ಜನನದಿಂದಲೆ ಭೂಮಿಗೆ ಪಯಣ
ಬಾಲಕ ಬಾಲಕಿಯಾಗಿ ಭುವಿಗೆ ನಮಿಸುವೆ ನಮನ
ಅಮ್ಮ ಎಂದೋಡನೆ ಕನ್ನಡದ ಜನನ
ಶಾಲೆ ಸೇರುತ್ತಲೆ ಅಕ್ಕರದ ಕಲಿಕೆಗೆ ಆಗಮನ
ಯುವಕನಾಗುತ್ತಲೆ ನೌಕರಿಯ ಹುಚ್ಚುತನ
ನೌಕರಿಯು ಸಿಗದೆ ಹೊದರೇ ಜೀವನದ ಜಿಗುಪ್ಸೆತನ
ಪ್ರಾಯ ಬಂದೊಡನೆ ಮದುವೆಯ ಮುಂದಾಳುತನ
ಅಪ್ಪ ಎನ್ನುವ ಶಬ್ದ ಆಲಿಸಿದೊಡನೆ ಸಂಸಾರದ ಜವಾಬ್ದಾರಿತನ
ಷಷ್ಟಿಯಾದೊಡನೆ ಮಕ್ಕಳ ಕಲ್ಯಾಣದ ಮೌನ ಮನನ
ಅಜ್ಜ ಆದೊಡನೆ ಆರೋಗ್ಯದ ವೈಪರಿತನ
ಸಾವು ಬಂದರೇ ಕೈಲಾಸದ ಕಡೆಗೆ ಗಮನ ಎಲ್ಲರಿಗೂ ಹೇಳಿ ಹೊಗುವೇ ಬದುಕಿನ ಅಂತಿಮ ನಮನ
ಮರಣದೊಂದಿಗೆ ಮುಗಿಯಿತ್ತು ನಮ್ಮಿ ಜೀವನದ ಪಯಣ.........
............
..............................ಆನಂದ ಎಮ್
ಇಂದೇಕೊ ಈ ಜೀವನ
ಬೇಸರವಾಗಿದೆ ಗೆಳತಿ.
ಎಲ್ಲಾ ಇದ್ದರೂ ಒಬ್ಬೊಂಟಿಯಂತೆ
ಈ ಜೀವನ ಸಾಗುತಿದೆ ಗೆಳತಿ.
ನಾನು ಒಂಟಿಯಾಗಿ ಸಾಗಿದರೆ
ನನ್ನಿಂದೆ ಬರುವುವವರು ಯಾರಿಲ್ಲ ಗೆಳತಿ.
ನನಗೆ ಎಷ್ಟೇ ಕಷ್ಟ ಬಂದರೂ ನನ್ನಿಂದೆ
ನೀ ಇರುವೆ ಎಂದುಕೊಂಡೆ ಗೆಳತಿ.
ಆದರೆ ಈ ಬಡಪಾಯಿ ಜೀವವ
ನೀನು ಬಿಟ್ಟೋದೆಯ ಗೆಳತಿ.
ನನಗೆ ಈಗ ಅರಿವಾಗಿದೆ
ಈ ಜೀವಕ್ಕೆ ಬೆಲೆ ಇಲ್ಲ ಎಂದು ಗೆಳತಿ.
ಎಲ್ಲರೂ ಕಾಲ್ಎಳೆಯವ್ರೆ
ಒಳ್ಳೆವ್ರು ಯಾರವ್ರೆ
ಈ ಮನ್ಷ ಯಾವುದಕ್ಕೂ ಸಹಿಸೋಲ್ಲ
ಎಲ್ಲದಕ್ಕೂ ತಲೆ ಹಾಕೋದು ಬಿಡೋಲ್ಲ
ಕೆಟ್ಹೋದ್ರೆ ಥೂ ಅಂತ ಉಗಿತಾರೆ ನೀತಿ ಪಾಠ ಹೇಳ್ತಾರೆ
ನೆಟ್ಗಿದ್ರೆ ಇವ್ನೇನ್ ಮಹಾ ಅಂತಾರೆ
ಸ್ವಲ್ಪ ಮೆತ್ಗಿದ್ರೆ ಬಂದ ಸತ್ಯಹರಿಶ್ಚಂದ್ರನ ತುಂಡು ಅಂತಾರೆ
ಸ್ವಲ್ಪ ಜೋರಾಗಿದ್ರೆ ಏನ್ ಧೀಮಾಕು ಏನ್ ಜಂಭ ಅಂತಾರೆ
ಈ ಮನ್ಷ ಬದ್ಕೋದು ಇಲ್ಲ
ಬದ್ಕೋಕು ಬಿಡೋಲ್ಲ
ಗೊತ್ತಿಲ್ಲ ಗುರಿ ಇಲ್ಲ ಯಾರಗೆ ಯಾರು ತಿಳಿದಿಲ್ಲ
ಯಾರೋ ಪದವಿ ಎರಲು ಇನ್ಯಾರೊ ಬಲಿಪೀಟವಂತೆ ಅದರ ಮೇಲೆ ಅವರ
ಬದುಕಿನ ಬಣ್ಣದ ಚಿತ್ತಾರವಂತೆ ನಾವು ನೋಡಿ
ಕಣ್ಣ ತುಂಬಿಸಿಕೋಳ್ಳಬೆಕಂತೆ ಹೋಟ್ಟೆ ಹಸಿದಿದ್ದರು ಜುಟ್ಟಿಗೆ ಮಲ್ಲಿಗೆ ಹೂವೋಂದು ಬೇಕಂತೆ.....
ಕೆಳಿರೋ ಎಲ್ಲ ನೋಡಿರೋ ಎಲ್ಲ ಈ ಜಗವ ನೋಡಿರೋ ಎಲ್ಲರ ಬದುಕ ನೋಡಿರೊ ಆದರೋಳಗೆ ನಮ್ಮನೆ ನಾವೆ ನೋಡಿಕೋಳ್ಳಿರೋ
ನಮಗಾಗೀ ನಾವೆ ಕಟ್ಟಿಕೋಂಡ ಲೋಕದೋಳಗೆ
ನಾವೆ ಪರರಂತೆ ಬದುಕ ಬೇಕಲ್ಲೋ ಸುಂದರವಾದ ಲೋಕದೋಳಗೆ ಕಪ್ಪಾದ ಚಾಯೆಯೋಂದು ಬಂದು ಆವರಿಸಿದಂತೆ ಈ ಸಮಾಜ.......
ಕಟ್ಟುಪಾಡುಗಳ ನಡುವೆ ನಾವು ಬದುಕಬೆಕಲ್ಲ
ಇಲ್ಲಿಯಾರು ನಮ್ಮವರಲ್ಲ ನಮ್ಮನ್ನೆ ನಾವು ನೋಡಿಕೋಂಡೂ ಬದುಕಬೆಕಿದೆ ಇಲ್ಲೀ
ಹುಟ್ಟೂವಾಗ ಯಾರಿಲ್ಲ ಹೋಗುವಾಗ ಯಾರಿಲ್ಲ ನಡುವೆ ಎಕೆ ಈ ಕಟ್ಟುಪಾಡುಗಳ ಸಮಾಜದೋಳಗೆ ನಾವು ನಮ್ಮತನವ ಕಳೆದು
ಬದುಕಬೆಂಕಂತೆ.........
ತನ್ನದೆ ಆದ ಸಂಸಾರ ಸುಖವಾಗಿ ಬದುಕಲು
ಸಮಾಜಕ್ಕೆ ಕೋಡಬೇಕಂತೆ ಸಂಪ್ರದಾಯಗಳ
ಬಳುವಳಿ ಇಲ್ಲದಿದ್ದರೆ ನಾವೆ ಮಾಡಿದ ಸಮಾಜ ನಮ್ಮನೆ ಹೋರಹಾಕುಂತಂತೆ.......
ನಾವು ಕಟ್ಟಿಕೋಂಡ ಸಮಜಕ್ಕೆ ನಮ್ಮನೆ ಆಳುವ ದೊರೆಬೇಕಂತೆ ಅವರ ಆಯ್ಕೆಯು ನಮ್ಮದೆ ಆದರು ನಮಗಿಲ್ಲಿ ಬೆಲೆ ಇಲ್ಲವಂತೆ
ಲಂಚ ಬ್ರಷ್ಠಾಚಾರ ದುರಾಸೆ ಹಣದಾಹ ಮೋಹ ಈ ಎಲ್ಲಭೂತಗಳ ತುಂಬಿರುವ ಸಮಾಜ....
ಕಂದನೋಬ್ಬ ಹುಟ್ಟಿ ಬೆಳೆದು ತನ್ನಂತೆ ತಾನು ಆಗಲು ಸಮಾಜದ ಎಲ್ಲರ ನಡುವೆ ಬದುಕಲು ಅವರಿಷ್ಟದಂತೆ ಬದುಕಬೇಕಂತೆ
ವಿದವೆಯೋಬ್ಬಳು ಮರುಮದುವೆಯಾದರೆ ಅವಮಾನವಂತೆ ಅದೆ ಗಂಡೊಬ್ಬನು ಮರು ಮದುವೆಯಾದರೆ ರಾಜನಂತೆ
ಹೆಣ್ಣೋಬ್ಬಳು ಗಂಡನನ್ನು ತೊರೇದರೆ ಅವಳಿಗೆ ಬದುಕುವ ಅರ್ಹತೆಯೆ ಇಲವಂತೆ ಹೆಣ್ಣೋಬ್ಬಳು ಒಂಟಿಯಾಗಿ ತನ್ನಂತೆ ತಾನು ಬದುಕಲು ಬಿಡದ ಸಮಾಜ .......
ಇದು ನಮ್ಮ ಸಮಾಜ ನಮಗೆ ನಾವೆ ಹಾಕಿ ಕೋಂಡ ಕಬ್ಬಿಣದ ಸರಪಳಿಗಳ ಬೇಲಿ ಎಂದೆದಿಗು ಕಿತ್ತೂ ಬಿಡಿಸಿಕೋಳ್ಳಲಾಗದೆ ಕುಂತಲ್ಲೇ ಕೊರಗಿ ಮರಗಿ ಅಸ್ತಿಪಂಜರವಾಗುವ ವರೆಗೆ ನಮ್ಮನ್ನೂ ಬಿಟ್ಟೋಗದ ನಮ್ಮದೆ ಆದ ಸುಂದರವಾದ ಸಮಾಜ...........ಎಷ್ಟು ಚಂದದ ಸಮಾಜ
ಲೇಖನಿಯಲ್ಲಡಗಿಹುದು ಅಗೋಚರ ಶಕ್ತಿ
ಬರವಣಿಗೆಯ ಶೈಲಿಯಲ್ಲಡಗಿದೆ ಅದರ ಯುಕ್ತಿ
ಕೊಡಿಸುವುದದು ಎಲ್ಲಾ ಜನಗಳಿಗೆ ದಬ್ಬಾಳಿಕೆಯಿಂದ ಮುಕ್ತಿ
ಲೇಖನಿ ಮೂಡಿಸುವುದು ಜನ ಮಾನಸದಲಿ
ದೇಶ ಭಕ್ತಿ
ಸತ್ಯದಿಂದ ಆಸತ್ಯವ ಕೊಂದು
ಧಮ೯ದಿಂದ ಅಧಮ೯ವ ಕೊಂದು
ಸಂಸ್ಕೃತಿಯಿಂದ ಸಾಹಿತ್ಯ ತಂದು
ದೇಶದ ಜನ ಮನಗಳ ನ್ಯಾಯ ಕಾಯುವ ಲೇಖನಿಯದು
ದೇಶ ಕಾಯುವ ವೀರ ಸೈನಿಕನಂತೆ
ಪತ್ರಕತ೯ರ ಲೇಖನಿಯದು
ಯಾವ ಆಸೆ ಆಮಿಷಗಳಿಗೂ ಲೇಖನಿಯ ತಲೆ ಕೊಡದಿರಿ
ಅದನ್ನು ಯಾರ ಯಾವುದರ ಗುಲಾಮರನ್ನಾಗಿಯೂ ಮಾಡದಿರಿ
ಸತ್ಯವ ಎತ್ತಿ ಹಿಡಿಯುವ ಸತ್ವಯುತ
ಖಡ್ಗವೆಂದೆ ಭಾವಿಸಿರಿ
ಅದು ದೇಶದ ಐದನೇ ಆಧಾರ ಸ್ತಂಭವೆಂಬುದ ಮರೆಯದಿರಿ
ಸೂರ್ಯಾಸ್ತದ ಸಮಯದಲ್ಲಿ
ಇಳಿಬಿಸಿಲ ಹೊತ್ತಿನಲಿ
ನೆನಪಾಗುವಳು ಅವಳು..
ಹೆಂಡ ಕುಡಿದ ಹುಚ್ಚು ಕುದುರೆಯಂತೆ
ಬೀದಿ ಬೀದಿಯಲಿ ತಿರುಗಿ ದಣಿದ ದೇಹಕೆ
ಮುದ ನೀಡಲು ಬೀಸುವ ಗಾಳಿಯಂತೆ..!
ತಂಗಾಳಿಯಂತೆ..!
ಹುಣ್ಣಿಮೆಯ ರಾತ್ರಿಯಲಿ
ತಿಳಿಹಾಲ ಬೆಳಕಿನಲಿ
ನೆನಪಾಗುವಳು ಅವಳು..
ಹಠ ಮಾಡಿ ಅಳುತಿರುವ
ಕರುಳ ಬಳ್ಳಿಗೆ
ಚಂದ ಮಾಮನ ತೋರಿಸುತ
ಲಾಲಿಯನು ಹಾಡುತಾ
ಕೈತುತ್ತು ತಿನಿಸುತ್ತಾ
ರಮಿಸುವ ಆ ತಾಯಿಯಂತೆ...!
ಮಹಾ ಮಾಯಿಯಂತೆ..!
ಆಕಾಶ ಗಂಗೆಯನ್ನು
ಶಿವನ ಮುಡಿಗೆ ಬರುವಂತೆ ಮಾಡಿ
ಶಿವನ ಜಡೆಯಿಂದ ಭುವಿಗೆ ಬರಮಾಡಿ
ತನ್ನ ಬಂಧು ಭಾಂಧವರನ್ನುಳಿಸಿಕೊಂಡ ಭಗೀರಥ ತನ್ನ ಪರಿಶ್ರಮದ ಫಲವಾಗಿ
ಗಂಗೆಯ ಪಾವಿತ್ರ್ಯತೆಯ ಸಲುವಾಗಿ
ಆದರೆ ಅದೇ ಗಂಗೆ ಹರಿಯುತ್ತಿರುವಳು
ಕಲ್ಮಷ ತುಂಬಿದ ನೀರಿನ ಸೆಲೆಯಾಗಿ ಇಂದು
ರೋಗ ರುಜುನೆಗಳ ಹೋತ್ತು ತಂದು
ಸತ್ತ ಶವಗಳ ಸಂಸ್ಕಾರಕ್ಕೆಂದು ಬಂದು
ಜನಗಳೆಲ್ಲಾ ನಿತ್ಯ ಬಂದು ಮಿಂದು
ಗಂಗೆಯ ಕಲುಷಿತ ಮಾಡುವ ಜನಗಳ ಕಂಡು
ಮರುಗುತಿದೆ ಭಾರತಾಂಬೆಯ ಮನ
ಗಂಗೆಯ ವಾಸ್ತವ ಸ್ಥಿತಿಯ ಮನಗಂಡು
ಗಂಗೆಯ ಪಾವಿತ್ರ್ಯವನ್ನೂಳಿಸಲು ಶ್ರಮಿಸಬೇಕಿದೆ
ಮತ್ತೆ ಭಗೀರಥರಂತೆ ಪ್ರಯತ್ನಿಸಬೇಕಿದೆ
ಭಾರತ ಮಾತೆಯ ಮಕ್ಕಳಾಗಿ
ಸ್ವಚ್ಛತೆಯೋಂದಿಗೆ ಹೆಜ್ಜೆಯ ಹಾಕಬೇಕಿದೆ
ಗಂಗೆ ಪರಿಶುದ್ದವಾಗಿ ಹರಿಯುವಂತಹ
ಕೆಲಸಗಳ ಮಾಡಬೇಕಿದೆ
ಒಟ್ಟಾಗಿ ದೃಢ ವಿಶ್ವಾಸದಿ ದುಡಿಯಬೇಕಿದೆ
ಮತ್ತೋಮ್ಮೆ ದೇವಗಂಗೆಯ ಉಳಿಸಬೇಕಿದೆ