ಖುಶಿಯಾಗಿರು ನಗುನಗುತಿರು
ಚಿಂತೆಯಾಕೆ ನಿನಗೆ ಗೆಳತಿ
ನಾನಿರುವೆ ಸದಾ ನಿನ್ನ ಜೊತೆಗೆ
ಓ ನನ್ನ ಬಾಳ ಸಂಗಾತಿ
ಮಾಡ್ಬೇಡ ನನಗೆ ಪ್ರೀತಿಯಲ್ಲಿ ಮಿತಿ
ನೀನೆ ನನ್ನ ಆಸ್ಥಿ
ಹೇಗೆ ಇರಲಿ ನಾ ನಿನ್ನ ಮರೆತಿ.
ಎಂದಿಗೂ ನೀ ಜೊತೆಯಾಗಿರಲು
ಬೇಗಾ ಬಾ ಚೆಲುವೆ. ನೀ ಎಲ್ಲಿರುವೆ?
ಹೇಗೋ ಇದ್ದೆ ನನ್ನ ಪಾಡಿಗೆ ನನ್ನ ಜೀವನದಲ್ಲಿ.....
ನನ್ನ ಕಣ್ಣ ಮುಂದೆ ಬಂದು ಯಾಕೆ ಕಾಣಿಸಿಕೊಂಡೆ ನೀನು.....
ನಿನ್ನ ಕಂಡ ಹಾ ಕ್ಷಣ ನನ್ನ ಮನಸು ರೆಕ್ಕೆ ಬಿಚ್ಚಿ ಏಗುರಿತು ನಿನ್ನ ಮನಸಿನ ಕಡೆಗೆ.....
ಹಾಗೂ ಇಗೋ ಪರಿಚಯ ಆಯ್ತು...
ನಂತರ ದಿನಗಳಲ್ಲಿ ಅದು ಪ್ರೇಮವಾಗಿಯು ಹೋಯ್ತು....
ನೀನೇ ಜೀವ ನೀನೇ ಎಲ್ಲಾ ಅಂತ ಮಾಯಾ ಮಾತು ಹೇಳಿ ಈಗೇಕೆ ನನ್ನ ಆಗಲಿ ಹೋಗುತ್ತಿರುವೆ ಗೆಳತಿ....
ಇದಕ್ಕೆ ಕಾರಣವಾದರು ತಿಳಿಸುವೆಯ...
ಇಂತಿ ನಿನ್ನ ಪ್ರೀತಿಯಾ ಕೋತಿಮರಿ....
ನನ್ನ ನಗು ಅದರ ನನಗೆ ಹೆಮ್ಮೆ
ನನ್ನನ್ನು ನಗುತ್ತಾ ನೋಡಿ ಬೇಜಾರು ಆಗುತ್ತಾರೆ
ನನ್ನನ್ನು ಅಳುತಾ ನೋಡಿದರೆ
ಪ್ರತಿಯೊಬ್ಬರೂ ಅದನ್ನು ಬರೇ ತಮಾಷೆ ಎನ್ನುತ್ತಾರೆ
ಇಲ್ಲ ಆದರೆ ಸಂತೋಷ ಪಡೆಯುತ್ತಾರೆ
ಆ ನಗು ನನ್ನದು, ಆ ಅಳು ನನ್ನದು
ನಾನು ಬೇಕಾದಂತೆ ಅದನ್ನು ಉಪಯೋಗಿಸಬಹುದು
ನನ್ನ ಹ್ರದಯದಿಂದ ಅವರನ್ನು ಒಪ್ಪಿಸಿದ
ಯಾರು ಯಾರು ಎಲ್ಲಿ ಎಲ್ಲಿ ನನ್ನನ್ನು ಭೆಟ್ಟಿ ಆಗಿದ್ದರೂ
ಆದರೂ ಹಿಂದೆ ನನಗಾಗಿ ಕೆಟ್ಟದ್ದನ್ನು ಬಯಸಿದರು
ಆಶೆ,ಇಚ್ಛೆ ಇಲ್ಲದೆ ನಮ್ಮನ್ನು ಪ್ರಖ್ಯಾತಿ ಹೊಂದಿಸಿ ಕೊಟ್ಟರು
ಬಿಕೆ_ಸೊಲಾಪುರ
ಕವಿತೆಯೊಂದು ಮೋಜಿನ ಆಟ
ಬರೆಯಲು ನಡೆಸಬೇಕು ಪದಗಳ ಹುಡುಕಾಟ.
ಹೇಗೆ ಹುಟ್ಟು ಹಾಕಲಿ ನಾ ಕವಿತೆಯ ಸಾಲೊಂದ,
ಯೋಚಿಸಿ-ಯೋಚಿಸಿ ಸೋತು ಹೋದೆ ನಾ.
ಹೋಗಿ ಹುಡುಕಲೇ ಪದಗಳ ಪುಸ್ತಕದಂಗಡಿಯಲಿ,
ಅಲ್ಲಾದರು ಸಿಗಬಹುದೇನೋ ಒಂದು ಹೊಸ ಪದದ ನಿರೀಕ್ಷೆಯಲಿ.
ಮನಸಲಿ ಮೂಡುತಿವೆ ಹಳೆಯ ಪದಗಳ ನೆನಪು,
ಆದರೆ ನನಗೆ ಹೊಸ ಪದಗಳ ಹುಡುಕುವ ಹುರುಪು.
ಯಾರಿಗೆ ಕೇಳಲಿ ನಾ ಹೊಸ ಪದಗಳ ಭಂಡಾರ,
ಹೊಸ ಪದಗಳ ಸೃಷ್ಟಿಸದ ನನ್ನ ಬಗ್ಗೆಯೇ ಇರಲಿ ಧಿಕ್ಕಾರ.
ಹೇಗೆ ಬರೆಯಲಿ ನಾ ಹೊಸದೊಂದು ಕವನ,
ನನ್ನ ಮನವು ಮಾಡುತ್ತಲೇ ಇದೆ ಹೊಸ ಪದಗಳ ಧ್ಯಾನ.
ಕೊನೆಗೂ ಸಿಕ್ಕಿತೊಂದು ಹೊಸ ಪದ,
ಜೋಡಿಸುತಲಿ ಬರೆದೆ ಹೊಸ ಕವನ ಸಾಲೊಂದ.
ಯಾಕೋ ಗೊತ್ತಿಲ್ಲ ನನ್ನ ಲೇಖನಿಗೆ ಏರುತಿದೆ ಮದ,
ಮರೆತು ಹೋಗುತಿದೆ ಬಂದ ಒಂದು ಹೊಸ ಪದ.
-ಉಮೇಶ್.
ಬೇಲೂರ ಶಿಲೆಯ ರಸ ಕಲೆಯ ಮುಂದೆ
ನವಿಲೂರ ನೈದಿಲೆ ಹಸನಾಗಿ ನಿಂತಿಹಳು
ಕನಕಾಂಬರ ಹೂವಿನ ಮಾಲೆಯನು ಮುಡಿದು
ಕಿವಿಯೋಲೆ ಆಭರಣ ಅಂದವಾಗಿ ಧರಿಸಿ.
ಕೆಂದುಟಿಯಲಿ ಇಣುಕಿಹುದು ಕಿರು ಮಿಂಚಿನ ನಗುವು
ಶೀಲಾ ಬಾಲಕಿಯ ಕಂಡು ಹೊಮ್ಮಿರುವುದೇನೋ,
ಶಿಲ್ಪಿಯ ಕಲೆಯ ಸೊಬಗು
ಈ ಚೆಲುವಿಯ ನಲ್ಮೆಯ ನಗುವು.
ತಾನೇ ಯಾರೋ ಕಡಿದ ಶಿಲ್ಪವೆಂದರಿಯದೆಲೆ
ಮಾರು ಹೋಗಿಹಳು ಮತ್ತೊಂದು ಶಿಲ್ಪಕ್ಕೆ ತರಳೆ.
ನಾನೊಂದು ದಡದಲ್ಲಿ ,
ನೀನೊಂದು ದಡದಲ್ಲಿ ,
ನಡುವೆ ಕೈ ಚಾಚಿರುವ ಪ್ರೀತಿ ,
ಯಾವ ದೋಣಿಯು ತೇಲಿ ,
ಎಂದೂ ಬರುವುದೋ ನಾ ಕಾಣೆ ,
ನೀ ನಿರುವ ಬಳಿಯಲ್ಲಿ ನನ್ನ ಬಿಡಲು ,
ನಿನ್ನ ಕಂಗಳ ಕೊಳದಿ ......
ನಾನು ರಾಜಾ ಅಲ್ಲ
ನೀನು ರಾಣಿ ಅಲ್ಲ
ಆದ್ರೂ ನೀನು ನನ್ನ ಹೃದಯದ ಅರಮನೆಗೆ ನೀನೇ ರಾಣಿ ನಾನೆ ರಾಜಾ....
ಸೇವಕರು ಬೇಡ ಹಾ ಅರಮನೆಗೆ
ನಾನೆ ಮಾಡುವೆ ನಿನ್ನ ಎಲ್ಲಾ ಸೇವೆಗಳ.....
ನಾ ಇರುವೆ ನಿನ್ನ ಪಾದ ದಾಸನಾಗಿ....
ಬಂದು ಸೇರಿಬಿಡು ಗೆಳತಿ ನಾ ಸಾಯುವ ಮುನ್ನ ಈ ಬಡವನ ಅರಮನೆಗೆ.....
ಇಂತಿ ನಿನ್ನ ಪ್ರೀತಿಯಾ ಕೋತಿಮರಿ.....