Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ನಗುಮೊಗದಿ ಇನಿಯನು
ನಗುನಗುತ ನಲಿವನು
ದಿನವಿಡಿ ಹರುಷದಲಿ
ಅವನಿಷ್ಟದಂತೆ ನೀ ನಡೆದಲ್ಲಿ
ಇನಿಯನಾಸೆಯ ಅರಿತು
ನಡೆಯಬೇಕು ನೀ ಇಂಚಿಂಚು
ಅಭಿಲಾಷೆಗೆ ವಿರುದ್ದವಾಗಿ ನಡೆದರೆ
ನೀ ಕಿಂಚಿತ್ತು ಮಾಡುವನು ಆಗ ಕಟ್ನಿಟ್ಟು
ಹಗಲೆಲ್ಲ ದುಡಿವೆ
ದಾದಿಯಂತೆ ಸೇವೆಯ ಮಾಡುವೆ
ಇರುಳಲ್ಲಿ ನೀನೊಂದು
ಮೂಕ ಗೊಂಬೆಯಂತೆ ಮೌನಿಯಾಗುವೆ
ನೀನೊಂದು ಆಕಳಂತೆ
ಇನಿಯನಿಗೆ ನೀ ಸ್ವಂತವಂತೆ
ನಿನ್ನೆಲ್ಲ ಆಸೆಗಳ ತೊರೆಯಬೇಕು
ತ್ಯಾಗಮಯಿಯಾಗಿ ಬಾಳಬೇಕು
ಶಾರಧ
- ಶಕುಂತಲಾ
10 Mar 2018, 02:21 pm
ಸೂರ್ಯ ಚಂದ್ರಮರು ಆಟವಾಡಿಹರು
ಮೋಡದಾ ಸೆರಗಿನ ಮರೆಯಲ್ಲಿ,
ಇಳೆಗೆ ಅವರೇ ಸೊಗಸು
ಹರೆಯದ ಇಳೆಯ ಕನಸು.
ಆಗೀಗ ಕೊಂಚ ಗಾಳಿಯದು ಬೀಸಿ
ಮೋಡವನು ಆಚೀಚೆ ಒಂಚೂರು ಸರಿಸಿ
ಇಣುಕಿ ಬಿಡುವರು ಅವರು ಸೌಂದರ್ಯ ಸ್ಪುರಿಸಿ.
ಮೋಡ ಸರಿದರೆ ದೂರ
ಕಣ್ಣು ಕುಕ್ಕುವನು ಸೂರ್ಯ
ಬೆಳುದಿಂಗಳು ಚೆಲ್ಲುವನು ಚಂದ್ರ
ಅರೆ ಕ್ಷಣದಿ ಸೆಳೆದು ಬಿಡುವರು
ಎಲ್ಲಾರ ಕಣ್ ನೋಟ ಹಿಡಿದಿಟ್ಟು ತಮ್ಮೆಡೆಗೆ..
ಇಳೆಯೋ ಹರೆಯದ ಪೋರಿ
ನಾಚಿಕೆ ಅಡರಿರುವ ಸುಂದರ ನಾರಿ..
ತೋರಲಾರಳು ತನ್ನ ಸೌಂದರ್ಯ ಖನಿಯ
ಹಾಗೆಲ್ಲ ಮೈ ಮರೆತು ಅಲ್ಲದಿರೆ ಇನಿಯ!
ಮುಂಗಾರು ಎಂದರದು ಇಳೆಗೆ ಯೌವ್ವನವು
ಮೋಡ ಮುಸುಕಿದರೆ ಸೆರಗ ಸೌಂದರ್ಯವು
ಸೂರ್ಯ ಚಂದ್ರರ ಕಣ್ಣಾ ಮುಚ್ಚಾಲೆ ಆಟ
ಮನಸಿಗೆ ನೀಡುವುದು ಅಂದದ ರಸದೂಟ!
- ಶ್ರೀಗೋ.
10 Mar 2018, 08:16 am
ಹಗಲು ಮರೆಯಾಯಿತು ಇರುಳು ಬಂದಿತು
ಕತ್ತಲೆಗೆ ಕಣ್ಣು ಮಂಕ್ಕಾಗಿತ್ತು
ಎನೊಬೇಕು ಅನಿಸಿದಂತಾಯಿತು ಮನಸ್ಸಿಗೆ
ಹೊಂಚುಹಾಕಿ ಕ್ಷಣಗಳ ಕಾಯುತಿತ್ತು
ಮಳೆಯ ಹನಿಯು ಬರುವ ಸಮಯವದು
ಬಾಗಿದ ಮರದ ಅಡಿ ನಿಂತುಕೋ.....
ಅಂತು ಕ್ಷಣವು ಗಾಳಿಯು ಬೀಸಿತು
ಮೖ ಒದ್ದೆ ಮಾಡಿದ್ದವು ಪುಸ್ಪದ ಎಳೆಗಳು
ಅಂದು ನೆನಪಾಯಿತು
ಮೖಯೆಲ್ಲ ಒದ್ದೆ ಮೖಯೆಲ್ಲ ಒದ್ದೆ
ಇವತ್ತು ಬರುತ್ತ ನನಗೆ ನಿದ್ದೆ
ಕ್ಷಣಗಳು ಮರೆಯಾದವು....
ಗುಲಾಬಿ ಬಣ್ಣದ ಬಟ್ಟೆಯತೊಟ್ಟು
ಬಿಂಕದ ನಡಿಗೆ ತೋರಿಬಿಟ್ಟು
ಬಂದು ನಿಂತಳು ಶಶಿಗುಲಾಬಿ
ಅವಳ ನೋಡಿದ ಸಮಯವು
ಮನಸ್ಸಿನಲ್ಲಿ ಉಕ್ಕಿದಲವು ಆಸೆಗಳು
ಅವಳು ನನ್ನಬಳಿನಿಂತ ಕ್ಷಣವು
ಬಾವನೆಗಳು ಬದಲಾಗ ತೋಡಗಿದವು
ಏನಾಯಿತ್ತೋ ಅಂದು ನನಗೆ
ತಿಳಿಯಲಿಲ್ಲ ಮನಕೆ..
ದೂರ ದೂರದ ಆಸೆಯನು ಕಾಣುತ ನಿಂತ್ತಿದ್ದೆನು
ಮರಳಿ ಮರಳಿ ಅದೆ ಕನಸಿನ
ಬಳಿ ನಿಂತುಕೊಂಡೆನು ಯೋಚಿಸುತ
ಮಳೆಯಲಿ ಹೇಗೆ ನಿಂತು ಕೋಳ್ಳಲಿ ಚಳಿಯಲಿ.....
ಏನಾಯಿತೊ ಗೊತ್ತಿಲ್ಲ ಸೀರೆಯು ತಾಕಿತು ಮೆಲ್ಲಗೆ
ಒದ್ದೆಯಾಯಿತು ಹೃದಯ ತಣ್ಣಗೆ
ಮನಸ್ಸಿನಲ್ಲಿ ಹರಿಯತೋಡಗಿದವು
ವಿರಹದ ಸಾಲು ಸಾಲು ಗೀತೆಗಳು
ಚಳಿಯ ಬೇಗೆಗೆ......
ಅಂದು ಮರೆತೆನು ನಾ ನನ್ನನ್ನ
ಕೋಟ್ಟು ಬಿಟ್ಟಳು ಅವಳನ್ನ
ಮಳೆಯು ಹೆಚ್ಚಾಯಿತು ಗಾಳಿಬೀಸಿತು.....
ಮತ್ತೆ ಪುಷ್ಪದ ಎಳೆಗಳು
ಬಿದ್ದವು ನನ್ನ ಕಣ್ಣಿಗೆ
ಎಚ್ಚರವಾದೆನು ಮೆಲ್ಲಗೆ
ಕನಸು ಕಂಡ್ಡಿದೇನು ಆ ಗಳಿಗೆ
ಮುಂದೆ ನಡೆದುಹೋಗುತ್ತಿದ್ದಳು ಚೆಲುವೆ
ಮೆಲ್ಲ ಮೆಲ್ಲಗೆ ........ಅಂದೆ ನೆನಪಾಯಿತು.....
- ak
09 Mar 2018, 07:56 am
ನೀಡುವುದು ಮುದವ ಮನಕೆ ಕವಿತೆ
ಮಮತೆಯು ತುಂಬಿರಲು ಅದರಲಿ
ತುಂಬಿಹುದು ಸ್ನೇಹಪ್ರೀತಿ
ಇರುವರು ನಮ್ಮೊಂದಿಗೆ ಸದಾ
ಒಲವಿನ ಮಮತೆಯ ಕವಿತೆ ತೆರದಿ
ಮಹಿಳಾ ದಿನಾಚರಣೆ ಶುಭಾಶಯಗಳು
- ರಘು
08 Mar 2018, 06:43 pm
ತಾಯಿ ಬೇರು ನೆಲದ ಪಾಲು
ಭುವಿಯ ಅಡಿಯಲಿ ಸಾಗಿದೆ!!
ಮಣ್ಣ ಒಳಗೂ ಮಮತೆ ಇಟ್ಟು
ತನ್ನಯ ಮಕ್ಕಳ ಸಾಕಿದೆ!!
ರೆಂಬೆ ಕೊಂಬೆ ಹೂವು ಹಣ್ಣು
ಹಸಿರು ಎಲೆಗಳ ಸೆಲೆಯಿದೆ!!
ಜಗವು ಕಾಣೋ ಸೋಬಗ ಹಿಂದೆ
ತಾಯಿ ಬೇರು ಅಡಗಿದೆ!!
ಬಂದು ಬಳಗ ಎಂಬ ಸೆಳೆತ
ಕಾಣದೇನೇ ಚಿಗುರಿದೆ!!
ನೀರು ಗೊಬ್ಬರದ ಪೋಷಣೆಯ
ತಾ ಮರೆಯದಂತೆ ನೀಡಿದೆ!!
- ಪಿ.ಜಿ.ಜ್ಯೋತಿ
08 Mar 2018, 07:57 am
ಸಾಲು ಸಾಲು ಕಂಬನಿ
ಕಣ್ಣಿನಿಂದ ಜಾರಿದೆ!!
ಕರವು ಇರದ ಬದುಕು ನನ್ನದು
ಕಣ್ಣೀರ ತಡೆಯಲು ಆಗದೆ!!
ನೂರು ಕನಸ ಕಟ್ಟಿ ನಾನು
ನಿನ್ನ ಪ್ರೀತಿ ಮಾಡಿದೆ!!
ಹೃದಯ ಇರದ ಒಲವು ನಿನ್ನದು
ನೀನು ನನ್ನ ದೂರಿದೆ!!
ಯಾರಿಗೆ ಯಾರೂ ಸ್ವಂತ ಅಲ್ಲ
ಎನ್ನುವ ಮಾತಲಿ ನಿಜವಿದೆ!!
ನಿನ್ನ ಮರೆತು ಬದುಕಬೇಕು
ಆದರೂ ಈ ಮನ ನೊಂದಿದೆ!!
- ಪಿ.ಜಿ.ಜ್ಯೋತಿ
07 Mar 2018, 08:05 am
ಸಾಲಿ ಕಲಿಯುವಾಗ ಕಣ್ಣಾಗ ನಟ್ಟಿದ್ದೆ
ಅಕ್ಕನ ಮಗಳೆಂದು ಮನದಾಗ ಇಟ್ಟಿದ್ದೆ
ವಾರದಾಗ ಮೂರ ಸಾರಿ ನೋಡಾಕ ಬರ್ತಿದ್ದೆ
ಸಣ್ಣಮಾತಿಗೆ ಮನನವು ಒಡಕಾತ
ಮನದಲ್ಲಿ ಕೋಪದ ತುಡಿತವು ಹೆಚ್ಚಾತ
ಮೋಸದ ಮುಖವಾಡ ದರಸಿ ಮಾಡಿದಿ ಕುಣಿತ
ಆಣೆ ಮಾಡಿದಿ ಗೆಳತಿ ನನ ಮುಂದ ಕುಂತ
ನೆತ್ತಿಯ ಬಡದಿ ಯುಗಾದಿ ಮುಂದಿತ್ತ
ಹೊಳೆಯ ಜಳಕಕ ಹೋಗಾಗ ಕಣ್ಣೀರೆ ಹೊಲಕೆಯಾತ
ಹೆಣ್ಣಲ್ಲ ಗೆಳತಿ ನೀ ಹೆಮ್ಮಾರಿಯಾದಿ
ನನ್ನ ಹೃದಯಕ್ಕೆ ಚಾಕುಲೇ ಇರದಿ
ಹೃದಯ ಮುರಿದು ಇಂದಿಗೆ
ಒಂದು ವರ್ಷದ ಸರದಿ
- Muttu Kuntoji Muttu
07 Mar 2018, 08:03 am
ದಾರಿಯಲ್ಲಿ
ಪ್ರತಿಮೆಗಳಂತೆ
ಹಸಿದು ಮಲಗಿದ್ದ
ಬಡಪಾಯಿಗಳನ್ನು
ಕಂಡು ಕಾಣದಂತೆ
ಸಾಗುತ್ತಿಹರು..
ಹೋರಾಟಗಾರರು !!
ನಿರ್ಜೀವ
ಪ್ರತಿಮೆಗಳನ್ನು
ರಕ್ಷಿಸಲು ... !!
✍ ಅಲ್ತಾಫ್ ಬಿಳಗುಳ
- ಅಲ್ತಾಫ್ ಬಿಳಗುಳ
06 Mar 2018, 11:15 pm
ಮರಗಳನ್ನು
ಕಾಣುವಾಗ
ರಸ್ತೆಯ
ಅಕ್ಕ -ಪಕ್ಕ
ನೆನಪಾಗುತ್ತಾರೆ
ನಿಸ್ವಾರ್ಥಿ
ಸಾಲುಮರದ
ತಿಮ್ಮಕ್ಜ
ಅಲ್ತಾಫ್ ಬಿಳಗುಳ
- ಅಲ್ತಾಫ್ ಬಿಳಗುಳ
06 Mar 2018, 10:57 pm
ನನ್ನ ಪ್ರೀತಿಯ ಕವಿತೆ
ಹೀಗೇಕೆ ನೀ ನನ್ನ ಕಾಡುತಿರುವೆ
ಮಲಗಿ ಕಣ್ಣ ರೆಪ್ಪೆ ಮುಚ್ಚಿದರು
ನಿನ್ನದೆ ಪದಗಳ ಕನಸಿನ ಮಂಪರು.
ಬೆಳಗಾಗುವ ತನಕ ತುಸು ತಾಳು
ಬಂಧಿಸಿಡುವೆ ನಿನ್ನ ಪದಗಳ ಮುತ್ತಿನ ಸಾಲು.
-ಉಮೇಶ್.
- Umesh
06 Mar 2018, 07:43 pm