Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಹುಟ್ಟು ಹಬ್ಬದ ಹರಕೆ

ಹುಟ್ಟು ಹಬ್ಬದ ಹರಕೆ
ಆತ್ಮ ಬಂಧುವೆ ನಿನಗೆ
ಕೊಟ್ಟು ಹರಸುವೆನು ಮುತ್ತ
ಪ್ರೀತಿಯಲಿ ನೆತ್ತಿ ತುದಿಯಲಿ ಇವತ್ತ.

ಜೀವನದಲಿ ನೂರು ನೋವುಗಳಿದ್ದರೇನು
ಎಲ್ಲವನು ಬದಿಗಿರಿಸಿ ನಡೆ ಮುಂದೆ ನೀನು
ಜೇನ್ನೊಣಗಳ ಅಂಬು ಚುಚ್ಚಿ ಕೊಟ್ಟರೂ ನೋವು
ಕಷ್ಟ ಪಟ್ಟರೇನೇ ಸಿಗುವುದು ಸಿಹಿಯಾದ ಜೇನು.

ಸಿರಿ ಇಲ್ಲದಿದ್ದರೇನಂತೆ ಮನೆಯಲ್ಲಿ
ಸೆರೆಯಾಗದಿದ್ದರಷ್ಟೇ ಸಾಕಲ್ಲವೇ..
ಅದರೂನೂ ಪಾಪದ ಕುಸುಮಗಳಿಗೆ
ಮನೆಯೇ ಮಮತೆಯಿಲ್ಲದ ನರಕವಂತೆ.

ಕೆಸರಿನಲೆ ಹುಟ್ಟುವುದು
ನಗು ಮೊಗದ ಹಿರಿ ಕಮಲ,
ನೋವುಗಳನು ಮೆಟ್ಟುವುದು
ನಗು ಮೊಗದಲಿ ಇರಲಿ ಛಲ.

ಮುಳ್ಳಾಗು ಮನವ ಕುಕ್ಕುವ
ಮೃಗ ಪಕ್ಷಿ ಜಂತುಗಳಿಗೆ,
ಮುಳ್ಳಲ್ಲೇ ಅರಳಿ ಕಂಪು ಬೀರುವ
ಜಾಜಿ ಮಲ್ಲಿಗೆಯಾಗು
ನಿನ್ನಾತ್ಮಾಭಿಮಾನಕೆ ಗೌರವ ಕೊಡುವ
ಸಜ್ಜನ ಸ್ನೇಹಿ ಹಿತೈಷಿಗಳಿಗೆ.

ಸದಾ ನಿನ್ನೊಂದಿಗಿರಲಿ ಹುಡುಗಿ
ಎಡಗೈಲಿ ಖಡ್ಗ, ಬಲಗೈಲಿ ಲೇಖನಿ,
ಆತ್ಮ ರಕ್ಷಣೆಗೆ ಒಂದು,
ಆತ್ಮ ನಿವೇದನೆಗೆ ಮತ್ತೊಂದು..
ತುಟಿಯಲ್ಲಿ ಹಂಚುತ್ತಿರು ಮಂದಹಾಸವ
ಮರೆಯದೆಲೆ ನೀನು ಮುಂದೆ ಎಂದೆಂದೂ..

ನಿನ್ನ ಬಾಳ ಕತ್ತಲ ದಾರಿಯಲ್ಲಿ
ನಾನೆಂದಿಗೂ ಬರುವೆ ಕಿರು ದೊಂದಿಯಾಗಿ
ನೀನಿಡುವ ಪ್ರತಿ ಹೆಜ್ಜೆಗಳ ಕೆಳಗೆ ಕೈಯಿಟ್ಟು
ಕಾಪಾಡುವೆ ನಿನ್ನ ಮೃದು ಪಾದ ಮನಸುಗಳ
ದುರ್ಗಮ ದಾರಿಯ ಕಲ್ಮುಳ್ಳು ಚುಚ್ಚದಿರಲೆಂದು.

ಅನುದಿನವೂ ಉಣಿಸಿದೆ ನೀನೆನಗೆ,
ಪ್ರೀತಿ ವಾತ್ಸಲ್ಯದ ಅಮೃತ ಸುಧೆ,
ಅವ್ವ ಕೊಟ್ಟಂತೆ ರುಚಿಯ ಕೈತುತ್ತು
ಆತ್ಮೀಯ ಗೆಳತಿಯ ಸಿಹಿ ಹೊತ್ತು
ನಿನ್ನ ನಗುವಲ್ಲೇ ಕಳೆದು ಹೋದೆ
ನಾನು ಮೂರು ಹೊತ್ತು.

ತೊರೆಯಲೆಂತು ಹೆಣ್ಣೇ ನಿನ್ನೊಲವಿನ ಒಡನಾಟ
ಆಡಿ ನಲಿದೆವಲ್ಲೇ ಹುಡುಗಿ ಮೈ ಮರೆತು ಮಂಗನಾಟ
ಸಾಗುತಿರಲಿ ಹೀಗೆಯೇ ನಮ್ಮ ಪ್ರೀತಿಯ ಕೂಟ
ನೋವುಗಳ ಮರೆಸಿ ಕಿರುನಗೆಯ ಮೂಡಿಸುವ
ಚೆಲುವಿನಾಟ.

- ಶ್ರೀಗೋ.

12 Feb 2018, 12:13 am

ಕೊಂಡು ಹೋದೆಯಲ್ಲೆ ಕಣ್ಣಿರ

ಪ್ರೀತಿಯ ತೋರಿ ಮನವ
ಕೊಳ್ಳೆ ಹೊಡೆದು
ದುಖಃವ ಮರೆಸಿ
ನಗುವ ಕಲಿಸಿ
ಇಂದು ನನ್ನ
ಬಿಟ್ಟು
ಕಣ್ಣಿರ ಕೊಂಡು ಹೋದೆಯಲ್ಲೆ ಗೆಳತಿ
ನೀ ಬಾರದಿದ್ದರು ನನ್ನ ಕಣ್ಣಿರ
ಮರುಕಳಿಸು ಗೆಳತಿ
ನಿನ್ನ ನೆನಪಲ್ಲೆ ಅತ್ತುಅತ್ತು ಸಾಯುವೆ ಗೆಳತಿ
ಕಣ್ಣಿರ ಮರುಕಳಿಸು

- Ananthkumar Ananth

11 Feb 2018, 10:53 am

ಅವನು ಯಾರ

ಇಂಬು ನೀಡಿ ಮನಕ
ಸಂಭ್ರಮದ ಪ್ರೀತಿನ
ತುಂಬಿ ಹೋದ ಅವನು ಯಾರ!!
ನಿನ್ನೆ ಮೊನ್ನೆಯವರೆಗೆ
ಕೂಡಿಟ್ಟ ನನ್ನ ಕನಸ
ಹೊತ್ತು ಒಯ್ದ ಹೈದನು ಯಾರ!!

ನಾ ಮುಂದು ತಾ ಮುಂದು
ಎಂದಿದ್ದ ದಿನವಂದು
ಹಿಂದೆ ನೂಕಿದ ಬೆಳಕು ಯಾರ!!
ನನ್ನವರು ತನ್ನವರು
ಎಲ್ಲರಿಂದ ದೂರೆಳೆದು
ಒಂಟಿತನವ ತಂದೆರೆದವನು ಯಾರ!!

ಮಾತಾಡುವ ಮುನ್ನ
ಮೌನದ ಸೆರೆಯಲ್ಲಿ
ಕೂಡಿಟ್ಟು ಮರೆಯಾದವನು ಯಾರ!!
ಚೆಹರೆ ತೋರುವ ಮುನ್ನ
ಮುಸುಕ ಹೊದ್ದಿಸಿ ನನ್ನ
ಇರುಳಿಗೆ ನೂಕಿ ಹೋದವನು ಯಾರ!!

- ಪಿ.ಜಿ.ಜ್ಯೋತಿ

10 Feb 2018, 04:45 pm

ಅಪ್ಸರೆ...

ತುಟಿಯು ನುಡಿಸಿದೆ ಎದೆಯ,ಹೃದಯ ವೀಣೆಯ..
ನಯನ ಸೆಳೆದಿದೆ ನೊರೆಯ,ತೆರೆಯ ಝರಿಯ..
ಹೂ ಅಂಗಡಿ ಕುಣಿದಾಡಿದೆ
ಹೂಗಾರ ನಾ ಕಳೆದೋದೆನು..
ಶೃಂಗಾರವು ತುಸುನಾಚಿದೆ
ಸಂಭಾಷಣೆ ಮರೆತೋದೆನು...
ಕಡಲ ಊರಿನಲ್ಲಿ ಮತ್ಸ್ಯಕನ್ಯೆಯಂತೆ
ನಿನ್ನ ಮುಂದೆ ಅವಳು ಕರಗಿ ಹೋದಳಂತೆ.
ಇಂದ್ರನ ಮಗಳು ಇಂದ್ರಜಳಂತೆ
ನೀನಿರುವಾಗ ಇನ್ಯಾರು.? ರೂಪವಂತೆ.
ಕೆ.ಜೆ.ಎಸ್.ಗೌಡ್ರು.ಹುಣಸೂರು.

- shasi kumar

10 Feb 2018, 03:37 pm

ನನ್ನ ನಮನ

ಅಂಜಿಕೆಗೂ ಹೆದರಿಕೆ ಆಗುವಂತೆ ನೂರು
ಪಾಠ ಕಲಿಸಿದ ಜೀವನ ಶಾಲೆಗೆ ನನ್ನ ನಮನ.

ಗಮನಾರ್ಹ ನಾ ಸಲ್ಲಿಸಿದ ರೊಕ್ಕ
ಕಣ್ಣೀರಾದುದು ವಿಷಾದ,ಆದರುನೂ ಚಿಂತೆ ಇಲ್ಲ ಚಿತೆ ಸೇರುವವರೆಗೂ ನಾ ಈ ಮಿತ್ಯ ಲೋಕದ ಪಾಠಗಳನ್ನು ಮರೆಯುವುದಿಲ್ಲ.

ಕೆಟ್ಟದೊಂದು ಕಾಲ ಒಳ್ಳೆಯ ಘಳಿಗೆ
ಬರುವುದು ಬಹು ವಿರಾಳ, ಇತ್ತೀಚೆಗೆ ಈ ಜಗತ್ತಿನಲ್ಲಿ ಜೀವಿಸುವ ಜನರಿಗೆ ನಟಿಸಿವುದು
ಬಲು ಸರಳ.

ನಾ ಕೊಟ್ಟ ಮಾತುಗಳಿಗೆ ಬದ್ಧಳಾಗಿ ಬದುಕಬೇಕೆಂದು ಬಯಸುವವರು ತಾವು ಇತ್ತ ಭಾಷೆಗೆ ಗಡಿದಾಟದೆ ವ್ಯವಹರಿಸುವುದು ಮುಖ್ಯವೆಂದು ಮರೆಯಬಾರದೆಂದಿಗೂ!!

ಅನುಭವ ಇತ್ತ ಕಹಿ ತುತ್ತು ವಯಸ್ಸು
ತಿಳಿಯಲು ಇನ್ನು ಉಳಿದಿರುವ ಸಹಿ ತುತ್ತು ,
ಇನ್ನು ಬಾಕಿ ಇವೆ ಸಾವಿರಾರು ಗಮ್ಮತ್ತು ,
ಕಣ್ಣು ಕಾಣದ ಅಮಲು
ಕಾರ್ಮೋಡ ಕವಿದ ಮುಗಿಲು
ನೋಡಲು ಕಾಯುತ್ತಿರುವ ಒಡಲು
ಸಲ್ಲಿಸುತ್ತಿದೆ ಒಂದು ನಮನ
ಬೇಡವೆಂದರೂ ಜರುರಾಗಿ ಹಾಜರಿರುವ ಪ್ರತಿದಿನದ ಮುಂಜಾವಿಗೆ.

- ಚುಕ್ಕಿ

10 Feb 2018, 03:02 am

ದೃಷ್ಠಿ

               .

ಕಣ್ಣಲ್ಲಿ ಕಣ್ಣಿಟ್ಟು ನೋಡುವುದು ಹೇಗೆ ?
ನೋಡಿದರೆ ನನ್ನದೇ ಪ್ರತಿಬಿ೦ಬ ನೀನು
ಜಗವ ಜಯಸಿದ ನಾನು ನಿನಗೆ ಸೋಲುವೇನೆ?

ಅಪ್ಪ ಅಮ್ಮನ ಕೈ ತುತ್ತು ,ಪ್ರೀತೀಯ ಮುತ್ತುಗಳ
ಮೇಲಿನ ಹಕ್ಕಿಗೆ ಕದನ ಕಾಳಗ ಕತ್ತಿವರಸೆ
ಆಟ ಹೊಡೆದಾಟಗಳ ಕೈಚಳಕ ನೆನದರೆ
ಈಗಲೂ ಪುಳಕ ರೋಮಾಂಚನ ಮೈಮನಕೆ
ಬಾವನೆಗಳ ಝಳಕ ಹೃದಯಕೆ


ತಾಯಿಯ ಮಡಿಲು ತಂದೆಯ ಬಿಸಿಯಪ್ಪುಗೆಯ
ಸಿಕ್ಕು ಹಂಚಿಕೊಂಡವನಲ್ಲವೇ? ಸುಖದ ನಿದ್ದೆ
ಸಿಹಿ ಕನಸು ಭವ್ಯ ಭವಿತ್ವದ ವಾರಸುದಾರನಲ್ಲವೆ
ಒಡಹುಟ್ಟಿದವ


ಒಡಲ ಶಾಪಕೋ ,ಮನದ ಕೋಪಕೋ
ಕಣ್ಣೇರೋಡೆದು ಕತ್ತಲಾವರಿಸುತಿದೆ ನನಗೆ
ನಿನ್ನ ದಿವ್ಯ ಮೌನಕೆ ಪ್ರಖರ ಕಾ೦ತಿಗೆ
ನಿನ್ನ ನಿಸ್ವಾರ್ಥ ನಿಷ್ಕಲ್ಮಶ ಪ್ರೀತಿಗೆ

- ಶಶಿಧರ ಹೆಚ್ ಎನ್

09 Feb 2018, 11:17 pm

ಕಂಬನಿ..........

ಕಣ್ಣೊಳಗೆ ಅವಿತು ಇಣುಕುತಿದೆ
ಕಂಬನಿಯ ಸಾಲೋಂದು
ಮನಸೋಳಗೆ ಅವಿತು ಮನೆ
ಮಾಡಿಬಿಟ್ಟಿದೆ ಮನೆಯ ತುಂಬೆಲ್ಲ
ನೊವೂಗಳ ಹೋಳೆಯೊಂದು
ತಾನು ಅಲ್ಲಿ ಇರಲಾಗದೆ
ಹೊರಗೆ ಬರಲೆ ಎಂದು
ಇಣುಕಿ ಇಣುಕಿ ನೋಡುತಿದೆ
ನನ್ನ ಕಣ್ಣಲ್ಲಿ ನಾ ಹೇಳಬೆಕೆಂದಿದೆ
ಒಂದೆ ಒಂದು ಮಾತೆಂದು
ಬಂದು ಬಿಡೂ ಹೊರಗೆ ಎಂದು.....
ನನಗಲ್ಲಿ ಜಾಗವಿಲ್ಲ ಹೋರಗಿನ ಲೋಕಕ್ಕೆ
ನಾ ಬಂದು ಬಿದ್ದು ಬಿಡಲೆ ಎಂದು
ಕಣ್ಣಲ್ಲೆ ತಿವಿಯುತಿದೆ......ಕಣ್ಣೋಳಗಿನ
ಕಂಬನಿಯೊಂದು.......

- ರಾಗಸಿರಿ....

09 Feb 2018, 09:21 pm

ಮಳೆ....

ಬಿಂದು ಬಿಂದು ಮಳೆ ಬಿದ್ದು ಭೂಮಿ ಆಯ್ತು ಬಂಗಾರ...
ಬಾನು ಭೂಮಿಯ ಮುತ್ತಿಡಲು ಮಳೆ ಒಂದೇ ಆಕಾರ..
ಎಷ್ಟು ಚಂದ ಮಣ್ಣು ವಾಸನೆ
ಮಳೆ ಹನಿ ಬಿದ್ದೊಡನೆ..
ಎಂತಾ ಸೆಳೆತ ಧರೆಯ ನರ್ತನೆ
ಮಳೆ ನೀರು ಕಂಡೊಡನೆ.....
####ಕೆ.ಜೆ.ಎಸ್.ಗೌಡ್ರು.ಹುಣಸೂರು.

- shasi kumar

09 Feb 2018, 05:34 pm

ಅಮ್ಮ ಅಮ್ಮ ನನ್ನಮ್ಮ

ಅಮ್ಮ ಅಮ್ಮ ನನ್ನಮ್ಮ
ನಾನು ಉಸಿರಾಡುವ ಉಸಿರು ನೀನು..
ಅಮ್ಮ ಅಮ್ಮ ನನ್ನಮ್ಮ
ನಾನು ಪೂಜಿಸುವ ದೇವರು ನೀನು..
ಕೋಟಿ ಜನ್ಮ ಪಡೆದರೂ
ನಿನ್ನ ತ್ಯಾಗ ಮರೆಯೋಕ್ಕಾಗಲ್ಲ..
ಮುಕ್ಕೋಟಿ ದೇವರಲ್ಲಾ
ನಿನ್ನ ಪ್ರೀತಿಗೆ ಬೆರಗಾಗಿ ಕೈಮುಗಿದು ನಿಂತರಲ್ಲ..


ಬಾಳಲ್ಲಿ ಆಗಸದಷ್ಟು ನೋವು ಕಂಡರೂ ನೀನು
ನನ್ನಲ್ಲಿ ತೀರದಷ್ಟು ಸಂತಸ ತಂದೆ ನೀನು..
ಅತ್ತಾಗ ಲಾಲಿಜೋ ಎಂದು
ದಿನಪೂರ್ತಿ ಹಾಡಿದೆ ನೀನು..
ಸೋತಾಗ ಗೆದ್ದೇಗೆಲ್ಲುವೆ ಎಂದು
ಜೀವನಸ್ಫೂರ್ತಿ ತುಂಬಿದೆ ನೀನು..
ನಿನ್ನೆದೆಯ ಹಾಲಲಿ ಪ್ರೇಮಾಮೃತವ ಬೆರೆಸಿದೆ ನೀನು
ನಿನಗಾಗಿ ಈದೇಹದ ರಕ್ತ ಎಷ್ಟು ಹರಿಸಿದರೂ ತೀರದು ನಾನು..
ನಿನ್ನ ಬೇಕುಬೇಡವೆಲ್ಲ ನನಗಾಗಿ ಮುಡಿಪಾಗಿಟ್ಟೆ ನೀನು
ನಿನ್ನ ನಗುವಿಗಾಗಿ ಪ್ರಾಣ ಕೊಟ್ಟರೂ ಸಾಲದು ನಾನು..

ನಿನ್ನ ಕರುಣಾಸಾಗರದಲ್ಲಿ ತೇಲಿದ
ನಾನೇ ಕೋಟಿ ಕೋಟಿ ಸಿರಿವಂತ..
ನಿನ್ನ ಮಮತೆಯ ಮುಗಿಲಲಿ ಮಿನುಗಿದ
ನನಗೆ ಬೇಡ ಇನ್ಯಾವ ಭಗವಂತ..
ಕೋಟಿ ನಕ್ಷತ್ರಗಳ ಬೆಳಕು ಅಮ್ಮ
ಜೀವಕೋಟಿಗೆ ಬಂಗಾರದ ಬದುಕು ನೀಡುವಳು ಅಮ್ಮ..
ಕಂದನು ಎಂತವನಾಗಿರಲಿ,ಎಲ್ಲೆ ಇರಲಿ
ಅಮ್ಮನ ಪ್ರೀತಿ ಬದಲಾಗದು ಈ ಜಗದಲ್ಲಿ..
ಈ ಭೂಮಿ ಆಗಿರುವುದು ನಾಕ
ಈ ಅಮ್ಮ ಇರುವ ತನಕ
ಈ ಅಮ್ಮ ಇರುವ ತನಕ...

- ಸುರೇಶ್ ಟಿ ವಿ

09 Feb 2018, 08:39 am

ಒಪ್ಪಿದ ಹೃದಯ

ಕಾರಣ ತಿಳಿಸದೆ ಒಪ್ಪಿದೆ ಈ ಹೃದಯ
ಕಾದಿರುವೆ ಕಣ್ಮುಚ್ಚದೆ ನೀ ಬರುವ ದಾರಿಯ
ಬರುವೆಯಾ ಓ ಜೀವವೇ ನೀನೇ ನನ್ನ ಒಲವು
ನಡೆಸುತ ಸವೆಸುತ ಸಾಗುವ ಈ ಬಾಳ ಹಾದಿಯ..

ಹೇಗೆ ಕಳೆಯಲಿ ನಿನ್ನ ಸನಿಹವಿಲ್ಲದ ಈ ಸಂಜೆಯ
ಬಿರಿದ ಮನದಲಿ ಒಮ್ಮೆ ಬಂದು ನೆಲೆಸೆಯಾ
ಕಣ್ಣಲಿ ಬಚ್ಚಿಟ್ಟು ಕಾಪಿಡುವೆ ಒಮ್ಮೆ ಬಾರೆಯಾ
ಕೇಳೆ ಚೆಲುವೆ, ನಿನ್ನ ಜೊತೆಗೆ ಇರುವೆ ಎಂದಿಗೂ ಎಂದೆಂದಿಗೂ

ಕಣ್ಣಿನ ರೆಪ್ಪೆಯು ಸೋತಿದೆ ಕನಿಕರಿಸೆಯಾ
ಇರುಳೆಲ್ಲ ಹಗಲಾಗಿದೆ ಕೇಳುತ ನಿನ್ನ ಕನವರಿಕೆಯಾ
ಹಾಡಿದೆ ನಿನ್ನಯ ಒಲವಿನ ಕವಿತೆಗೆ ಈ ಹೃದಯ
ಬಾ ಒಲವೇ ಈ ಮನದಿ ಕಟ್ಟಿರುವೆ ನಿನಗಾಗಿ ಗುಡಿಯಾ..

ಕಾರಣ ತಿಳಿಸದೆ ಒಪ್ಪಿದೆ ಈ ಹೃದಯ
ಕಾದಿರುವೆ ಕಣ್ಮುಚ್ಚದೆ ನೀ ಬರುವ ದಾರಿಯ
ಬರುವೆಯಾ ಓ ಜೀವವೇ ನೀನೇ ನನ್ನ ಒಲವು
ನಡೆಸುತ ಸವೆಸುತ ಸಾಗುವ ಈ ಬಾಳ ಹಾದಿಯ..

-ಲಕ್ಷ್ಮೀಕಾಂತ್

- ಲಕ್ಷ್ಮೀಕಾಂತ್ ಎಲ್ ವಿ

08 Feb 2018, 10:22 pm