Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಬದುಕಿನ ಬಣ್ಣ

ಬಯಲು ರಂಗದಿ ಬದಲಾಯಿತು ಬಣ್ಣ
ಬಿಳುಪಿದ್ದದ್ದು ಕಡುಗಪ್ಪು ನೋಡಿದರೆ
ಕೆರೆ ಆಚೆ ಎಲ್ಲೋ ಕಾಮನಬಿಲ್ಲು
ಹುಡುಕುತ್ತ ಹೊರಟರೆ ಅಲ್ಲೂ ಬಯಲು

- ವಿ ರಾ ಗಿ

- ChetanJain

23 Mar 2018, 05:30 pm

ಮುತ್ತಿನ ಮತ್ತು

ಗೆಳತಿ ನೀ ಅಂದು ನೀಡಿದ ಮುತ್ತಿನ
ಮತ್ತಿನಲ್ಲೆ ನಾ ಇಲ್ಲಿಯವರೆಗು ಜೀವಿಸುತ್ತಿದೆ.
ಮತ್ತಿನಿಂದ ಹೊರ ಬಂದಾಗಲೆ ತಿಳಿದಿದ್ದು
ಇದು ನೀ ನನ್ನ ಜೊತೆ ಇರುವ ತನಕವಷ್ಟೇ ಎಂದೂ.
ನಾ ಮತ್ತೆ ಆ ಮತ್ತಿನಲ್ಲೆ ಇರಬೇಕೆನಿಸುತ್ತಿದೆ.
ಆದರೆ ನೀ ನನ್ನಿಂದ ಇಂದು ದೂರ ಹೋಗಿರುವೆ.
ಆ ಮುತ್ತಿನ ಮತ್ತನ್ನು ಮರೆಯಲು ನನ್ನಿಂದಾಗುತ್ತಿಲ್ಲ
ಆದಷ್ಟು ಬೇಗ ನೀ ನನ್ನ ಬಳಿ ಬಂದು ಬಿಡು.

ನಿಮ್ಮ ಪ್ರೀತಿಯ ಹುಡುಗ "ರಾಜ್"

- ರಾಜ್

23 Mar 2018, 03:24 pm

ಹಕ್ಕಿಗಳ ಬೇಸಿಗೆಯ ವ್ಯತೆ



ಮಲೆನಾಡ ಮಡಿಲಿನಲಿ. ಪ್ರಕ್ರುತಿಯ ಸೊಬಗಿನಲಿ .ಬಗೆ ಬಗೆಯ ಹಕ್ಕಿಗಳು ಮೈ ಕೊಡವುತ ಕುಳಿತಿವೆ ಗೂಡಿನಲಿ. ಗರಿಯೊಳಗೆ ಮುದುಡಿ ಮಲಗಿವೆ ಮುದ್ದಾದ ಕಂದಮ್ಮಗಳು.

ದಾಹಕ್ಕೆ ನೀರನ್ನು ಬಯಸಿ ಹಾರಿವೆ. ಈ ಬರದ ಬೇಸಿಗೆಯಲ್ಲಿ .ಸುತ್ತಲೂ ನೀರಿಲ್ಲ ದಾಹಕ್ಕೆ ಬಾರವಿಲ್ಲ . ಪ್ರಕ್ರುತಿಯ ವಿನಾಶವೇ ಇದಕ್ಕೆ ಕಾರಣವೆಲ್ಲ .

ನಿಮ್ಮಲ್ಲಿ ನನ್ನದೊಂದು‌ ಬೇಡಿಕೆ

- ಸಂತೋಷ್//ಜೀತು

23 Mar 2018, 09:22 am

ತಡೆಗೋಡೆ

ತಡೆಗೋಡೆ
-------------------
ಪ್ರತಿಬಾರಿ ರಕ್ಷಣೆ ಮರೆತಾಗಲೆಲ್ಲ
ನಿರಾಶೆಯಾಗುತ್ತದೆ
ಎದುರಾಗಿ ಬರುವ ಹೊಸ ಸವಾಲುಗಳು
ಹಾಸಿಗೆಯಿದ್ದರೂ ದಿಂಬಿನ ಅನಿವಾರ್ಯ ಕರ್ಮ.

ಮುಖದ ಮೇಲಿನ ಮಂದಹಾಸ;
ಮರೆಯಾದ ಬಿಕ್ಕಳಿಕೆಗಳಾಗುವವು
ಒಡನೆಯೇ ಕಿರುಚಾಡುತ್ತವೆ!
'ಏನಾಗುವುದು' ಮತ್ತು' ಬಿಡುವುದಿಲ್ಲ '
ಎಂಬ ತಿಳುವಳಿಕೆಯ ಆ ನೋವು.

ನನ್ನಲ್ಲಿದ್ದ ಗಾಳಿಯ ಚೀಲ
ಒಡೆದು ಹೋಗುವ ಮುನ್ನ
ಉಸಿರಾಡುವಷ್ಟೂ ತಾಕತ್ತು ನನ್ನಲ್ಲಿಲ್ಲ.
'ನನ್ನ ಕತ್ತೆಗೆ ನನ್ನನ್ನು ಒದ್ದದ್ದಷ್ಟೇ ನೆನಪು'
ಉಸಿರಾಟದ ನಿಮಿಷಗಳು-ಗಂಟೆ-ದಿನಗಳು-ತಿಂಗಳು
ಒಟ್ಟಿಗೆ ಬರುತ್ತಿವೆ.

ಕಠಿಣ ಕೆಲಸದ ಗಾಯಗೊಂಡ ಹೃದಯ
ಸುತ್ತಲೂ ಕಾಯ್ದು ನಿಂತಿರುವ ತಡೆಗೋಡೆಗಳು
'ಬಾರ್ ಕೋಡ್' ಹಾಕಲು ಹವನಿಸುತ್ತಲಿದೆ ಸಾವು.
ಊಹಿಸಿಕೊಳ್ಳಲೇ ? ಹೆಚ್ಚು ಮೂಖ ಮತ್ತು
ಗಲಿಬಿಲಿಯ ಆ ನನ್ನ ಭಾವನೆ.

ಕನಿಷ್ಠ ಸಂಖ್ಯೆಯ ಆಳವಾದ ಬಣ್ಣಗಳನ್ನು
ನೋಡಿದಾಗಲೊಮ್ಮೆ
ನನ್ನನ್ನು ಇರಿಸಿಕೊಳ್ಳಲು ಸಾಧ್ಯವಿಲ್ಲದಷ್ಟು
ನಿರಾಶೆ, ಮೌನ ಮತ್ತು ಹತಾಶೆ!
ತಡೆಗೋಡೆಗಳು ಇಲ್ಲವಾಗುತ್ತವೇನೋ
ನಾನೊಮ್ಮೆ ಬಿದ್ದು ಹೋದ ಮೇಲೆ
---ಸುರೇಶ ಜಕಾತಿ.ಜಮಖಂಡಿ.

- ಸುರೇಶ ಜಕಾತಿ.ಜಮಖಂಡಿ

22 Mar 2018, 11:10 pm

ಇದ್ದಿದ್ದೆ ದಿನ ಚಿಂತೆ

ಇದ್ದಿದ್ದೆ ದಿನ ಚಿಂತೆ
ಮಾಡು ನೀ ಹರುಷದ ಸಂತೆ..
ಬಂದಿದ್ದೆ ನಿನ್ನದಂತೆ
ಸಾಗು ನೀ ನಗುವಿನ ಜೊತೆ..
ಇದು ಮುಗಿಯದ ಕಥೆ
ಸೇರಿಸು ನಿನ್ನ ಸಾಹಸಗಾಥೆ.." ಪ "

ಈ ಬದುಕು ಒಂದು ಜಾತ್ರೆ
ಮಾರು ನೀ ಪ್ರೀತಿ ಸ್ನೇಹದ ಅಕ್ಷಯ ಪಾತ್ರೆ..
ನೂರು ವರ್ಷ ಸ್ವಾರ್ಥ ಸಾಮ್ರಾಜ್ಯ ಆಳಿದರೇನು
ಮೂರು ದಿನ ಸ್ನೇಹ ಸಾಗರ ಈಜಿದರೆ ಸಾಕು ನೀನು..
ಮಣ್ಣಿನೊಳಗೆ ಬರುವುದೇನು ನೋಟು
ಮನುಷನಿಗೆ ಇರಬೇಕು ಒಳ್ಳೆತನದ ನಂಟು..
ಹರುಷಕ್ಕೆ ದಾರಿ ಇದೆ ಇರುವ ಭಾಗ್ಯ ನೆನೆದರೆ
ನಿನಗೆ ಒಂದು ಹೆಸರಿದೆ ನಾಲ್ಕು ಜನರಿಗಾಗಿ ಬಾಳಿದರೆ..

ಏನು ನಷ್ಟ ಇಲ್ಲ ನೀ ಸತ್ತರೆ
ಏನು ಕಷ್ಟ ಆಗೋಲ್ಲ ನೀ ಧೈರ್ಯದಿ ಮುನ್ನಡೆದರೆ.
ಬಿರುಗಾಳಿ ಗುಡುಗು ಸಿಡಿಲು ಬಂದರೇನು
ಹಕ್ಕಿ ಗೂಡು ಕಟ್ಟಲು ಅಂಜುವುದೇನು..
ನೂರು ಸೋಲುಗಳು ಎದುರಾದರೇನು
ಗೆಲುವಿನ ಸಾಲಲಿ ನಿಲ್ಲುವೆ ಎನ್ನು..
ಅಪವಾದ ಅಪಮಾನ ಗೆದ್ದರೆ ನೀನು
ಈಜಗದ ದಂತಕಥೆ ಆಗುವೆ ನೀನು..

- ಸುರೇಶ್ ಟಿ ವಿ

22 Mar 2018, 08:41 pm

ಅವಳೆಂದರೆ..???

ಅವಳೆಂದರೆ...????
ಮಾತು ಮಾತಿಗೂ ನಗುವವಳು..
ಕೊನೆಯಿಲ್ಲದಂತೆ ಮಾತಾಡುವವಳು..
ಏನೇನೋ ಗುನುಗುವವಳು..
ಕಾರಣವಿಲ್ಲದೆ ಕೋಪಿಸಿ ಕೊಳ್ಳುವವಳು..
ಒಮ್ಮೆ ತುಸು ದೂರ ಹೋದವಳು..
ಮತ್ತೊಮ್ಮೆ ಮತ್ತಷ್ಟು ಹತ್ತಿರವಾದವಳು..
ಸುಮ್ಮನೇ ಕಾಯುಸುವವಳು..
ಎಡಬಿಡದೆ ಸತಾಯಿಸುವವಳು..
ಯಾರವಳು...??? ಕಣ್ಮುಂದೆ ಇಲ್ಲದವಳು..!!!!??
:: ಕೆ.ಜೆ.ಎಸ್ ಗೌಡ್ರು. ಹುಣಸೂರು

- shasi kumar

22 Mar 2018, 07:05 am

ಮಾಡ್ರನ್ ಸೊಳ್ಳೆ !

ಸಿಟಿ ಶೂಟ್ ಧರಿಸಿ ಬಂದ
ಮದುವೆ ಗಂಡು ಮರ್ಡನ್ ಸೊಳ್ಳೆಯ ಮದುವೆಯಾಗಲೆಂದು!!

ಇರಬೇಕಂತೆ ವಧುವಲ್ಲಿ ಡೆಂಗೂ ರಾಣಿಯ ಚತುರತೆ, ಮಲೇರಿಯಾ ಬ್ಯುಟಿಯ ಮಾತು ಕತೆ!!

ಗಂಡನಿಗೆ ಕುಂತಲ್ಲೇ ಸಿರಿವಂತರ ಬಗೆ ಬಗೆಯ ನೆತ್ತರಿನ ರುಚಿ ತೋರಿಸುವ ಪ್ರೀತಿ ಮಮತೆ,
ಕೊಂಚ ಸಣ್ಣವುದ್ದರು ಮಧುರ ಧ್ವನಿ ಮಸ್ಟ್ ಅಂಡ್ ಶುಡ್ ಅವನಿಗೆ ನಿದ್ದೆ ಬಾರದಿದ್ದರು ಚಿಂತೆ ಇಲ್ಲ ಯಾರಬ್ಬರು ನಿದ್ರಿಸಲು ಬಿಡುವಂತಿಲ್ಲ.

ಕೊಳಚೆ ನೀರಲ್ಲಿ ಹುಟ್ಟಿದರು ಅಡ್ಡಿ ಇಲ್ಲ ,ಕಾಮನ್ ಅಂದ ಚಂದ ಇರಲೇ ಬೇಕು ದುರ್ಗಂಧದ ಬೆಲೆ ಗೊತ್ತಿರಲೇ ಬೇಕು!!

ಅತ್ತೆ ಮಾವನ ಕಾಲು ಹಿಡಿಯದಿದ್ದರು ಸಂಜೆ ಸಮಯಕ್ಕೆ ಎದ್ದು ಕಾರ್ಯದಲ್ಲಿ ನಿರತಳಾಗ ಬೇಕು ಎಲ್ಲರಿಗಿಂತ ಹೆಚ್ಚು ರಕ್ತ ಕುಡಿದು ಬರಬೇಕು.

ಹುಟ್ಟುವ ಮಕ್ಕಳಿಗೆ ಜೀವನ ಶೈಲಿಯ ಕಲಿಸುವಷ್ಟು ಬ್ರೈಟ್ ಇರಬೇಕು, ಕೇಸರಚ್ಚಿ ಮೋರಿ ಬದಿಯಲ್ಲಿ ನರ್ತಿಸುವ ಕಲೆ ಬಂದಿರಬೇಕು!!

ಸುಗುಣವತಿ ಸೊಳ್ಳೆಗಾಗಿ ಹುಡುಕಾಟ ಮುಂದಿರುವರಿದೆ, ಬಲಿಷ್ಠ ಜೀವಿಗಳಲ್ಲಿ ಅಮಲು ಹೆಚ್ಚಿಸಿ ಹೊಸ ಬಗೆಯ ರುಧಿರದ ರುಚಿ ಕಂಡುಕೊಳ್ಳುವವಳು ಸಿಗುವ ತನಕ.

- ಚುಕ್ಕಿ

21 Mar 2018, 09:04 am

ಗಾಯನದ ಕಲಿಕೆ

ಗಾತ್ರ ಕಿರು ಬೆರಳ ಹತ್ತಿರ
ಗಾಯನ ಮಹಾ ಗಾಯಕರಿಗಿಂತಲು ಎತ್ತರ.

ಕರ್ಕಶ ಧ್ವನಿಯಲ್ಲಿ ನಿರ್ಗರ್ವಿ ಸೊಳ್ಳೆ ಲಾಲಿ ಹಾಡನ್ನು ಹಾಡುತ್ತಿದೆ, ಬೇಡವೆಂದರೂ ಬಿಡನೆಂದು ಕಿವಿಯ ಬಳಿ ವಿಧೇಯತೆ ಇಂದ.

ದಪ್ಪವೆಂದು ಒಪ್ಪೋತ್ತು ಊಟ ಮಾಡಿ ಕೊರಗುತ್ತಿರುವ ಮಹಾಕಾಯದವರಿಗೆ ಭಾಷೆಯೋತ್ತು ಮುತ್ತಿಡುತ್ತಿವೆ ಒಂದೇ ಸಾರಿ ಸಣ್ಣ ಮಾಡುತ್ತೇವೆಂದು.

ಕಸರತ್ತು ಮಷಿನ್ ಮಾರುವ ಕಂಪನಿಗಳಿಗೆ ಸವಾಲಾಗಿ ನಿಂತಿವೆ ,ಬೆಂಬಿಡದೆ ಭುಜವೇರಿ ನೆತ್ತರು ರುಚಿ ಹೆಚ್ಚಿದ್ದವರಿಗೆ 50% ಕಡಿತವೆಂದು ನೋವು ಕಡಿದು ಹಾರಿ ಹೋಗುವುದರಲ್ಲಿ.

ಲೈಟ್ ಆನ್ ಇದ್ದಲ್ಲಿ ಏನು ತಿಳಿಯದ ಬೆಕ್ಕಿನಂತೆ ಇಣುಕಿಣುಕಿ ನೋಡುತ್ತವೆ ಗೋಡೆಗಂಟಿ ಗಪ್ ಚುಪ್ ಎಂದು, ಒಮ್ಮೆ ಕತ್ತಲು ಎತ್ತಲೂ ಹೋಗದೆಂದು ನಿಚ್ಚಯಿಸಿ ಕೊಂಡಲ್ಲಿ ಸಿಂಹ ಘರ್ಜಿನೆ ಶುರುವಾಗುತ್ತೆ ಇನ್ನು ತಾಳ್ಮೆಯಿಲ್ಲವೆಂದು ಮನೆಯಲ್ಲಿ.

ಗಲ್ಲಿ ಗಲ್ಲಿಯೂ ಸುತ್ತಿ ಹುಡುಕಿವೆ ಕೆಂಬಣ್ಣದ ಬಿಳಿ ಹುಡುಗಿಯ ರಕ್ತವನ್ನು, ಸೇಬು ಸವಿ ಜೇನು ಮಾರ್ಕೆಟ್ಟಿನ ಸತ್ತ ಮೀನು ತಿಂದು ಹೊನಪು ವಯ್ಯಾರದಲ್ಲಿ ಮಿಂದಿಹಳು ಮಂದಹಾಸದಿ ವಸುಂಧರ!!

ಕೊಂದು ಬಿಡುವಳೋ ಏನೋ ಮೆಚ್ಚಿ ಕೆನ್ನೆಯ ಮೇಲೆ ಕುಂತ ಸೊಳ್ಳೆಯ ತುಂಬಾ ಸಂಸಾರ!!

- ಚುಕ್ಕಿ

21 Mar 2018, 09:03 am

ಖೈದಿ

ನಾನೊಬ್ಬ ಖೈದಿ
ಅನಿಸಿಕೊಂಡರೂ
ಸರಿಯೆ !

ನಿನ್ನ ತೋಳ ತೆಕ್ಕೆಯಲ್ಲಿ
ಬಂಧಿಯಾಗಬೇಕೆಂದಿರುವೆ.

ಮಂಜು ಸಾಮ್ರಾಟ್.

- Manjunath

20 Mar 2018, 08:06 pm

ಎಲುಬು

ಅಧಿಕಾರ
ಸಿಗೋವರೆಗೂ
ಹೊಗಳ್ತಾರೆ,
" ರೈತನೇ ಬೆನ್ನೆಲುಬು "

ಅಧಿಕಾರ ಸಿಕ್ಕಿದ್ರೆ
ಮುರಿತಾರೆ
" ರೈತನ ಪಕ್ಕೆಲುಬು "

✍ ಅಲ್ತಾಫ್ ಬಿಳಗುಳ

- ಅಲ್ತಾಫ್ ಬಿಳಗುಳ

20 Mar 2018, 01:27 pm