Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಮುಗುಳುನಗೆಯ ಮರ್ಮವ
ಅರಿಯದಾದೆನು
ಅವಕಾಶ ದೊರೆಯಿತೆಂಬ
ಹಿಗ್ಗಿನಲಿ ಮೈಮರೆತೆನು
ಸಂಭ್ರಮದಿ ನಾ ಹಣಿಯಾದೆನು
ಕೈಜಾರಿದಾಗ ನಾ ಮಂಕಾದೆನು
ಕಂಬನಿ ಕಣ್ಣ ತುಂಬಿತು
ಮನವು ಕಂಗೆಟ್ಟು ನಿಂತಿತು
ಉಸುರದಿರಿ ಬೇರಾರಿಗು
ಎಂದಿರಿ ನೀವಂದು
ನರಿತನವ ಅರಿಯದೆ
ಕಂಗೆಟ್ಟಿಹೆ ನಾ ನಿಂದು
ಬೇರೆಲ್ಲು ಹೋಗದಿರಿ
ನಮ್ಮಲೆ ದುಡಿಯಿರಿ
ದುಡಿಮೆಯು ಇಲ್ಲದೆ
ಸಮಯವು ಇಲ್ಲದೆ
ಜೀವನದ ಜೊತೆ ಆಟವಾಡಿದಿರೇಕೆ?
ಶಾರಧ
- ಶಕುಂತಲಾ
19 Apr 2018, 04:46 pm
ಹೆಣ್ಣ ಕೂಗು ಕೇಳಿ ಕಣ್ಣು ತೆರವರೆಲ್ಲಿ
ಯಾರು ಇರುವರಯ್ಯ ಈ ಸಮಾಜದಲ್ಲಿ
ಭಾರತೀಯ ಮಹಿಳೆಗಿಂದು ಸ್ಥಾನವೆಲ್ಲಿದೆ
ಬರಿಯ ಭೋಗ ವಸ್ತುವಾಗಿ ಅವಳ ಬದುಕು ಬಾಡಿದೆ,
ಬಡ ಕುಟುಂಬದಲ್ಲಿ ಬೆಳೆದ ಹೆಣ್ಣ ಬಾಳಿಗೆ
ಇಂದು ಬೆಳೆದಿದೆ ವರದಕ್ಷಿಣೆ ಕಾರ್ಮೋಡ ಕವಿದಿದೆ
ಬಳಿಪಶುವೀ ಮಹಿಳ ನೀಚ ಸಂಪ್ರದಾಯಕೆ
ಎಲ್ಲಿ ಭದ್ರ ಕೋಟೆ ಕಟ್ಟುವವರು ಈ ಸುನಾಮಿಗೆ.
- Hasan Muhaz
19 Apr 2018, 04:30 pm
ಸಾವಿರ ಸುಳಿಗಳ ಕಡಲಲಿ ಬೆರೆತರೂ
ಕರಗದೇ ಕೊರಗುವ ಕಣ್ಣೀರು
ತುಷಾರವ ಹೊದ್ದಿರುವ ತಂಗಾಳಿಗೆ ಸಿಕ್ಕರು
ತಂಪಾಗದೆ ಬಿಸುಪೇರುವ ನಿಟ್ಟುಸಿರು
ಅನಂತ ಪುಟಗಳು ಮುಗಿದರೂ
ಇನ್ನೂ ಮಿಗುವ ನೆನಪುಗಳು
ಜೀವಂತ ಇರಲು ಬಯಸಿದರೂ
ಕರುಣೆ ತೋರದ ಕನಸುಗಳು
ಸಾವಿರ ಸೂರ್ಯರು ಬಂದರೂ ಬತ್ತದ ನೋವಿರಲು
ನಿಲ್ಲದದೇಕೋ ತಿಳಿಯದು ಹೃದಯ
ಸಾವಿರ ನಿರೀಕ್ಷೆಗಳು ಸುಳ್ಳಾದರೂ ಸೋಲದ ಮನಸಿರಲು
ಚಲಿಸದದೇಕೋ ತಿಳಿಯದು ಸಮಯ
ಮನಸಿನೆಲ್ಲಾ ಮೂಲೆಯನು ದಹಿಸಿದ ಮೇಲೂ
ಆರದೇ ಇನ್ನೂ ಉರಿಯುತ್ತಿದೆ ವಿರಹ
ಭಾವನಾಂಭುದಿಯು ಬತ್ತಿ ಹೋದ ಮೇಲೂ
ಬರಿದಾಗದು ಈ ಕಣ್ಣೀರ ಬರಹ
- ಅಕವಿ
18 Apr 2018, 07:56 pm
ಸೋತಿರುವ ಈ
ಹೃದಯ ಮತ್ತೆ ಮತ್ತೆ
ಸೋಲುವುದೇನು
ನಂಗೆ ಹೊಸತೇನಲ್ಲ...
ಲದ್ದೆಯನ್ನು ನೋಡಿ
ಕೈ ಮುಗಿ ಎಂದರೂ
ಮುಗಿದು ಬಿಡುವಂತ
ಮೂರ್ಖ ನಾನು...
ಅದೆಂತಹ ಆಕರ್ಷಣೆ
ನನ್ನ ಸೆಳೆಯುವಂತಹ
ಮನ ಕಲಕುವಂತಹ
ನಿನ್ನಾಂತರ್ಯದ ಸೌಂದರ್ಯ...
ದಯಮಾಡಿ ಕೇಳುವೆನು
ಬರಲೇ ಬೇಡ ನೀನು
ನನ್ನೆದುರಿಗೆ ಎಂದೆಂದೂ
ಮತ್ತೆ ಸೋಲಲು ನಂಗಿಷ್ಟವಿಲ್ಲ
ಇಂತಿ ನಿಮ್ಮ ಸ್ನೇಹ ಸಿಂಚನ
ನಾಗರಾಜ ಬಿ {9743216235}
- ನಾಗರಾಜ ಬಾಕೆ೯ರ್
18 Apr 2018, 01:59 pm
ಆರದ ಜೀವಕ್ಕೆ
ನಾರದನ ಆಶೀರ್ವಾದ
ಮಾಯದ ಪ್ರೀತಿಗೆ
ನಿನ್ನದೇ ಜೀವನಾದ..
ಮಾಡದ ಫೋನಿಗೆ
ಆಡದ ಮಾತಿಗೆ
ನೂರು ನಗೆಯಲಿ
ಇತ್ತು ಸುಖ ಸಂತೋಷ..
ಹೇಳದೆ ಹೋದೆ
ಕಾರಣ ನೂರಾರು
ಆದರೂ ಕೇಳು ನೀ
ನನ್ನೀ ತಕರಾರು..
ಬಾಯಾರಿ ನಿಂತಿಹೆ
ನೀ ಬರಲೆಂದು ಕಾದಿಹೆ
ಈ ಬಡ ಜೀವದ ಬಾಗಿಲಿಗೆ
ಇಣಿಕ್ಕೊಮ್ಮೆ ನೋಡಿಬಿಡು..
- ನಾಗರಾಜ ಬಾಕೆ೯ರ್
18 Apr 2018, 01:03 pm
ಆಸೆಯ ಕೂಸಿಗೆ
ಜೋಗುಳವ ನಾ ಹಾಡಿ!!
ತೂಗಿದೆ ಮಮತೆಯ
ತೂಗು ಮಂಚವ ಕಟ್ಟಿ!!
ಸಾವಿರ ಬಯಕೆಯು
ಈ ನನ್ನಯ ಮನದಲಿ!!
ಮೂಡಿದೆ ಮಮತೆಯ
ಹೊಸದಾದ ಬಂದದಲಿ!!
ನಗುವಿಗು ಅಳುವಿಗೂ
ಆ ಕಂದನ ಹೆಸರಿದೆ!!
ಚಂದದ ಬದುಕಿನ
ಒಂದು ಸುಂದರ ಕನಸಿದೆ!!
- ಪಿ.ಜಿ.ಜ್ಯೋತಿ
17 Apr 2018, 10:56 pm
ನೀನೇ ನನ್ನ ಜೀವ ಎಂದು ನಾ ಹೇಗೆ ಹೇಳಲೊ
ನೀನಿಲ್ಲದೆ ನಾ ಹೇಗೆ ಬದುಕಲೋ
ನೀನೇ ಬೇಕು ,ನೀನೇ ಬೇಕು ಎಂದು ಕೂಗಿ ಕರೆಯುತ್ತಿದೆ ಈ ಮನಸ್ಸು ......
ಅದ ತಿಳಿಯೋ ಒಮ್ಮೆ ನೀನು ....
ಈ ಕೋಪ -ತಾಪಗಳ ನಡುವೆ ನಿಂತು ಈ ಪ್ರೀತಿ ಬಲಿಯಾಗುವುದು ಸರಿ ಯೇ ನಿನಗೆ .....
ಈ ಸಣ್ಣ -ಪುಟ್ಟ ಜಗಳಗಳ ಕೊಟ್ಟೆ ಕಟ್ಟುವುದು ಸರಿಯೇ....ನಿನಗೆ ......
ಮುಗ್ದ ಮನಸುಗಳ ನೋವಿಗೆ ಕಾರಣವಾಗುವುದು ಸರಿಯೇ.........
ಪ್ರೀತಿಯಿಂದ ಪ್ರೀತಿಯಾ ಅರಮನೆಯ ಕಟ್ಟೋಣವೇ ಗೆಳೆಯಾ
- Acchu love
17 Apr 2018, 08:16 pm
ಆಕಾಶದಲ್ಲಿ ನಕ್ಷತ್ರ ಕೋಟಿ
ಆ ಚಂದ್ರನಂತೆ ನೀ ತುಂಬ ಚೂಟಿ!!
ತಂಗಾಳಿ ಜೋಡಿ ಹೊಂಬಾಳೆ ಹಾಡಿ
ತಿಂಗಳ ಬೆಳಕಲ್ಲಿ ನಿನ್ನಯ ಮೋಡಿ!!
ಓ ನನ್ನ ಪ್ರೇಮಿ ನಾನಾದೆ ಮೌನಿ
ಮಾತಾಡೋ ಮುನ್ನ ನೀ ನೋಡು ನನ್ನ!!
ಈ ನನ್ನ ಕಣ್ಣ ಒಳಗಿರುವ ನಿನ್ನ
ಹೊಳಪೆಂಬ ಹುಣ್ಣಿಮೆಯೇ ಬಲು ಚೆನ್ನ!!
ಸಾಗರದ ಆಚೆ ಸಾವಿರದ ಕನಸು
ನೀ ಸಿಕ್ಕ ಮೇಲೆ ಕನಸೆಲ್ಲ ನನಸು!!
ಅಪರೂಪವಾದ ಈ ನಮ್ಮ ಪ್ರೇಮ
ಇರಬೇಕು ಹೀಗೆ ಪ್ರತಿಯೊಂದು ಜನುಮ!!
- ಪಿ.ಜಿ.ಜ್ಯೋತಿ
16 Apr 2018, 10:20 pm
ಎ ಹುಡುಗ
ನಿನ್ನದು ಏನು ತಪ್ಪಿಲ್ಲ
ನಾನೆ ನಿನ್ನ ಅತಿಯಾಗಿ ಪ್ರೀತಿಸಿಬಿಟ್ಟೆ..
ಅತಿಯಾಗಿ ನಂಬಿಕೊಂಡೇ...
ನಿನು ಅತಿಯಾಗಿ ಕಾಡಿದರು..
ನಿನ್ನೊಳಗಿನ ಪ್ರೀತಿ ಚಿಗುರಲಿಲ್ಲ ಅಂದ್ರೆ...
ನೀನು ಒಣಗಿದ ಮರದ ಆಗೇ.....
ನಿನ್ನ ಹೃದಯ ಬರಡು ತುಂಬಿದ ಮರಳಿನ ಆಗೇ.....
ಕ್ಸಮಿಸು ಗೆಳೆಯ.....
- ShruthiR
16 Apr 2018, 02:18 pm
ಸುರಿಯುತಿದೆ ಎದೆಯೂರಿಗೆ ಮತ್ತೆ ಒಲವ ಮಳೆ
ಬೀಗಿ ನಲಿಯ ಬೇಡ ಮನವೆ ಹೇಳುವುದ ಕೇಳೆ
ಸಂಧಾನವೊ ಕರುಣೆಯಲಿ ಸಿಕ್ಕ ಅನುದಾನವೊ ತಿಳಿದವರ್ಯಾರು ಹೇಳೆ
ಯೋಚಿಸೊಮ್ಮೆ ಎದೆಯೂರಿನಲಿ ಬೆಳೆವ ಮುನ್ನ ಒಲವ ಬೆಳೆ
- ಶ್ರೀಕಾವ್ಯ
14 Apr 2018, 08:49 am