Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಎಂಥ ಕಾಲ ಬಂತೋ ತಮ್ಮ

ಎಂಥ ಕಾಲ ಬಂತೋ ತಮ್ಮ
ಈ ಲೋಕವೆಲ್ಲ ಕೆಟ್ ಹೋಯ್ತೋ ತಮ್ಮ
ಈ ಮನುಷ ಪ್ರಾಣಿಗಿಂತ ಕಡೆಯಾದ್ನಲ್ಲೋ ತಮ್ಮ
ಈ ಮನ್ಷನ್ ಜನ್ಮಕಿಷ್ಟು ಬೆಂಕಿ ಹಾಕ್ಲೋ ತಮ್ಮ "ಪ"

ದಿನಕ್ಕೊಂದು ವೇಷ ಹಾಕ್ತಾನೆ
ಕ್ಷಣಕ್ಕೊಂದು ಮಾತನಾಡ್ತಾನೆ.
ಪ್ರೀತಿ ಸ್ನೇಹಕ್ಕೆ ಇವ್ನು ಸೊಪ್ಪ್ ಹಾಕೊಲ್ಲ
ದ್ವೇಷ ಮೋಸ ಮಾಡದೆ ನಿದ್ದೆ ಮಾಡೋಲ್ಲ.
ಆಸ್ತಿಗಾಗಿ ಹೆತ್ತವರನ್ನೇ ಕೊಲೆ ಮಾಡ್ತಾನೆ
ನೋಟಿಗಾಗಿ ನಂಬಿದವರ ಕತ್ತು ಕುಯ್ತಾನೆ.
ಗಂಟಿನ ಆಸೆಗಾಗಿ ಗೋಮುಖವ್ಯಾಘ್ರನಾಗ್ತಾನೆ
ಒಂಟಿ ಹೆಣ್ಣು ಕಂಡರೆ ವಿಕೃತ ಕಾಮುಕನಾಗ್ತಾನೆ.
ಇಲ್ಲಿ ದೀನರಿಗಿಲ್ಲ ಉಳಿಗಾಲ
ಇದು ಹೀನರಿಗೆಲ್ಲಾ ಪರ್ವಕಾಲ " 1 "

ಪಾಪ ಮಾಡಿ ದೇವರ ಹುಂಡಿಗೆ ಹಣ ಹಾಕ್ತಾನೆ
ಪುರಾಣ ಹೇಳಿ ಜನರ ಜೇಬಿಗೆ ಕನ್ನ ಹಾಕ್ತಾನೆ.
ಓಟಿಗಾಗಿ ಕಾಲು ಹಿಡಿತಾನೆ
ಸೀಟಿಗಾಗಿ ತಲೆ ತೆಗಿತಾನೆ.
ಜಾತಿ ಜಾತಿ ಅಂತ ವಿಷದ ಗೋಡೆ ಕಟ್ತಾನೆ
ಧರ್ಮ ಧರ್ಮ ಅಂತ ದ್ವೇಷದ ಬೀಜ ಬಿತ್ತುತ್ತಾನೆ.
ಹಾಡುಹಗಲೇ ಕೊಲೆ ಸುಲಿಗೆ ದರೋಡೆ ನಡೆಯುತಿದೆ
ಸುತ್ತಮುತ್ತಲೇ ದ್ವೇಷ ಮೋಸ ಸ್ವಾರ್ಥ ಮೆರೆಯುತಿದೆ.
ಇದು ಲಂಚಕೋರರ ಪರಪಂಚ
ಇಲ್ಲಿ ನೀಚರೇ ಪರಮೋಚ್ಛ. " 2 "

- ಸುರೇಶ್ ಟಿ ವಿ

30 Jan 2018, 05:21 pm

ಭಾರತ ನಾರಿ

ಆಡುವ ಹುಡಿಗಿಗೆ,ಮಾಡುವ ಮದುವೆಗೆ
ಓದುವ ವಯಸ್ಸಲ್ಲಿ ದುಡಿಯುವ ದುಡಿಮೆಗೆ
ಎಲ್ಲಿದೆ ಅಥ೯ ಹೆಣ್ಣಿನ ಬಾಳಿಗೆ
ನೂಕದಿರಿ ಹಿರಿಯರೇ ಅವಳ
ಸಾವಿನ ದವಡೆಗೆ

ಮದುವೆಯ ವಯಸ್ಸು ಅವಳದು ಅಲ್ಲ
ಹೆರುವ ದೇಹ ಅವಳಿಗಿನ್ನೂ ಇಲ್ಲಾ
ಕಾನೂನಿನ ಪಾಲನೆ ನಮಗಿದೆಯಲ್ಲಾ
ಯೋಚಿಸಿ ನಿದ೯ರಿಸಿ ಬಂಧುಗಳೆ ಮೆಲ್ಲಾ
ಅದಕ್ಕಿನ್ನೂ ಉಳಿದಿದೆ ಸಮಯವು ಎಲ್ಲಾ

ಶಾಲೆಗೆ ಹೋಗಲಿ ಈ ನಮ್ಮ ಕಿಶೋರಿ
ಆಗಲಿ ಮೋದಲು ಸಾಕ್ಷರ ನಾರಿ
ಧೈಯ೯ ಶೌಯ೯ಕೆ ಸಧೃಡತೆಯ ಮಾದರಿ
ದೇಶದ ಭವಿಷ್ಯದ ಹಿರಿಮೆಯ ಗರಿ
ಇವಳು ಭಾರತ ಮಾತೆಯ ಹೆಮ್ಮೆಯ ಕುವರಿ
ನಮ್ಮ ಭಾರತ ನಾರಿ

- Bhagya Girish

30 Jan 2018, 12:45 pm

ತವರುರ ಸಿರಿ ಗಂಡನ ಗಿಣಿ......

ತವರನ್ನೂ ತೊರೆದು ಹೊರಟಿರೊ
ಹಸುಗೂಸು ಇವಳು ಹಾಲುಂಡ
ಮನೆಯೂ ಹಾಲಿನಂತೆ ತುಂಬಿ
ಹರಿಯಲಿ ಎಂದೆದು ಸಂತೊಷದ
ಹೊಳೆಯು ತವರಲ್ಲಿ ಎಂದು ಅರಸುತ್ತ
ಅತ್ತೆಯ ಮನೆ ದೀಪ ಬೆಳಗಲೇಂದು
ಬಾಂದವ್ಯದ ಬಂದ ಬೆಳೆಯಲೇಂದು
ಕಾಲಿಟ್ಟ ಹಸಿ ಮುತೈದೆ ಇವಳು.....
ತಾಯಿಯ ಮಡಿಲ ತೊರೆದು ತಾಯಿಯ
ಮಮತೆಯ ಅತ್ತೆಯಲ್ಲಿ ನೆನೆಯುತ್ತ
ಬಂದ ಮುದ್ದು ಕಂದ ಇವಳು......
ತಂದೆಯ ವಾತ್ಸಲ್ಯವ ತನ್ನೋಳಗೆ ಇಟ್ಟುಕೋಂಡು
ಮಾವನಲ್ಲಿ ತಂದೆಯ ನೆನೆಯುತ್ತ ಹೊರಟಿರೋ
ಪುಟ್ಟ ಮಗಳು ಇವಳು.......
ತಾನುಟ್ಟಿ ಆಡಿ ಬೆಳೆದು ಎಲ್ಲವ
ನೆನಪಿನ ಬೊಗಸೆಯಲ್ಲಿ ಇಟ್ಟು ಹೊರಟಿರೊ
ಮುದ್ದು ಕಣ್ಮಣಿ ಇವಳು......
ತನ್ನೆಲ್ಲ ಆಸೆ ಕನಸುಗಳ ತನ್ನವನಿಗೆ ಕೊಟ್ಟು
ಅವನ ಜೊತೆ ಹೆಜ್ಜೆ ಇಟ್ಟು ನಡೆಯುತಿರೊ ಸಂಗಾತಿ ಇವಳು...........
ತನ್ನವರನ್ನೆಲ್ಲ ಮರೆಯದೆ ಎಲ್ಲವ ನೆನೆಯುತ್ತ ಎಲ್ಲರ ಅರಸುತ್ತಾ ಕೊನೆಯ ವರೆಗು ಮನಸಲ್ಲೆ ಇಟ್ಟು ಕೊರಗುವ ಕಾಣದ ಕರುಳಿನ ಕುಡಿ ಇವಳು..........
ತನ್ನ ವಡನಾಟವ ತೊರೆದು ತನ್ನ ಬದುಕನ್ನು ತನ್ನವನೊಂದಿಗೆ ಕಟ್ಟಿಕೋಳ್ಳಲು ಹೊರಟಿರೊ
ಮದುಮಗಳಿವಳು......
ಗಂಡನ ಮನೆಯ ವಂಶವ ಬೆಳಗೀಸೋ
ತಾಯಿ ಇವಳು.......
ತನ್ನೆಲ್ಲ ನೋವ ಮರೆತು ಗಂಡನೋಂದಿಗೆ
ಕೊನೆಯ ವರೆಗು ಕೈ ಹಿಡಿದೂ ಜೊತೆ ನಡೆಯುವ
ನೆರಳು ಇವಳು ........
ಎಲ್ಲರಲ್ಲು ಒಬ್ಬಳು ಎಲ್ಲರ ಮುದ್ದು ಮಗಳೋಬ್ಬಳು ಎಲ್ಲರ ಮನೆ ಮಗಳು ಇವಳೂ
ಹೆಣ್ಣೋಬ್ಬಳು ಇವಳು...........
ಹೆಣ್ಣಿಂದ ಮಾತ್ರಾವೆ ಸಾದ್ಯಾ ಇದೆಲ್ಲ ಅವಳಲ್ಲದೆ ಯಾರಿಲ್ಲ ............ತವರೂರ ಸಿರಿ ಗಂಡನ ಮನೆಯ ಗಿಣಿ ಹಿಡಿದಿಟ್ಟಿರೆ ಬಂದಿ ಬಿಟ್ಟು ನೋಡಿದರೆ
ಮುದ್ದಾದ ತುಂಟ ಗಿಣಿ.........

- ರಾಗಸಿರಿ....

29 Jan 2018, 09:14 pm

ರೈತರು

ಭೂಮಿ ಹಸಿರಾಗಿದ್ದರೆ ನಮಗೆ ಇಷ್ಟ
ಯಾಕೆಂದರೆ ನಾವು ರೈತರ ಮಕ್ಕಳು...

ನೆಲ ತಂಪಾಗಿ ಇದ್ದರೆ ನಮಗೆ ಇಷ್ಟ
ಯಾರೆಂದರೆ ನಾವು ರೈತರ ಮಕ್ಕಳು..

ನೀವು ಖುಷಿಯಾಗಿ ಇದ್ದರೆ ನಮಗೆ ಇಷ್ಟ
ಯಾಕೆಂದರೆ ನಾವು ರೈತರ ಮಕ್ಕಳು....

ದೇಶ ನಗುತ ಇದ್ದರೆನೆ ನಮಗೆ ಇಷ್ಟ
ಯಾಕೆಂದರೆ ನಾವು ದೇಶದ ಮಕ್ಕಳು....

ಇಂದು ಬೆಳೆ ಬೆಳೆಯುವ ರೈತನೆ
ನಾಳೆ ನಮ್ಮ ಹೊಟ್ಟೆಗೆ ಊಟ ಕೊಡುವ ದೇವರು..

- Nagaraj

29 Jan 2018, 08:27 am

.....ನೆನಪು


ಹಳೆಯ ಡವ್'ಗಳ-
ನೆನಪಾದಾಗ!
ವಿಷಕುಡಿದೂ ಈ ಬದುಕ
ಇನ್ನೂ ಉಳಿಸಬೇಕಿದೆ..!?
ನನ್ನೀ ಮುಟ್ಠಾಳ
ಹೃದಯಕ್ಕೆ "ತ್ಯಾಗವೇ ಅಮರ"
ಎಂಬ ಹಳೇ ಟ್ಯಾಗ್‌ಹಾಕಿ
ಮತ್ತೂ ಮೂರ್ಖವಾಗಿಸಬೇಕಿದೆ..!?
ಕೈತಪ್ಪಿದಮೊದಲಪ್ರೇಮದಗುಂಗಲ್ಲಿ
ಭಾರವಾದ ಹೃದಯವನ್ನು
ಖಾರದ ಜೊತೆ ಸಾರಾಯಿ ಸುರಿದು
ಇನ್ನೊಮ್ಮೆ ಸುಮ್ಮನ್ನಾಗಿಸ ಬೇಕಿದೆ..!?
ಇದ್ದ ಜಾಗವ ಬಿಟ್ಟು
ಊರೂರು ಅಲೆದು
ಆಗಾಗ ಒದ್ದೆಯಾಗುವ ಕಣ್ಣ
ಮಗದೊಮ್ಮೆ ಒಣಗಿಸಬೇಕಿದೆ..!?
ಕೆನ್ನೆಗೆ ಮುತ್ತಿಟ್ಟು ಪ್ರೇಮ ಬೇಡಿದವಳ'
ಬಿಟ್ಟು ಈ ಬದುಕ ಬರಿದಾಗಿಸಿಕೊಂಡ
ನನ್ನೀ ಹೆಸರ
ಯಾರದೋ ಸ್ನೇಹದ ಹಂಗಿನ ಅನುಕಂಪದಲ್ಲಿ
ಮತ್ತೆ ಮತ್ತೆ ಬದಲಿಸಬೇಕಿದೆ..!?ಮಹಿ

- Mahe Goud

28 Jan 2018, 08:33 pm

ನನ್ನವಳೆಂದರೆ..

ನನ್ನವಳು ನಾ ಬರುವ
ದಾರಿ ಕಾಯುತ್ತಾಳೆ
ನನಗಾಗಿ ನೆನಪುಗಳ
ಗಿಡವ ನೆಟ್ಟಿದ್ದಾಳೆ..!

ಜೀವನದ ಹಾದಿಯನು
ನಾ ಸವೆಸುತಿರುವಾಗ
ಭಯ ಮುಜುಗರ ತುಂಬಿದ ಮನಕೆ
ಸ್ಪೂರ್ತಿ ನೀಡುವ ತಂದೆಯಾಗಿದ್ದಾಳೆ..!

ಸುಖ ದುಃಖ ಎರಡರಲ್ಲೂ
ಬೆನ್ನ ಹಿಂದೆ ಇರುವಂತ
ಕಣ್ಣಾಲಿಗೆ ಸ್ಪಂದಿಸುವ
ಪ್ರೀತಿಯ ಸಹೋದರಿಯಾಗಿದ್ದಾಳೆ..!

ಪರಿತಪಿಸಿ ಹಂಬಲಿಸಿ
ಸೋತಂತೆ ಮನಕೆ
ಚಂದಮಾಮನ ತೋರಿಸಿ
ಕೈ ತುತ್ತು ತಿನಿಸಿ,
ಹಣೆಯ ಮೇಲೊಂದು ಮುತ್ತ ನೀಡಿ
ಸಂತೈಸುವ ತಾಯಿಯಾಗಿದ್ದಾಳೆ..!

ಅದೆಲ್ಲಕ್ಕಿಂತ,
ನಾ ಬರೆವ ಕವಿತೆಗಳಿಗೆ
ಜೀವ ಸೆಲೆಯಾಗಿದ್ದಾಳೆ
ಮುನ್ನುಡಿಯಾಗಿದ್ದಾಳೆ
ನನ್ನ ಕವನದ ಸಾಲುಗಳೊತ್ತು ನಿಂತಿದ್ದಾಳೆ..!

ನನ್ನವಳು ನಾ ಬರುವ
ಹಾದಿ ನೋಡುತ್ತಾಳೆ
ನನಗಾಗಿ ತನ್ನಯ
ಪ್ರೀತಿಯನ್ನೇ ನೀಡಿದ್ದಾಳೆ..!
~ ಸಿದ್ದು ಗುಂಡ

- - ಸಿದ್ದು ಕನ್ನಡಿಗ

28 Jan 2018, 05:51 pm

ನನ್ನವಳ ರೂಪ..

ಶಿವ್ನೆ ಅಂತ ದೇವರ ಗುಡಿಗೆ
ಕೈ ಮುಕ್ಕೊಂಡು ಹೋದೆ..!
ಕಣ್ಮಚ್ಕೊಂಡು ಧ್ಯಾನಕ್ಕುಂತ್ರು
ದೇವ್ರ ಬದ್ಲು ಅವಳ್ನೇ ನೋಡ್ದೆ..!
ತಪ್ಪಾಯ್ತಂತ ದೇವ್ರ ಮುಂದೆ
ಹಚ್ಚಿದೆ ತುಪ್ಪದ ದೀಪ..!
ಬೆಳಗೋ ದೀಪದ ಒಳಗೂ
ಕಾಣ್ತು, ನನ್ನ ಚಿನ್ನಿಯ ರೂಪ..!
~ ಸಿದ್ದು ಗುಂಡ

- - ಸಿದ್ದು ಕನ್ನಡಿಗ

28 Jan 2018, 05:49 pm

ರೈತ ಈ ಮಣ್ಣಿನ ಮೊದಲ ಸುತ

ರೈತ ಈ ಮಣ್ಣಿನ ಮೊದಲ ಸುತ
ಜಗವೇ ಸಾಗದು ಇವನ ನಿಮಿತ್ತ.‌.
ಜೀವಕೋಟಿಗೆ ಇವನೇ ಅನ್ನದಾತ
ಮುಕ್ಕೋಟಿ ದೇವರಿಗಿಂತ ಹೆಸರಾಂತ.‌.
ಸ್ನೇಹಪ್ರೀತಿ ಉಸಿರಾಗಿಸಿಕೊಂಡ ಸಿರಿವಂತ
ದೇಶದ ಶಕ್ತಿ ಎನಿಸಿಕೊಂಡ ಮಹಾಸಂತ .‌. "ಪ"

ಈ ಭೂಮಿಯ ಹಸಿರ ಸಾಗರ ಮಾಡಿದ
ಮನೆಮನೆಯಲಿ ಹರುಷದ ಬಂಗಾರ ಬೆಳಗಿದ..
ಈ ರೈತ ಹುಟ್ಟಿ ಬಂದ ನಮಗಂತ
ಈ ರೈತ ಬಾಳಲಿ ನಗುನಗುತ..

ದುಡಿಮೆಯಲಿ ಸುರಿಯುವ ರೈತನ ಬೆವರು
ಮುಗಿಲೇತ್ತರ ಕುಣಿಯುವ ಹಸಿರಿನ ಪೈರು
ನಮ್ಮ ಬದುಕಿನ ಪ್ರಗತಿಯ ತೇರು..
ಅಸೂರ್ಯನ ಶಕ್ತಿ, ಈ ಭೂತಾಯಿಯ ಪ್ರೀತಿ ತುಂಬುವ ಈ ರೈತನೇ ನಮ್ಮ ನಿಜ ದೇವರು
ನಮಿಸಿರಿ ಈ ದೇವನಿಗೆ ಎಲ್ಲರು..

ಸ್ವರ್ಗಲೋಕ ನಿಜವಾಗಲೂ ಈ ರೈತ ನಡೆದಾಡುವ ಜಾಗ..
ರಾಜವೈಭೋಗ ಎಲ್ಲೆಲ್ಲೂ ಈ ರೈತ ದುಡಿಯಲು ನಿಂತಾಗ..
ಈ ವಿಜ್ಞಾನಿಯ ಯಾಗಕೆ ಆ ರವಿ ಕೂಡ ಸೋಜಿಗ
ತಂತ್ರಜ್ಞಾನದ ಓಟದಲಿ ಬೇಸಾಯ ಬಿಟ್ಟರೆ ಈ
ರೈತ
ಅವಸಾನ ಹತ್ತಿರದಲಿ ಈ ಜಗಕೆ ಖಂಡಿತ..

- ಸುರೇಶ್ ಟಿ ವಿ

27 Jan 2018, 06:21 pm

ಹೆಜ್ಜೆ ನಿನ್ನೊಂದಿಗೆ...

ಹೆಜ್ಜೆ ಮೇಲೆ ಹೆಜ್ಜೆ ಇಡುತ
ಸಾಗುವೆ ನಿನ್ನಿಂದೆ
ಜೀವಕೆ ಉಸಿರೆ ನೀನೆಂದೆ
ಬಾ ಒಲವೆ ಸಾಗುವ ಪ್ರೇಮಲೋಕಕೆ
ಹಾಕುತ ಹೆಜ್ಜೆ ಒಂದೊಂದೆ...

ಮೊಗದಿ ತುಂಬ ಕಿರುಲಜ್ಜೆ
ಸದ್ದು ಮಾಡಿದೆ ಕಾಲ್ಗೆಜ್ಜೆ
ಇರಲಿ ನಮ್ಮ ಅನುಬಂಧ ಹೀಗೆ
ಸಾಗುತ ಇಡುತಾ ಇಬ್ಬರೂ ಹೆಜ್ಜೆ

ಮೌನ ಮನದ ಉಸಿರಾದೆ
ಕಂಡ ಒಡನೆ ಸೆರೆಯಾದೆ
ಕಾಯುತಿರುವೆ ಹೃದಯದಿ
ಒಮ್ಮೆ ನೀನು ಬರಬಾರದೆ

ಪ್ರೀತಿ ಪದಗಳ ಕೂಗಿಬಿಡಲೆ
ಹೃದಯ ಕರೆಗೆ ಹಾರಿಬರಲೆ
ನಿನ್ನ ಹೆಜ್ಜೆಗೆ ನನ್ನ ಹೆಜ್ಜೆಯ
ಮುತ್ತು ಮಳೆಯ ಸುರಿಸಿಬಿಡಲೆ

ಹೆಜ್ಜೆ ಮೇಲೆ ಹೆಜ್ಜೆ ಇಡುತ
ಸಾಗುವೆ ನಿನ್ನಿಂದೆ
ಜೀವಕೆ ಉಸಿರೆ ನೀನೆಂದೆ
ಬಾ ಒಲವೆ ಸಾಗುವ ಪ್ರೇಮಲೋಕಕೆ
ಹಾಕುತ ಹೆಜ್ಜೆ ಒಂದೊಂದೆ...

- ಲಕ್ಷ್ಮೀಕಾಂತ್ ಎಲ್ ವಿ

27 Jan 2018, 03:07 pm

ಜನ್ಮ ಜನ್ಮದ ಬಂದ....

ಕಣ್ಣೆದುರು ಇದ್ದ ಒಂದೋಂದು
ನಗೆ ಮಲ್ಲಿಗೆಯನ್ನು ಪೊಣಿಸಿ
ಬಿಡು ನಿನ್ನುಸಿರ ದಾರದೋಳಗೆ
ನನ್ನೋಡೆಯ ಆ ಉಸಿರಿನ ಹಾರವ
ಎಂದು ಹರಿದೋಗದ ಹಾಗೆ
ಕಾಪಾಡಿಕೊಂಡು ಬಿಡುವೆ
ನನ್ನುಸಿರು ಇರುವ ವರೆಗೂ
ಒಂದೆ ಒಂದೂ ಮಾತು ಕೊಟ್ಟು
ಬಿಡು ನನ್ನರಸ ಎಳೆಳು ಜನ್ಮಕ್ಕು
ಜೊತೆಜೊತೆಗೆ ಹುಟ್ಟಿ ಬದುಕಿ
ಬಿಡೋಣ ಜಗವೆ ನಾಚುವ ಹಾಗೆ...........

- ರಾಗಸಿರಿ....

27 Jan 2018, 11:19 am