Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಬೇಕು ಬೇಡ

ಬದುಕಲಿ ನಿತ್ಯ ನಡೆವುದು ಸದನ
ಬೇಕು ಬೇಡಗಳಿಗಾಗಿ ಮನಸೊಳಗೆ ಕದನ
ಬೇಕದ್ದು‌ ಸಿಕ್ಕಾಗ ಅರಳುವುದು ವದನ
ಸಿಗದಿದ್ದರೆ ಪಡೆಯಲು ನಿರಾಸೆಯೊಡನೆ ಶುರು ಸಂಧಾನ

- ಶ್ರೀಕಾವ್ಯ

14 Apr 2018, 08:48 am

ತವಕ

ಎದೆಯಾಳದ ಕವಿತೆಯೊಂದು ಪುಟಿದೆದ್ದು ಮಾತನಾಡುತಿದೆ ಭಾವ ತುಂಬಿದ ಪದಗಳಲ್ಲಿ ಕಂಡ ಮನಮೋಹಕ ಮನಸೊಂದನು ಸೇರಲೆಂದು ತನ್ನ ಚೆಲುವಿನಿಂದ.

ಬಿಡಲಾರದೆ ಈ ಮನ ತಾನು ಮೆಚ್ಚಿದ ಕವನ, ನಿನ್ನೊಡನೆ ಕೂಡಿ ಕಳಿದ ಕ್ಷಣಗಳ ಛಾಯಾಚಿತ್ರಗಳನ್ನು ಹುಡುಕುತಿದೆ ನೀ ನಿಂತ ಕಣ್ಣಲ್ಲಿ ತಾ ಸೇರುವ ಮುನ್ನ ಕರುನಾಡ ಮಣ್ಣಲ್ಲಿ.

ಮುಂದೆಂದೋ ಬಾರದ ಸಾಲೊಂದು ನೆನ್ನೆಯ ಕನವರಿಕೆಯಲಿ ಕಂಡಂತೆ, ಕ್ಷಣಮಾತ್ರ ಮರೆಯಾದರೂನು ನಿನ್ನ ಹುಡುಕಿ ಬರುವಂತೆ ಬರುತಿದೆಯೇ ಪದಗಳಲ್ಲಿ ನೀನಾಗಿ.

ಸನಿಹ ಸುಳಿಯದ ಶಶಿಯ ಬಿಂಬ ನೋಡಲೆಂದು ಕಣ್ಣಲ್ಲಿ ಒಂದು ಪ್ರೀತಿಯ ಚಿಲುಮೆಯನ್ನೇ ಸೃಷ್ಟಿಸಿದೆ ಬಚ್ಚಿಡಲು ನಿನ್ನ ಪ್ರತಿಬಿಂಬವಾದರೂ ನನ್ನಲ್ಲಿ.

- ಚುಕ್ಕಿ

11 Apr 2018, 08:01 pm

ಆಸರೆಯ ಹೊನಲು......

ಹುಟ್ಟುತಿರುವ ಕನಸೊಂದು
ಮೊಳಕೆಯಂತೆ ಚಿಗುರೊಡೆದು
ಬೆಳೆದು ಹೆಮ್ಮರವಾಗಿ ಮುದ್ದು
ಹಕ್ಕಿಗಳಿಗೆ ಆಸರೆ ನೀಡುವ ಬಯಕೆ
ಆದರೆ ಬೆಳೆಯುವ ಮುನ್ನವೆ
ಹಬ್ಬಿನಿಂತಿರುವ ಬಳ್ಳಿಗಳ ಬಂದವನ್ನೆ
ಕಳಚುವುದಾದರೆ ಹೇಗೆ
ತಾಯಿ ಬಳ್ಳಿಯ ಕಳಚಿದರೆ ಆ ಮರದ
ಜೀವ ಒಣಗಿ ಬರಿದಾಗಿ ಬಿಡುವುದು
ನೂರಾರೂ ಹಕ್ಕಿಗಳಿಗೆ ನೆರವಾಗುವ ಆ ಕನಸು
ನನಸಾಗಿಯೆ ಉಳಿದು ಬಿಡಲೆ ಹೀಗೆ
ಪುಟ್ಟದೊಂದು ಮೊಳಕೆ ದೊಡ್ಡದಾಗುವ ಮುನ್ನವೆ
ಕಳಚದಿರಿ ಹುಟ್ಟದೆ ಆಗೆ ಇದ್ದು ಬಿಡಲಿ
ಆ ಕನಸ್ಸು........... ಎಂದಿಗು .........

- ರಾಗಸಿರಿ....

11 Apr 2018, 01:25 pm

ಜೊತೆಗಾರ

ನಿನ್ನ ಮತ್ತು ನನ್ನ ಪ್ರೀತಿ ಪರಿಗಣಿಸಲಾಗಿದೆ
ನನ್ನ ಕೈ ನಿನ್ನ ಕೈಯಿಂದ ಬಿಟ್ಟು ಬೇರೆ ಆಗುತ್ತದೆ
ಯಾವಾಗಲೂ ನೀನು ನನ್ನ ಸಂಗಾತಿ ತಪ್ಪಲಾರದೆ
ನಿನ್ನ ಕೈಗಳ ಪರೀಮಳ ಇನ್ನೂ ನನ್ನ ಕೈಯಲ್ಲಿದೆ
ನಿನ್ನ ಆ ಸೊಗಸು ಇಂದು ನಿನ್ನ ನೆನಪು ನೀಡುತ್ತದೆ

- Bandopant Kulkarni Solapur

10 Apr 2018, 04:27 pm

ಕೃತಘ್ನ

ಸೌಂದರ್ಯದಲಿ ರತಿಯು, ಮಾತಿನಲ್ಲಿ ಸೋತಿಲ್ಲದ ವಕೀಲೆಯು, ಬುದ್ಧಿಮತ್ತೆಯಲಿ ಸರಿಸಾಟಿಯಿಲ್ಲದ ಸರಸ್ವತಿಯು ನೀನು;

ನಿನ್ನಂತರಂಗಕ್ಕೆ ಲಗ್ಗೆ ಇಡಲು ಸಾಲುಗಟ್ಟಿದ್ದ ಬೃಹಸ್ಪತಿಗಳನ್ನೇ ತೊರೆದು ನನ್ನ ಸನಿಹದಲ್ಲೇ ಸ್ವರ್ಗ ಸುಖವನ್ನು ಕಂಡುಕೊಂಡವಳು ನೀನು;

ಮರದ ಕೊರಡಿನಲ್ಲೊಂದು ಚಿಗುರೊಡೆಸಿ, ಅನುಪಯುಕ್ತ ಕಲ್ಲಿನಲ್ಲಿ ಅನರ್ಘ್ಯ ರತ್ನವನು ಕಡೆದು ತೆಗೆದು, ಹಳ್ಳಿಯ ಗಮಾರನಲ್ಲೂ ಸಂಸ್ಕಾರವನ್ನು ಬೆಳೆಸಿದ ಪ್ರತಿಭಾನ್ವಿತೆ ನೀನು;

ಸಾಲು ಸಾಲು ಹೊಗಳುಭಟ್ಟರು, ಹೆಗಲು ನೋಯುವಷ್ಟು ಹೂವಿನ ಹಾರಗಳು, ಕಿವಿ ಗಡಚಿಕ್ಕುವ ಚಪ್ಪಾಳೆಗಳ ಮದ್ಯೆ ಕಳೆದು ಹೋಗದಂತೆ ಎಚ್ಚರಿಸಿದವಳು ನೀನು;

ಪ್ರೀತಿ, ಪ್ರೇಮ, ಸ್ನೇಹ, ಮಮತೆ, ಮಮಕಾರಗಳ ಪರಿಚಯ ಮಾಡಿಕೊಟ್ಟು ,ಈ ಪ್ರಭೇದಗಳ ದುರುಪಯೋಗವಾಗದಂತೆ ತರಬೇತಿ ಕೊಟ್ಟಳು ನೀನು;

ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ್ಯಗಳೆಂಬ ಅರಿಷಡ್ವರ್ಗಗಳನ್ನು ಹಿಡಿತದಲ್ಲಿಟ್ಟುಕೊಳ್ಳಲು ಸಹಕರಿಸಿದಳು ನೀನು;

ಕೊರಡಾಗಿ, ಕಲ್ಲಾಗಿ, ಹಳ್ಳಿಯ ಗಮಾರನಾಗಿ ಮತ್ತೆ ಬದಲಾಗಿ ಮೃದು - ಮಧುರ, ಸುಂದರ - ಸುಮಧುರ ಸಹೃದಯಿಯ ಹೃದಯವನ್ನು ಬಗೆದ ಕೃತಘ್ನ ನಾನು.

ಕ್ಷಮಿಸುವುದಾದರೊಮ್ಮೆ ಕ್ಷಮಿಸಿಬಿಡು,
ನೆಮ್ಮದಿಯಿಂದ ಬಾಳು, ನೂರ್ಕಾಲ ಬಾಳು,
ಸ್ನೇಹ ಮಾಡುವ ಮುನ್ನ ಇನ್ನೊಮ್ಮೆ ಚಿಂತಿಸಿ ನೋಡು.

- ಡಾ!ಸಿ.ಮುರಳೀಧರ

10 Apr 2018, 10:46 am

ಕಣ್ಣಿನ ಬಾಣ

ನಿನೂಂದಿಗಿರಲು ದಿನವು
ಕ್ಷಣವಾಗಿಬಿಡುವುದು !
ನಿನ್ನ ನೂಡುತಿರಲು ಸಮಯವು
ಸರ ಸರನೆ ಒಡುವುದು!
ಹೋಗುವುದು ಹೇಗೆ ನಿನ್ನನ್ನು ಬಿಟ್ಟು
ನನ್ನುಸಿರು ನಿನ್ನದಾಗಿಹುದು!!

- Sushma

09 Apr 2018, 10:14 pm

ನಿಜವಾದ ಪ್ರೀತಿ

ಇರುಳುಗಳ ನಡುವಲ್ಲಿ ಕನಸುಗಳ ತೆರೆಯಲ್ಲಿ ನಿನ್ನ ಬಿಂಭಗಳು ಪ್ರಿಯೆ ಮತ್ತೆ ಮತ್ತೆ ನಡೆದಿವೆ.... ಕತ್ತರಿಸಿ ಹೋಗಿರುವ ಪ್ರೇಮ ಭಳ್ಳಿಯ ಚೆಲುವೆ ಮತ್ತೆ ನೆಡುವೆಯಾ ನಿನ್ನ ಪ್ರೇಮದಾರೆಯ ಹರಿಸಿ....?

- ಕರಣ್

09 Apr 2018, 09:18 pm

ಹನಿ ನೀರಿಗಾಗಿ

ಎತ್ತೆತ್ತಲೂ ನೋಡಿದರೂ
ಹನಿ ನೀರಿಗಾಗಿ ಪರದಾಟ
ಜೀವದ ಆಸೆಗಾಗಿ ಪ್ರತಿ ಜೀವಗಳು
ನಡೆಸುತ್ತಾವೆ ತಮ್ಮ ತಮ್ಮೊಳಗೆ ಹೋರಾಟ!

ಕೊನೆಯಿರದ ಮನುಜನ ಸ್ವಾರ್ಥಕೆ
ಬಲಿಯಾಗುತ್ತಿವೆ ಕಾಡುಗಳು
ಮರ ಗಿಡಗಳಿಲ್ಲದೆ ದಿಕ್ಕುಪಾಲಾಗಿ
ನಾಡಿನತ್ತ ಪ್ರಯಾಣಿಸಿವೆ ಪ್ರಾಣಿ ಪಕ್ಷಿಗಳು!

ವಲಸೆ ಬಂದಿಹ ಪಕ್ಷಿಗಳು
ಗುಟುಕು ನೀರಿಗಾಗಿ ಹವಣಿಸುತ್ತಿವೆ
ನೀರಿನ ಮಹತ್ವದ ಅರಿವಿಲ್ಲದ ಮನುಜನು
ನೀರನ್ನು ಪೋಲು ಮಾಡುತ್ತ ನಗುತ್ತಿದ್ದಾನೆ!

ಪಾತ್ರೆಯ ತುಂಬಾ ನೀರನ್ನಿಟ್ಟು
ತಣಿಸಿರಿ ಪ್ರಾಣಿ ಪಕ್ಷಿಗಳ ದಣಿವನ್ನು
ನಿಮ್ಮೊಳಗಿನ ತನ್ನತನವ ಬಿಟ್ಟು
ಪ್ರೀತಿಯಿಂದ ಪ್ರೀತಿಸಿರಿ ಎಲ್ಲವನ್ನು.!

- ಪ್ರಿಯಾಂಕ

09 Apr 2018, 07:57 pm

ಪ್ರೇಮ ಸಾಗರ

ಪ್ರೇಮ ಸಾಗರದಲಿ ( ) ಪ್ರೇಮ ಸಾಗರದಲಿ ಕೊಚ್ಚಿ ಹೋದವನು ನಾ ನಿನ್ನದೇ ಸಂತೆಯಲಿ ನನ್ನ ಮರೆತವನು ನಾ ಕೈ ಕೊಡುವ ಮುನ್ನ ಒಮ್ಮೆ ಹೇಳೆ ಚಿನ್ನ, ಕಣ್ಮುಚ್ಚಿದರೂ ಅಳಿಸದಂತೆ ಕಣ್ತುಂಬಿಸಿಕೊಳ್ಳುವೆ ನಿನ್ನ....

- ಕರಣ್

09 Apr 2018, 03:05 pm

ಗೆಳತಿ ಚಿಂತೆ ಬಿಡು

ಓ ನನ್ನ ಮುದ್ದಿನ ಗೆಳತಿ
ಈ ನಿನ್ನ ಇಂಟಿತನದ ನೋವ
ನನ್ನಿಂದ ನೋಡಲಾಗುತ್ತಿಲ್ಲ.
ಮೋಸ ಮಾಡಿ ಹೋದವನ
ನೆನೆದು ನೀ ಏಕೆ ಚಿಂತಿಸುವೆ
ಈ ನಿನ್ನ ನೋವನ್ನ ಹೋಗಲಾಡಿಸಲು
ನಾನಿನರುವೆ.
ನೀನು ಒಪ್ಪುವುದಾದರೆ ನಾ ನಿನ್ನ
ಅಪ್ಪಿಕೊಳ್ಳುವೆ ಸಮ್ಮತಿಸುವೆಯ
ನೊಂದ ಹುಡುಗಿ.
ನಿನ್ನ ಜೀವನಕ್ಕೆ ನಾ ನೆರಳಾಗಿರುವೆ
ನೀ ಒಪ್ಪುವುದಾದರೆ.

ನಿಮ್ಮ ಪ್ರೀತಿಯ ಹುಡುಗ "ರಾಜ್"

- ರಾಜ್

08 Apr 2018, 11:49 am