Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಬಾಲ್ಯದ ಬಣ್ಣದೊಕೂಳಿ (ಹೋಳಿ)

ಬಣ್ಣ ಬಣ್ಣದ ಒಕೂಳಿ
ರಂಗಿನರಮನೆಯ ಒಕೂಳಿ
ಮತ್ತ ಮರುಕಳಿಸಲಿ
ಆ ಬಾಲ್ಯದ ಬಣ್ಣದೊಕೂಳಿ

ಗೆಳೆಯರ ಜೋತೆ ಸೇರಿ ಆಡಿದ
ಆ ಬಣ್ಣದೊಕೂಳಿ
ನೆನದರೆ ಮೈಜುಮ್ ಎನಿಸುವುದು
ಆ ಬಣ್ಣದೊಕೂಳಿ
ಮತ್ತೆ ಮರುಕಳಿಸಲಿ
ಆ ಬಾಲ್ಯದ ಬಣ್ಣದೊಕೂಳಿ

ನನ್ನ ತಂಗಿ ನನ್ನ ನೋಡಿ ಭಯ ಬಿದ್ದ
ಆ ಬಣ್ಣದೊಕೂಳಿ
ಮೋಜಿಗಾಗಿ ಶವದಂತೆ ಗೆಳಯನ ಮಲಗಿಸಿ ಅತ್ತ
ಆ ಬಣ್ಣದೊಕೂಳಿ
ಮತ್ತೆ ಮರುಕಳಿಸಲಿ
ಆ ಬಾಲ್ಯದ ಬಣ್ಣದೊಕೂಳಿ

- Mahantesh Hosamani

15 Feb 2018, 06:12 pm

ಹಗಲು ಎಂಬ ಅವಳ ನೆನೆಪು..

ದಿನ ಕಳೆದ ಹಾಗೆ ಅವಳ ನೆನಪು.
ಅತಿಯಾಗಿದೆ ಈ ಮನಕೆ.
ಹಗಲು ಎನ್ನದೆ ರಾತ್ರಿ ಎನ್ನದೆ.
ಕನಸು ಕಾಣುವ ಸಮಯ
ರಾತ್ರಿ ಇರಬಹುದು.
ಹಗಲು ಇರಬಹುದು.
ಆದರೆ ಅವಳ ನೆನಪುಗಳು
ಹೆಚ್ಚಾಗಿ ಕಾಡುತ್ತಿವೆ...
ಹಗಲಿರುಳು ಎನ್ನದೆ...

- ಪ್ರೀತಿನೀಇಲ್ಲದೆ

15 Feb 2018, 12:17 pm

ಕಡಲ ಮೊರೆತ

ನಿನ್ನ ನೆನಪು ಬರೀ ಕಡಲ ಮೊರೆತ..
ನನ್ನ ಉಸಿರು ನಿನ್ನೆಡೆಗೆ ಸೆಳೆತ...
ಅಮಲು ಅಮಲು ನಿನ್ನ ನಗುವು...
ಬಿಡದ ಛಲವು, ಸಿಗದ ಒಲವು...
ಯಾರಿಗುಂಟು ಯಾರಿಗಿಲ್ಲ ಒಳ್ಳೆ ಹಣೆಯ ಬರಹವು...
====================================
ನನ್ನೆದೆ ಬಡಿತ, ನಿಲ್ಲದ ತುಡಿತ...
ಅಳಿಯದ ಗಾಯ, ಬೆಂಬಿಡದ ನೋವ...
ನಿನ್ನನೇ ಹಿಂಬಾಲಿಸಿ, ನಿನ್ನನೇ ಹಿಂಬಾಲಿಸಿ ಹೋಯಿತು ಬದುಕು ಎಲ್ಲವೂ ಮಾಸಿ...
====================================
ಕಾದಿಹೆ ನಾನು, ಬಾರೆಯ ನೀನು.. ನಿನಗಾಗಿ ನಿಲ್ಲದ ನನ್ನೀ ಪಯಣ...
ನಿನ್ನನೇ ಅರಸುವ ಕಂಗಳ ಕಂಬನಿಗೆ ನೀನೇ ಕಾರಣ...
ಮರೀಚಿಕೆಯಂತೆ ಮರುಭೂಮಿಯಲಿ ನಿನ್ನಯ ಸ್ಪರ್ಶ...
ಗತಿಸಿದ ನೆನಪಿನಲಿ ಉಳಿದಿವೆ ಹರ್ಷ...
ಬಾ ನೀ ಬಾ... ನನ್ನ ಉಸಿರಲಿ ಉಸಿರಾಗು ಬಾ...
ಬಾ ನೀ ಬಾ... ನನ್ನ ಬದುಕಲಿ ಹಸಿರಾಗಿ ಬಾ...
====================================
ನಿನ್ನ ನೆನಪು ಬರೀ ಕಡಲ ಮೊರೆತ..
ನನ್ನ ಉಸಿರು ನಿನ್ನೆಡೆಗೆ ಸೆಳೆತ...
ಅಮಲು ಅಮಲು ನಿನ್ನ ನಗುವು...
ಬಿಡದ ಛಲವು, ಸಿಗದ ಒಲವು...
ಯಾರಿಗುಂಟು ಯಾರಿಗಿಲ್ಲ ಒಳ್ಳೆ ಹಣೆಯ ಬರಹವು...

- Suchithra

15 Feb 2018, 11:28 am

ನಾಡೆಂದರೆ ನಾಡು ನನ್ನ ಕನ್ನಡ ನಾಡು

ನಾಡೆಂದರೆ ನಾಡು ನನ್ನ ಕನ್ನಡ ನಾಡು
ನುಡಿಯೆಂದರೆ ನುಡಿ ನನ್ನ ಕನ್ನಡ ನುಡಿ..
ಕರ ಮುಗಿದು ಬಾರೋ
ನನ್ನ ಕನ್ನಡ ದೇಗುಲದ ಒಳಗೆ..
ಅಭಿಮಾನ ಸುರಿದು ಪ್ರಾರ್ಥಿಸೋ
ತಾಯಿ ಭುವನೇಶ್ವರಿಯ ಪ್ರೀತಿಗೆ.." ಪ "

ಕುಡಿಯೋ ನೀ ತುಂಗಾ ಕಾವೇರಿ ನೀರನ್ನ
ಆಗುವುದು ನಿನ್ನ ಜನುಮ ಪಾವನ..
ನೋಡೋ ಮಲೆನಾಡ ಸೊಬಗು ಕಣ್ಣಾರ
ಕುಣಿಯುವುದು ನಿನ್ನ ಮನ ಮುಗಿಲೇತ್ತರ..

ಸುತ್ತೋ ಬೇಲೂರು ಬನವಾಸಿ ಬೆಳಗೊಳ
ತಿಳಿಯೋ ನಮ್ಮೂರು ಹೆಸರುವಾಸಿ ಜಗದಗಲ..
ಓದೋ ಕದಂಬ ಚಾಲುಕ್ಯ ಹೊಯ್ಸಳ ರಾಜವಂಶ
ಹರಿಯುವುದು ನಿನ್ನೆದೆಯಲಿ ಕನ್ನಡ ಕಲಿಗಳ ಧೈರ್ಯ ಸಾಹಸ..

ಹಾಡೋ ಬಸವಣ್ಣ ಪೊನ್ನರ ವಚನ ಕವನ
ಝೇಂಕರಿಸುವುದು ನಿನ್ನ ತನುಮನ ಕನ್ನಡ ಅಭಿಮಾನ..
ಇಲ್ಲಿ ನೀ ಬದುಕಿನ ಬಂಡಿ ನಡೆಸಿ ನೋಡು
ಸಾರುವೆ ನೀ ಜಗಕೆ ಇದು ಕರುಣೆಯ ಗುಡಿ ಎಂದು

ಎಳೆಯೋ ನೀ ಕನ್ನಡ ನುಡಿಯ ತೇರು
ಆಗುವುದು ನಿನ್ನ ಬದುಕು ಅಚ್ಚಹಸಿರು..
ಕಾಯೋ ನೀ ಕನ್ನಡಾಂಬೆಯ ಊರು
ಉಳಿಯುವುದು ಚಿರಕಾಲ ನಿನ್ನ ಹೆಸರು..

- ಸುರೇಶ್ ಟಿ ವಿ

15 Feb 2018, 08:35 am

ನದಿಯ ದಂಡೆಯ ಮೇಲೋಂದು ಕನಸು

ಹರಿವ ಬದುಕಿನ ದಂಡೆಯಲ್ಲಿ
ನಾ ನಿನಗಾಗಿ ಒಬ್ಬೋಂಟ್ಟಿಯಾಗಿ ಕಾದೆ
ಮತ್ಯಾರೋಂದಿಗೊ ನೀ
ಅದೇ ದಂಡೇಗೆ ಜೋತೆಯಾಗಿ ಬಂದು ಹೋದೆ...

ವಿಪಯಾ೯ಸ ನೋಡು
ಹೃದಯದ ತುಂಬ ನಿನ್ನ ತುಂಬಿಕೋಂಡು
ಅಂಗೈಯಲ್ಲಿ ಹೂ ಕೋಡುವ ಕನಸ ಕಟ್ಟಿದ್ದೆ
ನನ್ನ ಕಣ್ಣ ಬಾಷೆ ಅರಿಯದೆ ನೀ ಹೋದೆ.....

ನಿನ್ನ ಮಾತುಗಳನ್ನು ದೂರದಲ್ಲೆ ನಿಂತು ಆಲಿಸುತಿದ್ದೆ
ನಾ ಮೆಚ್ಚಿದ ಕಣ್ಣಬಾಗಿಲು ಮುಚ್ಚಿದ ಮೇಲು
ಹಗಲಿಗಾಗೀ ಹಂಬಲಿಸಿ ನಾ ಕಾಯುತಿರುವೆ..
ನನ್ನ ಬದುಕನ್ನು ನಿದ೯ರಿಸುವ ವಿದ್ಯೆ ಮರೇತೆ
.................................ನಾ ನಿನ್ನನ್ನು ಮರೆಯಲಿಲ್ಲ

ನೀ ನಡೆದು ಬರುವ ಹಾದಿಯಲ್ಲಿ ಕಳಿತು ಕಾಯುತಿರುವೇ...
ನೀ ಬಿಟ್ಟು ಹೋದ ಮೇಲೆ
ಮತ್ತೇ ಮತ್ತೆ ನಿನ್ನ ನಗುವಿನ
ಗುಳಿಕನ್ನೆಯಲ್ಲಿ ಮುಳುಗಿ ಮುಳುಗಿ ನರಳಿ ನರಳಿ
ನಗುತಿರುವೆ....

ಈ ಪ್ರೀತಿ ನೋಟ ಎಂತ ಸುಳ್ಳಾಯಿತು
ಬೇಳಕು ಕಳೆದುಕೋಂಡ ಜಗತ್ತಿಗೆ
ಕಣ್ಣು ಕಟ್ಟಿ ಬೀಟ್ಟಂತಾಗಿದೇ.....

- ak

14 Feb 2018, 10:55 pm

ಮೊದಲ ಸಲದ ಪ್ರೆಮಂಕುರ..

ಮೊದಲ ಸಲದ ನೋಟಕ್ಕೆ
ಅವಳೇ ನನ್ನವಳೆಂದೆ
ಪ್ರೀತಿಯ ಅಲೆಯಲ್ಲಿ ಬಿದ್ದ . ಹೃದಯದ ಮಾತು
ಪ್ರೆಮಂಕುರದಲಿ ಪ್ರೇಮದ ಹೂವ ಅರಳಿಸಿದವಳು....

ಭಗವಂತ ಹೆಣೆದ ಬಲೆಗೆ ಸಿಲುಕಿದೆವು ನಾವು
ನೂರೆಂಟು ಕನಸುಗಳ ಕಟ್ಟಿ ಬದುಕಿ ತೋರಿಸಬೇಕು ಜಗಕೆ
ಮನದ ಮಾತುಗಳ ಹಂಚಿಕೆ ಈ ವೇದಿಕೆ
ಕಂಡು ಕಾಣದ ವೇದನೆಯ ಮಾತು ಇಂದೇಕೆ
ಇದು ಮೊದಲ ಸಲದ ಪ್ರೆಮಂಕುರದ ಮಾತು....

ನನ್ನಾಕೆ ಮೆಚ್ಚಿಸಲು ಉಡುಗರೆಯ ಶಿಖರ ನೀಡುವೆ
ಬಾಳಿನುದ್ದಕ್ಕೂ ಅವಳ ನೆರಳಿನಂತೆ ಹಿಂಬಾಲಕನಾಗಿರುವೆ
ಕನಸಿನೊಳು ಅವಳೇ ಮನಸಿನೂಳು ಅವಳೇ
ಪ್ರೇಮದ ದಾರದಲಿ ನಾ ಬಂದಿಯಾಗಿರುವೆ....
ಮೊದಲ ಸಲದ ಪ್ರೆಮಂಕುರದ ಮಾತುಗಳು ಇಂದು.......

✍.....ಈಶ್ವರ್ ಬಿ

- ishwar

14 Feb 2018, 10:14 am

ನನ್ನವ್ವನ ನೆನಪು ......

ಹೊತ್ತು ಹೊಂಟೊಯುತು
ನೆತ್ತಿಯ ಮ್ಯಾಲ ಸೂರ್ಯ ಬಂದಾಯ್ತು
ಎದ್ದೇಳು ನನ್ನ ಮುದ್ದು ಮಗುವೇ ಬೆಳಗಾಯ್ತು
ಮುದ್ದು ಮಾಡಿ ಎಬ್ಬಿಸಿದಳು ಬಾಲ್ಯದಲಿ ನನ್ನವ್ವ....

ಹರೆಯು ತಿರುಗಿ ಕರಿಯಾದ ಗಲ್ಲದ ಚಕ್ಕು
ಚಿಗುರು ಮಿಸಿಯ ನನ್ನ ಮುದ್ದು ಮಗುವೇ
ಬೈದು ಬುದ್ದಿ ಹೇಳಿ ದುಡಿಯಲು ಹಚ್ಚಿದಳು
ಬದುಕೆಂಬ ಬಣ್ಣದ ಲೋಕಕ್ಕೆ ನನ್ನ ಬಿಟ್ಟಾಳು ನನ್ನವ್ವ.....

ಹಸನಾದ ಬದುಕಿಗೆ ಬಿಸನಕಿ ವಳಕಲ್ಲಿಗೆ ಹಾಡುಕಟ್ಟಿ
ಸೊಗಸಾದ ಸಧುಗುಣಿಯ ಸೊಸೆಯ ತಂದಾಳು
ಒಬ್ಬಂಟಿತನವ ಸೂಸೆಯಿಂದ ಹೂಗಲಾಡಿಸಿಯಾಳು ಮನಿಯಾಗ
ತಾ. ಹೂಗುವಮುನ್ನ ಸೊಸೆಗೆ ಕಿವಿಮಾತು.ಮಗನ ಕೈ ಬಿಡಬ್ಯಾಡ ಎಂದು ಹೆಳ್ಯಾಳು ನನ್ನವ್ವ....

ಹೆದರಿದೆನು ಬೆದರಿದೆನು ಅವ್ವನಿಲ್ಲದ ನೆನಪಲಿ
ಚಿಂತೆಯಲ್ಲಿ ನೆರೆ ಹಾಯ್ದವು ತಲೆ ಕೂದಲೆಲ್ಲ
ಮರಿಸಲು ಮಡದಿ ಮಕ್ಕಳಿರಲು ಮನೆಯಲಿ
ಮನದೊಳಗಿನ ನನ್ನವ್ವನ ನೆನಪು ನಾ ಸತ್ತ ಮೇಲು ಮರೆಯಾಗಲಿಲ್ಲ ನನ್ನವ್ವ........

- ishwar

13 Feb 2018, 08:56 am

ಪ್ರೀತಿಯ ಕಲ್ಲು..

ಎಡವುತ್ತಲೇ ಇರುತ್ತವೆ ಆಗಾಗ ಹೃದಯಕ್ಕೆ
ಚಿಕ್ಕದೋ ದೊಡ್ಡದೊ ಗಾಯ ಮಾಡಿ ನಗುವ
ಬಹುರೂಪಿ ಪ್ರೀತಿಯ ಕಲ್ಲುಗಳು,
ಎಷ್ಟು ಬದಿಗೆ ಸರಿದು ನಡೆದರೂ ಬಿಡವು
ಮತ್ತೆ ನಮ್ಮ ದಾರಿಗೆ ಬಂದು ಎಡವದೇ ಇರವು
ರಕ್ತ ಒಸರದಿದ್ದರೇನಂತೆ, ಹೃದಯದ ಅನು-
ರಕ್ತ ಬಾವನೆ ಬಿರಿಯಲಾರದೇನು ?
ಕಲ್ಲುಗಳು ಕರಗಲಾರವು ಪ್ರೀತಿಯ ಕಣ್ಣೀರಿಗೆ
ಕೊಲ್ಲುವುದನಷ್ಟೇ ಬಲ್ಲವು ಬಂದವರನು ದಾರಿಗೆ
ಎಂತ ಹುಚ್ಚರಯ್ಯ ನಾವು,
ಎಡವಿದ ಕಲ್ಲನ್ನೂ ತಡವಿ ಮುದ್ದಾಡುವೆವು
ಮತ್ತೆ ಅದು ಗುದ್ದಿ ಮನದ ನೆಲವ ಪುಡಿ
ಗೈವದೆಂಬ ಹಿಡಿ ನೆನಕೆಯೂ ಇಲ್ಲದೇ.
ಎಡವಿ ಬಿದ್ದರೂ ಲೆಕ್ಕವಿಲ್ಲದಷ್ಟು ಸಲ,
ಮೈ ಕೊಡವಿ ನಡೆವೆ ಮುಂದೆ ಅದೇನು ಮನೋಬಲ
ಮತ್ತೊಂದು ಮುಗ್ದ ಕಲ್ಲು ಕಾಲಿಗಡರಿ
ತೊಡರಿ ನೀ ಮುಗ್ಗರಿಸಿ ಬೀಳುವ ವರೆಗೆ !

- ಶ್ರೀಗೋ.

13 Feb 2018, 12:46 am

ನಿನ್ನ ಬೀಳ್ಕೊಡುವ ಮುನ್ನ (ಸಾಯುವ ಮುನ್ನ )

ಭುವಿಯ ಭಾಗ್ಯ ಜೀವಿಯೇ
ನಿನ್ನ ಬೀಳ್ಕೊಡುವ ಮುನ್ನ
ಆಗು ಈ ಜಗದ ಆಶಾಕಿರಣ..
ಜೊತೆ ಬರೋದಿಲ್ಲ ನೀ ಕೂಡಿಟ್ಟ ಆಸ್ತಿ ಹಣ
ಜೊತೆ ಬರೋದೊಂದೆ ನೀ ಮಾಡಿದ ಧರ್ಮ ದಾನ


ಜೀವನ ಜನನ ಮರಣ ನಡುವಿನ
ಒಂದು ರೋಚಕವಾದ ಕ್ರೀಡಾಂಗಣ..
ಎಲ್ಲರಲ್ಲಿ ಒಬ್ಬನಾಗಿ ನೀನು
ಆಟವಾಡಬೇಕು ಪ್ರತಿದಿನ..
ವಿನಯ ಎಂಬ ನಿಯಮ
ಪಾಲಿಸಬೇಕು ಪ್ರತಿಕ್ಷಣ..
ಅಹಂಕಾರ ಎಂಬ ಗೆರೆ
ತುಳಿಯಬಾರದು ನಿನ್ನ ತನುಮನ..

ಆತ್ಮವಿಶ್ವಾಸದಿಂದ ಸಂತಸದಿಂದ
ಸಾಗಬೇಕು ಆಟದ ಪಯಣ..
ಗೆದ್ದರೆ ನೀನು ಪಡೆಯುವೆ
ಬಹುದೊಡ್ಡ ಸ್ಥಾನಮಾನ..
ಸೋತರೆ ಬಿಟ್ಟು ಹೋಗಬೇಡ
ನೀನು ಗೆಲುವಿನ ನಿಲ್ದಾಣ..
ಕಲಿಯಬೇಕು ನೀನು ಆಟದಲ್ಲಿ
ಏಟುಗಳ ಚಪ್ಪಾಳೆಗಳ ನೀತಿಪಾಠವನ್ನ.." 1 "

ಅಪ್ಪ ಅಮ್ಮನ ಹೃದಯದಲ್ಲಿ
ಕಟ್ಟಬೇಕು ನೀನು ನಗುವಿನ ಗಗನ..
ಕಟ್ಟಬೇಕು ಈ ಭೂಮಿಯಲ್ಲಿ
ನೀನು ಪ್ರೀತಿ ಸ್ನೇಹದ ಬಣ..
ಮಾಡಬೇಡ ನೀನು ಯಾರಿಗೂ
ದ್ವೇಷ ಮೋಸದ ಕದನ..
ಉಣಿಸಬೇಕು ನೀನು ಎಲ್ಲರಿಗೂ
ಶಾಂತಿ ಸಹನೆಯ ಭೋಜನ..
ಮೆಚ್ಚಬೇಕು ಜಗವೆಲ್ಲಾ
ನಿನ್ನ ಜೀವನ ವಿಧಾನ..
ಸಾರಬೇಕು ಬಲ್ಲವರೆಲ್ಲಾ
ನಿನ್ನ ಸಾಧನೆಯ ಕಥನ....." 2"

- ಸುರೇಶ್ ಟಿ ವಿ

12 Feb 2018, 05:55 pm

ಇಹಲೋಕವೋ ನಿನಗೆ ಪರಲೂಕವೊ

ಈ ಲೋಕ ನಿನಗೆ ಇಹಲೋಕ
ಪಾಪಕ್ಕೆ ನೀ ಕಡಿವಾಣ ಹಾಕಬೇಕು
ಪುಣ್ಯದ ಚಿಲವ ಮನಿ ಮನಗಳಿಗೆ ನೀ ಹಂಚಬೇಕು
ಕೊನೆಗೆ ಸಾಗುವೆ ನೀ ಪರಲೋಕ...

ದಾರಿಯಲಿ ತುತಾಗಭೂದು ನಿನ್ನ ಪಾಪದ ಚೀಲ
ಪುಣ್ಯದ ಲೆಕ್ಕವು ಹೆಚ್ಚಾದರ ನೀ ಕೆಳ
ಬೆನ್ನಿಗೆ ಬಾರವಲ್ಲ ನಿನ್ನ ಪುಣ್ಯದ ಚೀಲ
ನೀ ಹೂಗುವದಾರಿಯಲಿ ಹೇಳಬ್ಯಾಡ ನೀ ಸುಳ್ಳ....

ಪರಲೋಕದಲ್ಲಿ ಮೆಚ್ಚತಾನ ನಿನ್ನ ಶಿವನು
ಯಾರಿಗು ಮಾಡದಿರು ಮೋಸವನ್ನು
ಮೃತು ಲೋಕಕ್ಕೆ ಕಾಲಿಟ್ಟರ ಬೆಂಕಿ ಹಚ್ಚತಾನ ನಿನಗೆ ಯಮನು
ಪಾಪದ ಲೆಕ್ಕ ತಪ್ಪಲಾರ ಎಂದಿಗು ಅವನು...

ಮಾಡದಿರು ಮೂಸವ ಮನುಜ ನೀ ಹುಟ್ಟಿದ ಜಗಜಂತುಗಳಿಗೆ
ಪ್ರೀತಿ ಪ್ರೇಮದಿಂದ ಪುಣ್ಯದಲೆಕ್ಕ ಹೆಚ್ಚಿಸು ನಿನ್ನ ಅಣು ಅಣುವಿನೂಳಗು
ಹೆಚ್ಚೆಚ್ಚು ಪ್ರೀತಿ ಕಳೆಯುವದು ದ್ವೇಷದಾ ಭೀತಿ ನಿನ್ನದ ಈ ಜಗದೊಳಗೆ....

ಮಾಡದಿರು ಮನುಜ ನೀ ಮೂಸವ
ಹುಟ್ಟಿದ ಜಗಜಂತುಗಳಿಗೆ.........✍ಈಶ್ವರ್ ಬಿ....

- ishwar

12 Feb 2018, 06:31 am