Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕಾಡದಿರು ಹೀಗೆ ನನ್ನ..

ಮೌನದ ಕಾಡಲ್ಲಿ
ಅಲೆದಾಡುತ್ತಿರುವೆನು
ಏಕಾಂಗಿಯಾಗಿ....
ನೀ ಕಾಣಿಸದೆ
ಕನಸು ಖಾಲಿಯಾಗಿದೆ
ನಿದ್ದೆ ಅಲ್ಲೆಲ್ಲೋ ಅಡಗಿಕುಳಿತಿವೆ...
ಬರಬೇಕಾಗಿದೆ ನೀ ಎಲ್ಲಿದ್ದರೂ
ಬಂದುಬಿಡು ಒಮ್ಮೆ,
ಕಾಡಬೇಡ ಗೆಳೆಯ...

- ಪ್ರಿಯಾಂಕ

03 Mar 2018, 09:19 pm

ಬದುಕು...

ಮರೆಯಲಾಗದ
ನೂರೊಂದು ನೆನಪುಗಳು...
ಹೇಳಲಾಗದ
ಸಾವಿರಾರು ಭಾವನೆಗಳು...
ಬಚ್ಚಿಡಲಾಗದ
ಕೆಲವೊಂದು ಸಂಗತಿಗಳು...
ಹೇಳಿ ಕೇಳಿ ನಲಿದಾಡುವ
ಜೀವನ ಚಕ್ರವೇ....
ಈ ಬದುಕು....‌‌......

- ಪಿ.ಜಿ.ಜ್ಯೋತಿ

03 Mar 2018, 09:59 am

ಕನಸು ಕಾಣುವ

ಕನಸೊಂದನ್ನು ಕಾಣುವ
ಅಭಿಮಾನದಿಂದ ಮನೆಯೊಂದನ್ನು ಕಟ್ಟುವ
ತನು ಮನಗಳ ಅಂತರಕ್ಕೆ
ಸೇತುವೆಯನ್ನು ನಿಮಿ೯ಸುವ

ಸುರಿದು ಆಳಾಗುವ ಕನಸಿಗೆ
ಕೆರೆಯೊಂದನ್ನು ಕಟ್ಟುವ
ದಡದಲ್ಲಿ ಕುಳಿತು
ನೆನಪನ್ನು ಮತ್ತೇ ಮತ್ತೇ ನೆನೆಯುವ

ನಮ್ಮ ಸುಂದರ ಪ್ರೀತಿಗೆ
ಗಿಡ ಒಂದನ್ನು ನೇಡುವ
ಗೀರಿ ಶಿಖರದ ಎತ್ತರಕ್ಕೆ ಬೆಳೆಸಿ
ಎಲ್ಲರ ಉಸಿರಾಗಿ ಇರುವ

ಒಳೆದಾವು ನೀಲಿ ಕಡಲು
ಹರಿದಾವು ಪ್ರೀತಿಯ ಹೋನಲು
ನೀನ್ನ ಸುಂದರ ಕನಸಿಗೆ
ತಲೆ ಬಾಗಿ .........

- ak

02 Mar 2018, 09:10 pm

ಬಣ್ಣದಲ್ಲಿ ಬದುಕು

ಕಂಡೆವು ಜೀವನದಲಿ ಬಣ್ಣ ಹಲವು
ಇರುವುದು ಬಣ್ಣ ಮೂರು ನಮ್ಮ ಧ್ವಜದಿ
ಕಲಿಸಿದೆ ಶಾಂತಿ ಸಹನೆ ಬಳಿಯು
ಧೈರ್ಯವನು ಕೇಸರಿ
ಅಭಿವೃದ್ಧಿಯನು ಹಸಿರು
ನಮ್ಮ ಜೀವನದಲ್ಲಿದ್ದರೆ ಈ ಬಣ್ಣಗಳು
ಸುಂದರ ಸಮೃದ್ಧವಾಗುವುದು ಜೀವನ

ಏಳು ಬಣ್ಣದ ಕಾಮನಬಿಲ್ಲು ನೋಡಲು ಚಂದ
ಇರುವುದು ಹಲವು ಕಷ್ಟಗಳು ಜೀವನದಲಿ
ಜಯಿಸಿ ನಡೆದರೆ ನಮ್ಮ ಬದುಕು ಸುಂದರ
ಬಣ್ಣದ ಹಬ್ಬದ ಶುಭಾಶಯಗಳು

- ರಘು

02 Mar 2018, 08:02 pm

ನಿನ್ನಯ ಸ್ವತ್ತು..

ನನ್ನಾಕೆ ಕೊಟ್ಟಳು
ಕೆನ್ನೆಗೊಂದು ಮುತ್ತು..!
ನುಡಿದಳು ಹೀಗೆ ನಾಚುತ್ತಾ.,
ಗೆಳೆಯಾ.. ಎಂದಿದ್ದರೂ
ಇದು ನಿನ್ನಯ ಸ್ವತ್ತು...!!
~ ಸಿದ್ದು ಕನ್ನಡಿಗ

- - ಸಿದ್ದು ಕನ್ನಡಿಗ

02 Mar 2018, 07:23 pm

ಮುಡಿಪಾದವು..✒️

ಸಿರಿಗೇರಿಯ ನೀರಲ್ಲಿ
ಮಿಂದಾಕೆ ನನ್ನವಳು.!
ಚಂದಿರನ ಹೋಲುವ
ಅಂದದ ಮೊಗದವಳು.!
ಪ್ರಕೃತಿಯ ಸಿರಿಯೆನ್ನೇ
ಕೇಶಕ್ಕೆ ಎರೆದವಳು.!
ಚುಕ್ಕಿಗಳನೇ ಕಿತ್ತು
ಹೂ ಮಾಡಿ ಮುಡಿದವಳು.!
ತೆಳುವಾದ ಹುಬ್ಬಲ್ಲೇ
ಕಣ್ಸನ್ನೆ ಮಾಡಿಹಳು.!
ಆ ಗಿಣಿಯಂತ ಮೂಗಲ್ಲಿ
ನತ್ತನ್ನು ಇಟ್ಟಿಹಳು..!
ನುಡಿಯುತಿರೆ ಮಾತು
ಕೋಗಿಲೆಯ ಧ್ವನಿಯವಳು.!
ನಡೆಯುತಿರೆ ಅವಳು
ಹಂಸದಂತೆ ಬಳುಕುವಳು.!
ಶರಣಾದವು ಅವಳಿಗೆ
ಮಳೆಬಿಲ್ಲ ಬಣ್ಣಗಳು..!
ಮುಡಿಪಾದವು ನಾನು
ಬರೆದಿರುವ ಕವನಗಳು..!

~ ಸಿದ್ದು ಕನ್ನಡಿಗ

- - ಸಿದ್ದು ಕನ್ನಡಿಗ

02 Mar 2018, 07:04 pm

ನೆನೆದ ನೆನಪು

ನೆನೆ ನೆನೆದು ನಿನ್ನ
ಕಾದಿರುವೆ ಚಿನ್ನ
ನೀ ನನಗೆ ಹೊನ್ನ ಕಲಶ!!
ನಿನ್ನ ನಗುವ ಮೊಗವ
ನಾ ನೆನೆಯುತಿರಲು
ನನ್ನೊಳಗೆ ಏನೋ ಹರುಷ!!

ದಿನ ನಿನ್ನ ನೆನಪು
ನನ್ನೊಳಗೆ ಇಣುಕಿ
ಕಂಡಿರಲು ಏನೋ ಸೊಗಸು!!
ನನ್ನೊಲವ ಭಾವ
ನಿನ್ನೊಳಗೆ ಹರಿಸ
ಬಯಸಿಹುದು ನನ್ನ ಮನಸು!!

ನಾ ಇಲ್ಲಿ ನಿನ್ನ
ನೆನೆದಿರಲು ಜೇನ ಮಳೆ
ಸುರಿ ಸುರಿದು ಸವಿಯ ತರಲಿ!!
ನಿನ್ನ ನೆನಪು ನನ್ನ
ಜೊತೆ ಇರಲು ಚಿನ್ನ
ಈ ಬದುಕು ಮುಗಿಯದಿರಲಿ!!

- ಪಿ.ಜಿ.ಜ್ಯೋತಿ

01 Mar 2018, 10:32 pm

ಪ್ರತಿ ಸಾರಿ ನಿನ್ನ ನೋಡಿದಾಗ ನನ್ನಲ್ಲೇನೋ ಹೊಸ ಅನುಭವ,
ಗೆಳತಿಯೇ ಮರೆತರೆ ಮಡಿವೆ ನಾ, ಆ ನಿನ್ನ ಸಿಹಿ ನುಡಿಗಳ;
ನಿನ್ನೊಂದಿಗಿರುವ ಪ್ರತಿ ಕ್ಷಣವೂ ಸ್ವರ್ಗಾನುಭವ ನನ್ನೆದೆಗೆ,
ನನ್ನಿಂದ ದೂರಹೋಗಿ ನೂಕಬೇಡ ಬೇಗುದಿಗೆ ;
ನಿನ್ನೊಲವನೇ ಅರಸಿ ಬರುವೆ ನಿನ್ನ ಬಳಿ ನಾ,
ಒಪ್ಪಿ ಅಲಂಕರಿಸು ನನ್ನ ಅರಸಿಯೇ ಮನದಲಿ ಕಟ್ಟಿದ ನಿನ್ನ ದೇಗುಲವನ್ನಾ..

- Vijaykiran NC

01 Mar 2018, 10:15 pm

ಮೆಚ್ಚಿನ ನಾಳೆ

ಮೆಚ್ಚಿನ ನಾಳೆಯು
ಬಣ್ಣದ ಹಾಳೆಯು
ಕನಸಿನ ಗಾಳಿಯ ಪಟವಾಗಿ
ಜಿಗಿಯಿತು ಮುಗಿಲಿನ ನಗುವಾಗಿ!!

ಬದುಕಿನ ಸೂತ್ರವ
ಹಿಡಿದರೆ ಮಾತ್ರವೇ
ಸುಂದರ ಕನಸು ನನಸಾಗಿ
ನಾಳೆಯ ಬದುಕಿಗೆ ಬೆಳಕಾಗಿ!!

ಮುಗಿಲಲಿ ತೇಲುವ
ಕನಸದು ಸುಂದರ
ಚಂದ್ರನ ಸೇರುವ ಸಲುವಾಗಿ
ಹಾರುತ ಸಾಗಿದೆ ಸುಖವಾಗಿ!!

- ಪಿ.ಜಿ.ಜ್ಯೋತಿ

01 Mar 2018, 04:00 pm

ಬಣ್ಣದ ಹೋಳಿ..

ಈ ಹೋಳಿ ಹಬ್ಬದ ದಿನದಲಿ
ಬಣ್ಣಗಳ ನಡುವಿನ ಆಟದಲಿ
ಬದುಕಿನ ತುಂಬಾ ಬಣ್ಣಗಳು ತುಂಬಿರಲಿ....
ಬಣ್ಣಬಣ್ಣದ ಕನಸುಗಳು ನನಸಾಗಿ
ಹೂವಿನಂತಹ ಜೀವನ ನಿಮ್ಮದಾಗಲಿ...
ಪ್ರೀತಿ ವಿಶ್ವಾಸದಲಿ ಎಲ್ಲರೊಂದಿಗೆ ಬೆರೆಯುತ್ತ..
ಸಂಬಂಧಗಳು ಗಟ್ಟಿಯಾಗಿ
ಕಷ್ಟಗಳೆಲ್ಲವು ದೂರವಾಗಿ
ಉತ್ಸಾಹದ ದಿನಗಳು ದಿನವಿಡೀ ಇರಲಿ..
ಚೈತನ್ಯವನ್ನು ತುಂಬುವ ಹೋಳಿ ಹಬ್ಬ
ಮತ್ತೆ ಮತ್ತೆ ಮರುಕಳಿಸುತ್ತಿರಲಿ
ನಿಮ್ಮ ಜೀವನ ಸಿಹಿಯಾಗಿರಲಿ...

- ಪ್ರಿಯಾಂಕ

01 Mar 2018, 11:07 am