ಅಲೆದಾಡುತಲಿ ನಾನೊಮ್ಮೆ ಹೊಕ್ಕೆ
ಹೂವೊಂದೂ ಕಾಣದ ಹೂದೋಟಕ್ಕೆ.
ಎತ್ತ ಹುಡುಕಿದರೂ ಒಂದು ಹೂವಿಲ್ಲ
ಹತ್ತಿರ ಸೆಳೆವ ಒಂದು ನಗುವಿಲ್ಲ,
ಅತ್ತಿತ್ತ ತಿರುಗಿ, ನನ್ನಾಸೆ ಕರಗಿ
ನಿರಾಸೆಯನು ಕೊಂಡು
ಮನವು ಬೇಸರಗೊಂಡು
ಹೊರಡಲಾನುವಾದಾಗ
ತೋರಿದಳು ಮೊಗವ
ಆ ಮುಗ್ದ ಚೆಲುವೆ,
ಈಗಷ್ಟೇ ಅರಳಿರುವ
ಅರೆ ಮೊಗ್ಗಿನ ಹೂವೆ.
ಗುಲಾಬಿ ಬಣ್ಣದ ಹೂವಿನೆಸಳ
ಉಡುಗೆಯಲಿ ಈ ಚೆಂದುಳ್ಳಿ
ಹುಡುಗಿಯ ಚೆಲುವು ಬಹಳ
ನಡಿಗೆಯಲಿ ಒನಪು ವಯ್ಯಾರ
ನೋಟದಲ್ಲಿ ತುಂಬಿ ಕೊಂಚ ಶೃಂಗಾರ
ಸೆಳೆದಳೋ ಚೆಲುವಿ
ಪೌರ್ಣಮಿಯ ಬೆಳುದಿಂಗಳ
ಚೆಲ್ಲಿ ಹರಡಿದ ಕಂಗಳ
ಕಾಂತಿಯನು ಬೀಸಿ ಒಗೆದು
ಮನಸಿಗೆ ಉರುಳು ಹಾಕಿ ಹಿಡಿದು,
ಜೇನ್ದುಟಿಯ ಬಿರಿಯದೇನೆ
ಮೌನದಲೇ ನೂರು ಮಾತುಗಳ
ಮಾಣಿಕ್ಯವನು ಮಾಲೆ ಮಾಡಿ..
ಮಮತೆಯ ಮಡಿಲಲ್ಲಿ ಮಗುವಾಗೆಂದು
ಮೋಹದಲಿ ಮದನೆ
ಕೂಗಿ ಹೇಳಿದಳು..
ಸಂಪಿಗೆ ಎಸಳಿನ ನೀಳ
ಮೂಗಿನ ತುದಿಗೆ ಸಿಕ್ಕಿಕೊಂಡ
ಮೂಗುತಿಯ ಆಕರ್ಷಕ ಗಾಳ
ಹಾಕಿದಳು ಮನಸಿಗೆ
ತೀರಿಸಲಾರೆನು ಈ ಪ್ರೀತಿಯ ಸಾಲ
ಹುಟ್ಟಿ ಬಂದರೂನು
ಮತ್ತೆ ನೂರು ಕಾಲ!
ನಗುವೆಂಬುದು ಒಂದು
ಹೂವಿನ ಸಂತೆಯಂತೆ
ಹುಡುಕಿದಷ್ಟು ರಾಶಿ ರಾಶಿ
ಬಣವೆಗಳಂತೆ ನೋಡಿದಷ್ಟು
ಆಯ್ಕೆ ಮಾಡುವುದು ಬಲು
ಕಷ್ಟವಂತೆ........
ಬಣ್ಣ ಬಣ್ಣದ ಸಾಲುಗಳಂತೆ
ನೋಡಿ ನಡೆದಷ್ಟು ದಾರಿ
ಸವೆಯದಂತೆ........
ಕೊಂಡೊಯ್ಯುವ ಆಯ್ಕೆ
ಬಲು ಕಷ್ಟ ವಂತೆ......
ಅದ ಕೋಳ್ಳಲು ಹಣ
ಬೆಕೀಲ್ಲವಂತೆ.........
ನೋವೊಂದ ಅರಿತ
ಮನಸೊಂದು ಇದ್ದರೆ ಸಾಕಂತೆ.....
ಆ ನಗುವಿನ ಸಂತೆಯೊಳಗೆ
ವ್ಯಾಪಾರಿಯು ಕಾಣದ ದೈವವಂತೆ.....
ಅದ ಕೊಳ್ಳುವ ಗ್ರಾಹಕರು ನಾವುಗಳಂತೆ...
ನಿನೀಲ್ಲದೆ ಜಿವವೆ ನಿಲ್ಲುತಿಲ್ಲ
ನನ ಗೆಳೆಯ ಎಂದು ಅಗಲಿರದ
ನಾವು ಇಂದೇಕೆ ಹೋದೆ ನನ್ನಿನಿಯ
ಬೇಗ ಬರಬಾರದೆ ಕಾಯುತಿದೆ
ನಿನ್ನೋಡತಿಯ ಹೃದಯ
ಮಿಡಿಯುತಿದೆ ನಿನಗಾಗಿ
ಒಂದೋದು ಷ್ಕಣವು ನಿನೀಲ್ಲದೆ
ಗಳಿಗೆಯೇ ಸಾಗೂತ್ತಿಲ್ಲ ನನ್ನೋಡೆಯ
ಅಂದು ಕೈ ಹಿಡಿದು ಏಳು ಹೆಜ್ಜೆ ಇಟ್ಟ
ಗಳಿಗೆ ನೆನಪಾಗಿದೆ ನನಗಿಗ
ಮನಸುತುಂಬಿ ಬರುತಿದೆ
ಬರಬಾರದೇ ನಿನ್ನ ಸತಿಗಾಗಿ
ಹೇಗೆ ಇರುವೆ ಈ ನಿನ್ನ ಹೃದಯದರಸಿಯ
ಬಿಟ್ಟು ನಿನಗೂ ನನ್ನ ನೆನಪಾಗುತಿದೆಯೆ
ಆ ನೆನಪಿನಲ್ಲೆ ದಿನ ಸವೆಯಿತು ಇಂದೆ ಬಂದುಬಿಡು
ಕಾಯುತಿರುವೆ ನಿನ್ನೋಡತಿ
ಬಂದುಬಿಡೋ ನನ್ನೋಡೆಯ...........
ಜನನದಿಂದಲೆ ಭೂಮಿಗೆ ಪಯಣ
ಬಾಲಕ ಬಾಲಕಿಯಾಗಿ ಭುವಿಗೆ ನಮಿಸುವೆ ನಮನ
ಅಮ್ಮ ಎಂದೋಡನೆ ಕನ್ನಡದ ಜನನ
ಶಾಲೆ ಸೇರುತ್ತಲೆ ಅಕ್ಕರದ ಕಲಿಕೆಗೆ ಆಗಮನ
ಯುವಕನಾಗುತ್ತಲೆ ನೌಕರಿಯ ಹುಚ್ಚುತನ
ನೌಕರಿಯು ಸಿಗದೆ ಹೊದರೇ ಜೀವನದ ಜಿಗುಪ್ಸೆತನ
ಪ್ರಾಯ ಬಂದೊಡನೆ ಮದುವೆಯ ಮುಂದಾಳುತನ
ಅಪ್ಪ ಎನ್ನುವ ಶಬ್ದ ಆಲಿಸಿದೊಡನೆ ಸಂಸಾರದ ಜವಾಬ್ದಾರಿತನ
ಷಷ್ಟಿಯಾದೊಡನೆ ಮಕ್ಕಳ ಕಲ್ಯಾಣದ ಮೌನ ಮನನ
ಅಜ್ಜ ಆದೊಡನೆ ಆರೋಗ್ಯದ ವೈಪರಿತನ
ಸಾವು ಬಂದರೇ ಕೈಲಾಸದ ಕಡೆಗೆ ಗಮನ ಎಲ್ಲರಿಗೂ ಹೇಳಿ ಹೊಗುವೇ ಬದುಕಿನ ಅಂತಿಮ ನಮನ
ಮರಣದೊಂದಿಗೆ ಮುಗಿಯಿತ್ತು ನಮ್ಮಿ ಜೀವನದ ಪಯಣ.........
............
..............................ಆನಂದ ಎಮ್