವ‌ ಬೀದಿ‌ ದೀಪಗಳು.
ಬಡವರ ಪಾಲಿಗೆ ದೇವತೆಯು.

ಹೊಸವರುಷವು ತರುತಿದೆ ಹರುಷವನು.
ಹೊಟ್ಟಾಗಿ ಸ್ಮರಿಸೋಣ ಹಿಂದಿನ ದಿನಗಳನು.
ಕೈ ತಟ್ಟಿ ಕರೆಯೋಣ ಮುಂದಿನ ವರುಷವನು
ಮನಸ್ಸಾರೆ ಕಳಿಸೋಣ ಹಿಂದಿನ ದಿವಸಗಳನು......

( ನೆನಪಿನ ನಾವಿಕ ಸಂತೋಷ್ )

ಹೊಸ ವರ್ಷದ ಹಾರ್ದಿಕ ಶುಭಾಶಯಗಳು.

- ಸಂತೋಷ್//ಜೀತು

31 Dec 2017, 09:29 pm

ಕನಸು

ಕನಸುಗಳು ಮಾತಾಡಿಕೊಂಡಿವೆ
ನಾ ನಿದ್ರೆಗೆ ಜಾರುವ ಮುನ್ನವೇ....
ಮನಸ್ಯಾಕೋ ಬೇಜಾರಿನಲ್ಲಿದೆ
ಸಿಹಿಕನಸುಗಳು ಮೂಡದೆ...
ಕನಸ್ಯಾಕೊ ಹಠವ ಮಾಡುತ್ತಿದೆ
ಮತ್ತೆ ಜೊತೆಯಾಗಿ ಸೇರಲು...
ನೀನಾದರೂ ತಿಳಿಸಬಾರದೆ
ಹೃದಯವು ಅಳುತ್ತ ಕುಳಿತಿವೆ..
ಎಲ್ಲವನು ತಿಳಿದು ತಿಳಿಯದಂತಿರುವೆಯಲ್ಲಾ
ಸುಮ್ಮನೆ ಬಂದುಬಿಡು ಕನಸಲ್ಲಿ....

- ಪ್ರಿಯಾಂಕ

31 Dec 2017, 09:05 pm