Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನಮ್ಮೂರ ಚೆಲುವೆ

ನಮ್ಮೂರ ಚೆಲುವೆ
:::::::::::::::::::::::::::::::::::::::::::::::::::::
ನಮ್ಮೂರ ಚೆಲುವೆ. ಹೂವಂತೆ ನೀನು ನಗುವೆ.
ಚೆಂದ್ರನು ನಾಚುವಂತೆ ನಿನ್ನ ಸೌಂದರ್ಯ.
ಹೊ ಕೇಶ ಕಾಂತಿಯ ಹೊಳಪೆ .
ಚೆಂದಕಾಣದಿರು ಓಮ್ಮೆ .
ಬಿಡುವಿಲ್ಲ ನನ್ನ ಕಣ್ಣಿಗೆ .ನಿನ್ನ ಅಂದವ ನೋಡಿ ಅಂದಕಾರ‌ ನಾಗುತ ನಾನಿರುವೆ.

ಚೆಲುವ ತೋಟದಲ್ಲಿ ಒಲವ ಹಕ್ಕಿಗಳೆರಡು.
ಪಂಜರದ ಹೊಳಗಿಂದ ಇಣುಕಿ ನೋಡುತಿದೆ ನನ್ನನ್ನು.
ನಿನ್ನ ನೋಟದೊಳಗದೇನು ಇಟ್ಟಣೊ ಪರಮಶಿವ.
ನಿನ್ನ ಕುಡಿನೊಟಕ್ಕೆ ಮನಸೋತು. ಮರುಹುಟ್ಟ ಬಯಸುತಿದೆ ನನ್ನ ಹ್ರುದಯದ ಮಿಡಿತಗಳು.

ಹೂವಿಂದ ಹೀರಿದ .ದುಂಬಿಯಿಂದ ಕದ್ದಂತಹ .ಜೇನ ಹನಿಯನ್ನು ಬಚ್ಚಿಟ್ಟಿರುವೆ ನೀ.
ದಾಳಿಂಬೆ ಹೆಸಳಿನಂತೆ ಹೊಳೆದಿರುವ ನಿನ್ನ ತುಟಿಯಂಚಲ್ಲಿ .
ಗುಳಿಕೆನ್ನೆ ಇಳಿಗಲ್ಲ ನಿನ್ನ ಕೊರಳ ಮೇಲೆಲ್ಲ.
ಆಕಾಶ ನೀಲಿಯಲ್ಲಿ ಚೆಂದ್ರತಾರೆ ತೊಟ್ಟಿಲಲ್ಲಿ
ನಿನ್ನ ಹೆಜ್ಜೆಯ ಗೆಜ್ಜೆ ನಾದಕ್ಕೆ. ಹೆಜ್ಜೆ ಹಾಕಲು ಕಾದಿವೆ ನಕ್ಷತ್ರಗಳ ಗುಂಪುಗಳು ಸದಾ...

ನಿನ್ನ ವರ್ಣಿಸಲು ಪದಳಿಗೆ ಕೊನೆಯಿಲ್ಲ.
ಶ್ರುಷ್ಟಿಯ ಮೂಲವೇ ಇ ಜಗವೆಲ್ಲ

ರಚನೆ: ನೆನಪಿನ ನಾವಿಕ ಸಂತೋಷ್

- ಸಂತೋಷ್//ಜೀತು

24 Jan 2018, 07:46 am

ಗುಲಾಬಿ ಮೊಗ್ಗಿನ ಹುಡುಗಿ

ಅಲೆದಾಡುತಲಿ ನಾನೊಮ್ಮೆ ಹೊಕ್ಕೆ
ಹೂವೊಂದೂ ಕಾಣದ ಹೂದೋಟಕ್ಕೆ.
ಎತ್ತ ಹುಡುಕಿದರೂ ಒಂದು ಹೂವಿಲ್ಲ
ಹತ್ತಿರ ಸೆಳೆವ ಒಂದು ನಗುವಿಲ್ಲ,
ಅತ್ತಿತ್ತ ತಿರುಗಿ, ನನ್ನಾಸೆ ಕರಗಿ
ನಿರಾಸೆಯನು ಕೊಂಡು
ಮನವು ಬೇಸರಗೊಂಡು
ಹೊರಡಲಾನುವಾದಾಗ
ತೋರಿದಳು ಮೊಗವ
ಆ ಮುಗ್ದ ಚೆಲುವೆ,
ಈಗಷ್ಟೇ ಅರಳಿರುವ
ಅರೆ ಮೊಗ್ಗಿನ ಹೂವೆ.

ಗುಲಾಬಿ ಬಣ್ಣದ ಹೂವಿನೆಸಳ
ಉಡುಗೆಯಲಿ ಈ ಚೆಂದುಳ್ಳಿ
ಹುಡುಗಿಯ ಚೆಲುವು ಬಹಳ
ನಡಿಗೆಯಲಿ ಒನಪು ವಯ್ಯಾರ
ನೋಟದಲ್ಲಿ ತುಂಬಿ ಕೊಂಚ ಶೃಂಗಾರ
ಸೆಳೆದಳೋ ಚೆಲುವಿ
ಪೌರ್ಣಮಿಯ ಬೆಳುದಿಂಗಳ
ಚೆಲ್ಲಿ ಹರಡಿದ ಕಂಗಳ
ಕಾಂತಿಯನು ಬೀಸಿ ಒಗೆದು
ಮನಸಿಗೆ ಉರುಳು ಹಾಕಿ ಹಿಡಿದು,
ಜೇನ್ದುಟಿಯ ಬಿರಿಯದೇನೆ
ಮೌನದಲೇ ನೂರು ಮಾತುಗಳ
ಮಾಣಿಕ್ಯವನು ಮಾಲೆ ಮಾಡಿ..
ಮಮತೆಯ ಮಡಿಲಲ್ಲಿ ಮಗುವಾಗೆಂದು
ಮೋಹದಲಿ ಮದನೆ
ಕೂಗಿ ಹೇಳಿದಳು..

ಸಂಪಿಗೆ ಎಸಳಿನ ನೀಳ
ಮೂಗಿನ ತುದಿಗೆ ಸಿಕ್ಕಿಕೊಂಡ
ಮೂಗುತಿಯ ಆಕರ್ಷಕ ಗಾಳ
ಹಾಕಿದಳು ಮನಸಿಗೆ
ತೀರಿಸಲಾರೆನು ಈ ಪ್ರೀತಿಯ ಸಾಲ
ಹುಟ್ಟಿ ಬಂದರೂನು
ಮತ್ತೆ ನೂರು ಕಾಲ!

- ಶ್ರೀಗೋ.

23 Jan 2018, 11:07 pm

ನಗುವ ಹೂವುಗಳು......

ನಗುವೆಂಬುದು ಒಂದು
ಹೂವಿನ ಸಂತೆಯಂತೆ
ಹುಡುಕಿದಷ್ಟು ರಾಶಿ ರಾಶಿ
ಬಣವೆಗಳಂತೆ ನೋಡಿದಷ್ಟು
ಆಯ್ಕೆ ಮಾಡುವುದು ಬಲು
ಕಷ್ಟವಂತೆ........
ಬಣ್ಣ ಬಣ್ಣದ ಸಾಲುಗಳಂತೆ
ನೋಡಿ ನಡೆದಷ್ಟು ದಾರಿ
ಸವೆಯದಂತೆ........
ಕೊಂಡೊಯ್ಯುವ ಆಯ್ಕೆ
ಬಲು ಕಷ್ಟ ವಂತೆ......
ಅದ ಕೋಳ್ಳಲು ಹಣ
ಬೆಕೀಲ್ಲವಂತೆ.........
ನೋವೊಂದ ಅರಿತ
ಮನಸೊಂದು ಇದ್ದರೆ ಸಾಕಂತೆ.....
ಆ ನಗುವಿನ ಸಂತೆಯೊಳಗೆ
ವ್ಯಾಪಾರಿಯು ಕಾಣದ ದೈವವಂತೆ.....
ಅದ ಕೊಳ್ಳುವ ಗ್ರಾಹಕರು ನಾವುಗಳಂತೆ...

- ರಾಗಸಿರಿ....

23 Jan 2018, 08:03 pm

ಜೈ ಸೈನಿಕ ಜೈ ರೈತ

ಹಸಿರು ಸೀರೆ ಉಟ್ಟ
ಸಿರಿ ದೇವಿಗೆ ನನ್ನ ನಮನ...
ನಿನ್ನ ಕಾಯಲು ಪ್ರಾಣ ಪಣಕ್ಕಿಟ್ಟ
ಕೆಚ್ಚೆದೆಯ ಸೈನಿಕನಿಗೆ ಕೋಟಿ ನಮನ...


ಹಸಿರು ಸೀರೆ ಉಟ್ಟ
ಸಿರಿ ದೇವಿಗೆ ನನ್ನ ನಮನ....
ನಿನ್ನ ಒಡಲಲಿ ಹುಟ್ಟಿದ ನದಿಗಳ ಮಿಲನ
ಅದರಿಂದ ಅನ್ನ ಬೆಳೆದ ಅನ್ನದಾತನಿಗೆ
ಕೋಟಿ ನಮನ...


ಹಸಿರು ಸೀರೆ ಉಟ್ಟ
ಸಿರಿ ದೇವಿಗೆ ನನ್ನ ನಮನ...
ಅದನ್ನರಿಯದೆ ದುಡ್ಡಿಗೆ ಸಾಯಿತ್ತಿರುವ ರಾಜಕಾರಣಿಗಳಿಂದ ಅನ್ನದಾತನಿಗೆ,ಸೈನಿಕನಿಗೆ ಯಾವಾಗ ಸಿಗುವುದೊ ಸುಕಕರ ಜೀವನ....

- Mahantesh Hosamani

23 Jan 2018, 05:37 pm

ಪ್ರೇಮಿಯ ಪ್ರೇಮ ನಿವೇದನೆ

ಮುರುಕು ದೋಣಿಯಲಿ
ನಮ್ಮಿಬ್ಬರ ಪಯಣ
ದಡ ಸೇರಿದರೆ ಸಾಗುವುದು ಜೀವನ....

ದಡ ಸೇರಿಸಿ ನೀ ಬಂದರೆ
ನನ್ನ ಬಾಳಲಿ ಬೆಳದಿಂಗಳ
ಬಾಲೆಯಂತೆ ....

ಆಗ ನನ್ನ ಜೀವನ
ಹುಣ್ಣಿಮೆಯ ಬೆಳದಿಂಗಳಂತೆ
ಸಾಗುವುದು ಜೀವನ
ಆಶಾಕಿರಣದಂತೆ...

ಗೆಳೆತಿ ನೀನು ಬಾರದಿದ್ದರೆ
ದೋಣಿಯಲಿ ಈ ಪಯಣಿಗನ
ಜೀವ ಜೀವನ ಮುಗಿದಂತೆ ...

ನೋಡು ಗೆಳತಿ ನಿನ್ನ ಕೈಯಲ್ಲಿ ಇದೆ
ಈ ಪಯಣಿಗನ ಜೀವ ಜೀವನ ನ...

- Mahantesh Hosamani

23 Jan 2018, 02:54 pm

ಕನ್ನಡ

ಉರಿಸಿದರು ಕವಿಗಳು
ಕನ್ನಡ ದೀವಿಗೆ....

ಸ್ಮರಿಸುತ ಅರ್ಚನೆ
ಕನ್ನಡ ತಾಯಿಗೆ...

ಯುಗಗಳು ಕಳೆದರು
ಅಳಿಯದ ಭಾಷೆಗೆ...

ಜಗವನು ಪೊರೆವ
ಭುವನೇಶ್ವರಿಗೆ...

...ಕುಶಿ...

- sharin rao

23 Jan 2018, 01:37 pm

ಪ್ರೀತಿಯ

ಮನದ ಮಂದಿರದಲ್ಲಿ ಬೆಳಗಿದ
ಪ್ರೀತಿಯ ದೀಪ ನೀನು ....

ಹೃದಯ ಸಮುದ್ರದಲ್ಲಿ ಸಿಕ್ಕ
ಪ್ರೀತಿಯ ಮುತ್ತು ನೀನು....

ಕಣ್ಣ ಕೂಳದಲ್ಲಿ ಅರಳಿದ
ಪ್ರೀತಿಯ ಪುಷ್ಪ ನೀನು....

ನೆನಪಿರಲಿ .......
ದೀಪ ಆರದಿರಲಿ, ಮುತ್ತು ಒಡೆಯದಿರಲಿ,
ಪುಷ್ಪ ಬಾಡದಿರಲಿ

ಇಂತಿ ನಿನ್ನಲ್ಲಿ ಒಬ್ಬ ......

- Irfandharwad

23 Jan 2018, 11:55 am

ಸಂಜೆ

ಬೆಳಗಿತು ದೀಪವು
ಕತ್ತಲ ಅಳಿಸಲು......

ಮುಳುಗಿದ ಸೂರ್ಯನ
ನೆನಪನು ಮರೆಸಲು....

ಚದುರಿದ ಬಾನಲಿ
ಮೋಡವು ಸರಿಯಲು....

ಮರಳಿದ ಚಂದ್ರನು
ಮನವನು ತಣಿಸಲು....

ಕುಶಿ....

- sharin rao

22 Jan 2018, 04:23 pm

ನನ್ನೋಡೆಯ.......

ನಿನೀಲ್ಲದೆ ಜಿವವೆ ನಿಲ್ಲುತಿಲ್ಲ
ನನ ಗೆಳೆಯ ಎಂದು ಅಗಲಿರದ
ನಾವು ಇಂದೇಕೆ ಹೋದೆ ನನ್ನಿನಿಯ
ಬೇಗ ಬರಬಾರದೆ ಕಾಯುತಿದೆ
ನಿನ್ನೋಡತಿಯ ಹೃದಯ
ಮಿಡಿಯುತಿದೆ ನಿನಗಾಗಿ
ಒಂದೋದು ಷ್ಕಣವು ನಿನೀಲ್ಲದೆ
ಗಳಿಗೆಯೇ ಸಾಗೂತ್ತಿಲ್ಲ ನನ್ನೋಡೆಯ
ಅಂದು ಕೈ ಹಿಡಿದು ಏಳು ಹೆಜ್ಜೆ ಇಟ್ಟ
ಗಳಿಗೆ ನೆನಪಾಗಿದೆ ನನಗಿಗ
ಮನಸುತುಂಬಿ ಬರುತಿದೆ
ಬರಬಾರದೇ ನಿನ್ನ ಸತಿಗಾಗಿ
ಹೇಗೆ ಇರುವೆ ಈ ನಿನ್ನ ಹೃದಯದರಸಿಯ
ಬಿಟ್ಟು ನಿನಗೂ ನನ್ನ ನೆನಪಾಗುತಿದೆಯೆ
ಆ ನೆನಪಿನಲ್ಲೆ ದಿನ ಸವೆಯಿತು ಇಂದೆ ಬಂದುಬಿಡು
ಕಾಯುತಿರುವೆ ನಿನ್ನೋಡತಿ
ಬಂದುಬಿಡೋ ನನ್ನೋಡೆಯ...........

- ರಾಗಸಿರಿ....

22 Jan 2018, 10:19 am

ಅಂತರಾಳದಲಿ ಏನಿದೆ

ಹೇಳಿಬಿಡು ಗೆಳತಿ ನಿನ ಅಂತರಾಳದಲಿ ಏನಿದೆ ಎಂದು ಸ್ನೇಹ ಎಂಬ ಬಳ್ಳಿಯೀದೆಯೋ ಪ್ರೀತಿ ಎಂಬ ಚಿಗುರಿದೆಯೋ
ಹೇಳಿಬಿಡು ಗೆಳತಿ ನಿನ್ನಂತರಾಳದಲಿ ಏನಿದೆಯಂದು.

- chinnaswami

22 Jan 2018, 06:13 am