Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಧ್ಯಾನ..

ತನುವ ಮರೆತು
ಚಿತ್ತ ಶುದ್ಧಿಯಿಂದ
ನಾನು ಧ್ಯಾನ ಮಾಡಿದೆ..!
ಆದರೂ ನಿನ್ನಯ
ನೆನಪು ಎನ್ನ ಮನವ
ಎಡೆಬಿಡದೆ ಕಾಡಿದೆ..!!
- ಸಿದ್ದು ಕನ್ನಡಿಗ

- - ಸಿದ್ದು ಕನ್ನಡಿಗ

08 Jan 2018, 10:09 am

ಮೂಕ ರೋದನೆ

ಜನ್ಮವೆತನಾ ಕೀಳಾಗಿ ಮುರುಕ
ಗುಡಿಸಲಲ್ಲಿ
ಬೆಳೆದರೆನ್ನ ಬೋಳಾಗಿ ಎಂಜಲ
ಗಂಜಿಯಲ್ಲಿ
ಬರೆದರೆನ್ನ ಪೊಳ್ಳಾಗಿ ಕೆಟ್ಟ
ಪದಗಳಲ್ಲಿ
ದುರುಗುಟ್ಟುವರೇನಾ ನಂಜಿನ
ಕಣ್ಣುಗಲ್ಲಿ
ಉಲಿಯುವರೆನ್ನ ಕಂಡು
ಬುಗ ಬುಗ ನೆ
ಬಡಿಯಲು ಬರುತ್ತಿಹರು ನಡೆವ
ದಾರೀಲಿ
ಕಂಡರೆನ್ನ ಕೆಂಡ ಕಾರುವ ಅಗ್ನಿ
ಕುಂಡದಂತೆ
ನಡೆಸುವರೆನ್ನ ಕೊಂಡದ
ಓಣಿಯಲ್ಲಿ ಕುಪಿದು
ಸೊಲ್ಲೆತ್ತಲು ಮಟುಕುವರು
ದೊಣ್ಣೆ ದಡಿಗಲಿ
ಇರಲೊಲ್ಲೆನವ ಇಲ್ಲಿ ಎನ್
ನ ಬರಮಾಡಿಕೊ ಹಡೆದವ್ವ ನೀ
ನಿರುವಲ್ಲಿಗೆ
ಇದು ನಾಕವಲ್ಲ ನಯವಂಚಕರೇ ತುಂಬಿರುವ ನರಕ

- RaviThondgere

07 Jan 2018, 07:00 pm

ಬಯಕೆಯು ಈಗ

ಈ ಹೃದಯದಲ್ಲಿ
ನಿನ್ನ ದನಿಯು
ಅರಿತು ಮಿಡಿವಾಗ...‌.
ಆ ತಂಪು ಗಾಳಿ
ತಂತು ಇಲ್ಲಿ
ಹೊಸತು ಅನುರಾಗ..!!

ಉಸಿರು ನಿನ್ನಯ
ಹೆಸರ ನೆನೆದು
ಖುಷಿಯ ಪಡುವಾಗ....
ಈ ಮನದ ತುಂಬ
ನಿನ್ನ ಬಿಂಬ
ಅದುವೆ ಶುಭಯೋಗ..!!

ನೀ ಅರಿಯದಂತೆ
ನಾ ನಿನ್ನ ಜೊತೆಗೆ
ಸಾಗಿ ಬರುವಾಗ....
ನನ್ನ ನೆರಳಿಗೂನೂ
ಬೆರಳ ಬೆಸೆವ
ಬಯಕೆಯು ಈಗ..!!

- ಪಿ.ಜಿ.ಜ್ಯೋತಿ

07 Jan 2018, 04:35 pm

ಈ ಮೌನ ಸಾಕಾಯಿತೇ...

ಒಂಟಿ ಮೈನ
ಯಾಕೆ ಈ ಮೌನ
ಮಾತು ಬರದಾಯಿತೇ!!
ಇನಿಯ ದೂರಾಗಿ
ಸನಿಹ ಏಕಾಂತ
ಬದುಕು ಬರಡಾಯಿತೇ!!

ಹೆಸರು ಇಲ್ಲದ ಪ್ರೀತಿ
ಹಸಿರು ಮರದ ತುಂಬ
ಚಿಗುರಿ ಮರೆಯಾಯಿತೇ!!
ಕಣ್ಣ ಬೆಳಕಿನ ಪ್ರೀತಿ
ಸಣ್ಣ ನೆಪವನು ಹೂಡಿ
ಮಿಂಚಿ ಕಳೆದೋಯಿತೇ!!

ಯಾರ ಕನಸಿನ ಒಲವು
ಯಾರ ಪಾಲಿಗೆ ವರವೋ
ಕರಗಿ ಕೊನೆಯಾಯಿತೇ!!
ನೆರಳ ನೆನಪಿನ ಬದುಕು
ಕೊರಳ ತುಂಬಿದೆ ನೋವು
ಮಾತು ಬರದಾಯಿತೇ!!

ಈ ಮೌನ ಸಾಕಾಯಿತೇ...‌.

- ಪಿ.ಜಿ.ಜ್ಯೋತಿ

07 Jan 2018, 04:34 pm

ಆ ನಾಳೆ.

ವರುಷ ವರುಷಗಳೇ ಕಳೆದುಹೋಯಿತು ,

ಒಳ್ಳೆಯ ದಿನಗಳ ಕಾಯುವಿಕೆಯಲ್ಲಿ

ಕನಸುಗಳಿಗೂ ಜೀವ ಬರುತ್ತದೆ ಎಂಬ ಆಸೆಯಲ್ಲಿ

ಬರೀ ನಿರೀಕ್ಷೆಯಲ್ಲಿ..

ನಿನ್ನೆಯ ದಿನಗಳಲ್ಲಿ ಖುಷಿಯಿರಲ್ಲಿಲ್ಲ

ಇಂದಿನ ದಿನಗಳಲ್ಲೂ ಖುಷಿಯಿಲ್ಲ

ಬರುವ ನಾಳೆಯಲ್ಲಾದರೂ

ಖುಷಿಯಿರಬಹುದೆಂಬ ಆಸೆ..

ಕಣ್ಣೀರನ್ನು ಕಾಣದಂತೆ ಅಡಗಿಸಿಟ್ಟು

ನಿತ್ಯ ನಗುವಿನ ಮುಖವಾಡ ಹೊತ್ತು

ಬರೀ ನಟನೆಯನ್ನೇ ಜೀವಾಳವಾಗಿಸಿದ

ಬದುಕು ಸಾಕಾಯ್ತು..

ನನಗೂ ಬೇಕಿದೆ, ಎಲ್ಲರಂತೆ ಸ್ವಚ್ಛಂದ ನಗು

ಖುಷಿಯಲ್ಲೂ ಬರುವ ಸುಂದರ ಅಳು

ಚಿಂತೆಯಿಲ್ಲದೆ ಬರುವ ಆರಾಮ ನಿದ್ದೆ

ನನಗೂ ಬೇಕಿದೆ..

ಕಂಡ ಕನಸಲ್ಲಿ ಕೆಲವಾದರೂ ನನಸಾಗಬೇಕು

ದುಃಖವಿದ್ದರೂ, ಖುಷಿಗೆ ಕೊರತೆಯಿರಬಾರದು

ನಾನು ಎಲ್ಲರಂತೆ ನಗಬೇಕು,

ಬದುಕನ್ನು ಪ್ರೀತಿಯಿಂದ ಪ್ರೀತಿಸಬೇಕು

ಆದರೆ, ವರುಷಗಳಿಂದ ಕಾದರೂ

ಇನ್ನೂ ಬರುತ್ತಿಲ್ಲ ಆ ದಿನ..

ರಾಮ ಶಬರಿಗೆ ಕಾದಂತೆ ಕಾದಿದ್ದೇ ಬಂತು

ಎಂದು ಬರುವುದೋ ಆ ನಾಳೆ..


ರಚನೆ :- ಮಂಜುನಾಥ.ಸಿ 

            ಕಾಡುಗುಡಿ..

ಕಾಡುಗುಡಿ ಜನಪದ ಸಾಂಸ್ಕ್ರುತಿಕ ವೇದಿಕೆ ..

- Manjunath C

07 Jan 2018, 11:16 am

ಗೆಳೆತನ....

ನೆನಪಿನ ಹೊಳೆಯಲಿ..
ನಿನ್ನ ನೆನಪು ಮಸುಕು..
ಆದರೂ ಮನ ನಸುನಕ್ಕು..
ಹೇಳುತಿದೆ ಗೆಳತಿ..
ಬಾಳಿನ ಬವಣೆಯಲಿ..
ಕಳೆದುಹೋಗಿ..
ಸ್ನೇಹವೆಂಬ ಕಡಲಿನಲಿ..
ಮತ್ತೆ ಸಿಕ್ಕ ಸುಂದರ ಮುತ್ತು..
ನೀ ನನ್ನ ಬಾಳಿಗೆ ಯಾವತ್ತು....

- KR Sreekamala

07 Jan 2018, 09:18 am

ಕನ್ನಡ ಕಲರವ

ಕನ್ನಡ ಕಲರವವೋ
ಇದು ಸುಂದರ ಲೋಕವೋ
ನೂತನ ಅನುಭವವೋ
ಎಲ್ಲಾ ಕವಿಗಳ ಸ್ವಗ೯ವೋ

ಕನ್ನಡ ಪದವ ಬಳಸಿ
ಕಾವ್ಯ ಸುಧೆಯ ಸುರಿಸಿ
ಕನ್ನಡ ತಾಯಿಯ ಸ್ಮರಿಸಿ
ನುಡಿಯ ನಮನ ಸಲ್ಲಿಸಿ

ಕವಿಗಳ ಮನಸ ಬೆಸೆದು
ಒಂದೆಡೆ ಎಲ್ಲರ ಸೆಳೆದು
ಸ್ನೇಹದ ಬಲೆಯ ಹೆಣೆದು
ಕಾವ್ಯ ಲೋಕದಲಿ ಮಿಂದು

ಕವಿ ಮನ ನಲಿಯುತಿದೆ ಇಂದು
ಕವನ ಮಳೆ ಸುರಿಸುತಲಿ ಬಂದು
ಹೇಳಿದೆ ಕನ್ನಡಿಗರೆಲ್ಲಾ ಒಂದು
ಈಗೆ ಇರಲಿ ಪ್ರೀತಿಯ ಬಂಧನವು
ಕನ್ನಡ ಕಲರವದಲಿ ಎಂದೂ
ಕನ್ನಡ ಕವನದಲಿ ಮುಂದೂ..

- Bhagya Girish

07 Jan 2018, 09:17 am

ಪ್ರೀತಿಯ ಪರಿ....

ನಿನ್ನ ಕಂಡು ಮನವಾಗಿದೆ ಸುಂದರ ಪತಂಗ
ಹರುಷದಿ ಮಿಡಿದಿದೆ ನನ್ನೀ ಭಾವ ತರಂಗ
ಏನೋ ನುಡಿದಿದೆ ಹೃದಯ ಪ್ರೀತಿಯ ಮೃದಂಗ
ಆಗು ಇನಿಯ ನೀ ನಾ ತಿಳಿಯದ ಅಂತರಂಗ
ಮಾತು ಮೌನದ ನಡುವೆ ನಡೆದಿದೆ ಮೌನದ ಚಿತ್ರಾಂಗ

- Jyothi

07 Jan 2018, 06:57 am

ಕನ್ನಡ...

"ಕನ್ನಡ!!!"
ಬರೀ ಮೂರು ಅಕ್ಷರಗಳ ಪದವಾಗಿರಬಹುದು
ಆದರೆ ಎಲ್ಲ ಕನ್ನಡಿಗರ ಉಸಿರಾಗಿರುವುದು.
ಕರ್ನಾಟಕದ ಮಾತೃ ಭಾಷೆ ಇದು
ಕೆಂಪು-ಹಳದಿ ಬಣ್ಣದ ಉಡುಪು ತೊಟ್ಟು ನಿಂತಿರುವುದು.
ಪಂಪ , ರನ್ನರಿಂದ ಹಿಡಿದು ಕುವೆಂಪು, ಬೇಂದ್ರೆಯರ ವರೆಗೆ
ಕವಿತೆ, ಕಾವ್ಯ, ಸಾಹಿತ್ಯದ ಭಂಡಾರ ತಂದಿರುವರು ಇಲ್ಲಿಯವರೆಗೆ.
ವಚನಗಳಿಗೆ ಜನ್ಮ ಕೊಟ್ಟಂತಹ ಭಾಷೆ ಇದು
ಎಂಟು ಬಾರಿ ಜ್ಞಾನಪೀಠ ಪಡೆದ ಸಾಧನೆ ಇದರದ್ದು .
ಈಗ ಕನ್ನಡವು ಎಲ್ಲೂ ಮರೆಯಾಗಿ ಕೂತಿದೆ
ಎಲ್ಲೂ ಒಂದು ಮೂಲೆಯಲಿ ಕಂಬಳಿ ಹೊದ್ದು ಮಲಗಿದೆ .
ಮಲಗಿರುವ ಕನ್ನಡವನ್ನು ಸ್ವಯಂಪೂರಕವಾಗಿ ಎಬ್ಬಿಸುವುದು ಅನ್ವಯ
ಕನ್ನಡ ಎಂಬ ಭಾಷೆ "" ಇತ್ತು ..."" ಎಂದು ಹೇಳುವ ಸಂದರ್ಭ ಬಾರದ ಹಾಗೆ ನೋಡಿಕೊಳ್ಳುವುದು ನಮ್ಮ ಕಾರ್ಯ .
ಇಲ್ಲಿರುವ ಇತರ ಜನರಿಗೆ ಕನ್ನಡ ಕಲಿಸುವ ಪ್ರಯತ್ನ ಮಾಡೋಣ
" ಕನ್ನಡ್..." ಅಲ್ಲ " ಕನ್ನಡ ..." ಎಂದು ತಿಳಿಸೋಣ .
ಎಲ್ಲರು ಕೂಡಿ ನಮ್ಮ ನಾಡಿನ ಧ್ವಜವ ಹಾರಿಸೋಣ
ನಾವು ಕನ್ನಡಿಗರು ಎಂದು ಹೆಮ್ಮೆ ಇಂದ ಹೇಳೋಣ.

- Priyanka H.S

06 Jan 2018, 09:59 pm

ರೈತನೇ ನಮ್ಮ ದೇವರು

( ರೈತ ನಮ್ಮ ದೇವರು )

ರೈತನೇ ನಮಗೆಲ್ಲ ಅನ್ನದಾತ.
ನಾ ಹೇಳುತ್ತಿರುವೆ ನಿಮಗೆ ಪ್ರೀತಿ ಮಾತ.
ನಾವು ತಿನ್ನುವ ಆಹಾರದಲ್ಲಿ ಇಲ್ಲ
ಅವನ ಹೆಸರು.
ಅವನು ಬೆಳೆದಂತಹ ಪೈರಲಿತ್ತು .ಅವನ ಉಸಿರು.
ಬಡವನಿಗೆ ಗಂಜಿಗೆ ಗತಿ ಇಲ್ಲದಿದ್ದರೂ.
ನಮಗೆ ತಿನ್ನಲು ಅಹಾರ ಓದಗಿಸುವವನೆ ರೈತ. ಅವನೇ ನಮಗೆಲ್ಲ ಜೀವದಾತ.

ಕಾಲ ಕಾಲಕ್ಕೆ ಮಳೆ ಇಲ್ಲದಿದ್ದರೆ. ಬರುತ್ತಿತ್ತು
ಅವನ ಕಣ್ಣಲ್ಲಿ ನೆತ್ತರು.
ಬರಗಾಲದಲ್ಲಿ ಆಗುತ್ತಿತ್ತು ಭೂಮಿಯೆಲ್ಲ ಭಂಜರು .
ಅವನು ನೆತ್ತರು ಸುರಿಸಿ‌. ದಾನ್ಯವನ್ನು ಬೆಳೆಸಿ
ಅನ್ನ ನೀಡುವವನೇ ರೈತ.

ತನ್ನ ಕಣ್ಣಿರನ್ನು ಮರೆತು.
ನಮಗಾಗಿ ಮೈಯೆಲ್ಲ ಬೆವತು .
ಆಹಾರವನ್ನು ಬೆಳೆದ ರೈತನೇ ನಮಗೆಲ್ಲ ದೇವರು. ರೈತನನ್ನು ಗೌರವಿಸಿ.

ರಚನೆ = ( ನೆನಪಿನ ನಾವಿಕ ಸಂತೋಷ್ )

- ಸಂತೋಷ್//ಜೀತು

06 Jan 2018, 07:05 pm