Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಹುಚ್ಚು ಹುಡುಗ

ಎದೆ ಒಣಗಿ, ನೆಲ ಬಿರಿತು
ಸುಧೆ ಕರಗಿ, ಜಲ ಬತ್ತಿ
ಧೂಳಡರಿದಾ ಧರಣಿಯಲಿ, ಪ್ರೀತಿ ಬೀಜವ ಬಿತ್ತಿ
ಅನುರಾಗದ ಫಸಲ ಬೆಳೆವ ಅವನ ಕಂಡು
ಮನದ ಮೂಲೆಯಲಿ ನಗೆಯ ಅಲೆಯೊಂದು ಅಣಕವಾಡುತಿದೆ......

- Akku

23 Feb 2018, 07:10 pm

ಇರುಳು ಕಳೆಯುವ ಮುನ್ನ

ಇರುಳು ಕಳೆಯುವ ಮುನ್ನ
ಆರಿತು ಪ್ರೀತಿಯ ಹಣತೆ!!
ತೀರ ತಲುಪುವ ಮುನ್ನ
ಮುಳುಗಿತು ಬದುಕಿನ ನೌಕೆ!!

ಕಣ್ಣೀರ ಬದುಕಿನ ತುಂಬ
ಮಣ್ಣಿರದ ಮಸಣದ ಬಿಂಬ!!
ಬದುಕು ಭಯದಲಿ ಮಿಂದು
ಭರವಸೆಯ ಅಳಿಸಿ ತಾ ನೊಂದು!!

ಬೇಸರದಿ ದಿನವೆಲ್ಲ ಕಳೆದು
ಕಾದಿರುವೆ ಯಾರನ್ನು ನೆನೆದು!!
ನಗು ಅಳಿಸಿ ಗಳಿಸಿದ್ದು ಏನು
ನೀ ನಿನ್ನ ಮರೆತಿರುವೆಯೇನು!!

- ಪಿ.ಜಿ.ಜ್ಯೋತಿ

22 Feb 2018, 10:54 pm

ಏಕಾಂತದ ಸಂಭ್ರಮ

ಏಕಾಂತಕೂ ಸಂಭ್ರಮ
ನಿನ್ನ ನೆನಪಿನ ಸಂಗಮ!!
ಈ ಪ್ರೇಮದ ಸರಿಗಮ
ನೀ ಕೇಳು ಬಾ ಅನುಪಮ!!

ನಿನ್ನದೇ ಕಲರವ
ಈ ನನ್ನಯ ಹೃದಯದಿ!!
ನಿನ್ನ ಕನಸಿನ ಕಚಗುಳಿ
ದಿನ ನಿದಿರೆಯ ಸಮಯದಿ!!

ನಗುವಿನ ಸಡಗರ
ನನ್ನ ಮುತ್ತಲು ಸುಂದರ!!
ಮಿಲನದ ಕಾತುರ
ನೀ ಒಲಿದ ಆನಂತರ!!

- ಪಿ.ಜಿ.ಜ್ಯೋತಿ

22 Feb 2018, 10:35 pm

ಓ ಮನಸೇ

ಮನಸೇ ನೀನು
ಕೇಳದೆ ಕರೆದೆಯೇಕೆ
ಕಾಣದೆ ಬಣ್ಣಿಸಿದೆಯೇಕೆ
ಮಾತಿಲ್ಲದೆ ಕರೆದೆಹೇಗೆ..!! ?

ನಿನ್ನನಗಲಿ ನಾನು ಉಳಿಯದಿರಲು
ಪ್ರೀತಿಯ ಬಂಧನವೇಕೆ
ಕುರುಡು ಭಾವವಲ್ಲ
ಮೌನದಲೀ ಬಂದೀ ನೀನಲ್ಲಾ..!

ಎಲ್ಲಿಯದೋ ನಂಟು
ಆದರೂ ಇಲ್ಲಿಹುದೇನೋ..
ಇರುವುದಿಲ್ಲಿ
ಸಮಯದಾ ಸಂಚು ..!

- ನಾಗರಾಜ್

22 Feb 2018, 06:41 pm

ನನಸಾದ ಕನಸು

ನನ್ನ ಕನಸುಗಳೆಲ್ಲ ನನಸಾಯಿತು
ರೆಕ್ಕೆ ಮುರಿದ ಹಕ್ಕಿಯು ಹಾರಾಡಿತು
ಬಾನಂಗಳಲ್ಲಿ ನಲಿಯುತ ತೇಲಿತು
ಒಡನಾಡಿಗಳೊಂದಿಗೆ ಮಾತಾಡಿತು

ನಾ ಕಟ್ಟಿದ ಕನಸಿಗೆಲ್ಲ
ಬಣ್ಣ ಹಚ್ಚುವ ಸಮಯ
ಉರುಳದಿರಲಿ ಕಲ್ಪನೆಯ
ಕಟ್ಟಡ ಬಣ್ಣ ಹಚ್ಚುವ ಮುನ್ನ

ಹೊತ್ತ ಹರಕೆಗಳೆಷ್ಟೋ
ಮಾಡಿದ ವಾಗ್ದಾನಗಳೆಷ್ಟೋ
ಎಲ್ಲವ ಸಲ್ಲಿಸಿ ಬಿಡುವೆನು
ನಾ ಹರಕೆಯ ಕುರಿಯಾಗುವ ಮುನ್ನ




ಶಾರಧ

- ಶಕುಂತಲಾ

22 Feb 2018, 01:52 pm

ಹೊಸತು

ಯಾರು ಕದ್ದುಕೊಂಡು ಹೋದರು
ನನ್ನ ಸುಂದರ ಸಾಲುಗಳನ್ನು
ಸರಳ ಸುಮಧುರ ಸತ್ಯವಾದ
ನುಡಿಗಳ ಶಬ್ದ ಮಾಲೆಯನ್ನು

ನನ್ನ ಮನದಾಳದ ಭಾವನೆಗಳ
ಪ್ರತಿಫಲಿಸುವ ಕನ್ನಡಿಯ
ಇದ್ದ ಹಾಗೆ ಹೇಳುವ ಕಥೆಯ
ನಿರೂಪಿಸುವ ಎದೆಗಾರಿಕೆಯ

ಕಳೆದುಕೊಂಡ ಸಾಲುಗಳ ನೆನಪು
ಮಸಕಾಗಿರುವ ಬಿಂಬಗಳು
ಬಾರದಂತೆ ಗರಿಗೆದರಿವೆ ಹೊಸ
ಕನಸುಗಳು ಬೀರುತ ಹೊಸ ಕಂಪು

ಕವಿರಾಜ

- kavita Rajesh

22 Feb 2018, 12:33 pm

ನಾನು ಕೂಡ ಕಾದೆ..

ಜಗದ ಪ್ರೇಮಕೆ
ಎಂದೂ ಮಾದರಿ
ದ್ವಾರಕೆಯ
ಕೃಷ್ಣ ಮತ್ತು ರಾಧೆ..!
ರಾಧೆಯಂತೆ
ಹಗಲು ಇರುಳು
ಇಂದು ನಿನಗಾಗಿ
ನಾನು ಕೂಡ ಕಾದೆ..!
~ ಸಿದ್ದು ಕನ್ನಡಿಗ

- - ಸಿದ್ದು ಕನ್ನಡಿಗ

21 Feb 2018, 07:59 am

ಮನಸಿಗೆ ಬೇಕಿದೆ ಮಜ್ಜನ !

ಎಲ್ಲವನೂ ಬಿಟ್ಟು ನಿಂತ ಮಹಾ ಮಹಿಮಗೆ
ಮಾಡುವರಯ್ಯ ಮಹಾ ಮಜ್ಜನವ
ರಾಜ್ಯವನೆ ತೊರೆದವಗೆ ರಾಜ್ಯಾಡಳಿತವೇ
ರಾಶಿ ರಾಶಿ ಹಾಲ್ಬೆಣ್ಣೆ ತುಪ್ಪವ ತಂದು ಸುರಿಯುವುದನ್ನು ಕಂಡು,
ಕನಲಿರಬಹುದೇ ಆ ಮಹಾತ್ಮನಾತ್ಮ ?

ಹೊಟ್ಟೆಗಿಲ್ಲದೇ ಸಾಯುತಿಹರು ದೀನರು,
ಸಾಲದ ಸುಳಿಯಲ್ಲಿ ಸತ್ತರು ಬಡ ರೈತರು
ಪೋಷಕಾಂಶಗಳಿಲ್ಲದೆ ನರಳುವ ಮಕ್ಕಳು
ದಿಗಂಬರನ ಮೇಲೆ ಬೆಣ್ಣೆ ತುಪ್ಪ ತಂದು ಸುರಿವರು!

ಮೂಡ ಮತಿಗಳ ನಡುವಲ್ಲಿ ಮರೆಯಾಯ್ತು
ಮಾನವೀಯತೆ, ಅದೆಲ್ಲೋ ಮರೀಚಿಕೆ..
ಬಂಗಾರ ತೊಡುವ ದೇವರು,
ಗರ್ಭ ಗುಡಿಗೆ ಕನ್ನ ಹಾಕುವ ಮನುಜರು
ಗರ್ಭದಲಿ ಹೊತ್ತು ಹೆತ್ತವಳನ್ನೇ ಬುರ್ಕಾದೊಳು
ಮುಚ್ಚಿಡುವ ಮಂದ ಮತಿಗಳಿವರು.

ಏನ ಬಳಿಯುವಿರಣ್ಣ
ಚರ್ಚಿನ ಗೋಡೆಗೆ ಬಿಳಿ ಬಣ್ಣ,
ಸಂಪತ್ತು ತುಂಬಿರುವ ದೇಶದಲ್ಲಿ ಮಕ್ಕಳೇ
ಆಗಿರುವರು ಪ್ರಾಣ ತೆಗೆವ ಆಪತ್ತು!
ಹೊಟ್ಟೆ ಪಾಡಿಗೆ ಹುಟ್ಟಿಕೊಂಡ ದೇವನ
ಹೆಸರಲ್ಲಿ ಬಿದ್ದ ಹೆಣಗಳಿಗೆ ಲೆಕ್ಕವನಿಟ್ಟವರಾರು ?
ಮನುಷ ಮನುಷ್ಯನ ಕೊಲ್ವದೆ ಧರ್ಮವೆಂದು
ಬರೆದು ಸತ್ತ ದುರಾತ್ಮರುಗಳ್ಯಾರು?

ತುಪ್ಪ ಸುರಿವದು ನಿಲ್ಲಿಸಿ,
ಎಂದೋ ಸತ್ತರೂ ಬದುಕಿರುವ ಮಹಾ ಮಹಿಮನ
ಮತ್ತೆ ಮತ್ತೆ ಕೊಲ್ಲದಿರಿ,
ಅವನ ತತ್ವಗಳ ಕೊರಳು ಹಿಸುಕುತ್ತ
ಬೆಣ್ಣೆ ತುಪ್ಪಗಳ ವ್ಯರ್ಥವಾಗಿ ಕಗ್ಗಲ್ಲ ಮೇಲೆ ಸುರಿದು !

- ಶ್ರೀಗೋ.

20 Feb 2018, 09:40 pm

ಚೋರಿ (ಚೂರಿ)

ಹೆಣ್ಣೆ ಹೆಣ್ಣೇ ಓ ಹೆಣ್ಣೆ ಹೆಣ್ಣೇ
ನಿನ್ನ ಕನಸನು ಕದ್ದ ಕಣ್ಣೆ

ಅರಯಲೇಗೆ ನಿನ ಕಣ್ಣ ಸನ್ನೆ
ನೋಡ್ತ ಇದ್ರೆ ಎಲ್ಲಾ ಸೊನ್ನೆ ಸೊನ್ನೆ

ನಿನ್ನ ಸ್ಪರ್ಶದಿಂದ ಭೂಮಿ ತಂಪು ಆಯ್ತು
ನನ್ನ ಉಸಿರ ಈಗ ನಿನಗೆ ಒತ್ತೆ ಇಟ್ಟು ಆಯ್ತು

ನೀ ಈಗ ಆಗೋದೇ ನನ್ನ ಎಲ್ಲ ಚಟುವಟಿಕೆ
ನಿನ್ನ ನಗುವಿಂದ ಶುರುವಾಯ್ತು ಎದೆಯ ತಡವಡಿಕೆ

- Jyothi

20 Feb 2018, 07:43 pm

ಬಿಗುವಾಯ್ತು ಉಡುಗೆ !

ಬಿಗುವಾಗಿದೆ ನನ್ನ ಚೆಲುವೆ ತೊಡುವ ಉಡುಗೆ
ಸೊಗಸಾಗಿದೆ ನಗು ಚೆಲ್ಲಿ ನಡೆವ ಅವಳ ನಡಿಗೆ
ಹೆಣ್ತನದ ಊರಲ್ಲಿ ಹರೆಯದ ನೆಂಟರ ಸಂಚಾರ
ಕಣ್ತುಂಬುವ ನಾರಿಗೆ ಯೌವ್ವನದ ಬಂಟರ ಉಪಚಾರ.

ತುಂಬಿಕೊಂಡ ನಯ ನುಣುಪಿನ ಗುಳಿ ಕೆನ್ನೆ
ಕಲಿತಿರುವಳು ಈಗಷ್ಟೇ ಮಿಟುಕಿಸಿ ಸೆಳೆವ ಕಣ್ಸನ್ನೆ
ಕೆಂದುಟಿಗಳಲಿ ಪ್ರೇಮಾಮೃತದ ಮೃದು ಬೆಣ್ಣೆ
ಅಂಗಗಳು ಅರಳಿ ತುಂಬಿಕೊಂಡವೋ ಮಧುರ ಕನಸನ್ನೇ!

ಕೌಮಾರ್ಯ ಕಳೆದು, ಹೆಣ್ತನವು ಸುಳಿದು
ಮಧುರ ಮನದ ಎದೆಯಂಗಳದಲ್ಲಿ
ಸುಂದರ ಸುಕೋಮಲ ಕುಂಭಗಳನ್ನಿಟ್ಟು
ಕಾಮನೆಯ ಅಮೃತವನು ತುಂಬಿದವರಾರೆ?

ಬಾಲ್ಯವನು ತೊಳೆದು, ಹೊಂಗನಸು ಬೆಳೆದು
ಕಂಗಳಲ್ಲಿ ಕಾಮನ ಬಿಲ್ಲನು ಮೂಡಿಸಿ,
ಎಳೆಯ ಇಳೆಯ ಮೇಲೆ ಆಸೆಯ ಹೊಳೆಯ
ಹರಿಸಿದವರಾರೆ?

ಹೇಳೇ ಚೆಲುವಿ ಬಿಗುವಾಯ್ತೆಕೆ ನಿನ್ನುಡುಗೆ?
ಬಡವಾಗಿದ್ದ ಮನಸಲ್ಲಿ ತುಂಬಿಕೊಂಡವೆ
ಎಣಿಸಲಾಗದ ಸುಂದರ ಕನಸುಗಳ ಕೊಡುಗೆ.

- ಶ್ರೀಗೋ.

20 Feb 2018, 04:18 pm