Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನಗುನಗುತ ಇರಬೇಕು

ನಗುನಗುತ ಇರಬೇಕು
ನೂರು ಆರಾಗಲಿ
ಆರು ನೂರಾಗಲಿ..
ನಕ್ಕು ನಗಿಸುತ ಬಾಳ್ಬೇಕು
ಯಾರೇನೇ ಅನ್ನಲಿ
ಯಾರೇನೇ ಮಾಡಲಿ..
ಆಗಿದ್ದು ಒಳ್ಳೆದೇ ಅನ್ಕೊಳಿ
ಆಗೋದು ಒಳ್ಳೆದೇ ಅನ್ಕೊಳಿ.. " ಪ "

ಇವತ್ತು ಇರೋರು ನಾಳೆ ಇರೋಲ್ಲ
ನಿನ್ನೆ ಅನ್ನೋದು ಮತ್ತೆ ಬರಲ್ಲ..
ನಾಳೆ ಏನಾಗುತ್ತೋ ಯಾರಿಗೂ ಗೊತ್ತಿಲ್ಲ
ಇವತ್ತು ಖುಷಿಖುಷಿಯಾಗಿರೋಣ ನಾವೆಲ್ಲ..

ಈ ಬಾಳು ಒಂದು ಹೂವಿನಂತೆ ಬ್ಯೂಟಿ
ಏನೇ ಮಾಡಿದ್ರೂ ಬಾಡೋದು ಗ್ಯಾರಂಟಿ..
ನಗುತ ಬಾಳಿದರೆ ಸ್ವರ್ಗವು ಆಗದು ನಿನಗೆ ಸಾಟಿ
ಅಂದದ ನಗುವ ನೋಡಿ ಆ ಚಂದ್ರನು ಮಾಡಬೇಕು ನಿನ್ನ ಭೇಟಿ..

ಜೀವನ ಒಂದು ಹಾವು ಏಣಿಯ ಆಟ
ಬಿಟ್ಟಾಕು ಫಸ್ಟ್ ಲಾಸ್ಟ್ ಅನ್ನೋ ಪಟ್ಟ..
ಏರಲೇಬೇಕು ಎಲ್ಲರೂ ಒಂದು ದಿನ ಚಟ್ಟ
ಅನುಕ್ಷಣ ಹಾರಿಸೋಣ ನಗುವಿನ ಪಟ..

ನೂರು ಕೋಟಿ ಕೊಟ್ಟರೂ ಸಿಗದು ನಗು ಎಂಬ ಬಂಗಾರ
ನೋವು ಸಾವಿರ ಇದ್ದರೂ ನಗುತಿದ್ದರೆ ನಿನಗೆ ನೀನೇ ಕುಬೇರ..
ಚಿಂತೆ ಎಂದಿಗೂ ತನುಮನ ಸುಟ್ಟು ಹಾಕುವ ಚಿತಾಗಾರ
ಅನುದಿನ ಅನುಕ್ಷಣ ಹೃದಯದಲ್ಲಿ ಹರಿಸಬೇಕು ಆನಂದ ಸಾಗರ..

- ಸುರೇಶ್ ಟಿ ವಿ

01 Mar 2018, 11:00 am

ಸಾಗುವ ದಾರಿಯಲ್ಲಿ

ಸಾಗುವ ದಾರಿಯಲ್ಲಿ
ಸಾಗಿದೆ ನೂರು ನೆನಪು!!
ಪ್ರೀತಿಸುವ ಜೀವ ಇಲ್ಲಿ
ಅಲೆದಿದೆ ನಿನ್ನ ಹುಡುಕಿ!!

ಕೇಳುವ ಮಾತು ಮಧುರ
ಹಾಡುವ ಹಾಡು ಅಮರ!!
ಈ ಪ್ರೇಮದ ರಾಗದ ತುಂಬ
ಇರುವುದು ನಿನ್ನಯ ಬಿಂಬ!!

ಓ ನನ್ನಯ ಇನಿಯ ನೀನು
ನೆನಪಾಗಿ ಇರಬೇಡ ಇನ್ನು!!
ಈ ಬಾಳ ಪಯಣದಲಿ ನೀನು
ಜೊತೆ ಆಗಬೇಕು ಎಂದೆಂದೂ!!

ಬಯಸದೇ ದೊರೆತಿರುವ ಭಾಗ್ಯ
ನಿನಗಾಗಿ ಕಾದಿಹುದು ಹೃದಯ!!
ಕಾಡಿಸದೇ ಬಾ ಸೇರು ಇನಿಯ
ಕರಗುವುದು ಈ ನನ್ನ ಹರೆಯ!!

- ಪಿ.ಜಿ.ಜ್ಯೋತಿ

28 Feb 2018, 10:16 pm

ನೀಲಿಮಣಿ ಹಾರದ ಬೆಡಗಿ..

ನೀಲಿಮಣಿ ಹಾರದ ಸುಂದರ ಹುಡುಗಿ
ನಿನ್ನಯ ಕಣ್ಣೋಟಕೆ ನಾ ಬೆರಗಾದೆ
ನಾಚಿಕೆ ತುಂಬಿದ ಅಂದದ ಬೆಡಗಿ
ನಿನ್ನಯ ಕುಡಿನೋಟಕೆ ನಾ ಬೆರಗಾದೆ!

ನೀಲಿ ಸೀರೆಯನು ಉಟ್ಟು ನಿಂತೆಯಲ್ಲೆ
ತುಸುಸನಿಹ ಬಂದಿಹೆನು ನಿನ್ನಂದವ ಹೊಗಳಲು
ನಾಚಿಕೆಯ ನಿನ್ನಾಭರಣದಲಿ ನೀ ನಿಂತಿರಲು
ಸೋತು ನಿನ್ನಂದಕೆ ನಾ ಬೆರಗಾದೆ!

ಮುಡಿಯ ತುಂಬೆಲ್ಲ ಕನಕಾಂಬರವ ಮುಡಿದು
ಮುಗ್ದ ಮೊಗದ ಮಗುವಿನಂತೆ
ನೀಲಾಕಾಶದಲಿ ನಕ್ಷತ್ರವ ಎಣಿಸುವ
ನಿನ್ನಾ ಸಂಭ್ರಮಕೆ ನಾ ಬೆರಗಾದೆ!

ಬೆಳದಿಂಗಳಲಿ ಕಣ್ಣಾಮುಚ್ಚಾಲೆ ಆಟವನಾಡುತ
ಚಂದ್ರನನೆ ಸೋಲಿಸಲು ನೀ ಅಡಗಿ ಕುಳಿತಿರಲು
ಮರೆಯಾದ ಚಂದ್ರನನು ನೋಡಿ ನೀ ನಗಲು
ಆ ನಿನ್ನ ಹುಡುಗಾಟಕೆ ನಾ ಬೆರಗಾದೆ!

ನೀನೇ ಬಳಿಬಂದು ನನ್ನವಳಾದಂತೆ
ತನ್ಮಯತೆಯಲಿ ಸೇರಿ ನಲಿದಂತೆ
ಪ್ರೀತಿಯ ಹೊಂಗನಸು ಕಾಣುತ್ತಿರುವ
ನನ್ನ ಈ ಹುಚ್ಚು ಕನಸಿನ ಲೋಕಕೆ ನಾ ಬೆರಗಾದೆ!

- ಪ್ರಿಯಾಂಕ

28 Feb 2018, 04:05 pm

ಹೆಮ್ಮೆ

ಹೆಮ್ಮೆಯು ನಮಗೆ
ಇದು ಹೆಮ್ಮಯು ನಮಗೆ!

ಅಚ್ಚರಿಯ ಮೂಡಿಸಿದರು
ಹರಿಣಗಳ ಸಂಹರಿಸಿದರು
ಕೋಹ್ಲಿಯ ಸೈನಿಕರು
ವಿಜಯವ ಸಾಧಿಸಿದರು

ಮೂರು ದಶಕಗಳ ಪರದಾಟ
ಗೆಲುವಿನೊಂದಿಗೆ ತೃಪ್ತಿಯ ರಸದೂಟ
ಹಲವು ದಾಖಲೆಗಳ ನಿರ್ಮಿಸಿದರು
ಭಾರತಾಂಬೆಯ ಹೆಮ್ಮೆಯ ಮಕ್ಕಳಿವರು



ಶಾರಧ

- ಶಕುಂತಲಾ

28 Feb 2018, 02:25 pm

ಒಲವ ಹೂರಣ

ಒಲವನ್ನ ಹಾಸ್ಯಾಳ ಚೆಲುವನ್ನ ಕರದಾಳ
ಸರಸದಾ ಹೊದಿಕಿ ಹೊದ್ದಾರ/ಇಬ್ಬರೂ
ಸಲ್ಲಾಪ ರಾತ್ರಿ ಮೆದ್ದಾರ

- Akku

28 Feb 2018, 09:03 am

ವೀರ ಕನ್ನಡಿಗ

ಬಾರೋ ಬಾರೋ ವೀರ ಕನ್ನಡಿಗ ಬಾರೋ
ಕನ್ನಡ ನೆಲಜಲ ರಕ್ಷಿಸಲು ಮುನ್ನುಗ್ಗಿ ಬಾರೋ..
ಬಾರೋ ಬಾರೋ ಧೀರ ಕನ್ನಡಿಗ ಬಾರೋ
ಕನ್ನಡ ನಾಡುನುಡಿ ಬೆಳೆಸಲು ಧುಮುಕಿ ಬಾರೋ..
ಸಿರಿಗನ್ನಡ ಗೆಲ್ಲಬೇಕು
ಸಿರಿಗನ್ನಡ ಬಾಳಬೇಕು.." ಪ "

ನೀ ಉಸಿರಾಡೋ ಗಾಳಿ ಕನ್ನಡ
ನೀ ತಿನ್ನೋ ಅನ್ನ ಕನ್ನಡ..
ನೀ ಕುಡಿಯೋ ನೀರು ಕನ್ನಡ
ನೀ ಬದುಕೋ ಊರು ಕನ್ನಡ..
ಮಾತೃಭೂಮಿಗಾಗಿ ಪ್ರಾಣ ನೀಡಲು ಸಿದ್ಧನಾಗೋ
ಪುಣ್ಯಭೂಮಿಯ ಋಣ ತೀರಿಸಲು ಬದ್ಧನಾಗೋ

ಓ ಕನ್ನಡಿಗ ..ಹೇ ಕನ್ನಡಿಗ..
ಕೃಷ್ಣ ಕಾವೇರಿ ನದಿ ಜಲಪಾತಗಳು
ಕನ್ನಡ ಡಿಂಡಿಮ ಬಾರಿಸುತ ಸಾಗುವ ಕನ್ನಡಾಂಬೆಯ ತೇರುಗಳು..
ಮಲೆನಾಡಿನ ಮನೋಹರ ಗಿರಿಶಿಖರಗಳು
ಕನ್ನಡ ಕಂಪನು ಚೆಲ್ಲುವ ಕೀರ್ತಿ ಪತಾಕೆಗಳು..
ಬೇಲೂರು ಹಂಪೆಯ ಗುಡಿ ಗೋಪುರಗಳು
ಕನ್ನಡಾಂಬೆಯ ವೈಭವ ಸಾರುವ ಕೀರ್ತಿ ಕಳಶಗಳು
ನಗುತ ನಿಂತ ನೂರಾರು ಶಿಲಾಶಾಸನಗಳು
ಸಾಹಸಗಾಥೆ ಸಾರುವ ಸಿರಿಗನ್ನಡದ ಸತ್ಯ ಪೀಠಗಳು

ಕನ್ನಡ ಮಣ್ಣಿನ ಕಣಕಣಗಳು
ಕರುಣೆ ಬಿತ್ತುವ ಕನ್ನಡಿಗರ ಹೊನ್ನಿನ ಮನಗಳು..
ಕನ್ನಡ ಕವಿಪುಂಗವರು,ಕನ್ನಡ ಗಾನಕೋಗಿಲೆಗಳು
ಕನ್ನಡಾಭಿಮಾನ ಹರಿಸುವ ಕನ್ನಡಾಂಬೆಯ ಜ್ಯೋತಿಗಳು..
ಕದನಕೆ ಅಳುಕದೆ ನಾಡನು ಕಟ್ಟಲು
ಹೋರಾಡಿದರು ಕನ್ನಡದ ರಾಜಮಹಾರಾಜರುಗಳು..
ಮರಣಕೆ ಅಂಜದೆ ನಾಡನು ರಕ್ಷಿಸಲು
ವೀರಮರಣವಾದರು ಕನ್ನಡದ ವೀರಾಧಿವೀರರುಗಳು.." "

ಓ ಕನ್ನಡಿಗ ಕನ್ನಡಕ್ಕಾಗಿ ನೀ ಎಚ್ಚರಗೊಳ್ಳು
ಓ ಕನ್ನಡಿಗ ಕನ್ನಡಕ್ಕಾಗಿ ನೀ ಸ್ಫೂರ್ತಿಗೊಳ್ಳು..
ನುಗ್ಗಿ ಬರಲಿ ನಾಡಿನೊಳಗೆ ಸಾವಿರ ಭಾಷೆಗಳು
ನರನಾಡಿಯಲ್ಲಿ ಭೋರ್ಗರೆಯಲಿ ಕನ್ನಡಾಭಿಮಾನದ ಸಾಗರಗಳು..
ಕನ್ನಡವೇ ನಿನ್ನ ಮಂತ್ರವಾಗಬೇಕು
ಕನ್ನಡವೇ ನಿನ್ನ ಅಸ್ತ್ರವಾಗಬೇಕು..
ಕನ್ನಡಾಭಿಮಾನಿಗಳಿಗೆ ನೀ ಮಾಡು ಕೋಟಿ ವಂದನೆ
ಕನ್ನಡ ದುರಾಭಿಮಾನಿಗಳಿಗೆ ನೀ ಕೊಡು ಚಾಟಿ ದಂಡನೆ..
ಕನ್ನಡ ಝೇಂಕಾರ ಮೊಳಗಲಿ ಯುಗಯುಗಗಳು
ಕನ್ನಡಿಗರ ಬಾಳು ಬಂಗಾರವಾಗಲಿ ಪ್ರತಿಕ್ಷಣಗಳು..

- ಸುರೇಶ್ ಟಿ ವಿ

27 Feb 2018, 08:53 am

ಹುಡುಕಾಟ

ನಾನಂದು ಬಹಳಷ್ಟು ಹುಡುಕಾಡಿದೆ
ಕಣ್ಣಿಗೆ ಕಾಣಿಸಲೇ ಇಲ್ಲ,
ಕೈಗೆ ಸಿಕ್ಕಲೂ ಇಲ್ಲ.
ತಡವರಿಸಿದೆ ನಾನು,
ತಡಕಾಡಿದೆ ನಾನು
ಹುಚ್ಚನಂತೆ ಅಲೆದಾಡಿದೆ ನಾನು.

ನಾನು ಹುಡುಕಾಡುವುದು
ಏನೆಂಬುದು ನನಗೇ
ತಿಳಿದಿರಲಿಲ್ಲ.
ಬಹುಶಃ ನಾನು ಹುಡುಕಾಡಿದ್ದು
ನಿನನ್ನೇ ಇರಬೇಕು ಗೆಳತಿ.

ಮಂಜು ಸಾಮ್ರಾಟ್

- Manjunath

26 Feb 2018, 07:34 pm

ನನ ಕಂದ

ಸಕ್ರೀ ತುಪ್ಪ ಬೇಕಂತ ಒಂದಿನಾ ಸೆಟಗೊಂಡಿಲ್ಲ
ಹಾಲು ಮೊಸರು ಬೇಕಂತ ಯಾವತ್ತೂ ಅವಲತ್ತುಕೊಂಡಿಲ್ಲ
ನುಚ್ಚಕ್ಕಿ ಅನ್ನ, ತಿಳಿಸಾರ ಗಂಗಾಳ ತುಂಬಾ ನೀಡಿದ್ರ
ನೆಚ್ಚಿದ ತಾಯಿ ಹೊಟ್ಟಿ ತಣ್ಣಗಾಗುವ್ಹಾಂಗ ಉಂಡು ಮಲಗ್ಯಾನ ನನ ಕಂದ.....

- Akku

26 Feb 2018, 08:28 am

ಸತ್ತ ಮಾನವೀಯತೆ!

ಎಷ್ಟೊಳ್ಳೆಯ ಕೆಲಸ ಮಾಡಿದಿರಿ
ದೇವರ ಸ್ವಂತ ನಾಡಿನ ನಾಗರಿಕ-
ರೆಂದೆನಿಸಿಕೊಂಡ ಅನಾಗರಿಕ ಜನಗಳೇ.
ಹಸಿವಲ್ಲಿ ಕದ್ದವನ ಹೊಡೆದು ಕೊಂದು
ಹಲ್ಲು ಕಿಸಿದು ಪಟ ತೆಗೆದುಕೊಂಡು!

ಸಾಯಿಸಿದ್ದು ಒಳ್ಳೆಯದೇ ಆಯ್ತು ಬಿಡಿ
ಹೊಟ್ಟೆ ತುಂಬಿರುವ ವಿಷ ಜಂತುಗಳ
ನಡುವಲ್ಲಿ ಕದ್ದು ತಿನ್ನುವ ಅಬ್ವೆಪಾರಿ
ಬದುಕಿದ್ದು ಸಾಧಿಸುವುದಾದರೂ ಏನು?

ತುತ್ತು ಕೊಡದ ತುಸು ಕರುಣೆ ಇಲ್ಲದ
ಕಟುಕರ ಅನ್ನಕ್ಕೆ ಕೈ ಹಾಕಿದ್ದೆ ಅವ
ಮಾಡಿದ ಮಹಾಪರಾಧ!
ದೇವರ ಹೆಸರಲ್ಲಿ ರಾಶಿ ರಾಶಿ ಹಾಲು ಬೆಣ್ಣೆ
ಕೊಂಡೊಯ್ದು ಕಲ್ಲ ಮೇಲೆ ಸುರಿವ
ಕಲ್ಲು ಹೃದಯದ ಮೂಡ ಜನಗಳಿಗೆ
ಎಲ್ಲಿಂದ ತಿಳಿಯಬೇಕು ಹಸಿದ ಹೊಟ್ಟೆಯ ನೋವು.

ಕೋಟಿ ಕೋಟಿ ಮೂಟೆ ಕಟ್ಟಿ ವಿದೇಶಕ್ಕೆ
ಹಾರುತಿಹರು ಸೂಟು ಬೂಟಿನ ಮಂದಿ.
ಮಣ ಭಾರದ ಬಂಗಾರ ಹೊತ್ತು ತಿರುಗುವ
ಮಾನಗೆಟ್ಟ ಸಿರಿವಂತಿಕೆಯ ಮಂಗಳೆಯರು.
ನಿಮ್ಮ ಸಿರಿವಂತಿಕೆಯ ಅಣು ಅಣುವಿನಲ್ಲೂ
ಅಡಗಿಹುದು ಯಾವುದೋ ಬಡವನ ಬೆವರು.

ತುತ್ತು ಕದ್ದವನು ಕಳ್ಳನಲ್ಲ,
ಸುಳ್ಳು ಹೇಳಿ, ಜನರ ವಂಚಿಸಿ ಬದುಕುವ
ರಾಜಕಾರಣಿಗಳು, ಜೊತೆಗೆ ಅಧಿಕಾರಿಗಳು
ಇವರಲ್ಲವೇ ಕಳ್ಳರು? ದೇಶ ಲೂಟಿ ಮಾಡುವ
ದೇಶದ್ರೋಹಿ ಉದ್ಯಮಿಗಳ ಯಾಕೆ
ಯಾರೂ ಬಡಿದು ಕೊಲ್ಲಲೊಲ್ಲರು ?

- ಶ್ರೀಗೋ.

26 Feb 2018, 07:24 am

ಅಂತರ್ಜಾಲ #ಬಲೆ

ಹೆಣೆಯುತಿದೆ ಬಲೆಯೊಂದು ಅಂತರ್ಜಾಲ
ಯುವ ಮನಸುಗಳ ಸಂಗಮ ಮೋಹಜಾಲ
ಸುಳಿಗೆ ಸಿಲುಕಿ ನಲುಗುತಿರೆ ಇಂದ್ರಜಾಲ
ದಾರಿ ತಪ್ಪಿಸಿ ಬಲೆಯ ಹಿಡಿದಿಹರು ಮೋಸಜಾಲ...

ಅರಿಯಬೇಕಿಲ್ಲಿ ಯುವ ಮನಸುಗಳು
ಹೆತ್ತವರ ಮಮಕಾರದ ವಾಂಛಲ್ಯದ ಕನಸುಗಳು
ಸೆಳೆಯುತಿದೆ ಅಂತರ್ಜಾಲದ ಜಾಹೀರಾತುಗಳು
ಸರಿದಾರಿಯ ತೋರಬೇಕಿದೆ ಹಿತ ಬಂಧುಗಳು...

ಸ್ನೇಹಿತರು ಸಿಗುವರು ನೂರು ಮಂದಿ ಬಾಳಿನಲ್ಲಿ
ಹೆತ್ತವರ ಕನಸು ಹೊಸಕಿ ಭ್ರಮೆಯರಸುವ ಕನಸಿನಲ್ಲಿ
ಸುಭದ್ರ ನಾಳೆಗಳು ಕಮರಿ ಬದುಕು ಘೋರ ನರಕದಲ್ಲಿ
ಬುಧ್ದಿ ಕಲಿತು ಬರುವ ದಾರಿ ಮರೆತು ಕಾಣದ ಲೋಕದಲ್ಲಿ...

- ನಾಗರಾಜ್

25 Feb 2018, 12:52 pm