Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಹೂವಿನ ನಗರಿ.

ಓ ಹೂವೇ ... ಓ ಹೂವೇ...!
ನೀನಗೆ ಯಾರು ಸರಿಸಾಟಿ ಇಲ್ಲವೆ.
ಜೇನೆಂಬ ಗೂಡಿಗೆ ಸಿಹಿ ಊಟ ಹಾಕುವೆ.
ದೇವರ ಶಿಲೆಗೆ ಹಾರವು ಹಾಗುವೆ.
ಹೂವಿನ ರಸಿಕರಿಗೆ ಸಂತೋಷ ನೀಡುವೆ.
ಜಾತಿ ಭೇದ ಬಾವಗಳಿಗೆ ಸಮಾನತೆಯ ಕೊಡುವೆ.
ಓ ಹೂವೇ... ನೀ ಇಲ್ಲದೆ ಪ್ರಕೃತಿಗೆ ಸೊಬಗು ಇಲ್ಲ.
ಓಹೂವೆ ನೀನಗೆ ಕೊನೆ ಇಲ್ಲ.

...ಕರುನಾಡ ಆನಂದ್ ಗೌಡ...

- anandaGowda

01 Feb 2018, 05:17 pm

ಉರುಳಿಹೋದ ಆ ದಿನಗಳು

ಏನೆಂದು ನೆನೆಯಲಿ ನಾ ನಿನ್ನ
ಉರುಳಿಹೋದ ಆ ದಿನಗಳನ್ನ!

ಆನಂದದಿ ಆರಾಧಿಸಿ
ಬರಮಾಡಿದೆ ನಾ ನಿನ್ನ
ಅನುಗಾಲ ಹರಸಿ
ಬೆಳೆಸೆಂದು ನನ್ನ

ಬಣ್ಣ ಬಣ್ಣದ ಚಿತ್ತಾರ
ಮನೆಯ ಬಾಗಿಲಿಗೆ ಅಲಂಕಾರ
ಕಟ್ಟಿರುವೆ ತಳಿರು ತೋರಣ
ನೀಡಿರುವೆ ಸರ್ವರಿಗು ಆಹ್ವಾನ

ಸುಖ ದುಃಖದಿ ಸಮನಾಗಿ
ಸವಿದೆ ನನ್ನೊಡಗೂಡಿ
ಪರಿತಪಿಸಿದೆನು ಉಳಿವಿಗಾಗಿ
ಋತುಗಳೊಂದಿಗೆ ಜಗಳವಾಡಿ

ಲೋಕ ಬೆಳಗೋ ನಾಯಕರು
ಎಂದೆಂದೂ ಒಂದೇ ತೆರನಾಗಿಹರು
ಉಸಿರಾಡೋ ನರಮಾನವರು
ಗೋಸುಂಬೆಯಂತೆ ಬದಲಾಗುತಿಹರು

ಯುಗಯುಗಗಳೆ ಉರುಳಿದರು
ಮನ್ವಂತರಗಳೆ ಕಳೆದರು
ಅಂದು-ಇಂದು- ಮುಂದು
ಎಂದೆಂದು ಒಂದೇತರನಾಗಿಹುದು
ನಿಲ್ಲದ ಸಮಯ,
ಗೆಲ್ಲದ ಜೀವನ

ಏನೆಂದು ನೆನೆಯಲಿ ನಾ ನಿನ್ನ
ಉರುಳಿಹೋದ ಆ ದಿನಗಳನ್ನ!




ಶಾರಧ

- ಶಕುಂತಲಾ

01 Feb 2018, 02:20 pm

ಕರಗಿದ ಕನಸು

ಕರಗಿದ ಕನಸು
ಕಲ್ಪನೆಯೆ ಬಲು ಸೊಗಸು
ಮುಳುಗಿದ ಬದುಕು
ಆಸರೆಗಾಗಿ ದಿನನಿತ್ಯ ಹುಡುಕು

ಮೂಡಳಾಗಿ ನಂಬಿದ್ದೆ
ನಿನ್ನ ನಾನಂದು
ಮೌನವಾಗಿ ಕುಳಿತೆ
ನನ್ನ ಕಂಡು ನೀನಿಂದು

ನಡೆವೆ ನಾನೆಂದು ನನ್ನ ಹಾದಿಯಲ್ಲಿ
ಎಂಬ ಹರ್ಷೋತ್ಕರ್ಷವಂದು
ಇಂದು ನಾ ಯಾರ ಹಾದಿಯಲ್ಲಿ
ಬೆಂದು ಸಾಗುತಿಹೆನೊ ತಿಳಿಯದಾಗಿದೆ ಇಂದು

ತೃಣವಾಗಿಹುದು
ಭೂಮವಾಗಿ ಗೋಚರಿಪುದು
ಗುರಿಯ ಬೆಳ್ಕಿಂಡಿಯೊಂದ
ಹರಸಿ ನಾ ಸಾಗುತಿಹೆನಿಂದು



ಶಾರಧ

- ಶಕುಂತಲಾ

01 Feb 2018, 12:41 pm

ನನ್ನ ಹೆಂಡತಿ " ಡಿಂಪಲ್ ಮಂಜುಳ "

ಹೇ ಮಂಜು ಹೇ ಮಂಜುಳ
ಸ್ವಲ್ಪ ನೋಡೋ..ಸ್ವಲ್ಪ ಮಾತಾಡೋ
ಚೂರು ಸ್ಮೈಲ್ ಕೊಡೋ..
ಚೂರು ಡಿಂಪಲ್ ಮಾಡೋ..

ಮಂಜುಳ ಮಂಜುಳ ಮಂಜುಳ
ನೀನೆ ನನ್ನ ಬಾಳಿನ ಜೀವಾಳ..
ಮಂಜುಳ ಮಂಜುಳ ಮಂಜುಳ
ನೀನೆ ನನ್ನ ಹರುಷದ ಸಪ್ಪಳ..
ನಿನ್ನ ಪ್ರೀತಿ ಇದ್ದರೆ ನನಗೆ ಇನ್ಯಾಕೆ ಸುತ್ತಲಿ ಆ ಧರ್ಮ ಸ್ಥಳ..
ನಿನ್ನ ನಗು ಬಂದರೆ ಜೊತೆಗೆ ನಾ ಗೆಲ್ಲಬಲ್ಲೆ ಈ ಭೂಗೋಳ.. " ಪ "

ನಿನ್ನ ಕೋಪ ಒಂದು ತಿಳಿ ಮುಂಜಾನೆಯ ಕಾವಳ
ನನ್ನ ಪ್ರೇಮ ಎಂದೂ ನೀಲಿ ಆಗಸದಷ್ಟೂ ನಿಚ್ಚಳ..
ನಿನ್ನ ಗುಳಿ ಕೆನ್ನೆಯ ತಿಳಿ ನಗುವ ನೋಡೋ ಹಂಬಲ
ಒಲವಿನ ಬಣ್ಣದಿಂದ ಮಿನುಗಿದೆ ನನ್ನ ಎದೆಯಂಗಳ..
ಹೂವಂಥ ನಿನ್ನನು ಮುದ್ದುಮಾಡಲು ನಾ ಆಗಲೇನು ಜೇನುಳ
ನಿನ್ನ ಕಣ್ಣು ನೋಡುವಲ್ಲಿ ಸುರಿಯಲೇನು ತಾವರೆಯ ಕೊಳ
ನಿನ್ನ ಹೆಜ್ಜೆ ಹಾದಿಯಲ್ಲಿ ಹಾಸಲೇನು ಕಡಲಾಳದ ಹವಳ
ನಗುತಲಿರು ಎಂದು ಫಳ ಫಳ
ಯು ಆರ್ ಮೈ ಲವ್ಲೀ ವೈಫ್..
ಯು ಆರ್ ಮೈ ಹ್ಯಾಪಿ ಲೈಫ್.. "

ನೀ ನನ್ನ ಗೂಬೆ ಎಂದು ಬೈದರೂ ಚೆಂದ
ಗೊಂಬೆ ಅಂತ ಹೊಗಳುವೆ ನಿನ್ನ ಅಂದ..
ನೀ ನನ್ನ ಕತ್ತೆ ಎಂದು ಕೂಗಿದರೂ ಚೆಂದ
ನಾ ಕವಿತೆ ಬರೆದು ಹಾಡುವೆ ನಿನ್ನ ಅಂದ..
ಎಲ್ಲೇ ಹೋದರೂ ಭೂಮಿಯಂತೆ ನಿನ್ನ ತಿರುಗುತಲಿರುವೆ
ಎಂದೂ ಹೀಗೆ ನಿನ್ನ ಹೂವಿನಂತೆ ನಗಿಸುತಲಿರುವೆ..
ನಿನ್ನ ಪ್ರೀತಿ ಸ್ನೇಹ ನನಗೆ ಒಡವೆ
ಈ ಉಸಿರನು ನಿನ್ನ ಹರುಷಕೆ ಮುಡಿಪಾಗಿಡುವೆ..
ಯು ಆರ್ ಮೈ ಎವರ್ ಗ್ರೀನ್ ಬ್ಯೂಟಿ
ಐ ಡೊಂಟ್ ವಾಂಟ್ ಎನಿ ಕಲರ್ ಬ್ಯೂಟಿ "

- ಸುರೇಶ್ ಟಿ ವಿ

01 Feb 2018, 10:04 am

ಭಿಕ್ಷುಕನು ನೀನು ದೇವರೇ

ಕಾಲ್ನಡಿಗೆಯಲ್ಲಿ ಸಾಗುವೆ
ಕಂಡವರಲ್ಲಿ ಬೇಡುವೆ
ದುಡಿಯುವ ವಯಸು ನನಗಿಲ್ಲ
ಸಾಯಲೆನಗೆ ಧೈರ್ಯವಿಲ್ಲ
ಬೇಡುವವರ ಬಿಟ್ಟು ಬೇಡದವರಿಗೆ
ಕೊಟ್ಟು ನನ್ನ ಮಾತ್ರ ಮರತೆಯೇ ಭಿಕ್ಷುಕನು
ನೀನು ದೇವರೇ!!

ನೂರು ವರ್ಣ ನೋಡಲಿಟ್ಟೆ
ನನ್ನ ರೂಪವೂ ಕಾಣದಂತೆ
ಕುರುಡುತನವ ಕಣ್ಣಿಗಿಟ್ಟೆ,
ಒಂದೊತ್ತು ಅನ್ನದ ತುತ್ತು ಸಿಗದೆ ಬಿಕ್ಕಿ ಅತ್ತೆ, ಹೆಚ್ಚಾದ ಅನ್ನವ ಚೆಲ್ಲಿ ಹೋಗುವ ದೊಡ್ಡವರ ದರ್ಬಾರು ನೋಡಿ ಅತ್ತೆ,
ನೀ ಕೊಟ್ಟ ಸಿರಿಯ ಕುಂತಲ್ಲೇ ಕಾಣಿಕೆಯಂತೆ ಪುಕಸಟ್ಟೆ ಪಡೆಯುವೆ ಭಿಕ್ಷುಕನು ನೀನು ದೇವರೇ!!

ಉಸಿರಾಡುವ ಪ್ರತಿಯೊಂದು ಜೀವಿಯೂ ಅಗಳು ಅನ್ನಕ್ಕಾಗಿ ಹಗಲಿರುಳು ದುಡಿವುದು,
ಬೆವರ ಹನಿಗೆ ನಿನ್ನ ರೂಪವಿಟ್ಟು ದೇವರ ಕೊಟ್ಟೆ ಪ್ರಸಾದವೆಂದು ತಿನ್ನುವುದು!!

ನೀನು ಮಾತ್ರ ಅಲುಗಾಡದೆ ನಮ್ಮ ಬೆವರ ಪಾಲು ಪಡೆಯುವೆ, ನಿಜಾವಾದ ಭಿಕ್ಷುಕನು ನಾನಲ್ಲ ಹೆಸರಿಲ್ಲದ ಭಿಕ್ಷುಕನು ನೀನು ದೇವರೇ!!

- ಚುಕ್ಕಿ

31 Jan 2018, 05:17 pm

ಬೀದಿಗೆ ನೂಕಿ

ಎದೆಯ ಗುಡಿಯೊಳಗೆ ಇಡಬೇಕಾದ
ತಾಯಿಯನು ಬೀದಿಗೆ ನೂಕಿ ನಲಿದರು
ಕರುಳಬಳ್ಳಿಯ ಸಿಹಿ ತಿಳಿಯದ ಕಟುಕರು!!

ಉಸಿರನಿತ್ತು ಹಾಲುಣಿಸಿ ಸಲುಹಿ
ಬೆಳೆಸಿದ ತಾಯಿಯ ದಯೆ ಇಲ್ಲದೆ
ನಡು ಬೀದಿಗೆ ಬಿಸಾಡಿ ಹೋದರು,
ತುತ್ತು ಕೊಟ್ಟ ಕೈಯಿಗೆ ದಾಸ್ಯದಿ ದನಿಕರ
ಕಾಲು ಹಿಡಿಸಿ ಮಕ್ಕಳು!!

ಖಚಿತವಾಯಿತು ತಂಗಳನ್ನ ಮನವ ಕಾಡಿತು
ಮುಂದಿನ ಜೀವನ, ತಂದು ಕೊಟ್ಟವರು ಯಾರು
ಈ ಪರಿಸ್ಥಿತಿಯನ್ನ ಸಾವಿರಾರು ಕನಸ ಹೊತ್ತು
ತಾ ಹಡೆದ ಮಕ್ಕಳೇನಾ!!

ಆಸ್ತಿಯನು ಹಂಚಿಕೊಂಡ ಮಕ್ಕಳು
ರಕ್ತ ಕಣಗಳ ಎಣಿಕೆ ಇಲ್ಲದೆ ಧಾರೆ ಎರೆದು
ರೂಪ ಕೊಟ್ಟ ತಪ್ಪಿಗೆ ತಕ್ಕ ಪಾಠ ಕಲಿಸಿದರು,
ಮೈ ಮೇಲಿನ ಆಭರಣಗಳನ್ನು ಕಳಚಿ ಶಾಶ್ವತವಾಗಿ
ತನ್ನವರಿದ್ದರೂ ಅನಾಥೇ ಎಂಬ ಬಿರುದನು ತೊಡಿಸಿ!!

ಬೀದಿಗಳ್ಳರೆಲ್ಲಿ ಇರುವರು ಮನೆಯ ಮಂದಿಯೇ
ಧನ- ಮಾನ ,ಪ್ರಾಣಗಳನ್ನು ಸೊಕ್ಕಿನಿಂದ ಕುಕ್ಕಿ
ತಿನ್ನುವ ಕಾಲದಲ್ಲಿ!!

ಸ್ವರ್ಗದ ಆಸೆ ಅವಳಿಗಿಲ್ಲ ತುತ್ತು ಅನ್ನ
ನಟನೆಯಿಲ್ಲದ ಪ್ರೀತಿ,
ಜೀವಮಾನದಲ್ಲಿ ದುಡಿದ ಜೀವವಿಮೆಯೇ ಬೇಕಿಲ್ಲ
ಉಸಿರಾಟಕೆ ಅಡ್ಡಿಯಾಗದ ಚಿಂತೆ
ಇಲ್ಲದ ಚಿತ್ತ ಒಂದಿದ್ದರೆ ಸಾಕಲ್ಲಾ!!

- ಚುಕ್ಕಿ

31 Jan 2018, 05:00 pm

ಎಲ್ಲರೆದೆಯೊಳಗಿನ ಬಿಂದು.....

ಎಲ್ಲರ ಮನಸೋಳಗೆ
ನಲಿದಾಡೋ ಮೌನದ ಬಿಂದುವೆ
ನಿನೇಕೆ ಹೊರಗೆ ಬಂದೆ
ಹೋರಗಿನ ಲೋಕವೆ
ಬರಿ ಕತ್ತಲು ನಿನಲ್ಲಿಯೆ ಇರಬಾರದಿತ್ತೆ
ಮೌನದಿ ಮರೆಯಾಗಿ ಮುದ್ದಾದ ಮಗುವಂತೆ ಕತ್ತಲ ಲೋಕದಲ್ಲಿ
ಬಂದು ನಿನ್ನ ತನವ ಕಳೆದು ಕೊಂಡು
ನೀನು ಕತ್ತಲೋಳಗೆ ಮಾಯವಾದಿಯೆ
ಜೋಕೆ ಮೌನದ ಬಿಂದುವೆ.........
ಯಲ್ಲರೆದೆಯೊಳಗೊಂದು ಅರಿಯದ ಬಿಂದು
ಉಳಿದರೆ ಮುತ್ತು ಒಡೆದರೆ ಕುತ್ತು.........

- ರಾಗಸಿರಿ....

31 Jan 2018, 01:05 pm

ನಿನ್ನ ನೆನಪು ಮಾತ್ರ

ನಿನಗೊಂದು ನಾ ಮರೆಯದ ನೆನಪು
ನಿನ್ನ ನೆನಪುಗಳಿಗೇನಿಡಲಿ ಮುಡಿಪು
ನೀ ಬರದೆ ಬಿಡಿಸಲೇಗೆ ಈ ಒಡುಪು
ಕನಸಿನ ಕಣ್ಣಿಗೆ ನೆನಪೇ ಬಣ್ಣದ ಉಡುಪು
ನೀ ಬರದೆ ನೆನಪಿನ ಪ್ರೀತಿಗೇನಿದೆ ಹೊಳಪು...??

- Jyothi

30 Jan 2018, 10:19 pm

ಕಾಡುವ ಪ್ರೀತಿಯ ಬಯಸಿ

ನೀನೇ ನನ್ನ ಉಸಿರ ಜ್ಯೋತಿ
ತೋರಿ ಮುಗುಳು ನಗುವಿನ ಪ್ರೀತಿ
ಮಾಡಿಕೂಂಡೆ ಕೈ ಕುಣಿತದ ಕೋತಿ
ಕಾಣ ಬೇಕಿದೆ ನಿನ್ನ ಇನ್ನೊಂದು ಸರತಿ
ತಿಳಿಸಬೇಕಿದೆ ನನ್ನೀ ಚಿಂತಾಜನಕ ಸ್ಥಿತಿ
ಎಂದಿಗೂ ಆಗಿರು ಹೃದಯದ ಬಡಿತಕ್ಕೆ ವಿಶೇಷ ಅತಿಥಿ
ಮರುಭೂಮಿಯ ಮನಸಲಿ ಬೀಸಿದೆ ನಿನ್ನದೇ ಗಾಳಿಯು ಅತಿ ಅತೀ....

- Jyothi

30 Jan 2018, 10:03 pm

ದುಃಖದ ಮನಸು

ಕಾರಣವಿಲ್ಲದೆ ಚಂಚಲವಾಗುತ್ತಿದೆ ಮನಸ್ಸು
ಚಕ್ರವ್ಯೂಹದಲ್ಲಿ ಸಿಕ್ಕಿಹಾಕಿಕೊಂಡಿದೆ ಈ ಮನಸ್ಸು
ಭಾವನೆಗಳ ಭ್ರಮಲೋಕದಲ್ಲಿ ಹುಡುಕುತ್ತಿದ್ದೆ ಈ ಮನಸ್ಸು
ಕಾಲಚಕ್ರ ಉರುಳುತ್ತಿದೆ
ನಿಮ್ಮೆಲ್ಲರ ಜೊತೆ ಕಳೆದ ಕ್ಷಣಗಳನ್ನು ನೆನೆಯುತ್ತಿದೆ ಈ ಮನಸ್ಸು
ಆದರೆ ನಿಮ್ಮೆಲ್ಲರ ನೆನಪು ನನ್ನ ಅಂತರಂಗದಲ್ಲಿ
ಉಳಿಯಲಿದೆ ಎಂದೆಂದಿಗೂ

- Lohith

30 Jan 2018, 07:48 pm