Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ನನ್ನನ್ನೆ ಮರೆತೆ ನಾನೂ ನನ್ನವಳು ನಕ್ಕಾಗ,
ಮಾತಾಡದೆ ಮೌನವಾದೆ ನನ್ನವಳು ಎದುರಾದಾಗ,
ನೋಡಲು ಇದಾಳೆ ಸುಂದರಿ ಬಹಳ,
ಇವಳೆ ನನ್ನ ಮುತ್ತು-ಹವಳ.
- ismail
19 Feb 2018, 07:40 am
ಮದುವೇ ಎಂಬ ಮೂರಕ್ಷರದಲಿ
ಜೀವನ ಬಂಡಿ ನಿಂತೈತೈ
ಗಂಡು ಹೆಣ್ಣು ಇಬ್ಬರ ಬಾಳಲಿ
ಹೋಸ ಜಗವೋಂದು ತೆರಿದೈತೆ
ಗಂಡನ ಆಸರೆ,ಹೆಂಡತಿಗೆ
ಮಡದಿಯ ಪ್ರೀತಿ ಗಂಡನಿಗೆ
ಸಿಕ್ಕರೆ ಅದೇ ಸವಿ ಬಾಳಿಗೆ
ಸುಖ ಸಂಸಾರದ ನಾಳೆಗೆ
ಇರಲಿ ನಂಬಿಕೆಯ ಹೋದಿಕೆ ನಿಮ್ಮ ಗೂಡಿಗೆ
ಸಂಗಾತಿಯೋಂದಿಗೆ ಹೋಸ ಜೀವನ
ಮಧುರ ನೆನಪುಗಳ ಸಮ್ಮಿಲನ
ಒಲವೇ ಬದುಕಿನ ಸಂಜೀವನ
ಈಗೆಯೇ ಸಾಗಲಿ ಬದುಕಿನ ಪಯಣ
ಇದುವೇ ಜೀವನ ಪಥದ ಹೋಸ ಯಾನ
ಕಷ್ಟವೇ ಬರಲಿ,ದುಃಖವೇ ಇರಲಿ
ಒಟ್ಟಿಗೆ ಜಯಿಸುವ ಛಲಹೊಂದಿರಲಿ
ಗಂಡು ಹೆಣ್ಣು ಎನ್ನದೆ
ಮೇಲು ಕೀಳು ಬೇದವ ತೋರದೆ
ಮುಂದೆ ಸಾಗಲಿ ಬಂಡಿಯು ನಿಲ್ಲದೆ
ಸೋಲಿಗೆ ತಲೆಯ ಬಾಗಿಸದೆ
- Bhagya Girish
18 Feb 2018, 07:28 pm
ಸಖಿ, ಚಹಾವನ್ನು
ಸವಿಯುತ್ತಿರೇ
ನೀನು ಒಂದೊಂದೆ ಸಿಪ್ಪು..!
ಅನಸಿತ್ತು ಎನಗೆ
ಆಗಲಿಲ್ಲವೇಕೆ ನಾ
ನಿನ್ನ ಕೈಯೊಳಗಿನ ಆ ಕಪ್ಪು..!
~ ಸಿದ್ದು ಕನ್ನಡಿಗ
- - ಸಿದ್ದು ಕನ್ನಡಿಗ
18 Feb 2018, 05:06 pm
ಏನೆಂದು ಬರೆಯಲಿ
ನಾ ನಿನ್ನ ಕುರಿತು.!
ನಿನ್ನಂತರಂಗದೊಳು
ಒಂದಾಗಿರುವಾಗ
ನಾ ನಿನ್ನ ಬೆರೆತು..!
ಕನಸೆಂಬ ಲೋಕಕ್ಕೆ
ಅಧಿಪತಿಯು ನಾನೀಗ
ನನ್ನನ್ನೇ ಮರೆತು.!
ಮುಗ್ದನಾದೇನು ನಾ
ತನುವ ಮರೆತು ನಿನ್ನ
ಸನ್ನಡತೆಯನರಿತು..!
ಮಾರುತಿಹೇ ನಾನು
ಬಣ್ಣಬಣ್ಣದ ಕನಸುಗಳ
ಬಾಳಸಂತೆಯಲಿ ನಿತ್ಯದಿ.!
ಟಿಸಿಲೊಡೆಯ ಬೇಕಿದೆ
ಪ್ರೀತಿಲತೆಯೊಂದು
ನಿನ್ನಯ ಸಾಮಿಪ್ಯದಿ..!
ಏನೆಂದು ಬರೆಯಲಿ ನಾ
ಭಾವನೆಗಳದು ನೂರು.!
ವರ್ಣಿಸಲು ಅಲ್ಪನು ನಾ
ನಿನ್ನ ಸೌಂದರ್ಯವ,
ದೌಡಾಯಿಸುತ ನೀ
ನನ್ನ ಕಾಮನೆಯ ಸೇರು..!
ಏನೆಂದು ಹೇಳಲಿ ಗೆಳತಿ
ಸೆಳೆಯುವ ಕಾಂತಿಯದು
ನಿನ್ನ ಕಣ್ಣಲ್ಲಿದೆ..!
ಹಗಲಿರುಳೂ ನಡೆಯುವ
ವಿರಹದ ಕ್ರಾಂತಿಯದು
ನನ್ನಲ್ಲಿದೆ..!
ಇನ್ನೇನೂ ಹೇಳೆನು ಹುಡುಗಿ
ನಾ ನಿನ್ನಲ್ಲೇ ಇರುವೆ ಅಡಗಿ...!
~ ಸಿದ್ದು ಕನ್ನಡಿಗ
- - ಸಿದ್ದು ಕನ್ನಡಿಗ
18 Feb 2018, 05:05 pm
ಹಸಿದು ಬಂದಾಗ
ತುತ್ತು ಅನ್ನ ನೀಡಲಿಲ್ಲ.
ಬಾಯಾರಿ ಬಂದಾಗ
ಬೊಗಸೆ ನೀರು
ಕೊಡಲಿಲ್ಲ.
ನಿನ್ನಿಂದ ಹೇಗೆ ತಾನೇ ಸಾಧ್ಯ
ನೀನೊಂದು ಕಲ್ಲು.
ದೇವರೆಂದು ಹೆಸರಿಟ್ಟುಕೊಂಡಿರುವ
ನಿರ್ಜೀವ ಕಗ್ಗಲ್ಲು.
ಪಿ.ಡಿ. ಮಂಜು ಸಾಮ್ರಾಟ್
- Manjunath
18 Feb 2018, 04:51 pm
ಹೇ ಹುಡುಗಿ ನಿನ್ನ ನೆನಪು
ನನ್ನ ಬಿಡದೆ ಕಾಡುತಿದೆ.
ನಿನ್ನೊಂದಿಗೆ ಇರಲು ಈ
ಜೀವ ಹಂಬಲಿಸುತ್ತಿದೆ.
ನಿನ್ನ ವೇದನೆಯ ಸಹಿಸದೆ
ಈ ಮನವು ಅಳುತಲಿದೆ
ನಿನಗೆ ಮರು ಜೀವವ ನೀಡುಲು
ಈ ಜೀವ ಕಾಯುತಲಿದೆ.
ಓ ನನ್ನ ಮನವೆ
ನೀ ಎಲ್ಲಿ ಅವಿತಿರುವೆ.
ನಿಮ್ಮ ಪ್ರೀತಿಯ ಹುಡುಗ "ರಾಜ್"
- ವರದ ಪ್ರೇಮ ಜೀವಿ
17 Feb 2018, 04:36 pm
ಮರೆತು ಹೋದ ಕವಿತೆ
ಮತ್ತೆ ಮನವ ಏಕೆ ಕಾಡಿದೆ..!
ಒಲವಿನಿಂದ ಹೃದಯ
ಪುನಃ ರಾಗ ಬೆರೆಸಿ ಹಾಡಿದೆ..!
ಮನದ ಒಡಲ ದಡದಿ ಬರೆದ
ಹೆಸರು ನೀ ಅಂದು ಅಳಿಸಿದೆ..!
ನನ್ನ ನಿನ್ನ ಪ್ರೇಮ ಬಂಧ
ಅದೇಕೊ ಇಂದು ಹಳಸಿದೆ..!
ಹುಚ್ಚು ಮನಸು ಹಳೆಯ
ನೆನಪ ಹೆಕ್ಕಿ ಹೊತ್ತು ತಂದಿದೆ..!
ನಿನ್ನ ನಗುಮೊಗದ ಚಿತ್ರಪಟವು
ಇನ್ನೂ ಎನ್ನ ಕಣ್ಣ ಮುಂದಿದೆ..!
~ ಸಿದ್ದು_ಗುಂಡ
- - ಸಿದ್ದು ಕನ್ನಡಿಗ
17 Feb 2018, 10:47 am
ಹೆಣ್ಣೆಂದರೆ..??
ಕರಗುವ ಮೇಣವಲ್ಲ
ಮನೆ ಬೆಳಗುವ ನಂದಾದೀಪ..
ಹೆಣ್ಣೆಂದರೆ..??
ಕಾಮದ ವಸ್ತುವಲ್ಲ
ತಾಯಿಯ ಸ್ವರೂಪ..
ಹೆಣ್ಣೆಂದರೆ..??
ಜುಜಾಡುವ ನಗದಲ್ಲ
ಜಾಜಿಮರದ ಮಲ್ಲಿಗೆ..
ಹೆಣ್ಣೆಂದರೆ..??
ದುಡಿಯುವ ಯಂತ್ರವಲ್ಲ
ದುಡಿವ ಕೈಗಳ ಬೆನ್ನೆಲುಬು..
ಹೆಣ್ಣೆಂದರೆ..??
ಕಾಲಿನ ಕಸವಲ್ಲ
ಕಣ್ಮುಂದಿರುವ ದೇವರು..
ಹೆಣ್ಣೆಂದರೆ..??
ಉಸಿರಾಡುವ ಗೊಂಬೆಯಲ್ಲ
ಉಸಿರು ನೀಡುವ ಕರುಣಾಮಹಿ..
ಹೆಣ್ಣೆಂದರೆ..??
ಮನೆಯ ದರಿದ್ರವಲ್ಲ
ದಾರಿ ತೋರುವ ದಾಕ್ಷಾಯಿಣಿ..
ಹೆಣ್ಣೆಂದರೆ..??
ಮನ ಮುರಿಯುವ ಮಾರಿಯಲ್ಲ
ಬಾಳಿಗೊಂದು ಅರ್ಥ ನೀಡುವ ವಯ್ಯಾರಿ..
ಹೆಣ್ಣೆಂದರೆ..??
ಕಚ್ಚಿದಷ್ಟು ನೋವಾಗುವ ಜೇನು ಹುಳುವಲ್ಲ
ಮುಗ್ಧ ಮನಸಿನ ಕಾಮಧೇನು..
:::: ಕೆ.ಜೆ.ಎಸ್.ಗೌಡ್ರು.ಹುಣಸೂರು.
- shasi kumar
17 Feb 2018, 10:26 am
ನಷತ್ರಲೋಕದ ಮಿನುಗುತಾರೆಯೆ
ಮಿನುಗುವೆಯೇಕೆ ಸದಾ ನಿನಗೇನು
ಕೆಲಸವೆ ಮಿನುಗುತಲೆ ಇದ್ದು ಬಿಡು ಹಿಗೆಯೆ
ಜಗದ ಅಳಿವು ಉಳಿವನ್ನೆಲ್ಲ ನೊಡುತಾ ನಗುತಲೇ
ಇರುವೆಯಲ್ಲೆ...........
ನಿನಗೇನು ತಿಳಿದಿದೆಯೆ ಅದರ ಪರಿ
ಕಂಡಾಗಲ್ಲೆಲ್ಲ ಹೊಳೆಯುತಲೆ ಇರುವೆಯಲ್ಲ
ನೊಂದರು ಬೆಂದರು ನಗುತಲೇ ಬಾಳು
ಬೆಳಗಲೆಂದೆನೆ ನಿನ್ನ ಈ ಮಿನುಗುವ ಪರಿ........
ಅದರ ಅರ್ಥ ನನಗು ಸ್ವಲ್ಪ ಹೇಳಿ ಕೊಟ್ಟು ಬಿಡೆ
ನಿನ್ನ ಈ ಪರಿಯ ಮಿನುಗುವಿಕೆಯನ್ನ
ನಾನು ಯಲ್ಲವ ನೊಡಿ ನೊಂದರು ಬೆಂದರು
ನಿನ್ನಂತೆಯೆ ಮಿನುಗುತಲೇ ಇದ್ದು ಬಿಡುವೆ
ಮೌನದ ತಾರೆಯಂತೆ ಮಿನುಗುವ ತಾರೆಯಾಗಿ..........
ಬಾಳೆಂಬ ಅಂಗಳದಲ್ಲಿ.......
- ರಾಗಸಿರಿ....
15 Feb 2018, 06:21 pm
ಬಣ್ಣ ಬಣ್ಣದ ಒಕೂಳಿ
ರಂಗಿನರಮನೆಯ ಒಕೂಳಿ
ಮತ್ತ ಮರುಕಳಿಸಲಿ
ಆ ಬಾಲ್ಯದ ಬಣ್ಣದೊಕೂಳಿ
ಗೆಳೆಯರ ಜೋತೆ ಸೇರಿ ಆಡಿದ
ಆ ಬಣ್ಣದೊಕೂಳಿ
ನೆನದರೆ ಮೈಜುಮ್ ಎನಿಸುವುದು
ಆ ಬಣ್ಣದೊಕೂಳಿ
ಮತ್ತೆ ಮರುಕಳಿಸಲಿ
ಆ ಬಾಲ್ಯದ ಬಣ್ಣದೊಕೂಳಿ
ನನ್ನ ತಂಗಿ ನನ್ನ ನೋಡಿ ಭಯ ಬಿದ್ದ
ಆ ಬಣ್ಣದೊಕೂಳಿ
ಮೋಜಿಗಾಗಿ ಶವದಂತೆ ಗೆಳಯನ ಮಲಗಿಸಿ ಅತ್ತ
ಆ ಬಣ್ಣದೊಕೂಳಿ
ಮತ್ತೆ ಮರುಕಳಿಸಲಿ
ಆ ಬಾಲ್ಯದ ಬಣ್ಣದೊಕೂಳಿ
- Mahantesh Hosamani
15 Feb 2018, 06:12 pm