Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಬದುಕ ಇರುಳು

ಯಾವ ಹಣತೆಯ ಹಚ್ಚಿ
ಬದುಕ ಇರುಳನು ಕಳೆವೆ!!
ಹುಟ್ಟು ಕುರುಡನು ನಾನು
ಬೆಳಕ ಕಾಣದೇ ಇರುವೆ!!

ಬದುಕ ಬಣ್ಣಗಳೆಲ್ಲ
ಕಣ್ಣ ಒಳಗಡೆ ಮಾಸಿ!!
ಕತ್ತಲೆನ್ನುವ ವರವ
ಹರುಷದಿಂದಲೇ ಸೂಸಿ!!

ಯಾರ ನೆರಳನು ಅಳಿಸಿ
ಯಾರ ಕೊರಳಲಿ ಇಡುವೆ!!
ಸುಡುವ ಕನಸಿಗೂ ಬಣ್ಣ
ಕಾಣಲರಿಯದೇ ನಗುವೆ!!

ಯಾವ ಸೂರ್ಯನೂ ಇಲ್ಲ
ಬೆಳಕ ಹರಿಸಲು ಇಲ್ಲಿ!!
ಇರುಳು ಕವಿದಿಹ ಜಗಕೆ
ಕಣ್ಣು ಕಾಣುವುದಿಲ್ಲ!!

- ಪಿ.ಜಿ.ಜ್ಯೋತಿ

17 Mar 2018, 01:35 pm

ಸ್ವಾಗತವು ನಿನಗೆ ಹೊಸ ವರುಷ. . .

ಬಂದಿದೆ ಯುಗಾದಿ ಪ್ರತಿ ವರುಷದಂತೆ,
ತಂದಿದೆ ಮನೆ-ಮನದಿ ಹರುಷದಾ ಸಂತೆ,
ಈ ದಿನದ ಬೇವು-ಬೆಲ್ಲದಾ ಬೆಸುಗೆ,
ಬಾಳಲ್ಲಿ ತರಲಿ ಮಧುರ ಭಾವನೆಗಳಾ ಹೂ ನಗೆ,
ಕೂಡಿ ಸ್ವಾಗತಿಸಿ ವಿಳಂಬಿ ಸಂವತ್ಸರ,
ಕಳೆಯೋಣ ನಮ್ಮಲ್ಲಿರುವ ಮದ-ಮತ್ಸರ,

ಸರ್ವರಿಗೂ ಹೊಸ ವರುಷದಾ ಶುಭ ಕಾಮನೆಗಳು

----- ತಿಪ್ಪೇಸ್ವಾಮಿ -----

- tippu

17 Mar 2018, 01:26 pm

ಯುಗಾದಿ ಹಬ್ಬ

ಆರಂಭ ನವಯುಗದ ಶುಭಾರಂಭ
ವಸಂತನೆಂಬ ಋತು ದೈವ ಧರೆಗಿಳಿದ ಸಂದರ್ಭ..
ಅಬ್ಬಬ್ಬಾ ಎಂಥ ಜೀವಕಳೆ ಜಗದ ತುಂಬ
ಚೈತ್ರನೆಂಬ ಋತುರಾಜ ಧರೆಗೆ ಮುತ್ತಿಟ್ಟ ಸಂದರ್ಭ.
ಗಿಡ ಮರಗಳ ತುಂಬ
ಹಸಿರು ಬೆಳಕಿನ ಹಬ್ಬ..
ಮನೆ ಮನಗಳ ತುಂಬ
ಹೊಸ ವರ್ಷದ ಹಬ್ಬ.. " ಪ "

ಕೂಹೂ ಕೂಹೂ ಎಂದು ಕೋಗಿಲೆ
ಹಾಡುತ ನಲಿಯುತಿದೆ ಮಾಮರದ ಮೇಲೆ..
ಹೂವು ಹೂವಿನ ಒಲವಿನ ಕೆನ್ನೆಯ ಮೇಲೆ
ಪೋಣಿಸುತಿದೆ ದುಂಬಿ ಸಿಹಿಮುತ್ತಿನ ಸರಮಾಲೆ..
ಸಂತಸದಿಂದ ರವಿ ಕುಣಿದು ಬಂದ ಕೂಡಲೇ
ಹೊಂಬಣ್ಣದ ಚಿತ್ತಾರ ಬಾನಂಗಳದ ಮೇಲೆ..
ಬಿಸಿಕಿರಣ ಮೈಮನ ಸೋಕುವ ಜೊತೆಯಲ್ಲೇ
ತೇಲಿಬರುತಿದೆ ತಂಗಾಳಿಯ ಹಿತವಾದ ಅಲೆ..

ತೂಗುತಿದೆ ಮನೆಮನದ ಬಾಗಿಲ ಮೇಲೆ
ಬೇವುಮಾವಿನ ತೋರಣ ಎಂಬ ಉಲ್ಲಾಸದ ಉಯ್ಯಾಲೆ..
ಒಲವಿನ ರಂಗೋಲಿ, ನಲಿವಿನ ಓಕುಳಿಯ ಮೇಲೆ
ಬರೆದಿದೆ ತನುಮನ ಹೊಸ ಕನಸುಗಳ ಓಲೆ..
ಎಣ್ಣೆಯ ಮಜ್ಜನ ಸರಿಸಿತು ನೋವಿನ ಕೊಳೆ
ಹೋಳಿಗೆ ಹೂರಣ ಸುರಿಸಿತು ಪ್ರೀತಿಸ್ನೇಹದ ಮಳೆ.
ಕಿರುನಗೆಯಲಿ ಮಿನುಗುವ ಶಶಿಯ ದರ್ಶನ ಪಡೆದ ಮೇಲೆ
ಕಳಚಿ ದೂರವಾಯಿತು ಮನುಜನ ಪಾಪದ ಬಲೆ..
ಸೃಷ್ಟಿಯಲಿ ಅಡಗಿದೆ ಸಿಹಿಕಹಿಯ ಸೆಲೆ
ಬೇವುಬೆಲ್ಲ ಬೆರೆತರೇನೇ ಬದುಕಿಗೊಂದು ಬೆಲೆ..

- ಸುರೇಶ್ ಟಿ ವಿ

17 Mar 2018, 12:53 pm

ಮತ್ತೆ ಮಳೆಯಾಗಿದೆ

ಮೆತ್ತನೆ‌ ಬೀಸುತ ಗಾಳಿ
ಮುಗಿಲಲಿ ಮೋಡದ ಗುಂಪು.....

ಸುತ್ತಲೂ ಗುಡುಗಿನ ದಾಳಿ
ಇಳೆಯಲಿ ಮಳೆಹನಿ ಕಂಪು...

ಹಚ್ಚ ಹಸುರಿನ ಎಲೆಯಲಿ
ಮುತ್ತಂತೆ ಉದುರಿದೆ ಮಳೆಹನಿ...

ಬೆಚ್ಚಗೆ ಮಲಗಿದ್ದ ಭುವಿಯಲಿ
ಮತ್ತೆ ಕೇಳಿದೆ ನವಿಲದನಿ....

.....ಕುಶಿ...

- sharin rao

17 Mar 2018, 12:02 pm

ಯುಗಾದಿ...

ಸೂರ್ಯನು ಬೆಳಗನು
ಹೊತ್ತು ತಂದನು
ಮತ್ತೆ ಹೊಸ ವರುಷದಲಿ..!
ಮನೆ ಮನೆಗಳು
ಮನ ಮನಗಳು
ಮತ್ತೆ ಯುಗಾದಿಯ ಹರುಷದಲಿ...!

ಬಾಲೆಯರು ಹಾಕಿದ
ರಂಗೋಲಿ ಬಣ್ಣಗಳು
ರಂಗೇರಿದೆ ಮನೆಯಂಗಳದಿ.!
ಹಲವು ಹಕ್ಕಿಗಳ
ಚಿಲಿಪಿಲಿ ನಾದವು
ಗುಂಗೇರಿದೆ ಬಾನಂಗಳದಿ..!

ಮಧವನು ಸವಿದಿಹ
ದುಂಬಿಯ ಧ್ವನಿಯದು
ಝೆಂಕರಿಸಿದೆ ಹೊಸ ಹಾಡಿನಲಿ..!
ಚೈತ್ರದ ಚೆಲವಲಿ
ಬೆರೆತಿಹ ಪ್ರಾಣಿಗಳು
ಹೂಂಕರಿಸಿವೆ ಹೊಸ ಕಾಡಿನಲಿ..!

ಕೊಂಬೆಯ ಮರದಲಿ
ಕುಳಿತಿಹ ಕೋಕಿಲ
ಕೂಗಿದೆ ಅದು ಹೊಸ ರಾಗದಲಿ..!
ಹೊಸ ಚಿಗುರಿಗೆ ಜಾಗವ ಕೊಟ್ಟು
ಸದ್ದಿಲ್ಲದೆ ಮೆಲ್ಲನೆ ಉದಿರಿವೆ
ಒಣ ಎಲೆಗಳು ಪ್ರಾಣ ತ್ಯಾಗದಲಿ..!

ಸವಿಯುವ ಬೇವು-ಬೆಲ್ಲ
ಕಹಿ ಬೇವಿನ ಜೊತೆ ಬೆಲ್ಲವ ಬೆರೆಸಿ..!
ಇರುಳಿನ ಹೊತ್ತಲಿ ದೀಪವ ಹಚ್ಚಿ
ಕತ್ತಲ ದೂಡುವ ಜ್ಯೋತಿಯ ಉರಿಸಿ..!
- ಸಿದ್ದು ಗುಂಡ

- - ಸಿದ್ದು ಕನ್ನಡಿಗ

17 Mar 2018, 11:34 am

ನನ್ನ ಪ್ರೀತಿಯ ಹುಡುಗಿ

ಮುಸ್ಸಂಜೆಯ ಈ ಸಮಯದಲ್ಲಿ
ನಿನ್ನ ನಾ ನೋಡಿದಾಗ
ನಾ ನನ್ನನೇ ಮರೆತೆ ಓ ಗೆಳತಿ
ನೀ ತಿರುಗಿ ನೋಡಿದ ಆ ನೋಟದಿಂದ
ಸಂಪೂರ್ಣವಾಗಿ ನಾ ನಿನ್ನಲ್ಲಿ ಬೆರತೆನು ಓ ಗೆಳತಿ.....

‌‌‌‌‌‌‌ ‌‌‌‌‌‌ ಲೋಕಿ

- Lokesh Nikhi

15 Mar 2018, 11:44 pm

ನಿನ್ನ ನೆನಪುಗಳ ಸುಳಿಯಲ್ಲಿ

ನಿನ್ನ ಸವಿ ನೆನಪುಗಳ ಸುಳಿಯಲ್ಲಿ ನಾ ಸಿಲುಕಿಕೊಂಡೆ ,
ಅದರಿಂದ ಆಚೆ ಬರುವ ದಾರಿಯನ್ನು ತೋರಿಸದಿರೆಂದು ಆ ದೇವರನ್ನು ನಾನೇ ಬೇಡಿಕೊಂಡೆ.

ಎಡಬಿಡದೆ ಸುರಿವ ಮಳೆಯಂತೆ ಕಾಡಿಹುವು ಆ ನಿನ್ನ ನೆನಪುಗಳು,
ಆ ಕಾಡುವಿಕೆಯಲ್ಲು ಚುಮು ಚುಮು ಚಳಿಯಲ್ಲಿನ ಬೆಚ್ಚನೆಯ ಅಪ್ಪುಗೆಯ ಹಿತವ ನಾ ಕಂಡುಕೊಂಡೆ, ನಿನ್ನ ನೆನಪುಗಳ ಮಾತುಗಳ ಮಧುರತೆಯ ನಾ ತಿಳಿದುಕೊಂಡೆ.

ನಿನ್ನ ಸವಿ ನೆನಪುಗಳ ಸುಳಿಯಲ್ಲಿ ನನ್ನ ನಿನ್ನ ಮಧುರ ಸಂಬಂಧವ ನಾ ಕಲ್ಪಿಸಿಕೊಂಡೆ,
ಅದನ್ನು ಆದಷ್ಟು ಬೇಗ ನನಸು ಮಾಡೆಂದು ಆ ದೇವರನ್ನು ನಾ ಬೇಡಿಕೊಂಡೆ.

- ಕೃಷ್ಣ

15 Mar 2018, 11:36 pm

ಮಂದಾರ ಪ್ರಕ್ರತಿ

ಹಸಿರಿನ ವನಸಿರಿಯಲಿ
ವಿಧ ವಿಧ ಮರಗಳು....

ಪಸರಿಸಿ ಪರಿಮಳ
ಮುದಕೊಡೊ ಸುಮಗಳು....

ತಂಗಾಳಿಯ ಬಳಸುತ
ಆಡುವ ಗಿಡಗಳು....

ಸಿಂಗಾರದಿ ಬಳುಕುತ
ಕಾಡುವ ಋತುಗಳು....

ಮಂದಾರವಿ ಪ್ರಕ್ರತಿ
ಬಣ್ಣಿಸೆ ಸಾಲದು ಪದಗಳು....

...ಕುಶಿ...

- sharin rao

14 Mar 2018, 08:59 am

ಮುಂಜಾನೆ ಮಂಜಿನ ಹನಿ

ಮುಂಜಾನೆ ಮಂಜಿನ ಹನಿಯಲ್ಲಿ
ಮುಸ್ಸಂಜೆ ಚುಮು ಚುಮು ಚಳಿಯಲ್ಲಿ!!
ಅದಾವ ಶಕ್ತಿ ಬಂದು ನನ್ನ ಅಪ್ಪಿಕೊಂಡಿತು!!
ಮಧುಪಾನ ಇಲ್ಲದೇನೇ ನಶೆಯು ನನ್ನ
ಸೇರಿತು!!

ತೂರಾಡಿ ತನುವು ತೇಲಾಡಿ
ಮನವಿಂದು ಖುಷಿಯಲಿ ಓಲಾಡಿ!!
ಅದಾವ ಮಾಯೆ ನನ್ನ ಮೋಡಿ ಮಾಡಿ
ಹೋಯಿತು!!
ನೀರಿಲ್ಲದೇನೆ ದಾಹವೆಲ್ಲ ಮರೆತಂತೆ ಆಯಿತು!!

ನಾ ಕಂಡ ಕನಸು ನನಸಾಗಿ
ಈ ಜೀವ ನಿನ್ನ ಜೊತೆಯಾಗಿ!!
ಅದೇಕೋ ನನ್ನ ನಾನೇ ಮರೆತ ಹಾಗೆ ಆಗಿದೆ!!
ನಿನ್ನೊಳಗೆ ಸೇರಿ ನಿನ್ನ ವಶವಾದ ಹಾಗಿದೆ!!

- ಪಿ.ಜಿ.ಜ್ಯೋತಿ

13 Mar 2018, 08:10 am

ಅಪ್ಪ ಅಂದರೆ ಅಪ್ಪ ನನ್ನಪ್ಪ

ಅಪ್ಪ ಅಂದರೆ ಅಪ್ಪ ನನ್ನಪ್ಪ
ನನ್ನ ಬೆಸ್ಟ್ ಫ್ರೆಂಡ್ ಅಂದ್ರೆ ನನ್ನ ಅಪ್ಪನೇ
ನನ್ನ ಇಷ್ಟ ದೈವ ಅಂದ್ರೆ ನನ್ನ ಅಪ್ಪನೇ..
ಅಪ್ಪ ಅಂದರೆ ಅಪ್ಪ ನನ್ನಪ್ಪ
ನನ್ನ ರೋಲ್ ಮಾಡೆಲ್ ಅಂದ್ರೆ ನನ್ನ ಅಪ್ಪನೇ
ನನ್ನ ಛಲವು ಬಲವು ಎಲ್ಲಾ ನನ್ನ ಅಪ್ಪನೇ.. " ಪ "

ಕಣ್ಣೀರಿನ ಮಹಾಸಾಗರದಲ್ಲಿ ಮುಳುಗಿದರೂ
ನನ್ನ ರಾಜಕುಮಾರನಂತೆ ಬೆಳೆಸಿದರು.
ಇವರ ಕೈ ಹಿಡಿದು ನಡೆದರೆ ಜಗವೇ ನಂದನವನ ಎನಿಸುವುದು..""

ಅಂದು ನಾನು ನಗಬೇಕು
ಅಂತ ಆಟದಲ್ಲಿ ಬೇಕಾಗಿ ಸೋತರು..
ಇಂದು ನಾನು ಗೆಲ್ಲಬೇಕು
ಅಂತ ಜೀವನದಲ್ಲಿ ಜೊತೆಯಾಗಿ ನಿಂತರು..""

ಅಂದು ನಾನು ಎಷ್ಟೇ ಹಠ ಮುನಿಸು ತೋರಿಸಿದರೂ
ನಗುನಗುತಾ ಅಪ್ಪಿ ಮುದ್ದಾಡಿದರು..
ಇಂದು ನಾನು ಎಂಥ ಕನಸು ಕಂಡರೂ
ಧೈರ್ಯ ತುಂಬುತ ಒಪ್ಪಿ ಮುನ್ನಡೆಸಿದರು..""

ಮಗನೇ ಆ ಮಾಡು
ಇನ್ನೊಂದು ತುತ್ತು ತಿನ್ನು
ಎಂದು ಸಿಹಿಮುತ್ತು ನೀಡುವಾಗ ಕಂಡೆ ಅಪ್ಪನ ಪ್ರೀತಿಯ..
ಪರರಿಗೆ ಕೈಮುಗಿದು
ಪ್ರೀತಿ ಸ್ನೇಹ ಕೊಟ್ಟು ಉಪಚಾರವನ್ನು
ಮಾಡುವಾಗ ಕಂಡೆ ಅಪ್ಪನ ನೀತಿಯ.."""

- ಸುರೇಶ್ ಟಿ ವಿ

11 Mar 2018, 12:47 pm