Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕವಿತೆ

ನನ್ನ ಪ್ರೀತಿಯ ಕವಿತೆ
ಹೀಗೇಕೆ ನೀ ನನ್ನ ಕಾಡುತಿರುವೆ
ಮಲಗಿ ಕಣ್ಣ ರೆಪ್ಪೆ ಮುಚ್ಚಿದರು
ನಿನ್ನದೆ ಪದಗಳ ಕನಸಿನ ಮಂಪರು.
ಬೆಳಗಾಗುವ ತನಕ ತುಸು ತಾಳು
ಬಂಧಿಸಿಡುವೆ ನಿನ್ನ ಪದಗಳ ಮುತ್ತಿನ ಸಾಲು.
-ಉಮೇಶ್.

- Umesh

06 Mar 2018, 07:43 pm

ಹೊಂಬಾಳೆ....‌‌‌‌‌

ಹೊಂಬಾಳೆ ಹುಟ್ಟಿದೆ ನಮ್ಮ
ತೊಟದಲ್ಲಿ ಪಸಲು ಕೊಡುವ ಕಾಲ ಬಂದಿದೆ
ಬೀಜ ವೊಂದು ಮೊಳಕೆಯಾಗಿ ಗಿಡವಾಗಿ
ಬೆಳೆದು ಕಾಯಾಗಿ ಹೂ ಬಿಟ್ಟು ಹರಳುವ ಕಾಲ
ನೊಡಿದಿರೆನು ಅದರಂದವ ಹೊಬಾಳೆ ಹೊನ್ನ
ಕಲಶವ ಮನೆ ಮನೆಯ ಶೂಭಾರಂಬಕ್ಕೆ
ಬೇಕಲ್ಲ ಅದರ ಸೊಬಗು ಇಲ್ಲದಿದ್ದರೆ
ಅಂದವೆ ಇಲ್ಲದ ಮನೆಯಂಗಳ
ಇವಳಿಲ್ಲದೆ ಜಾತ್ರೆಗೆ ಸಿಂಗಾರವೆ ಇಲ್ಲ
ಉರಂಗಳವೆಲ್ಲ ಗಮಗಮಿಸುವೆಯಲ್ಲೆ
ನೀ ಇಲ್ಲದೆ ಕಲಶವೆ ಇಲ್ಲದಾಗೆ....
ತೊಟವೆಲ್ಲ ತುಂಬಿಸಿದೆಯಲ್ಲೆ ನೀನ್ನ ಗಮಗಮ
ಪರಿಮಳವ ಎಲ್ಲಿಂದ ಕದ್ದು ತಂದಿಯೆ ಆ ಗಂದದ
ಪರಿಮಳವ ತೊಟವೆ ಸಿಂಗಾರ ಮಾಡಿರುವೆಯಲ್ಲೆ
ನಿನ್ನಂತೆ ನಾವಾಗಬಾರದಿತ್ತೆ.......

- ರಾಗಸಿರಿ....

06 Mar 2018, 11:25 am

ಬದುಕು

ಚಿಂತೆ ಸುಳಿದರೆ ಬದುಕೆ
ಹಾಳು......
ಸುಖವ ನೆನಪಿಸು ನೀನು ದಿನವು

ಕಂತೆ ಹಣದಲೆ ಎಲ್ಲ
ಗೋಳು......
ಮರೆಯೆ ಸುಂದರ ಪ್ರತಿ ಕ್ಷಣವು

ಸಖಲ ಜೀವಿಯಲಿ ಪ್ರೀತಿ
ಹುಡುಕು.....
ಉರಿಸು ಕೀರ್ತಿಯೆಂಬ ಹೊಳಪು

ನಾಲ್ಕು ದಿನದ ಬಾಳ್ವೆ
ಬದುಕು.....
ಉಳಿಸು ಲೋಕದಿ ನಿನ್ನ ನೆನಪು

- sharin rao

06 Mar 2018, 09:52 am

ನೀ ಬರುವ ದಾರಿ..

ಕಾದು ಕಾದು
ನೋಡುತಿರುವೆ
ನೀ ಬರುವ ದಾರಿಯನ್ನೆ
ಆಸೆಗಳ ಹೊತ್ತು ನೂರು..!
ಆಸೆಯಲ್ಲ ಕರಗಿ
ಕನಸೆಲ್ಲ ಸೊರಗಿ
ನೀ ಬರಲಿಲ್ಲವೆಂದು
ಕಣ್ಣಂಚಿನಲ್ಲೀಗ ನೀರು...!
~ ಸಿದ್ದುಕನ್ನಡಿಗ

- - ಸಿದ್ದು ಕನ್ನಡಿಗ

06 Mar 2018, 06:22 am

ಕಾತರದ ನೇಸರ

ಸುಯ್ಯೆಂದು ಸಾಲಾಗಿ ಹಕ್ಕಿಗಳು
ಹೊಯ್ಯೆಂದು ಜೋಡೆತ್ತುಗಳು
ಮಣ್ಣಿನ ಮಗ ಮೈಕೊಡವಿ
ಕಣ್ದೆರೆದು ನಕ್ಕಾಳು ಭೂದೇವಿ
ಅವಳ ನೇವುರ ಸದ್ದಿಗೆ
ಗಿರಿನವಿಲು ಕುಣಿಕುಣಿದು
ಹಾಲಹಸುಳೆ ಚೆಲ್ವ ಬಿರಿದು
ಮಲ್ಲಿಗೆ, ಸಂಪಿಗೆ ಕಂಪ ಸುರಿದು
ಜಗದೆದೆಯ ಕಪ್ಪು ಕಲೆ ಸರಿದು
ಝಗಮಗಿಸುತಾ ಸೂರ್ಯನಿಳಿದು
ಮನೆ-ಮನಗಳೆರಡೂ ಹೊಳೆದಾವೋ.....

ಶುಭೋದಯ, ಶುಭದಿನ

- Akku

06 Mar 2018, 04:12 am

ಸಂಜೆ ಸಲ್ಲಾಪ

ಸಂಜೆ ಹೊತ್ತು
ಸನಿಹ ಕೂತು
ಮನಸು ಸೋತು
ಬುಜಕೆ ಆತು
ಏನೋ ಮಾತು
ಮೈಯ ಮರೆತು..

ಕಣ್ಣಾ ಬೆಸೆದು
ಕೈಯಾ ಹೊಸೆದು
ಮೈಯಾ ಮಸೆದು
ಚಿಂತೆ ಎಸೆದು
ಪ್ರೀತಿ ಹಸಿದು
ಪ್ರಣಯ ಬಸಿದು..

ಕತ್ತಲ ಮೆರುಗು
ತೀಡಿದೆ ಸೆರಗು
ನಾಚಿಕೆ ಕರಗು
ತುಟಿಯಲಿ ಬೆರಗು
ಹತ್ತಿರಕೆ ಜರುಗು
ಕಾಮನೆಯ ಬುರುಗು.

- ಶ್ರೀಗೋ.

05 Mar 2018, 08:02 pm

ಒಳ್ಳೆಯವರಿಗೆ ಕಾಲ ಈ ಲೋಕದೊಳಗೆ ಇಲ್ಲ

ಒಳ್ಳೆಯವರಿಗೆ ಕಾಲ ಈ ಲೋಕದೊಳಗೆ ಇಲ್ಲ
ತುಂಬಿ ತುಳುಕುತಿದೆಯಲ್ಲ ಕೆಟ್ಟ ಹುಳಗಳ ಜಾಲ..
ಹೊತ್ತಿ ಉರಿಯುತಿದೆಯಲ್ಲ ಪಾಪಿಗಳ ಜ್ವಾಲ
ಸುಟ್ಟು ಭಸ್ಮವಾಯಿತಲ್ಲ ಮನುಷ್ಯ ಧರ್ಮವೆಲ್ಲ..

ಬೇಡು ಕೊಂಡ್ರೆ ಯಾವ ಕೆಲಸ ನಡೆಯೋದಿಲ್ಲ
ದುಡ್ಡು ಕೊಟ್ರೆ ಎಂಥ ಕೆಲಸನೂ ನಿಲ್ಲೋದಿಲ್ಲ..
ಹೆಗ್ಗಣಗಳಂತೆ ಮಾಡಿಕೊಂಡವ್ರೆ ರಾಶಿ ರಾಶಿ ಬಿಲ
ತಲೆತಲಾಂತರಗಳು ಮುಕ್ಕುವಷ್ಟು ತುಂಬಿ ಇಡುವರಲ್ಲ..
ಎಲ್ಲೆಲ್ಲೂ ಕಟ್ಟಿಕೊಂಡವ್ರೆ ದೊಡ್ಡ ದೊಡ್ಡ ಕುಳಗಳ ಬಲ
ನ್ಯಾಯ ದೇವತೆಗೂ ಮಣ್ಣು ಮುಕ್ಕಿಸಿ ಮೆರಿತಾರಲ್ಲ..
ಗುಣವನ್ನು ಮಖಾಡೆ ಮಲಗಿಸಿದರಲ್ಲ
ಹಣವನ್ನು ಗುಡಿಸಿ ಗುಂಡಾಂತರ ಮಾಡಿದರಲ್ಲ..
ನಾವು ನಮ್ಮವರು ಅನ್ನೋದೆಲ್ಲ ನುಚ್ಚು ನೂರಾಗಿ ಮಣ್ಣು ಸೇರಿತಲ್ಲ..

ಪೊಳ್ಳು ಮಾತಾನಾಡಿ ಅರಮನೆ ಆಳುವರಲ್ಲ
ನೆರಳು ಇಲ್ಲದವರಿಗೆ ಸಣ್ಣ ಸೂರು ನೀಡಲಿಲ್ಲ..
ದೇಶದ ಕಥೆ ಕಿಂಚಿತ್ತೂ ಕೇಳೋದಿಲ್ಲ
ವೇಷ ಹಾಕ್ಕೊಂಡು ಮನುಷ್ಯರನ್ನ ಕಿತ್ತು ತಿನ್ತಾರಲ್ಲ..
ನೊಂದು ಬೆಂದವರಿಗೆ ಸಾಲ ಮರಣ ತಪ್ಪಲಿಲ್ಲ
ನುಂಗಿ ನೀರು ಕುಡಿವವರ ಕಪಟನಾಟಕ ನಿಲ್ಲಲಿಲ್ಲ.
ಅಧಿಕಾರ ದಾಹಕ್ಕಾಗಿ ಹೆಣಗಳ ಸಂತೆ ಮಾಡ್ತಾರಲ್ಲ
ಹೆಣ್ಣಿನ ಮೋಹಕ್ಕಾಗಿ ಸುಳ್ಳಿನ ಕಂತೆ ಕಟ್ತಾರಲ್ಲ..

ದೇವರು ದಿಂಡ್ರು ಅಂದ್ರೆ ಚಿನ್ನದ ಕಾಣಿಕೆ ನೀಡ್ತಾರಲ್ಲ
ಕೂಳು ಇಲ್ಲದೆ ನರಳುವವರಿಗೆ ಅನ್ನ ಕೊಡದೆ ಸಾಯಿಸ್ತಾರಲ್ಲ..
ದ್ವೇಷ ಮೋಸದ ಬೆಂಕಿ ಆರಿಸುವವರು ಯಾರು ಇಲ್ಲ
ಪ್ರೀತಿ ಸ್ನೇಹದ ಕಿಡಿ ಹೊತ್ತಿಸುವವರು ಎಲ್ಲೂ ಇಲ್ಲ..

- ಸುರೇಶ್ ಟಿ ವಿ

05 Mar 2018, 06:14 pm

ಅಮ್ಮ

*ಅಮ್ಮಾ....*

ಅಮ್ಮನ ಕುರಿತೊಂದು
ಕವಿತೆ ಬರೆಯುವ ಆಸೆಯಲ್ಲಿ
ನಾನು ಲೇಖನಿ ಹಿಡಿದು ಕುಲಿತೆ..!!

ನನ್ನ ಭೂಮಿಗೆ ತರುವ ಮೊದಲೇ
ನನಗಾಗಿ ಕಷ್ಟ ಪಟ್ಟ ಅವರ
ನೆನೆಯುವಾಗಲೇ ನಾನು ಅತ್ತು ಬಿಟ್ಟೆ..!!

ಬರೆಯೋ ಆಸೆಯು ನಿರಾಸೆ
ಆದಂತೆ ಕೈ ಜಾರಿ ಬಿದ್ದ ಲೇಖನಿಯ
ಮುದ್ದಿಸಿತು ನನ್ನಯ ಕಂಬನಿ..!!

➖➖➖➖➖➖➖
*✍

- Salman Saleem

05 Mar 2018, 12:38 am

ಮುದ್ದು ಮನಸೇ...

ಮುದ್ದು ಮನಸೇ
ಮಾತಾಡಬೇಕಿದೆ
ನನ್ನ ಬಳಿ ಒಮ್ಮೆ...

ಏಕೋ ಗೊತ್ತಿಲ್ಲದ ಕನಸೊಂದು
ಕಾಡುತ್ತಿದೆ ಬೆಂಬಿಡದೆ
ಕಾಣದ ಕಂಬನಿ ಜಾರುವ ಮುನ್ನ
ನನ್ನನ್ನೊಮ್ಮೆ ನೀ ಸೇರಬಾರದೆ!

ಬಲೆಗೆ ಸಿಕ್ಕ ಮೀನಿನಂತೆ
ಒದ್ದಾಡುತ್ತಿದೆ ಮುಗ್ದ ಮನಸು...
ಕಾರಣ ತಿಳಿಸದೇ ಬಳಿ ಬಾರದೇ
ನನ್ನ ಬಳಿ ಏಕೀ ಮುನಿಸು!

ತಿಳಿದು ತಿಳಿಯದೆ ಮಾಡಿದ ತಪ್ಪಿಗೆ
ಸನಿಹವಿರದೇ ಸತಾಯಿಸುವೆ ನನ್ನನು..
ಮನ್ನಿಸಿ ಮತ್ತೆ ಪ್ರೀತಿಸಿಬಿಡು
ಕಳೆದುಕೊಳ್ಳಲಾರೆ ಇಂದಿಗೂ ನಾ ನಿನ್ನನು!

- ಪ್ರಿಯಾಂಕ

04 Mar 2018, 10:18 pm

ಕಾಡದಿರು ಗೆಳೆಯ ಇನ್ನು ನಿ ಎನ್ನ.......

ನೀನಿ ಪ್ರೀತಿಯ ಮಾತುಗಳೇ ಸುಳ್ಳಾಗಿದೆಯಲ್ಲೋ,
ನಾನಿಟ್ಟ ಪ್ರೀತಿಯ ಭರವಸೆಗಳೆಲ್ಲ ಮಣ್ಣಾಯಿತಾಲ್ಲೋ....

ನೀನೇ ಹುಟ್ಟಿಸಿದ ಪ್ರೀತಿಯ ,ನೀನೇ ಚಿವಿಟಿದೆಯಲ್ಲೋ ಏಕೋ ........

ಈ ಮನಸಿನ ಕನ್ನಡಿಯ ಒಡೆದಿರುವೆ ,ನಾ ಆ ನೋವ ತಡೆಯಲಾಗದಂತೆ ,ಪ್ರಾಣವ ಬಿಡಲಾಗದಂತೆ ಭಾಸವಾಗುತ್ತಿದೆಯಲ್ಲೋ ....

ಕಣ್ಣ ಹನಿಯು ಕೂಡ ,ಏನೋ ಹೇಳ ಬಯಸಿದೆ ತಿಳಿಯದೆ ಮನಸ್ಸು ಬಾರವೆನಿಸ ತೊಡಗಿದೆ .......

ನೀ ಏಕೋ ನನ್ನೊಳ ಹೊಕ್ಕಿ ಪ್ರೀತಿ ಹೊಮ್ಮಿಸಿದೆ ,
ಇಂದು ನೀನೊಳ ನನ್ನ ಪ್ರೀತಿಯೇ ಕಾಣದೆ ಹೋಗಿದೆಯಲ್ಲೋ
......

ಪ್ರೀತಿ ಹುಚ್ಚು ಹಿಡಿದ ನಿನ್ನ ಆ ಪ್ರೀತಿ ಇಂದು ಏನಾಯ್ತೋ ....

ನೀನೇ ತಂಡ ಪ್ರೀತಿ ಮಗುವ ,ನೀನೇ ಕೊಂದು ಇಂದು ನಗುತ್ತಿರುವೆಯಲ್ಲೋ .....


ಈ ನನ್ನಪ್ರೀತಿಯ ಗೋರಿಯ ಮೇಲೆ ನಿಂತು ನೀ ಹೊಮ್ಮಸ್ಸಿನಿಂದ ನಕ್ಕು ,ನಲಿಯುತಿರುವೆಯಲ್ಲೋ .....


ನೀ ನನ್ನ ಎಂದು ಕಾಡಬೇಡ ಗೆಳೆಯ ಇಂದು ನಾನೇ ದೂರವಾಗಿ ಗೋರಿಯ ಒಳಗಿರುವೆ .....

- Acchu love

04 Mar 2018, 02:38 pm