Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ನೀನು ದೂರವಾದೆ ಎಂದು
ನಾನು ವ್ಯಥೆಪಡುತ್ತಿಲ್ಲ ಗೆಳತಿ.
ಗರ್ವ ಪಡುತ್ತೇನೆ.
ಏಕೆಂದರೆ ?
ನೀನು ದೂರವಾದಾಗಿನಿಂದ
ನಾನೊಬ್ಬ ಕವಿಯಾಗಿರುವೆ.
ಪಿ.ಡಿ. ಮಂಜು
- Manjunath
02 Feb 2018, 07:22 pm
ಮುದ್ದಾದ ಮಕ್ಕಳು ಮಡಿಲಲ್ಲಿ
ನಲಿದಿರಲು,ಅನ್ಯರ ಸಂಘ ನಿನಗೇಕೆ!ಗರತಿ
ಮುದ್ದಾಡಿ ನೋಡೆ ಮನೆದೇವರ
ಮುಗ್ದ ಇನಿಯನ ಕಣ್ಣೀಗೆ ಮಣ್ಣೆರಚಿ
ಮುಸುಕಿನ ಗುದ್ದಾಟ ನಿನಗೇಕೆ!ಮನೆಯೊಡತಿ
ಮಾಂಗಲ್ಯಭಾಗ್ಯ ಉಳಿಸಿಕೋ ಕೊನೆಗೆ
ರಜ ಒಡೆದು ಶುಚಿ ಮಾಡೋ
ಗರತಿ ನೀನು !ನೀನೆ ಕಸವಾಗೆ
ಕೊಳೆತು ನಾರುವುದೆ ಮನೆಯಂಗಳ
ಕರುಳಕುಡಿಗೆ ಸರಿ ದಾರಿ ತೋರಿ
ಬೆಳೆಸೋದು ನಿನ್ನ ಹೊಣೆ! ನೀನೆ ಹಾದಿತಪ್ಪೆ
ಸರಿದಾರಿ ತೋರೋರ ನಾ ಕಾಣೆ.
ಈ ಜಗದಲಿ ಭಾರತ ನಾರಿ
ತೋರುವಳು ಹಿರಿಮೆಗೆ ದಾರಿ
ನೀನಾಗದಿರು ಅದಕೆಂದು ಮಾರಿ
ತಿದ್ದಿಕೋ ನೀ ನಿನ್ನ ದಾರಿ.
ಶಾರಧ
- ಶಕುಂತಲಾ
02 Feb 2018, 03:57 pm
ಕವಿದಿರುವ ಕಪ್ಪು ಅಂಗಳಲಿ
ತಾರೆಗಳ ಶ್ವೇತ ರಂಗೋಲಿ
ಕೆಂಪಾದ ಬೋಗುಣಿಯಾಗಿ
ಓಲಾಡಿದ ನಿರಾಧಾರವಾಗಿ
ಶಶಿಯು,ರವಿ-ಧರೆಯ ಜೊತೆಯಾಗಿ
ಅಪರೂಪದಲ್ಲಿ ಅಪರೂಪವಾಗಿ
ಮೂಡಿದೆ ನೀ ಬಾನಂಗಳಲ್ಲಿ ಚಿತ್ತಾರವಾಗಿ
ಆ ಅಂದವ ಕಾಣದೆ ಅವಿತು ಕುಳಿತೆವು
ಅಂಧರಾಗಿ ,ಮೌಢ್ಯಕೆ ವಶವಾಗಿ
ಸ್ತಬ್ದವಾಯಿತು ನಗರದ ಬೀದಿಗಳು
ನಿನಗಿಡಿದ ಗ್ರಹಣ ಬಿಡುವವರೆಗು
ಎಲ್ಲೆಲ್ಲು ಒಳಿತು- ಕೆಡುಕುಗಳ ಹಾವಳಿ
ನಮ್ಮ ಹಾರವರಿಗೆ ನಿನಾದೆ ಬಳುವಳಿ
ಶಾರಧ
- ಶಕುಂತಲಾ
02 Feb 2018, 03:36 pm
ನಾವಿಬ್ಬರೂ ಕುಳಿತಿದ್ದ ಜಾಗದಲ್ಲಿ
ನಾನಿಂದು ಏಕಾಂಗಿಯಾಗಿ ಕುಳಿತಿರುವೆ.
ಆದರೂ ಏಕಾಂಗಿ ಅನಿಸುತ್ತಿಲ್ಲ
ನಿನ್ನ ನೆನಪುಗಳು ನನ್ನ ಜೊತೆಗಿವೆ.
- Manjunath
02 Feb 2018, 08:25 am
ತಿಳಿ ಮಂಜಿನ
ಮಳೆ ಮಾತಿಗೆ
ಹಸಿರಾಗಿರೋ ಭೂಮಿಯೇ ಸಾಕ್ಷಿಯೂ...
ಚಂದ್ರ ಬಣ್ಣದ
ಚಂದಗಾತಿಗೆ
ತನುಹಾಡಿದೆ ಸುಂದರ ಗೀತೆಯೂ.....
ಅನುಗಾಲದ ಅನುರಾಗವೂ
ಅನುವಾದದಿ ಹಾಡಾಗಿದೆ.
ಅನುಬಿಂಬದ ಅನುಕರಣೆಯ
ಅನುಬಂದದಿ ಜೇನಾಗಿದೆ...
ಎಲ್ಲುಂಟು ಸಾಟಿ
ನನ್ನೆದೆಯ ಮೀಟಿ
ಕೊರೆಯುತ್ತಿರೋ ನಿನ್ನ ಬ್ಯೂಟಿಗೆ...
ಮೇಘವನು ದಾಟಿ
ಹೃದಯಕ್ಕೆ ನಾಟಿ
ಸೆಳೆಯುತ್ತಿರೋ ಕಣ್ಣಾ ಏಟಿಗೆ.....
ಕೆ.ಜೆ.ಎಸ್.ಗೌಡ್ರು.ಹುಣಸೂರು..
- shasi kumar
02 Feb 2018, 08:14 am
ಕಣ್ಣುಬ್ಬಿನ ಸನ್ನೆಗೆ
ಎದೆ ಗೂಡಲಿ ಕದನ
ತುಟಿ ಸ್ಪರ್ಶದ ಮಾತಿಗೆ
ಮುಲುಗುಟ್ಟಿದೆ ಮಿಲನ....
ತಿಳಿ ಮುಗಿಲ ಮೇಲೆಲ್ಲಾ
ತಂಗಾಳಿಯ ವರಸೆ
ಬಿಳಿ ಬಣ್ಣ ನಾಚಿಸಿದೇ
ಕಣ್ಣಂಚಿನ ವರಸೆ...
ಕಸ್ತೂರಿಯ ಬಾವುಟವೂ
ನೆರಳಾಗಿ ಕಾದಿವುದು
ಚಿಟ ಪಟ ಮಳೆಹನಿಯ
ಕೊರಳಲ್ಲಿ ಮುತ್ತಾಗಿವುದು....
ಕೈ ಹಸ್ತದಿ ಹುಟ್ಟಿವುದು
ಗಿರಿ ಶೃಂಗದ ಸಿರಿಮೆ
ಮುಂಗುರುಳಿಗೆ ಸೋತೋಯ್ತು
ಕಾರಂಜಿಯ ಚಿಲುಮೆ....
::::: ಕೆ.ಜೆ.ಎಸ್.ಗೌಡ್ರು.ಹುಣಸೂರು.
- shasi kumar
02 Feb 2018, 06:31 am
ತುಟಿ ಅಂಚಿನ ನಗುವಲ್ಲಿ
ಮಕರಂದದ ಜನನ.
ಕೆನೆಹಾಲಿನ ಕೆನ್ನೆಯಲಿ
ಬೆಳ್ಮುಗಿಲಿನ ಪಯಣ.
ತಿಳಿ ಗೋಡೆಯ ಹೃದಯಕ್ಕೆ
ತಂಪೆರುಚುವ ನಯನ.
ಬೆರಳಂಚಲೀ ಬೆರಗುತ್ತಿವೆ
ಬರೆದಂತಹ ಕವನ.....
ಉಸಿರಾಡುವ ಗೊಂಬೆಗೆ ಶೃಂಗಾರದ ಸೀರೆ
ಕೊರಳಪ್ಪಿ ಮುತ್ತಿಟ್ಟಿದೆ ಬಂಗಾರದ ತಾರೆ.
ಹೂ ರಾಶಿಗೂ ಬೇಕಂತೆ ಮುಡಿಯಲ್ಲಿ ಜಾಗ
ಮಲೆನಾಡು ಕಳಿಯುತ್ತಿದೆ ಈಗೀಗ ರಾಗ...
ಕೋಗಿಲೆಯು ತಲೆದೂಗಿದೆ ನೀನಾಡುವ ಸ್ವರಕೆ
ಮರೆತಂತ್ತಿದೆ ನವಿಲೆಲ್ಲ ಕುಣಿದಾಡುವ ಬಯಕೆ.
ಅಲೆ ಎಬ್ಬಿಸೋ ಕಡಲೆಲ್ಲ ಅಲೆದಾಡಿದೆ ನರಳಿ
ಹಸಿರೆಲೆಗಳು ಬಿಡುತ್ತಿಲ್ಲ ರವಿಕಿರಣದ ಚಹಳಿ....
::::: ಕೆ.ಜೆ.ಎಸ್.ಗೌಡ್ರು.ಹುಣಸೂರು..
- shasi kumar
01 Feb 2018, 09:07 pm
ಕಿತ್ತು ತಿನ್ನುವ ಹುಳುಗಳ
ನಡುವೆ ನೀ ಹೇಗೆ ಹುಟ್ಟಿ
ಬೆಳೆಯುವೆ ಮುದ್ದು ಗುಲಾಬಿಯೆ
ಅದಕೆಂದೆ ಮುಳ್ಳಿನ ಹೋದಿಕೆಯ
ಜೊತೆಗೆ ಹುಟ್ಟಿ ಬರುವೆಯೆನೆ
ಆದರು ನಿನ್ನಂದಕ್ಕೆ ಸರಿ ಸಾಟಿ ಯಾರೆ
ಮುದ್ದು ಗುಲಾಬಿಯೆ
ನಾನಾಗಬಾರದಿತ್ತೆ ನಿನ್ನಂತೆ ಒಂದು
ಮಾತಾಡದ ಗುಲಾಬಿಯಂತೆ
ಯಲ್ಲವ ನೋಡಿ ಮೌನವಾಗಿಯೆ
ಅರಳಿ ಮುಡಿದವರ ಮುಡಿ ಎರಿ
ಅವರಂದ ಹೆಚ್ಚಿಸೋಕೆ
ಗುಡಿಯೋಳಗೆ ಕಲ್ಲಂತೆ
ಕೂತಿರುವ ದೆವರ ಮುದ್ದಿಸಿ
ಯಲ್ಲರ ಮನಸ ಕದ್ದು
ಮೌನವಾಗಿಯೆ ನಿನಂತೆ
ಮರೆಯಾಗೋಕೆ............
- ರಾಗಸಿರಿ....
01 Feb 2018, 08:35 pm
ಕತ್ತಲು ಬೆತ್ತಲಾಗಿ
ಅಲೆದಾಡುತ್ತಿತ್ತು.
ಬೆಳಕು ಎದುರು ಬಂದಾಗ
ನಾಚಿ ಮರೆಯಾಗಿತ್ತು.
ಪಿ.ಡಿ. ಮಂಜು
- Manjunath
01 Feb 2018, 07:31 pm
ಓ ಹೂವೇ ... ಓ ಹೂವೇ...!
ನೀನಗೆ ಯಾರು ಸರಿಸಾಟಿ ಇಲ್ಲವೆ.
ಜೇನೆಂಬ ಗೂಡಿಗೆ ಸಿಹಿ ಊಟ ಹಾಕುವೆ.
ದೇವರ ಶಿಲೆಗೆ ಹಾರವು ಹಾಗುವೆ.
ಹೂವಿನ ರಸಿಕರಿಗೆ ಸಂತೋಷ ನೀಡುವೆ.
ಜಾತಿ ಭೇದ ಬಾವಗಳಿಗೆ ಸಮಾನತೆಯ ಕೊಡುವೆ.
ಓ ಹೂವೇ... ನೀ ಇಲ್ಲದೆ ಪ್ರಕೃತಿಗೆ ಸೊಬಗು ಇಲ್ಲ.
ಓಹೂವೆ ನೀನಗೆ ಕೊನೆ ಇಲ್ಲ.
...ಕರುನಾಡ ಆನಂದ್ ಗೌಡ...
- anandaGowda
01 Feb 2018, 05:17 pm