( ಮಂಜು ನಂಜಾಯಿತು)
ಮುಂಗುರುಳ ಮುಂಜಾನೆಯ
ಮಂಜನ್ನು ಇಷ್ಟ ಪಟ್ಟ ಮಂದಾರದ ಹೂವೆ.
ಮರೆಯಬಾರದೀ ಮಂಜ ಹನಿಯನ್ನು.
ನಿನ್ನ ಹೆಸಳಿನಿಂದ ಜಾರಿ ಬೀಳುವವರೆಗೂ.
ನನ್ನ ನೆನಪಂತೆ ನಿನ್ನನ್ನೆ ಹಿಂಬಾಲಿಸುವ ನನ್ನ ಮನಸ್ಸಿನಂತೆ.
ನಾ ನಡೆಯುವ ದಾರಿಯಲ್ಲಿ ನಿನ್ನ
ಕಣ್ಣೀರಿನ ಓಂದು ಹನಿಯು ಬೀಳಬಾರದೆಂಬ ಶ್ರಮದಲ್ಲಿ ನಿನ್ನ ಸೇರುವ ದಾರಿ ನನಗೆ ತಪ್ಪಿ ಹೊಯಿತು.
ಅರ್ದದಲ್ಲಿ ಮುರಿದುಬಿದ್ದ ಹಗಲು ಕನಸ್ಸಂತೆ ನಮ್ಮಿಬ್ಬರ ಪ್ರೀತಿ.
ನನ್ನಿಂದ ನೀಅಗಲಲು ಕವಲೊಡೆದ ದಾರಿಯಂತಾಗಿದೆ ನನ್ನ ಈ ಬದುಕು
ಬಾನಲಿ ಆ ಸೂರ್ಯನ ಉದಯ
ನಿನ್ನ ಸೇರಲು ಕಾದಿಹೆ ಸಮಯ
ಹೇಳೇ ನೀನೇ ನನ್ನ ಕಾಡುವ ಹೃದಯ
ಎಂದು ನೀ ನನರಿವೆ ನನ್ನ ಪ್ರೀತಿಯ ಪರಿಯ
ಸೂರ್ಯ ಚಂದ್ರರೇ ಕೇಳಿ ಇದು ಕಳುವಾಗಿರೋ ಕುತುಹಲದ ಕನಸು
ಭೂಮಿ ಬಾನಿಗೂ ತಿಳಿಯದು ಎಂದು ಅವಳೇ ನನ್ನ ಸಿಹಿ ಮುನಿಸು
ನೀನೇ ಬಂದು ಪ್ರೀತಿಯ ಸೆರೆ ಬಿಡಿಸು
ನಿನ್ನ ನಗುವಿನ ಹೊನಲನು ಹರಿಸು
ಎಂದೂ ಸಿಗದಿರೋ ಪ್ರಶ್ನೆಗೆ ಒಲವಿನ ಉತ್ತರಿಸು... ನೀನೇ ಪರಿಹರಿಸು....
ನಿನ್ನ ನಗುವಿನ ಹಾಡು ಕೇಳಿದೆ ಇಂಪನ
ಹೃದಯದಿ ಆಗಿದೆ ತಿಳಿಯದ ಕಿರು ಕಂಪನ
ನಿನ್ನನು ಕಾಯುತ್ತಾ ಮುದವಾಗಿ ಏರಿದೆ ಮಂಪನ
ಕನಸಲಿ ನಡೆದಿದೆ ಮಾತು ಮೌನಗಳ ಮಂಥನ
ಓ ಪ್ರೀತಿಯೇ ಏನೀ ಹುಡುಗಾಟ
ನಿನಗಾಗಿಯೇ ನಾನಿನ್ನೂ ಹುಡುಕಾಟ.....
ಕುಂಟು ನೆಪಕೆ
ಕೆಂಪೇರುವ ನಿನ್ನ ಕೆನ್ನೆಯಾಣೆ
ಕೆಂಪೇರಿದಷ್ಟು ಅರಳುವ
ಆ ಮುದ್ದು ಕಂಗಳ ಆಣೆ
ಪಿಸುಮಾತಿನ ನಿನ್ನ ಬೈಗುಳ
ಹಾಡಿದಂತೆ ಕಿವಿಯಲಿ ಜೋಗುಳ
ಜೊತೆಯಲ್ಲಿ ಬಾಳುವ ಕನಸು
ನೆನೆದರೇ ಪ್ರತಿ ಕ್ಷಣ ಸೊಗಸು
ಮುದ್ದು ಗೆಳತಿಯೇ
ಮನದ ಒಡತಿಯೇ
ನಿನ್ನ ಹುಸಿಮುನಿಸೇ
ನನಗೆ ಸಿಹಿತಿನಿಸು
ರೈತರು ರೈತರು ರೈತರು
ಭೂವಿಯನು ನಂಬಿ ಬದುಕುವರು
ಹಗಲಿರುಳೆನ್ನದೆ ದುಡಿಯುವರು
ಬೆವರನು ಬಸಿದು ಬೆಳೆಯುವರು
ಅನ್ನವ ನೀಡುವ ದೇವರು
ದೇಶದ ಬೆನ್ನೆಲಬು ಇವರು
ನೆಗಿಲ ಯೋಗಿಗಳೋ ಇವರು
ದಣಿವನೆ ಅರಿಯದ ಶ್ರಮಿಕರು
ರೈತರು ರೈತರು ರೈತರು
ಧರಣಿಯ ಉಳುವರು ಪ್ರೀತಿಯಲಿ
ಸಂತೋಷದಿ ನಲಿವರು ಮಳೆಯಲಿ
ಕೂಡಿ ದುಡಿವರು ಸ್ನೇಹದಲಿ
ಪ್ರೀತಿಯ ಮಕ್ಕಳು ಭೂ ತಾಯಿಯ
ಮಡಿಲಲಿ...
ಅನ್ನವ ನೀಡುವ ಅನ್ನ ದಾತರ
ನಮಿಸಿ ಮನದಲ್ಲಿ..
ಹೇಳಿ ಮಣ್ಣಿನ ಮಕ್ಕಳೇ ನಿಜ ದೇವರು
ಈ ಧರಣಿಯ ಒಡಲಲಿ
ರೈತರು ರೈತರು ರೈತರು