ಕಣ್ಣ ಹನಿಗಳು ಮರೆತರೂ ನಿನ್ನ
ಈ ಹೃದಯವು ಮರೆಯಲಾಗದು
ಕಣ್ಣ ಹನಿಗೇನು ಗೊತ್ತು
ಹೃದಯಕ್ಕೆ ಆದ ನೋವು
ನಾನತ್ತರೂ, ನಕ್ಕರೂ
ಕಣ್ಣೀರಿನ ಬಣ್ಣ ಬದಲಾಗದು
ನೀ ಜೊತೆಯಲ್ಲಿದ್ದರೂ, ಇಲ್ಲದಿದ್ದರೂ
ನಿನ್ನ ನೆನಪನ್ನೆಂದು ಅಳಿಸಲಾಗದು
ನಿನ್ನ ಕನಸುಗಳಿಲ್ಲದೆ ದಿನ ರಾತ್ರಿ ಪೂರ್ತಿ ಆಗುತ್ತಿಲ್ಲ ...
ನಿನ್ನ ನೆನಪುಗಳಿಲ್ಲದೆ ದಿನ ಆರಂಭ ವಾಗುತಿಲ್ಲ .
ಕಣ್ಣ್ಮುಚ್ಚಿ ಕಣ್ಣ ತೆರೆಯುವ ಮುನ್ನ ..
ಕಲ್ಪನೆಗಳಾಗಿ ಬಳಿ ಸುಳಿದು ..
ಕವಿತೆಗಳ ಬರೆಸುವ ನನ್ನವಳೇ ..
ನೀ ನನ್ನೆದುರು ಬರದೆ ಕವಿತೆಯಲ್ಲೆಕೆ ಅಡಗಿ ಕುಳಿತೆ ....!!
ಓ ಮುದ್ದು ಬಾಲಕ
ನೀನಾದೆಯಾ ಬಾಲಕಾರ್ಮಿಕ
ತೊರೆದೆಯಾ ಓದುಬರಹದ ಶಾಲಾ ಕಾಯಕ
ನೀನಾದೆಯಾ ಕೂಲಿಗೆ ದುಡಿಯುವ ಕಾರ್ಮಿಕ "ಪ
ಕಿತ್ತುತಿನ್ನುವ ಬಡತನ ಕಿತ್ತಾಡುವ ಜನಮನಕೆ
ಬಲಿಯಾಯಿತೆ ನಿನ್ನ ಸವಿಯಾದ ಎಳೆತನವೇ
ಆಟವಾಡುವ ಕನಸು ಕಾಣುವ ವಯಸಿಗೆ
ನೋವುನುಂಗುವ ದುಡಿದುಸಾಕುವ ಕೊಡುಗೆಯೇ
ಆಟದ ಕಟ್ಟೆಯಲ್ಲಿ ಕುಣಿಯುವ
ಸಂತಸ ಎದೆಯಂಗಳದಲಿ..
ಊಟದ ತಟ್ಟೆಯಲ್ಲಿ ಅನ್ನ ಇಡುವ
ಕೆಲಸ ಹಸಿವಿನ ಕೊಳದಲಿ..
ಅಕ್ಷರ ಕೋಟೆ ಕಟ್ಟುವ
ತವಕ ಮನದಲಿ..
ಹಸಿದ ಹೊಟ್ಟೆ ತುಂಬಿಸುವ
ಕಾಯಕ ಎದುರಲಿ..
ಪೆನ್ನು ಪುಸ್ತಕ ಗೆಳೆಯರ ಬಳಗ ನೀ ನೋಡಲಿಲ್ಲ..
ಕಿರಾತಕ ಜನರ ಕಾಳಗ ನಿನ್ನ ಬಿಡಲಿಲ್ಲ..
ಯಾವ ಕಡೆ ನಿನ್ನ ನಡೆ
ಏಕೆ ಈನಡೆ ಮನುಷನಾದೊಡೆ
ಸತ್ತಾಗ ಬರುವುದೇನು ನೋಟಿನ ಗುಡ್ಡೆ
ನಿನಗೆ ಕೊಡುವುದು ಹಿಡಿ ಮಣ್ಣು ಅಡಿ ಬಂಡೆ
ಜಗದಾಟದಲಿ ನಿನಗಿಲ್ಲದಿರಬಹುದು ಅಡೆತಡೆ
ದೇವನಾಟದಲಿ ನಿನ್ನ ಸ್ವಾರ್ಥಕ್ಕಿದೆ ನಿಲುಗಡೆ "ಪ"
ಹೆಣ್ಣಿನ ಶೋಷಣೆ ಒಂದು ಕಡೆ
ಹೊನ್ನುಮಣ್ಣಿಗಾಗಿ ವಂಚನೆ ಇನ್ನೊಂದು ಕಡೆ
ಏನು ಹೀನ ನಿನ್ನ ನಡೆ ಎಲ್ಲಾ ಕಡೆ
ಒಪ್ಪತ್ತಿನ ಊಟಕ್ಕಾಗಿ ಬವಣೆ ಒಂದು ಕಡೆ
ಮೋಜಿನ ಆಟಕ್ಕಾಗಿ ವಂಚನೆ ಇನ್ನೊಂದು ಕಡೆ
ಎಷ್ಟೂ ಕ್ರೂರ ನಿನ್ನ ನಡೆ ಎಲ್ಲಾ ಕಡೆ
ಎಲ್ಲೆಲ್ಲೂ ಮೆರೆಯುತಿದೆ ದ್ವೇಷ ಮೋಸದ ದರೋಡೆ
ಎಷ್ಟು ದಿನ ಬದುಕಿರುವೆ ಓ ಹೆಬ್ಬಂಡೆ
ನಿನ್ನಲ್ಲಿರೋ ಸ್ವಾರ್ಥಕೆ ನೀಡೋ ಬಿಡುಗಡೆ
ಇರುವಷ್ಟು ದಿನ ಸಾಗುತಿರೋ ಬೆಳಕಿನೆಡೆ
ನಾಲ್ಕು ಜನರ ಮನಸಲ್ಲಿ ಒಳ್ಳೆಯ ಹೆಸರು ಪಡೆ
ಕೆಡವೋ ನೀನು ಅಪಕಾರ ಎಂಬ ತಡೆಗೋಡೆ
ಕಟ್ಟೋ ನೀನು ಉಪಕಾರ ಎಂಬ ಪ್ರೀತಿ ಸ್ನೇಹದ ಪಡೆ
ಸೇರಬೇಕು ನೀನು ದಾನಧರ್ಮದ ದಂಡೆ
ನಮ್ಮೂರ ಚೆಲುವೆ
:::::::::::::::::::::::::::::::::::::::::::::::::::::
ನಮ್ಮೂರ ಚೆಲುವೆ. ಹೂವಂತೆ ನೀನು ನಗುವೆ.
ಚೆಂದ್ರನು ನಾಚುವಂತೆ ನಿನ್ನ ಸೌಂದರ್ಯ.
ಹೊ ಕೇಶ ಕಾಂತಿಯ ಹೊಳಪೆ .
ಚೆಂದಕಾಣದಿರು ಓಮ್ಮೆ .
ಬಿಡುವಿಲ್ಲ ನನ್ನ ಕಣ್ಣಿಗೆ .ನಿನ್ನ ಅಂದವ ನೋಡಿ ಅಂದಕಾರ ನಾಗುತ ನಾನಿರುವೆ.
ಚೆಲುವ ತೋಟದಲ್ಲಿ ಒಲವ ಹಕ್ಕಿಗಳೆರಡು.
ಪಂಜರದ ಹೊಳಗಿಂದ ಇಣುಕಿ ನೋಡುತಿದೆ ನನ್ನನ್ನು.
ನಿನ್ನ ನೋಟದೊಳಗದೇನು ಇಟ್ಟಣೊ ಪರಮಶಿವ.
ನಿನ್ನ ಕುಡಿನೊಟಕ್ಕೆ ಮನಸೋತು. ಮರುಹುಟ್ಟ ಬಯಸುತಿದೆ ನನ್ನ ಹ್ರುದಯದ ಮಿಡಿತಗಳು.
ಹೂವಿಂದ ಹೀರಿದ .ದುಂಬಿಯಿಂದ ಕದ್ದಂತಹ .ಜೇನ ಹನಿಯನ್ನು ಬಚ್ಚಿಟ್ಟಿರುವೆ ನೀ.
ದಾಳಿಂಬೆ ಹೆಸಳಿನಂತೆ ಹೊಳೆದಿರುವ ನಿನ್ನ ತುಟಿಯಂಚಲ್ಲಿ .
ಗುಳಿಕೆನ್ನೆ ಇಳಿಗಲ್ಲ ನಿನ್ನ ಕೊರಳ ಮೇಲೆಲ್ಲ.
ಆಕಾಶ ನೀಲಿಯಲ್ಲಿ ಚೆಂದ್ರತಾರೆ ತೊಟ್ಟಿಲಲ್ಲಿ
ನಿನ್ನ ಹೆಜ್ಜೆಯ ಗೆಜ್ಜೆ ನಾದಕ್ಕೆ. ಹೆಜ್ಜೆ ಹಾಕಲು ಕಾದಿವೆ ನಕ್ಷತ್ರಗಳ ಗುಂಪುಗಳು ಸದಾ...
ನಿನ್ನ ವರ್ಣಿಸಲು ಪದಳಿಗೆ ಕೊನೆಯಿಲ್ಲ.
ಶ್ರುಷ್ಟಿಯ ಮೂಲವೇ ಇ ಜಗವೆಲ್ಲ